ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ (Baby Girl) ಸಂಖ್ಯೆ ಕಡಿಮೆಯಾಗುತ್ತಿರುವುದು ನಮಗೆ ತಿಳಿದಿರುವ ವಿಚಾರ. ಈ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊಸ ಯೋಜನೆ ಒಂದನ್ನು ಜಾರಿಗೆ ತರಲಾಗಿದೆ. ಹೌದು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೆಣ್ಣು ಮಕ್ಕಳು ಹುಟ್ಟುವಂತೆ ಪ್ರೋತ್ಸಾಹಿಸುತ್ತಿದ್ದು, ಇತ್ತೀಚೆಗಷ್ಟೇ ಕೇಂದ್ರ ಅಂತಹ ಒಂದು ಕೊಡುಗೆಯನ್ನು ಪ್ರಕಟಿಸಿದೆ.
ಅದರ ಪ್ರಕಾರ ಎರಡನೇ ಹೆರಿಗೆಯಲ್ಲಿ ಹೆಣ್ಣು ಮಗು ಜನಿಸಿದರೆ ಅರ್ಹರಿಗೆ ರೂ.6 ಸಾವಿರ ಧನಸಹಾಯ ನೀಡುವುದಾಗಿ ಘೋಷಿಸಿದ್ದಾರೆ. ಮಿಷನ್ ಶಕ್ತಿ ಯೋಜನೆಯಡಿಯಲ್ಲಿ ಆ ಕೊಡುಗೆಯನ್ನು ನೀಡುತ್ತಿದೆ. ಹೌದು, ಕೇಂದ್ರ ಸರ್ಕಾರ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೆ ಎಲ್ಲರಿಗೂ ಉಪಯೋಗವಾಗುವಂತಹಾ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ.
ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳಿಗಾಗಿ ಉಪಯೋಗವಾಗುವಂತಹಾ ಹಲವು ಯೋಜನೆಗಳು ಜಾರಿಯಲ್ಲಿವೆ. ಈ ಪೈಕಿ ಗರ್ಣಿಯರಿಗಾಗಿಯೇ ವಿಶೇಷ ಯೋಜನೆ ಲಭ್ಯವಿದೆ ಎಂಬುದು ಗಮನಾರ್ಹ. ಈ ಯೋಜನೆಯನ್ನು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಎಂದು ಕರೆಯಲಾಗುತ್ತದೆ. ಈ ಯೋಜನೆಯಡಿ ಈಗಾಗಲೇ ಲಕ್ಷಾಂತರ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ.
ಈ ಯೋಜನೆಯೇ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (PMMVY). ಅದರ ಪ್ರಕಾರ ಎರಡನೇ ಹೆರಿಗೆಯಲ್ಲಿ (Delivery) ಹೆಣ್ಣು ಮಗು ಜನಿಸಿದರೆ ಅರ್ಹರಿಗೆ 6 ಸಾವಿರ ರೂಪಾಯಿ ಧನಸಹಾಯ ನೀಡಲಾಗುತ್ತಿದೆ. ಮಿಷನ್ ಶಕ್ತಿ ಯೋಜನೆಯಡಿಯಲ್ಲಿ ಈ ಕೊಡುಗೆಯನ್ನ ನೀಡುತ್ತಿದೆ.
2ನೇ ಹೆರಿಗೆಯಲ್ಲಿ ಹೆಣ್ಣುಮಗು (Girl child) ಜನಿಸಿದ್ರೆ ಮಿಷನ್ ಶಕ್ತಿ ಯೋಜನೆಯಡಿ ತಾಯಿಗೆ 6 ಸಾವಿರ ರೂಪಾಯಿ ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಇನ್ನು ಅವಳಿ ಮಕ್ಕಳಲ್ಲಿ ಒಬ್ಬರು ಹೆಣ್ಣು ಮಗುವಾಗಿದ್ದರೂ ಸಹ ಈ ಯೋಜನೆ ಅನ್ವಯಿಸುತ್ತದೆ. ಆದ್ರೆ, ಅವಳಿ ಮಕ್ಕಳಿಬ್ಬರೂ ಹೆಣ್ಣು ಮಕ್ಕಳಾದರೂ ತಲಾ 6 ಸಾವಿರ ನೀಡುವುದಿಲ್ಲ. ಕೇವಲ 6 ಸಾವಿರ ನೀಡಲಾಗುವುದು.
ಪ್ರಧಾನ ಮಂತ್ರಿ ಮಾತೃ ವಂದನಾಯೋಜನೆಗೆ ಸೇರುವುದು ಹೇಗೆ? ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗ್ತಿದ್ದು, ಈ ಸಂಖ್ಯೆಯನ್ನ ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಯತ್ನಿಸುತ್ತಿವೆ. ಇದರ ಭಾಗವಾಗಿ ಕೇಂದ್ರ ಈ ಯೋಜನೆಯನ್ನು ಘೋಷಣೆ ಮಾಡಿದೆ. ಗರ್ಭಿಣಿಯರು ಮತ್ತು ಶಿಶುಗಳ ಕಲ್ಯಾಣ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಮಹಿಳೆಯರು (Woman) https://wcd.nic.in/schemes/pradhan-mantri-matru-vandana-yojana ವೆಬ್‌ಸೈಟ್ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಲಿಂಕ್ ಮೂಲಕ ನೀವು ನೇರವಾಗಿ ಸ್ಕೀಮ್ ವೆಬ್‌ಸೈಟ್‌ಗೆ ಹೋಗಬೇಕು. ಇಲ್ಲಿ ಹೆಸರು, ಮಾಹಿತಿ ನೋಂದಾಯಿಸಿಕೊಂಡು ಲಾಗಿನ್ ಆಗಬೇಕು. ಆಶಾ ಕಾರ್ಯಕರ್ತೆಯರು ಸಹಾಯದಿಂದಲೂ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಯೋಜನೆಗೆ ಸೇರಲು ಬೇಕಾದ ಅರ್ಹತೆಗಳೇನು?
ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಗೆ ಸೇರಲು ಕೆಲವು ಅರ್ಹತೆಗಳಿವೆ. ಈ ಯೋಜನೆಯು ಎಲ್ಲಾ ಗರ್ಭಿಣಿಯರಿಗೆ (Pregnant) ಅನ್ವಯಿಸುತ್ತದೆ. ಮೊದಲ ವಿತರಣೆಗೆ ಮಾತ್ರ ಯೋಜನೆ ಅಡಿಯಲ್ಲಿ ಹಣ ಬರುತ್ತದೆ. ಈ ಯೋಜನೆಯನ್ನು ಎಲ್ಲಾ ರಾಜ್ಯಗಳಲ್ಲಿ ಜಾರಿಗೊಳಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗ ಮಾಡುವವರಿಗೆ ಈ ಯೋಜನೆ ಅನ್ವಯಿಸುವುದಿಲ್ಲ. ಅಂದರೆ ಮಹಿಳೆಯರು ಸರ್ಕಾರಿ ಕೆಲಸ ಮಾಡುತ್ತಿದ್ದರೆ ಯೋಜನೆಗೆ ಸೇರಲು ಸಾಧ್ಯವಾಗುವುದಿಲ್ಲ.
ಅರ್ಹರಿಗೆ ಹಣ ಹೇಗೆ ದೊರೆಯುತ್ತದೆ?
ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಆದರೆ, ಈ ಹಣ ಒಂದೇ ಬಾರಿ ಬರುವುದಿಲ್ಲ. ಮಹಿಳೆಯರ ಬ್ಯಾಂಕ್ ಖಾತೆಗೆ ಕಂತುಗಳಲ್ಲಿ ಹಣ ಜಮೆ ಮಾಡಲಾಗುತ್ತದೆ. ಒಟ್ಟು ಮೂರು ಕಂತುಗಳಲ್ಲಿ ಹಣ ಜಮೆಯಾಗುತ್ತದೆ.