ಈಗಿನ ಕಾಲದಲ್ಲಿ ಹೊರಗೆ ಹೋಗಿ ದುಡಿಯುವುದಕ್ಕಿಂತ ಮನೆಯಲ್ಲಿ ಇದ್ದುಕೊಂಡು ಯಾವುದಾದರೂ ಉದ್ಯೋಗ ಮಾಡಬೇಕು ಎಂದು ಹೆಚ್ಚಿನ ಜನರು ಬಯಸುತ್ತಾರೆ. ಹೀಗೆ ಮನೆಯಲ್ಲಿ ಇದ್ದುಕೊಂಡು ಬಿಡುವಾಗ ಮಾಡುವಂತಹ ಹತ್ತಾರು ಬಿಸಿನೆಸ್ ಗಳು ಇವೆ.
ಹಪ್ಪಳ ಸೆಂಡಿಗೆ ತಯಾರಿಕೆ, ಮಸಾಲ ಪದಾರ್ಥಗಳ ತಯಾರಿಕೆ, ಅಗರಬತ್ತಿ ಮಾಡುವುದು, ಕರ್ಪೂರ ಮಾಡುವುದು, ಪ್ಲಾಸ್ಟಿಕ್ ಪ್ಲೇಟ್ ಮಾಡುವುದು, ಪಾಲಿ ಬ್ಯಾಗ್ ಮಾಡುವುದು, ಚಪಾತಿ ರೋಟಿ ತಯಾರಿಸುವುದು ಇತ್ಯಾದಿ ಗೃಹಿಣಿಯರು ಬಿಡುವಿದ್ದಾಗ ವಿದ್ಯಾರ್ಥಿಗಳು ಪಾರ್ಟ್ ಟೈಮ್ ಗೆ ತಮ್ಮ ಖರ್ಚಿಗಾಗಿ, ರಿಟೈಡ್ ಆದವರು ಅಥವಾ ಇದನ್ನೇ ಉದ್ಯಮವಾಗಿ ಪರಿಗಣಿಸಿ ಲಾಭ ಮಾಡಲು ದೊಡ್ಡ ಮಟ್ಟದಲ್ಲಿ ಆರಂಭಿಸಬೇಕು ಎನ್ನುವವರು ಕೂಡ ಇವುಗಳನ್ನು ಪ್ರಯತ್ನಿಸಬಹುದು.
ಮಿಷಿನ್ ಗಳ ಸಹಾಯದಿಂದ ಈ ಎಲ್ಲಾ ಕೆಲಸಗಳನ್ನು ಮನೆಯಲ್ಲಿಯೇ ಮಾಡಬಹುದು. ಇದಕ್ಕೆ ಸೇರುವಂತಹ ಮತ್ತೊಂದು ಬಿಸಿನೆಸ್ ಐಡಿಯಾ ಎಂದರೆ ಸದ್ಯಕ್ಕೆ ಮಾರ್ಕೆಟ್ ನಲ್ಲಿ ಹೆಚ್ಚು ಬೇಡಿಕೆ ಇರುವ ವಸ್ತುಗಳಲ್ಲಿ ಒಂದಾದ ಪೆನ್ನುಗಳ ತಯಾರಿಕೆ. ಪೆನ್ನುಗಳ ಉಪಯೋಗ ಎಷ್ಟಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಮತ್ತು ಇದು ಎಂದೂ ಕೂಡ ಬೇಡಿಕೆ ಕಡಿಮೆ ಆಗದ ವಸ್ತು.
ಈ ಸುದ್ದಿ ಓದಿ:-ಗೃಹಲಕ್ಷ್ಮಿ 8ನೇ ಕಂತಿನ & ಪೆಂಡಿಂಗ್ ಇರುವ ಎಲ್ಲಾ ಹಣ ಪಡೆಯಲು ಮತ್ತೊಂದು ಅವಕಾಶ.!
ಯಾಕೆಂದರೆ ಶಾಲಾ-ಕಾಲೇಜುಗಳಲ್ಲಿ ಕಚೇರಿಗಳಲ್ಲಿ ಹೋಟೆಲ್ ಆಸ್ಪತ್ರೆ ಇತ್ಯಾದಿ ಎಲ್ಲಾ ಸ್ಥಳದಲ್ಲಿಯೂ ಕೂಡ ಪೆನ್ನು ಬಳಕೆ ಇದ್ದೇ ಇರುತ್ತದೆ. ನೀವೇನಾದರೂ ದಿನೋಪಯೋಗಿ ವಸ್ತುವಾದ ಈ ಪೆನ್ ನ್ನು ಮನೆಯಲ್ಲಿಯೇ ತಯಾರಿಸಲು ಶುರು ಮಾಡಿದರೆ ಖರ್ಚು ಕಳೆದು ದಿನಕ್ಕೆ ಕನಿಷ್ಠ 20,000 ಆದರೂ ಉಳಿತಾಯ ಮಾಡಬಹುದು.
ಈ ಬಿಸಿನೆಸ್ ಆರಂಭಿಸುವುದು ಹೇಗೆ? ಮಾರ್ಕೆಟಿಂಗ್ ಮಾಡುವುದು ಹೇಗೆ? ಏನೆಲ್ಲ ರಾ ಮೆಟೀರಿಯಲ್ ಬೇಕು? ಇದನ್ನು ಹೇಗೆ ಕೊಂಡುಕೊಳ್ಳಬೇಕು ಇದರ ಬಗ್ಗೆ ಕೂಡ ಈ ಲೇಖನದಲ್ಲಿ ಕೆಲ ಸಂಗತಿಗಳನ್ನು ತಿಳಿಸಲು ಬಯಸುತ್ತಿದ್ದೇವೆ.
ಮಾರ್ಕೆಟ್ ನಲ್ಲಿ ಪೆನ್ನುಗಳು ಒಂದಕ್ಕೆ ಎರಡುವರೆಯಿಂದ ಮೂರು ರೂಪಾಯಿಗೆ ಸಿಗುತ್ತವೆ ಇದು ಯೂಸ್ ಅಂಡ್ ಥ್ರೋ ಪೆನ್ನುಗಳಾಗಿವೆ. ನೀವು ಇದನ್ನೇ ತಯಾರಿಸುವುದು ಒಳ್ಳೆಯದು ಯಾಕೆಂದರೆ ಸದ್ಯಕ್ಕೆ ಹೆಚ್ಚು ಬೇಡಿಕೆ ಇರುವುದು ಇಂತಹ ಪೆನ್ನುಗಳಿಗೆ ಈ ಪೆನ್ ತಯಾರಿಸಲು ನೀವು ಒಂದು ಮಿಷನ್ ಖರೀದಿಸಬೇಕು.
ಈ ಸುದ್ದಿ ಓದಿ:-ಮೀನು ಸಾಕಾಣಿಕೆ ಮಾಡಿ ತಿಂಗಳಿಗೆ 2 ಲಕ್ಷ ಲಾಭ ಪಡೆಯಿರಿ.!
ಈ ಮಿಷನ್ ಇಂಡಿಯಾ ಮಾರ್ಟ್ ಕಾಂ ನಲ್ಲಿ (indiamart.com) ಸಿಗುತ್ತದೆ ಮತ್ತು ರಾ ಮೆಟೀರಿಯಲ್ ಆಗಿ ಪೆನ್ನಿಗೆ ಬೇಕಾದ ಬ್ಯಾರಲ್, ನಿಬ್ ಮತ್ತು ಕ್ಯಾಪ್ ಕೂಡ ಇಲ್ಲೇ ಸಿಗುತ್ತದೆ. ಇದನ್ನು ಕೂಡ ಇಂಡಿಯ ಮಾರ್ಟ್ ಕಾಂ ನಲ್ಲಿ ಖರೀದಿಸಿ ಬ್ಯಾರೆಲ್ ಗೆ ಮಿಷನ್ ಸಹಾಯದಿಂದ ಇಂಕ್ ಫಿಲ್ ಮಾಡಿ ನಿಬ್ ಫಿಕ್ಸ್ ಮಾಡಿದರೆ ನಂತರ ಕ್ಯಾಪ್ ಕ್ಲೋಸ್ ಮಾಡಿ ಪ್ಯಾಕ್ ಮಾಡಿ ಮಾರ್ಕೆಟಿಂಗ್ ಮಾಡಿದರೆ ಮುಗಿಯಿತು.
ಹತ್ತಿರದಲ್ಲಿರುವ ಸ್ಟೇಷನರಿ ಅಂಗಡಿ, ಕಿರಾಣಿ ಅಂಗಡಿ, ಮೆಡಿಕಲ್ ಶಾಪ್, ಶಾಲಾ ಕಾಲೇಜುಗಳ ಬಳಿ ಇರುವ ಅಂಗಡಿ ಮತ್ತು ಶಾಲಾ ಕಾಲೇಜುಗಳು ಆಫೀಸ್ ಗಳು ಎಲ್ಲಾ ಕಡೆ ಸೇಲ್ ಮಾಡಬಹುದು. ಈ ಮಿಷನ್ ಗೆ ಕೇವಲ ರೂ.20,000 ಖರ್ಚು ಆಗುತ್ತದೆ ಮತ್ತು ರಾ ಮೆಟೀರಿಯಲ್ ಹಾಗೂ ಲಾಭದ ಬಗ್ಗೆ ಹೇಳುವುದಾದರೆ ಒಂದು ಪೆನ್ನು ತಯಾರಿಕೆಗೆ ಒಟ್ಟು ನಿಮಗೆ 80 ಪೈಸೆ ಖರ್ಚಾಗುತ್ತದೆ.
ನೀವೇನಾದರೂ ಎರಡುವರೆ ರುಪಾಯಿಗೆ ಈ ಪೆನ್ ಮಾರಾಟ ಮಾಡುವುದಾದರೆ ಒಂದು ದಿನಕ್ಕೆ 1,000 ಪೆನ್ ತಯಾರಿಕೆ ಮಾಡಿದರು ನೀವು ಡಿಸ್ಕೌಂಟ್ ಕೊಟ್ಟು ಸೇಲ್ ಮಾಡಿದರು ಕೂಡ ಖರ್ಚು ಕಳೆದು 2,000 ರೂಪಾಯಿ ಉಳಿತಾಯ ಆಗುತ್ತದೆ. ಹಾಗಾಗಿ ಆಸಕ್ತಿ ಇದ್ದವರು ತಪ್ಪದೆ ಈ ವಿಡಿಯೋ ಪೂರ್ತಿಯಾಗಿ ನೋಡಿ, ನಿಮಗೆ ಇದರ ಬಗ್ಗೆ ಒಂದು ಐಡಿಯಾ ಕೂಡ ಬರುತ್ತದೆ.