ಸಣ್ಣ ಫ್ಯಾಮಿಲಿಗೆ ಚಿಕ್ಕದಾಗಿ ಚೊಕ್ಕದಾಗಿ ಕಡಿಮೆ ಬಜೆಟ್ ಗೆ ಮನೆ ಬೇಕಾಗಿದ್ದರೆ ಈ ರೀತಿ ಕಟ್ಟಿಸಿ ಸಾಕು.! ಕೇವಲ 1 ಲಕ್ಷದಲ್ಲಿ ಮನೆ ನಿರ್ಮಿಸಬಹುದು.

 

ಮನೆ ಎನ್ನುವುದು ಅವಶ್ಯಕತೆ ಹಾಗೂ ಪ್ರತಿಷ್ಠೆಯೂ ಹೌದು. ನಮ್ಮ ಸುತ್ತ ಮುತ್ತ ಇರುವ ಮನೆಗಳನ್ನು ಒಮ್ಮೆ ಗಮನಿಸಿದರೆ ಎಷ್ಟು ಕಡಿಮೆ ಬಜೆಟ್ಟಿಗೆ ಹಾಗೂ ಎಷ್ಟು ಅಚ್ಚುಕಟ್ಟಾಗಿ ಮನೆ ನಿರ್ಮಿಸಬಹುದು ಮತ್ತು ಎಷ್ಟು ಐಷಾರಾಮಿ ಮನೆ ಕಟ್ಟಿ ಅರಮನೆಯಂತಹ ಮನೆಗಳಲ್ಲಿ ಇರಬಹುದು ಎನ್ನುವ ಐಡಿಯಾಗಳು ತಲೆಯಲ್ಲಿ ಓಡಾಡುತ್ತವೆ. ಹೆಚ್ಚಿನ ಜನರು ಹೀಗೆಯೇ ಕಡಿಮೆ ಬಜೆಟ್ಟಿಗೆ ಅಚ್ಚುಕಟ್ಟಾದ ಮನೆ ಪಡೆದುಕೊಳ್ಳಲು ಇಚ್ಛೆ ಪಡುತ್ತಾರೆ.

ಅದರಲ್ಲೂ ಒಂದು ಲಕ್ಷದ ಬಜೆಟ್ಟಿನಲ್ಲಿ ಎಲ್ಲಾ ವ್ಯವಸ್ಥೆ ಇರುವ ಮನೆ ನಿರ್ಮಾಣ ಮಾಡಿಕೊಳ್ಳಬಹುದು ಎಂದು ತಿಳಿದರೆ ಆಶ್ಚರ್ಯ ಪಡುತ್ತಾರೆ. ಖಂಡಿತವಾಗಿಯೂ ಇಂತಹ ಮನೆಯನ್ನು ನಿರ್ಮಾಣ ಮಾಡಬಹುದು ಸಿಂಗಲ್ ಹಾಲ್ ಓಪನ್ ಕಿಚನ್ ಇರುವ ರೂಫ್ ಶೆಟ್ಟರ್ ಮನೆಯನ್ನು ಈ ರೀತಿಯಾಗಿ ನಿರ್ಮಾಣ ಮಾಡಬಹುದು.

ಈಗಾಗಲೇ ಇರುವ ಮೋಲ್ಟೆಡ್ ಮನೆಯ ಮೇಲೆ ಈ ರೀತಿ ರೂಫ್ ಶೆಟರ್ ಅಲ್ಲಿ ಮನೆ ನಿರ್ಮಾಣ ಮಾಡಿ ಅದನ್ನು ಬಾಡಿಗೆಗೆ ಕೊಡಬಹುದು. ಸ್ಟೂಡೆಂಟ್ಗಳಿಗೆ ಮತ್ತು ಬ್ಯಾಚುಲರ್ ಗಳಿಗೆ ಈ ಮನೆ ಹೇಳಿ ಮಾಡಿಸಿದ ರೀತಿ ಇರುತ್ತದೆ. ಅವರಿಗೂ ಸಹ ಕಡಿಮೆ ಬಾಡಿಗೆ ಹಾಗೂ ಮನೆ ಚಿಕ್ಕದಾಗಿರುವುದರಿಂದ ಕ್ಲೀನ್ ಆಗಿ ಇಟ್ಟುಕೊಳ್ಳಲು ಅನುಕೂಲವಾಗುತ್ತದೆ ಅಥವಾ ನಿಮ್ಮ ಕುಟುಂಬದವರೇ ಇಚ್ಛೆಪಟ್ಟು ಅಲ್ಲಿ ಚಿಕ್ಕ ಫ್ಯಾಮಿಲಿಯವರು ವಾಸಿಸಲು ಇಷ್ಟಪಟ್ಟರೆ ಯೋಗ್ಯವಾಗಿರುತ್ತದೆ.

ಈ ರೀತಿ ಕಡಿಮೆ ಬಜೆಟ್ಟಿಗೆ ಮನೆ ನಿರ್ಮಾಣ ಮಾಡಿದರೆ ಯಾವುದೆಲ್ಲ ಟ್ರಿಕ್ಸ್ ಅನ್ನು ಬಳಸಬೇಕು ಎನ್ನುವ ಮಾಹಿತಿಯನ್ನು ನಾವು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಈ ರೀತಿಯಾಗಿ ನೀವು ಮನೆ ನಿರ್ಮಾಣ ಮಾಡಿಕೊಂಡರೆ ಅದರಲ್ಲಿ ಎಲ್ಲಾ ವ್ಯವಸ್ಥೆಯು ಕೂಡ ಇರುವುದರಿಂದ ಚಿಕ್ಕ ಮನೆಯಲ್ಲಿ ಇದ್ದೇವೆ ಎನ್ನುವ ಕೊರತೆ ಬರದಂತೆ ಜೀವಿಸಬಹುದು.

ಈಗಾಗಲೇ ಮೋಲ್ಡ್ ಮನೆ ಕೆಳಗೆ ಇರುವುದರಿಂದ ಅದರ ಮೇಲೆ ಮನೆ ನಿರ್ಮಾಣ ಮಾಡಿದರೆ ಒಂದು ಹಾಲ್ ಹಾಗೂ ಓಪನ್ ಕಿಚನ್ ಇರುವಂತೆ ಮಾಡಿ ಮೇಲೆ ರೂಫ್ ಮುಚ್ಚಿದರೆ ಸಾಕು ಆದರೆ ಅದಕ್ಕೆ ತಪ್ಪದೆ ಫ್ಯಾನ್ ವ್ಯವಸ್ಥೆ ಮಾಡಬೇಕು ಮತ್ತು ಓಪನ್ ಕಿಚನ್ ಆಗಿದ್ದರೂ ಕೂಡ ಸಿಂಕ್ ವ್ಯವಸ್ಥೆಯನ್ನು ಮಾಡಬೇಕು. 13×13 ಸಿಂಕನ್ನು ಹೆಚ್ಚಿನ ಜನರು ಸಜೆಸ್ಟ್ ಮಾಡುತ್ತಾರೆ.

ಇದರ ಜೊತೆಗೆ ಪುಸ್ತಕ ಅಥವಾ ಬಟ್ಟೆಗಳನ್ನು ಇಟ್ಟುಕೊಳ್ಳಲು ಸಿಮೆಂಟ್ ಇಂದ ಅಥವಾ ಸೆಲ್ಫ್ ಗಳಿಂದ ಕಬೋರ್ಡ್ ರೀತಿ ಮಾಡಿಕೊಂಡರೆ ಸಾಮಾನುಗಳನ್ನು ಜೋಡಿಸಿಕೊಳ್ಳಲು ಅನುಕೂಲವಾಗುತ್ತದೆ. ಹಾಗೆ ಶೋಕೇಸ್ ಕೂಡ ಮಾಡಿಕೊಂಡರೆ ಅದರಲ್ಲಿ ಕನ್ನಡಿ ಮೊಬೈಲ್ ಬಾಚಣಿಕೆಯಿಂದ ಹಿಡಿದು ಟ್ಯಾಬ್ಲೆಟ್ ಚಾರ್ಜರ್ ಇನ್ನಿತರ ವಸ್ತುಗಳನ್ನು ಇಟ್ಟುಕೊಳ್ಳಲು ಅದು ಬಹಳ ಅನುಕೂಲಕ್ಕೆ ಬರುತ್ತದೆ ಅಥವಾ ಅದನ್ನು ದೇವರ ಫೋಟೋ ಇಟ್ಟು ಪೂಜಿಸಲು ಬಳಸಿಕೊಳ್ಳಬಹುದು. ತಪ್ಪದೇ ಕಿಟಕಿ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು.

ಮನೆ ಹೊರಗೆ ಅಟ್ಯಾಚ್ ಬಾತರೂಮ್ ವ್ಯವಸ್ಥೆ ಮಾಡಿ ಅದಕ್ಕೆ ವೆಂಟಿಲೇಶನ್ ಗಾಗಿ ಒಂದು ಚಿಕ್ಕ ಕಿಟಕಿ ಇಟ್ಟರೆ ಸಾಕು. ಮನೆ ಮುಂದೆ ಜಾಗ ಉಳಿಸಿಕೊಳ್ಳಬೇಕು ಆಗ ಅದನ್ನು ಫ್ರೀ ಸಮಯದಲ್ಲಿ ಛೇರ್ ಹಾಕಿ ಕೂತು ಮಾತನಾಡಲು ಬಳಸಿಕೊಳ್ಳಬಹುದು ಅಥವಾ ಮನೆ ಒಳಗಡೆ ಬೋರಾದಾಗ ಆಚೆ ಬಂದು ಪ್ರಶಾಂತವಾದ ವಾತಾವರಣದಲ್ಲಿ ಓದಲು ಅಥವಾ ಮಂದಿ ಕುಳಿತು ಮಾತನಾಡಲು ಬಳಸಬಹುದು. ಈ ರೀತಿಯಾಗಿ ಇನ್ನೂ ವಿವರವಾಗಿ ಇದರ ಬಗ್ಗೆ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment

%d bloggers like this: