ಇತ್ತೀಚಿನ ದಿನಗಳಲ್ಲಿ ಫಂಕ್ಷನ್ ಗೆ ಹೋದರೂ, ಹೋಟೆಲ್ ಗೆ ಹೋದರೂ ದೇವಸ್ಥಾನಗಳಲ್ಲೂ ಪ್ಲಾಸ್ಟಿಕ್ ಪ್ಲೇಟ್ ಗಳಲ್ಲೇ ಊಟ ಅಥವಾ ಪ್ರಸಾದ ಹಾಕಿ ಕೊಡುತ್ತಾರೆ. ನಾವು ದೇಶದ ಯಾವುದೇ ಮೂಲೆಗೆ ಹೋದರು ಕೂಡ ಇದೇ ರೀತಿಯ ಪ್ಲೇಟ್ ಗಳಲ್ಲೇ ಆಹಾರ ಪದಾರ್ಥ ಬಡಿಸುವುದನ್ನು ನೋಡುವುದರಿಂದ ಇದಕ್ಕೆ ಬೇಡಿಕೆ ದೇಶದಲ್ಲಿ ಎಷ್ಟಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು.
ಹಳ್ಳಿಯೊಂದರ ಮನೆ ಒಳಗೂ ಕೂಡ ಜಮೀನಿನಲ್ಲಿ ಕೆಲಸ ಮಾಡುವವರಿಗೆ ಊಟ ಕೊಡುವುದಕ್ಕೆ ಅಥವಾ ಮನೆಗೆ ಬಂದ ಅತಿಥಿಗಳಿಗೆ ತಿಂಡಿ ಹಾಕಿ ಕೊಡುವುದಕ್ಕೆ ಇದೇ ಪ್ಲೇಟ್ ಬಳಸಲು ಸ್ಟಾಕ್ ಇಟ್ಟುಕೊಂಡಿರುತ್ತಾರೆ ಎಂದರೆ ನಮ್ಮ ದೇಶದಲ್ಲಿ ಇದು ಬಹಳ ಪ್ರಾಫಿಟ್ ನಲ್ಲಿ ನಡೆಯುತ್ತಿರುವ ಬಿಸಿನೆಸ್ ಎಂದೇ ನಂಬಬಹುದು.
ಹಾಗಾಗಿ ನೀವೇನಾದರೂ ಈ ರೀತಿ ಪೇಪರ್ ಪ್ಲೇಟ್ ಬಿಸಿನೆಸ್ ಮಾಡಬೇಕು ಎಂದು ಬಯಸಿದರೆ ನಿಮಗೆ ಅನುಕೂಲಕರವಾಗುವ ಕೆಲ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ ಪೇಪರ್ ಪ್ಲೇಟ್ ಮಾಡುವುದಕ್ಕೆ ಒಂದು ಮೆಷಿನ್ ಬರುತ್ತದೆ.
ಆಟೋ ಮ್ಯಾನುವಲ್ ಮಿಷನ್, ಫುಲ್ ಆಟೋಮೆಟಿಕ್ ಮಿಷನ್ ಈ ರೀತಿ ಬೇರೆ ಬೇರೆ ವಿಭಾಗದಲ್ಲಿ ಸಿಗುತ್ತದೆ ನೀವು ಸಿಂಗಲ್ ಮಿಷನ್ ತೆಗೆದುಕೊಂಡರೆ 85,000 ಕ್ಕಿಂತ ಹೆಚ್ಚು ಬೆಲೆ ಇರುತ್ತದೆ ನೀವೇನಾದರೂ ಡಬಲ್ ಮಿಷನ್ ತೆಗೆದುಕೊಂಡರೆ 1.5 ಲಕ್ಷಕ್ಕೆ ಎರಡು ಮಷೀನ್ ಬರುತ್ತದೆ. ಪೇಪರ್ ಪ್ಲೇಟ್ ಮಾಡುವುದಕ್ಕೆ ರಾ ಮೆಟೀರಿಯಲ್ ಕೂಡ ಮಿಷನ್ ಮ್ಯಾನುಫ್ಯಾಕ್ಚರ್ ಮಾಡುವವರೇ ಕೊಡುತ್ತಾರೆ.
ಕರ್ನಾಟಕದಲ್ಲಿ ಹುಬ್ಬಳ್ಳಿಯಲ್ಲಿರುವ ಪ್ರಿನ್ಸ್ ಎಂಟರ್ಪ್ರೈಸಸ್ ರವರು ಮಿಷನ್ ಸೇಲ್ ಮಾಡುವುದರಿಂದ ಹಿಡಿದು ಆಸಕ್ತಿ ಇರುವವರಿಗೆ ಟ್ರೈನಿಂಗ್ ಕೊಟ್ಟು ಅವರೇ ಮಿಷನ್ ಸೇಲ್ ಮಾಡಿ ನೀವು ಹೇಳಿದ ಜಾಗಕ್ಕೆ ಬಂದು ಅದನ್ನು ಇನ್ಸ್ಟಾಲೇಷನ್ ಮಾಡಿ ಕೊಟ್ಟು ಅಲ್ಲೂ ಕೂಡ ಕೆಲ ಪ್ಲೇಟ್ ಗಳನ್ನು ತಯಾರಿಸಿ ನಿಮಗೆ ಪೂರ್ತಿ ತರಬೇತಿ ಮಾಡಿ ಹೋಗುತ್ತಾರೆ.
ಆದರೆ ಅವರು ಖರೀದಿಸುವುದಿಲ್ಲ. ನಿಮಗೆ ಎಲ್ಲ ರೀತಿಯ ಮಾರ್ಕೆಟಿಂಗ್ ಐಡಿಯಾ ಗಳನ್ನು ಕೂಡ ಕೊಡುತ್ತಾರೆ. ನೀವು ನಿಮ್ಮ ಜ್ಞಾನವನ್ನು ಉಪಯೋಗಿಸಿ ಮಾರ್ಕೆಟಿಂಗ್ ಕ್ರಿಯೇಟ್ ಮಾಡಿಕೊಳ್ಳಬೇಕು. ಸದ್ಯಕ್ಕಿರುವ ಪರಿಸ್ಥಿತಿಯಲ್ಲಿ ಯಾವುದೇ ಮಾರ್ಕೆಟಿಂಗ್ ಮಾಡದೆ ಹೋದರು ನಾಲ್ಕು ಜನರಿಗೆ ಗೊತ್ತಾದರೆ ಅವರೇ ಬಂದು ಆರ್ಡರ್ ಕೊಡುವ ಮಟ್ಟಕ್ಕೆ ಈ ಪೇಪರ್ ಪ್ಲೇಟ್ ಬಿಸಿನೆಸ್ ಓಡುತ್ತಿದೆ ಎನ್ನುವುದನ್ನು ನಂಬಬಹುದು.
ಸ್ವತಃ ಇವರು ಸಹ ಪ್ರಿನ್ಸ್ ಪೇಪರ್ ಪ್ಲೇಟ್ ಎನ್ನುವ ಸಣ್ಣ ಫ್ಯಾಕ್ಟರಿ ಮಾಡಿ ಪೇಪರ್ ಪ್ಲೇಟ್ ಗಳನ್ನು ಮಾಡಿ ಸೇಲ್ ಮಾಡುತ್ತಿದ್ದಾರೆ 15 ರಿಂದ 20 ಜನ ಮಹಿಳೆಯರು ಇವರ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಾರೆ. ಕಿರಾಣಿ ಅಂಗಡಿಗಳಿಗೆ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳಿಗೆ ಹೋಟೆಲ್ ಗಳಿಗೆ ಹೀಗೆ ಎಲ್ಲಾ ಕಡೆ ಇವರಿಗೆ ಆರ್ಡರ್ ಬರುತ್ತಿದೆಯಂತೆ.
ಒಂದು ಮಿಷನ್ ನಲ್ಲಿ ಡಿಸೈನ್ ಗೆ ತಕ್ಕ ಹಾಗೆ ಹಾಗೂ ಸೈಜ್ ಗೆ ತಕ್ಕ ಹಾಗೆ ರೋಲರ್ಗಳನ್ನು ಬದಲಾಯಿಸಿಕೊಳ್ಳುವ ಆಪ್ಷನ್ ಕೂಡ ಇದೆ. ಯಾಕೆಂದರೆ ನಾವು ತಿಂಡಿ ತಿನ್ನುವುದಕ್ಕೆ ಊಟ ಮಾಡುವುದಕ್ಕೆ ಪ್ರಸಾದ ಕೊಡುವುದಕ್ಕೆ ಹೀಗೆ ಬೇರೆ ಬೇರೆ ಸೈಜ್ ಪ್ಲೇಟ್ ಗಳನ್ನು ಬಳಸುವುದರಿಂದ ನಮ್ಮ ಆಸಕ್ತಿಗೆ ಅನುಗುಣವಾಗಿ ಅವರು ಕೂಡ ಬೇರೆ ಬೇರೆ ಸೈಜ್ ನಲ್ಲಿಯೇ ಪ್ಲೇಟ್ ಮಾಡಿಕೊಡುತ್ತಾರೆ.
ಒಮ್ಮೆ ಇದಕ್ಕೆ ಬಂಡವಾಳ ಹಾಕಿ ಖರೀದಿಸಿದರೆ ಸಾಕು ತಿಂಗಳಿಗೆ ಖರ್ಚು ಕಳೆದು ಕನಿಷ್ಠ 50 ಸಾವಿರದವರೆಗೆ ಖಂಡಿತ ಉಳಿತಾಯ ಮಾಡಬಹುದು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಈ ವಿಡಿಯೋವನ್ನು ನೋಡಿ ಮತ್ತು ಆರ್ಡರ್ ಮಾಡುವ ಮನಸ್ಸಿದ್ದರೆ ಈ ಸಂಖ್ಯೆಗೆ ಕರೆ ಮಾಡಿ.
7406655765
8050210238