ಮಂತ್ರಗಳಿಗೆ ಬಹಳಷ್ಟು ಶಕ್ತಿ ಇದೆ. ಮಂತ್ರ ಉಚ್ಚಾರಣೆ ಮಾಡಲು ಬರದಿದ್ದರೂ ಅವುಗಳನ್ನು ಶ್ರವಣ ಅಂದರೆ ಕೇಳಿಸಿಕೊಂಡರೆ ಸಾಕು, ಎಷ್ಟೋ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇದು ಕೆಲವರಿಗೆ ಉತ್ಪೇಕ್ಷೆ ಎನಿಸಬಹುದು ಆದರೆ 21 ದಿನಗಳ ಕಾಲ ಇದನ್ನು ಪ್ರಯೋಗ ಮಾಡಿ ನೋಡಿದರೆ ಅವರಿಗೆ ಅರಿವಾಗುತ್ತದೆ. ಆದರೆ ಅಷ್ಟು ಸಮಯ ಈಗಿನ ಕಾಲದವರಿಗೆ ಎಲ್ಲಿದೆ.? ಯಾರನ್ನು ಕೇಳಿದರು ಕೂಡ ಸಮಯವಿಲ್ಲ ಎನ್ನುತ್ತಾರೆ.
ಈಗಿನ ಕಾಲದಲ್ಲಿ ಜನರು ಎಷ್ಟು ಬ್ಯುಸಿ ಇದ್ದಾರೆ ಎಂದರೆ ಬೆಳಿಗ್ಗೆ ಎದ್ದಾಗಲಿಂದ ರಾತ್ರಿ ಮಲಗುವವರೆಗೂ ಕೂಡ ಎಲ್ಲರೂ ತುಂಬಾ ಬ್ಯುಸಿ. ಶಾಲೆಗೆ ಹೋಗುವ ಮಕ್ಕಳು, ಮನೆಯಲ್ಲಿರುವ ಗೃಹಿಣಿ, ಆಫೀಸಿಗೆ ಹೋಗುವವರು, ವ್ಯಾಪಾರಿಗಳು ಪ್ರತಿಯೊಬ್ಬರೂ ಕೂಡ ಬಹಳ ಬ್ಯುಸಿ. ಯಾರಿಗೂ ಸಮಯ ಇಲ್ಲ ಆದರೆ ಸೋಶಿಯಲ್ ಮೀಡಿಯಾ ಬಳಸಲು, ಟ್ರಾಫಿಕ್ ನಲ್ಲಿ ಕಾಯಲು, ಹಾಳು ಹರಟೆ ಹೊಡೆಯಲು ಈ ಸಮಯ ವ್ಯರ್ಥವಾಗುತ್ತಿದೆ ಎನ್ನುವುದು ಅವರಿಗೆ ಮನವರಿಕೆಯಾಗಿಲ್ಲ.
ದಿನದಲ್ಲಿ ಅರ್ಧ ತಾಸು ಈ ಮಂತ್ರಗಳನ್ನು ಕೇಳುವುದಕ್ಕೆ ಅಥವಾ ಹೇಳುವುದಕ್ಕೆ ವಿನಿಯೋಗಿಸಿದರೆ ಜೀವನದಲ್ಲಿ ಬಹಳಷ್ಟು ಮುಂದೆ ಬರುತ್ತಿರಿ. ಮೊದಲಿಗೆ ಅದು ನಿಮಗೆ ಬಹಳ ಬೋರ್ ಎನಿಸಬಹುದು, ಒಂದು ಬಾರಿ ನಿಮಗೆ ಅದರಲ್ಲಿರುವ ಶಕ್ತಿ ಅರಿವಾದ ಮೇಲೆ ನೀವೇ ಅದಕ್ಕೆ ಶರಣಾಗಿ ಬಿಡುತ್ತೀರಿ. ಇಷ್ಟು ದಿನಗಳ ಕಾಲ ನಾನು ಇದನ್ನು ಮಾಡದೆ ಸಮಯ ವ್ಯರ್ಥ ಮಾಡಿಕೊಂಡೆನಲ್ಲ ಎಂದು ಪಶ್ಚಾತಾಪ ಪಡುತ್ತೀರಿ.
ನಿಮ್ಮ ಜೀವನ ಮಟ್ಟ ಸುಧಾರಣೆ ಆಗುತ್ತದೆ. ನೀವು ಬಹಳ ಸಕರಾತ್ಮಕವಾಗಿ ನೆಮ್ಮದಿಯಾಗಿ ಬದುಕುತ್ತೀರಿ. ಮಂತ್ರಗಳಲ್ಲಿ ಅಷ್ಟೊಂದು ಶಕ್ತಿ ಹೇಗೆ ಬಂತು ಎಂದರೆ ನಿಜವಾಗಿಯೂ ಫಲ ಸಿಗುತ್ತದೆಯಾ ಎಂದರೆ ಖಂಡಿತವಾಗಿಯೂ ಸಿಗುತ್ತದೆ. ಒಮ್ಮೆ ನೀವು ದೇವರಿಗೆ ಶರಣಾಗಿ ಮಂತ್ರಗಳನ್ನು ಹೇಳಲು ಶುರು ಮಾಡಿ ಉದಾಹರಣೆಗೆ, ಶ್ರೀ ಮಹಾಲಕ್ಷ್ಮಿ ಅಷ್ಟಾವಳಿ ಹೇಳಲು ಶುರು ಮಾಡಿ.
ದಿನದಲ್ಲಿ ಅರ್ಧ ತಾಸು ಇದಕ್ಕಾಗಿ ಇಡಿ ಸಾಕು, ಇದು ಅಭ್ಯಾಸವಾದರೆ ಮೂರೇ ನಿಮಿಷಗಳಲ್ಲಿ ಹೇಳಬಹುದು. ಇದನ್ನು ಪಾಲಿಸುತ್ತಾ ಬಂದಂತೆ ನೀವು ಬಹಳ ಶಾಂತ ಮನಸ್ಸರು ಹೊಂದುತ್ತೀರಿ, ನಿಮಗೆ ದುರಾಸೆ ಬರುವುದಿಲ್ಲ, ಯಾವುದರ ಮೇಲೆ ಅತಿಯಾದ ವ್ಯಾಮೋಹ ಇರುವುದಿಲ್ಲ, ನಿಮ್ಮ ಜೀವನದ ಸುಖವೇ ಆಗಲಿ ದುಃಖವೇ ಆಗಲಿ ನಿಮ್ಮನ್ನು ಹೆಚ್ಚು ಕಾಣುವುದಿಲ್ಲ, ನೀವು ದುಶ್ಚಟಗಳನ್ನು ಬಿಡುತ್ತೀರಿ.
ನಿಮಗೆ ಜೀವದ ಮೇಲೆ ಹೊಸ ಉತ್ಸಾಹ ಬರುತ್ತದೆ, ದುಡಿಯಲು ಹುರುಪು ಬರುತ್ತದೆ. ಇನ್ನೊಬ್ಬರ ಬಗ್ಗೆ ಚಾಡಿ ಹೇಳಲು ಸಮಯವೂ ಇರುವುದಿಲ್ಲ, ಮನಸ್ಸು ಇರುವುದಿಲ್ಲ ಆ ಸಮಯಗಳನ್ನು ನೀವು ದೇವರಿಗಾಗಿ ಮೀಸಲಿಡುತ್ತೀರಿ ಇಷ್ಟಾದರೆ ಸಾಕಲ್ಲವೆ ನಿಮ್ಮ ಎಷ್ಟೋ ಸಮಸ್ಯೆಗಳು ಬಗೆಹರಿದಂತೆ.
ಈ ರೀತಿ ಭಾವನೆ ನಮ್ಮ ಮನಸಿಗೆ ಬಂದ ಮೇಲೆ ನೀವು ಸಾಲ ಮಾಡುವುದಿಲ್ಲ, ದಿನ ದುಡಿಯುತ್ತೀರಿ, ಹಣದ ಕೊರತೆ ಇರುವುದಿಲ್ಲ, ವಿನಾಕಾರಣ ಮನಸನ್ನು ಹಾಳು ಮಾಡಿಕೊಳ್ಳುವ ಅಥವಾ ಜಗಳ ಮಾಡಿಕೊಂಡು ಕೋರ್ಟ್ ಕಛೇರಿ ಅಲೆಯುವ ಕ’ಷ್ಟ ಬರುವುದಿಲ್ಲ. ಇದೇ ಮಂತ್ರವನ್ನು ಹೇಳಬೇಕು ಎಂದು ಇಲ್ಲ, ನಿಮ್ಮ ಇಷ್ಟ ದೇವರ ಮಂತ್ರವನ್ನು ಹೇಳಬಹುದು. ಸಹಸ್ರನಾಮ, ಅಷ್ಟನಾಮವಳಿ, ಅಷ್ಟೋತ್ತರ ಹೀಗೆ ಯಾವುದಾದರೂ ಒಂದನ್ನು ನಿಯಮತವಾಗಿ ಬಿಡದೆ ಅಭ್ಯಾಸ ಮಾಡಿಕೊಳ್ಳಿ.
ಇದನ್ನು ಮನೆಯಲ್ಲಿರುವ ಹಿರಿಯರು ಚಿಕ್ಕ ಮಕ್ಕಳಿಂದದೆ ಅಭ್ಯಾಸ ಮಾಡಿಸಿದರೆ ಮಕ್ಕಳು ಬಾಲ್ಯದಿಂದಲೇ ಒಂದು ಸರಿಯಾದ ರೀತಿಯಲ್ಲಿ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಬರುತ್ತಾರೆ. ಇನ್ನು ಇವುಗಳ ಫಲವೂ ಸಿಕ್ಕಿ ಬಿಟ್ಟರಂತೂ ಅವರು ಜೀವನದಲ್ಲಿ ಯಶಸ್ವಿ ಪುರುಷರಾಗುವುದರಲ್ಲಿ ಅನುಮಾನವೇ ಇಲ್ಲ. ತಪ್ಪದೆ ಇಂದಿನಿಂದ ಸರ್ಕಾರಾತ್ಮಕವಾಗಿ ಈ ಒಂದು ಆಚರಣೆಯನ್ನು ರೂಢಿಸಿಕೊಳ್ಳಿ, ಬದಲಾವಣೆ ಕಂಡುಕೊಳ್ಳಿ.