ಜಮೀನಿನ ಪಹಣಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ.! ಮೊಬೈಲ್ ನಲ್ಲಿಯೇ ಲಿಂಕ್ ಮಾಡುವ ಸುಲಭ ವಿಧಾನ.!

 

WhatsApp Group Join Now
Telegram Group Join Now

ಆಧುನಿಕ ಯುಗಕ್ಕೆ ತಕ್ಕ ಹಾಗೆ ಎಲ್ಲಾ ಕ್ಷೇತ್ರವು ಡಿಜಿಟಲೀಕರಣ ಗೊಳ್ಳುತ್ತಿದೆ. ಇದಕ್ಕೆ ಆಡಳಿತ ಕೂಡ ಹೊರತೇನಲ್ಲ, ಸರ್ಕಾರದ ಬಹುತೇಕ ಇಲಾಖೆಗಳ ಕಾರ್ಯವು ಈಗ ಆನ್ಲೈನ್ ಮೂಲಕವೇ ನಡೆಯುತ್ತಿದೆ. ಕಂದಾಯ ವಿಭಾಗದಲ್ಲಂತೂ ಈ ವಿಚಾರದಲ್ಲಿ ಬಹಳ ದೊಡ್ಡ ಕ್ರಾಂತಿಯೇ ಇತ್ತೀಚಿನ ದಿನಗಳಲ್ಲಿ ನಡೆದಿದೆ ಎಂದು ಹೇಳಬಹುದು. ಈಗ ಮುಂದುವರೆದು ಮತ್ತೊಂದು ಮಹತ್ವದ ಹೆಜ್ಜೆಯನ್ನು ರಾಜ್ಯ ಸರ್ಕಾರ ಇಟ್ಟಿದೆ.

ಅದೇನೆಂದರೆ, ನನ್ನ ಆಸ್ತಿ ಯೋಜನೆಯಡಿ ನನ್ನ ಆಸ್ತಿ ನನ್ನ ಗುರುತು ಎಂಬ ಉದ್ದೇಶದಿಂದ ಸರ್ಕಾರವು ರೈತರ ಸ್ಥಿರಾಸ್ತಿಗಳಿಗೆ ಆಧಾರ್ ಲಿಂಕ್ ಮಾಡುವುದನ್ನು (Aadhar link to RTC) ಕಡ್ಡಾಯಗೊಳಿಸಿದೆ. ಈ ರೀತಿ ಮಾಡುವುದರಿಂದ ಮಾಹಿತಿಗಳು ಸುಲಭವಾಗಿ ರೈತರಿಗೆ ಬೆರಳು ತುದಿಯಲ್ಲಿ ರೈತರಿಗೆ ಸಿಗುತ್ತದೆ ಮತ್ತು ಸರ್ಕಾರದ ಸೌಲಭ್ಯಗಳು ಸರಾಗವಾಗಿ ರೈತನಿಗೆ ತಲುಪುತ್ತವೆ ಎನ್ನುವುದು ಯೋಜನೆಯ ಉದ್ದೇಶ.

ಈ ಸುದ್ದಿ ಓದಿ:- 18 ಲಕ್ಷ ಸಿಮ್ ಕಾರ್ಡ್ ಬಂದ್ ಮಾಡಲು ಆದೇಶ, ನಿಮ್ಮ ನಂಬರ್ ಇದೆಯೇ ಚೆಕ್ ಮಾಡಿ.!

2023-24ನೇ ಸಾಲಿನ ತಾತ್ಕಾಲಿಕ ಬರ ಪರಿಹಾರದ ನಿಧಿ ಹಣ ವರ್ಗಾವಣೆ ಮಾಡುವ ಸಮಯದಲ್ಲಿಯೂ ಕೂಡ ರೈತರಿಗೆ ಈ ಬಗ್ಗೆ ಸೂಚನೆ ನೀಡಲಾಗಿತ್ತು. ಫ್ರೂಟ್ಸ್ ತಂತ್ರಾಂಶದಡಿ ನೋಂದಾಯಿಸಿಕೊಂಡು ಕೆವೈಸಿ ಮಾಡಿಸಿ ಜಮೀನಿನ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿದ ರೈತರಿಗೆ ಮಾತ್ರ ಪರಿಹಾರದ ಹಣ ತಲುಪುವುದು ಎಂದು ಕಟ್ಟು ನೆಟ್ಟಾಗಿ ಹೇಳಲಾಗಿತ್ತು.

ಈಗ ಇದನ್ನು ನಿರ್ಲಕ್ಷ್ಯ ಮಾಡಿದ ಅನೇಕ ರೈತರು ಬರ ಪರಿಹಾರದ ಹಣ ಪಡೆಯಲಾಗದೆ ಸಮಸ್ಯೆಯಲ್ಲಿದ್ದಾರೆ. ಈ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡರವರು (Minister Krishnabaire Gowda) ಕೆಲವು ಪ್ರಮುಖವಾದ ಇನ್ನಷ್ಟು ಮಾಹಿತಿಗಳನ್ನು ಕೂಡ ಹಂಚಿಕೊಂಡಿದ್ದಾರೆ.

ಮುಂದಿನ ತಿಂಗಳ 12ನೇ ತಾರೀಖಿನ ನಂತರ ರಾಜ್ಯದಾದ್ಯಂತ ಕಡ್ಡಾಯವಾಗಿ ಪಹಣಿಗಳಿಗೆ ಆಧಾರ್ ಲಿಂಕ್ ಮಾಡಲು ಅಭಿಯಾನ ಆರಂಭಿಸಲಾಗುವುದು. ಈಗಾಗಲೇ ಸರ್ಕಾರದ ಆದೇಶದಂತೆ ಸಾಕಷ್ಟು ರೈತರು ಇದನ್ನು ಅನುಸರಿಸಿದ್ದಾರೆ ಮುಂದಿನ ಎರಡು ತಿಂಗಳಿನಲ್ಲಿ ಕಾರ್ಬನ್ ಡಿಜಿಟಲೀಕರಣ ಯೋಚನೆ ಮೂಲಕ 65 ಲಕ್ಷ ರೈತರನ್ನು ಈ ವ್ಯಾಪ್ತಿಗೆ ತರಲು ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ.

ಈ ಸುದ್ದಿ ಓದಿ:- ಭಾರತೀಯ ವಾಯುಪಡೆಯಲ್ಲಿ ನೇಮಕಾತಿ, 304 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ, ವೇತನ 1,77,500.!

ಎರಡು ವಿಧಾನದ ಮೂಲಕವಾಗಿ ಈ ಪ್ರಕ್ರಿಯೆ ಪೂರ್ತಿ ಗೊಳಿಸಬಹುದು ಎನ್ನುವ ಮಾಹಿತಿಯನ್ನು ಸಚಿವರು ಹಂಚಿಕೊಂಡಿದ್ದಾರೆ.
1. ನಿಮ್ಮ ಗ್ರಾಮದ ಗ್ರಾಮಾಧಿಕಾರಿಗಳ ಕಚೇರಿಗೆ ಆಧಾರ್ ಕಾರ್ಡ್ ಹಾಗೂ ಜಮೀನಿನ ಪಹಣಿಯೊಂದಿಗೆ ಹೋಗಿ ಅರ್ಜಿ ಸಲ್ಲಿಸಿ RTC ಆಧಾರ್ ಲಿಂಕ್ (RTC-Aadhar link) ಮಾಡಿಸಬಹುದು.
2. ರೈತರು ಸ್ವಯಂ ಪ್ರೇರಣೆಯಿಂದ ತಮ್ಮ ಮೊಬೈಲ್ ನಲ್ಲಿಗೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಕೂಡ ಲಿಂಕ್ ಮಾಡಿಸಿಕೊಳ್ಳಬಹುದು

ಮೊಬೈಲ್ ನಲ್ಲಿ ಪಹಣಿ – ಆಧಾರ್ ಲಿಂಕ್ ಮಾಡಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಿ:-
* https://landrecords.karnataka.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
* ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನೀಡಿರುವ Captcha Code ನಮೂದಿಸಿ
* Send OTP ಎನ್ನುವುದರ ಮೇಲೆ ಕ್ಲಿಕ್ ಮಾಡಿ, ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಬಂದಿರುತ್ತದೆ ಅದನ್ನು ನಮೂದಿಸಿ ಅಥವಾ ವೇರಿಫೈ ಮಾಡಿ.

ಈ ಸುದ್ದಿ ಓದಿ:- ಕೆನರಾ ಬ್ಯಾಂಕ್ ನಲ್ಲಿ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 30,000

* ನಾನು ಇಲ್ಲಿ ಸ್ವಯಂ ಪ್ರೆರಣೆಯಿಂದ ಆಧಾರ್ ಗಾಗಿ ನನ್ನ ಒಪ್ಪಿಗೆ ನೀಡುತ್ತಿದ್ದೇನೆ. ಎನ್ನುವುದನ್ನು ಒಪ್ಪುವುದಾದರೆ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ, ನಂತರ Verify ಮೇಲೆ ಕ್ಲಿಕ್ ಮಾಡಿ
* ಆಧಾರ್ ಯಶಸ್ವಿಯಾಗಿ ಪರಿಶೀಲಿಸಲಾಗಿದೆ ಎಂಬ ಸಂದೇಶ ಕಾಣುತ್ತದೆ. Fetch details ಮೇಲೆ ಕ್ಲಿಕ್ ಮಾಡಿದರೆ ಕಂಪ್ಲೀಟ್ ಆಗುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now