ದೇಶ ಈಗ ಬದಲಾಗುತ್ತಿದೆ. ಜನ ಅಕ್ಷರಸ್ಥರು ಆಗುತ್ತಿದ್ದಂತೆ ಹೆಣ್ಣು ಮಕ್ಕಳಿಗೂ ಕೂಡ ಸಮಾನ ಶಿಕ್ಷಣ ನೀಡುತ್ತಿದ್ದಾರೆ. ಇಂದು ಗಂಡನಿಗೆ ಸರಿ ಸಮಾನಳಾಗಿ ಹೆಣ್ಣು ಯಾವುದೇ ಕ್ಷೇತ್ರದಲ್ಲಿ ಕಡಿಮೆ ಇಲ್ಲದಂತೆ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. ಆದರೆ ಅದೊಂದು ಕಾಲವಿತ್ತು ಅಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕಾಗಿ ಹಣ ಖರ್ಚು ಮಾಡಲು ಹಿಂದೂ ಮುಂದು ನೋಡುತ್ತಿದ್ದರು. ಈಗ ಸರ್ಕಾರವೇ ಹೆಣ್ಣು ಮಕ್ಕಳಿಗೆ ಶಿಕ್ಷಣ ಒದಗಿಸಲು ಹಾಗೂ ಅವರಿಗೆ ಭದ್ರತೆ ನೀಡುವ ದೃಷ್ಟಿಯಿಂದ ಅನೇಕ ಯೋಜನೆಗಳನ್ನು ರೂಪಿಸಿದೆ.
ಉಚಿತ ಶಿಕ್ಷಣ ಇಂತಹ ವ್ಯವಸ್ಥೆಗಳು ಇದ್ದರೂ ಕೂಡ ಉನ್ನತ ಶಿಕ್ಷಣ ಅಥವಾ ಮದುವೆ ಸಮಯಕ್ಕೆ ಬಂದಾಗ ಹಣಕಾಸಿನ ಸಮಸ್ಯೆ ಬರಬಾರದು ಎನ್ನುವ ಕಾರಣಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆಯಂತಹ ಯೋಜನೆಗಳನ್ನು ತಂದು ಅವರಿಗೆ ಭದ್ರತೆಯನ್ನು ನೀಡುತ್ತಿದೆ. ಈಗ ಅಂತಹದ್ದೇ ಇನ್ನೊಂದು ಯೋಜನೆ ಎಲ್ಐಸಿಯಿಂದ ಹೊರ ಬಂದಿದೆ. ಸ್ವತಃ ಎಲ್ಐಸಿ ಇದನ್ನು ಅಧಿಕೃತವಾಗಿ ಘೋಷಿಸಿಕೊಂಡಿದ್ದು ಈ ಯೋಜನೆಯ ಹೆಸರು ಕನ್ಯಾದಾನ ಪಾಲಿಸಿ ಎನ್ನುವುದಾಗಿದೆ.
ಈ ಯೋಜನೆಯಲ್ಲಿ ಪಾವತಿ ಮಾಡಿದರೆ 27 ಲಕ್ಷದವರೆಗೆ ಹಣ ಪಡೆಯಬಹುದು. ಇದನ್ನು ಮಾಡುವ ರೀತಿ ಹಾಗೂ ಅದಕ್ಕೆ ಇರುವ ಕಂಡೀಶನ್ ಬಗ್ಗೆ ನೋಡುವುದಾದರೆ ಅದು ಈ ರೀತಿ ಇದೆ. ಹೆಣ್ಣು ಮಗುವಿನ ತಂದೆ ವಯಸ್ಸು 50 ವರ್ಷ ಮೀರಬಾರದು ಹಾಗೂ ಹೆಣ್ಣು ಮಗುವಿಗೆ ಒಂದು ವರ್ಷ ವಯಸ್ಸಾದ ನಂತರ ಪಾಲಿಸಿ ಮಾಡಿಸಬಹುದು. ಮಗುವಿನ ವಯಸ್ಸಿನ ಆಧಾರದ ಮೇಲೆ ಟರ್ಮ್ ಆಯ್ದುಕೊಳ್ಳಬಹುದು. ಈ ಪಾಲಿಸಿಯಲ್ಲಿ ತಿಂಗಳಿಗೆ 3600 ಗಳಂತೆ 22 ವರ್ಷದವರೆಗೆ ಪಾವತಿ ಮಾಡಬೇಕಾಗುತ್ತದೆ.
ದಿನದ ಲೆಕ್ಕದಲ್ಲಿ ಇದು 121ರೂ ವರೆಗೆ ಬೀಳುತ್ತದೆ, 22 ವರ್ಷದವರೆಗೂ ನೀವು ಕಟ್ಟಬೇಕಾಗುತ್ತದೆ. ಎಲ್ಐಸಿ ಯಾ ಕನ್ಯಾ ದಾನ ಪಾಲಿಸಿಗೆ ಲಾಕ್ ಇನ್ ಅವಧಿ ಇದೆ. 25 ವರ್ಷ ಆದ ಬಳಿಕ ನೀವು 27 ಲಕ್ಷ ಪಡೆಯಬಹುದು ಈ ಅವಧಿ ಮುಗಿದ ನಂತರ ಇದನ್ನು ನಿಮ್ಮ ಮಗಳಿಗೆ ನೀಡಲಾಗುವುದು. ಎಲ್ಐಸಿ ಕನ್ಯಾದಾನ ಪಾಲಿಸಿಯ ಕನಿಷ್ಠ ಟರ್ಮ್ ಅವಧಿ 13 ವರ್ಷಗಳಾಗಿದ್ದು, ಗರಿಷ್ಠ ಅವಧಿ 25 ವರ್ಷಗಳಾಗಿದೆ. ಮತ್ತು ಕನಿಷ್ಠ ಮೊತ್ತ ಒಂದು ಲಕ್ಷ ಹಾಗೂ ಗರಿಷ್ಠ ಮೊತ್ತ 27ಲಕ್ಷ ರೂ ಆಗಿದೆ.
ಇಷ್ಟು ಲಾಭಕಾರಿ ಆಗಿರುವ ಎಲ್ಐಸಿ ಕನ್ಯಾದಾನ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಮೆಚುರಿಟಿ ಅವಧಿ ಮುಗಿದ ಬಳಿಕ ನಿಮ್ಮ ಮಗಳಿಗೆ ಶಿಕ್ಷಣದ ಅವಶ್ಯಕತೆಗಾಗಿ ಅಥವಾ ಮದುವೆ ಖರ್ಚಿಗಾಗಿ ಒಂದೇ ಬಾರಿಗೆ ದೊಡ್ಡ ಮೊತ್ತದ ಹಣ ಕೈ ಸೇರಲಿದೆ. ಈ ರೀತಿ ಮಕ್ಕಳು ಚಿಕ್ಕವರಿದ್ದಾಗ ತಂದೆ ತಾಯಿ ದುಡಿಯುತ್ತಾ ಇರುವಾಗಲೇ ಒಂದಷ್ಟು ಮೊತ್ತದ ಹಣವನ್ನು ಈ ರೀತಿ ಪಾಲಿಸಿಗಳಲ್ಲಿ ಹೂಡಿಕೆ ಮಾಡುವುದರಿಂದ ಮಕ್ಕಳು ವಯಸ್ಸಿಗೆ ಬರುತ್ತಿದ್ದಂತೆ ಸ್ವಲ್ಪ ನಿಶ್ಚಿಂತೆಯಿಂದ ಇರಬಹುದು.
ಆ ಹಣವನ್ನು ಅವರ ಉನ್ನತ ಶಿಕ್ಷಣ ಉಪಯೋಗಿಸಿಕೊಂಡು ಅವರ ಬದುಕನ್ನು ರೂಪಿಸಿಕೊಳ್ಳುತ್ತಾರೆ ಅಥವಾ ಮದುವೆ ಸಂಬಂಧ ಕೂಡಿಬಂದಾಗ ಹಣಕ್ಕಾಗಿ ಪರದಾಡುವ ಸಮಸ್ಯೆಯಿಂದ ಹೆತ್ತವರು ತಪ್ಪಿಸಿಕೊಳ್ಳಬಹುದು. ಇಂತಹ ಒಂದು ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ಪರಿಚಯಸ್ಥ ಹೆಣ್ಣು ಮಕ್ಕಳ ತಂದೆ ತಾಯಿಗೂ ಸಹ ಶೇರ್ ಮಾಡಿ.