ಭಾರತದ ನಂಬಿಕಾರ್ಹ ವಿಮಾಸಂಸ್ಥೆ LIC ಯು ಹಲವಾರು ಯೋಜನೆಗಳನ್ನು ತನ್ನ ಗ್ರಾಹಕರಿಗೆ ನೀಡಿದೆ ಅದರ ಮತ್ತೊಂದು ಹೊಸ ಯೋಜನೆ ಎಂದರೆ LIC ನ್ಯೂ ಶಾಂತಿ ಪೆನ್ಷನ್ (858) ಯೋಜನೆ. ಈ ಯೋಜನೆಯಲ್ಲಿ ಒಂದುವರೆ ಲಕ್ಷ ಡೆಪಾಸಿಟ್ ಮಾಡಿದರೆ ಸಾಕು ನೀವು ನಿಮ್ಮ ಹಣಕ್ಕೆ ಬಡ್ಡಿ ರೂಪದಲ್ಲಿ 13,950ರೂ. ವರೆಗೂ ಲಾಭ ಪಡೆಯಬಹುದು. ದೂರ ದೃಷ್ಟಿಯಿಂದ ಹಣ ಉಳಿಸುವವರು ಅಥವಾ ಜೀವನದ ಸಂಧ್ಯಾ ಕಾಲದ ಹಣಕಾಸಿನ ಭದ್ರತೆ ಬಗ್ಗೆ ಚಿಂತಿಸುವವರು ಆರಾಮಾಗಿ ಈ ಯೋಜನೆಯನ್ನು ಖರೀದಿಸಬಹುದು.
ಹೆಚ್ಚಿನ ಜನರಿಗೆ ಈ ಯೋಜನೆ ಅನುಕೂಲತೆಗಳ ಬಗ್ಗೆ ಮಾಹಿತಿಯೇ ಇಲ್ಲ. ಹಾಗಾಗಿ ಈ ಅಂಕಣದಲ್ಲಿ ಈ ಯೋಜನೆಯ ಕೆಲ ಪ್ರಮುಖ ಅಂಶಗಳ ಬಗ್ಗೆ ತಿಳಿಸುತ್ತಿದ್ದೇವೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ LIC ಶಾಖೆಗೆ ಭೇಟಿ ಕೊಟ್ಟು ಅಥವಾ LIC ಅಧಿಕೃತ ವೆಬ್ಸೈಟ್ ಅಲ್ಲಿ ಹುಡುಕಾಡಿ ತಿಳಿದುಕೊಳ್ಳಬಹುದು.
ಯೋಜನೆ ಬಗ್ಗೆ ಪ್ರಮುಖ ಮಾಹಿತಿಗಳು:-
● LIC ನ್ಯೂ ಶಾಂತಿ ಪೆನ್ಷನ್ (858) ಯೋಜನೆಯನ್ನು 30 ವರ್ಷದ ಮೇಲ್ಪಟ್ಟವರು ಮಾತ್ರ ಖರೀದಿಸಬಹುದು.
● ಈ ಯೋಜನೆಯಲ್ಲಿ ಒಮ್ಮೆ ಡೆಪಾಸಿಟ್ ಮಾಡಿದರೆ ಸಾಕು ನೀವು ಕೊನೆವರೆಗೂ ಕೂಡ ಪೆನ್ಷನ್ ಪಡೆಯುತ್ತಲೇ ಇರಬಹುದು.
● ಎಷ್ಟು ವರ್ಷದ ಬಳಿಕ ನಿಮಗೆ ಪೆನ್ಷನ್ ಬರಬೇಕು ಎಂದು ನೀವೇ ನಿರ್ಧರಿಸಬಹುದು, ಒಂದು ವರ್ಷದಿಂದ 12 ವರ್ಷಗಳವರೆಗೆ ಆಯ್ಕೆ ಇರುತ್ತದೆ. ಇದನ್ನು ವೇಸ್ಟಿಂಗ್ ಏಜ್ ಎಂದು ಕರೆಯುತ್ತಾರೆ
● ಉದಾಹರಣೆಗೆ 30 ವರ್ಷದ ವ್ಯಕ್ತಿಯಾದ ನೀವು ಒಂದು ವರ್ಷದ ಬಳಿಕ ಪೆನ್ಷನ್ ಬರಬೇಕೆಂದು ಬಯಸಿದರೆ ನಿಮಗೆ 31 ವರ್ಷ ತುಂಬಿದ ಬಳಿಕ ಪೆನ್ಷನ್ ಬರಲು ಶುರು ಆಗುತ್ತದೆ. ಒಂದು ವೇಳೆ ನೀವು 12 ವರ್ಷ ಆರಿಸಿದರೆ ನಿಮಗೆ 42 ವರ್ಷ ಆದ ಬಳಿಕ ಪೆನ್ಷನ್ ಬರಲು ಶುರು ಆಗುತ್ತದೆ. ಆರಿಸಿದ ವರ್ಷಗಳ ಅವಧಿಯ ಮೇಲೆ ಬಡ್ಡಿದರದಲ್ಲಿ ಸ್ವಲ್ಪ ವ್ಯತ್ಯಾಸವಿರುತ್ತದೆ.
● ಕನಿಷ್ಠ ಒಂದುವರೆ ಲಕ್ಷ ಹಣ ಡೆಪಾಸಿಟ್ ಇಡಬೇಕು ಗರಿಷ್ಠ ಎಷ್ಟು ಹಣ ಬೇಕಾದರೂ ಇಡಬಹುದು. ಆದರೆ ಅಂಗವಿಕಲರಿಗೆ ರಿಯಾಯಿತಿ ಇದೆ. ಅಂಗವಿಕಲರು 50,000 ಯಿಂದ ಕೂಡ ಡೆಪಾಸಿಟ್ ಇಡಬಹುದು.
● ನಿಮಗೆ ಸಿಗುವ ಪೆನ್ಷನ್ ಹಣವನ್ನು ನೀವು ಮಾಸಿಕವಾಗಿ ಅಥವಾ ತ್ರೈಮಾಸಿಕವಾಗಿ ಅಥವಾ ಅರ್ಧ ವಾರ್ಷಿಕವಾಗಿ ಅಥವಾ ವಾರ್ಷಿಕವಾಗಿ ಕೂಡ ಪಡೆದುಕೊಳ್ಳುವ ಆಯ್ಕೆ ಇರುತ್ತದೆ.
ಈ ಯೋಜನೆಯ ಬಹುದೊಡ್ಡ ಅನುಕೂಲತೆ ಏನು ಎಂದರೆ ಸಿಂಗಲ್ ಲೈಫ್ ಮತ್ತು ಜಾಯಿಂಟ್ ಲೈಫ್ ಆಯ್ಕೆಗಳು.
1. ಸಿಂಗಲ್ ಲೈಫ್ ಒಪ್ಶನ್ ಆಯ್ದುಕೊಂಡರೆ ಪಾಲಿಸಿದಾರರು ಮೃತಪಟ್ಟ ಪಕ್ಷದಲ್ಲಿ ಅವರ ನಾಮಿನಿಗೆ ಕಾನೂನು ಪ್ರಕಾರ ಸಿಗಬೇಕಾದ ಡೆಪೋಸಿಟ್ ಹಣ ಮತ್ತು ಮತ್ತು ಪೆನ್ಷನ್ ಹಣ ಮಾತ್ರ ಸಲ್ಲುತ್ತದೆ.
2. ಜಾಯಿಂನ್ ಲೈಫ್ ಆರಿಸಿಕೊಂಡರೆ ಒಂದು ವೇಳೆ ಪಾವತಿ ಖರೀದಿಸಿದವರು ಮೃತಪಟ್ಟ ಪಕ್ಷದಲ್ಲಿ ಅವರ ನಾಮಿನಿ ಇದನ್ನು ಮುಂದುವರಿಸಬಹುದು. ಅವರು ಇರುವವರೆಗೂ ಕೂಡ ಅವರಿಗೆ ಪೆನ್ಷನ್ ಬರುತ್ತದೆ. ಅವರ ಮರಣದ ನಂತರ ಸೆಕೆಂಡ್ ಹೋಲ್ಡರ್ ಗೆ ಕಾನೂನು ಪ್ರಕಾರವಾಗಿ ತಲುಪಬೇಕಾದ ಹಣ ತಲುಪುತ್ತದೆ.
● ಈ ಯೋಜನೆಯಲ್ಲಿ ಒಂದೂವರೆ ಲಕ್ಷ ಹಣ ಡೆಪಾಸಿಟ್ ಮಾಡಿದರೆ ಆ ವ್ಯಕ್ತಿಯ ವೇಸ್ಟಿಂಗ್ ಏಜ್ 12 ವರ್ಷಗಳಾಗಿದ್ದರೆ ಆ ವ್ಯಕ್ತಿಗೆ ವಾರ್ಷಿಕವಾಗಿ 13,905 ರೂಪಾಯಿ ಸಿಗುತ್ತದೆ. ಅವರು 6 ತಿಂಗಳಿಗೊಮ್ಮೆ ಪೆನ್ಷನ್ ಹಣ ಪಡೆಯಲು ಬಯಸಿದರೆ 6813ರೂ, ಮೂರು ತಿಂಗಳಿಗೊಮ್ಮೆ ಪಡೆಯಲು ಬಯಸಿದರೆ 3,372ರೂ. ಅಥವಾ ಪ್ರತಿ ತಿಂಗಳು ಪೆನ್ಷನ್ ಪಡೆಯಲು ಬಯಸಿದರೆ 1,112ರೂ. ಸಿಗುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.