MBA ಹುಡುಗನ ಮಾಡ್ರನ್ ವ್ಯವಸಾಯದ ಐಡಿಯಾ, 40 ಸಾವಿರ ಖರ್ಚಿನಲ್ಲಿ 4 ಲಕ್ಷ ಆದಾಯ ತರುವ 3 ತಿಂಗಳ ಬೆಳೆ ಬೆಳೆದು ಯಶಸ್ವಿ ಆದ ಯುವ ರೈತ…

 

WhatsApp Group Join Now
Telegram Group Join Now

ಕೃಷಿ ಎನ್ನುವುದು ಕೂಡ ಈಗ ಕಮರ್ಷಿಯಲ್ ಆಗಿದೆ. ಸದ್ಯಕ್ಕೆ ಪ್ರಸ್ತುತವಾಗಿ ಮಾರ್ಕೆಟ್ ನಲ್ಲಿ ಬೇಡಿಕೆ ಇರುವ ಬೆಳೆ ಬೆಳೆಯುವುದರಿಂದ ಯಾವುದೇ ಉದ್ಯಮಕಿಂತಲೂ ಕಡಿಮೆ ಇಲ್ಲದಂತೆ, ಆದಾಯ ಗಳಿಸಬಹುದು. ಈ ಟ್ರಿಕ್ ಫಾಲೋ ಮಾಡಿದ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಗ್ರಾಮವೊಂದರ ಯುವಕನ್ನೊಬ್ಬ MBA ಪದವಿ ಪಡೆದಿದ್ದರು.

ಉದ್ಯೋಗ ಹರಸಿ ಹೋಗುವುದರ ಬದಲು ಕೃಷಿಯಲ್ಲೇ ಸಾಧನೆ ಮಾಡುವುದಾಗಿ ನಿರ್ಧರಿಸಿ ಮೂರು ತಿಂಗಳ ಬೆಳೆಯಲ್ಲಿ ಲಕ್ಷಾಂತರ ಹಣ ಗಳಿಸುತ್ತಿದ್ದಾರೆ. ಇದರ ಬಗ್ಗೆ ಖಾಸಗಿ ಯುಟ್ಯೂಬ್ ವಾಹಿನಿಯ ಸಂದರ್ಶನ ಒಂದರಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕೃಷಿ ಲಾಭದ ಬಗ್ಗೆ ಅವರು ಸಂದರ್ಶನದಲ್ಲಿ ತಿಳಿಸಿದ ಪ್ರಮುಖ ಸಂಗತಿಗಳ ಬಗ್ಗೆ ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ.

ಅಷ್ಟಕ್ಕೂ ಈ ರೈತ ಬೆಳೆದಿದ್ದು ಯಾವ ಬೆಳೆ ಎಂದರೆ ಮೂರು ತಿಂಗಳಿನಲ್ಲಿಯೇ ಇಳುವರಿ ಕೊಡುವ ಚಿಯಾ ಸೀಡ್ಸ್. ಚಿಯಾ ಸೀಡ್ಸ್ ಗೆ ಮಾರ್ಕೆಟ್ ನಲ್ಲಿ ಎಷ್ಟು ಬೆಲೆ ಇದೆ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಕ್ವಿಂಟಲ್ ಗೆ ಸರಿಸುಮಾರು ರೂ.15,000 ದಿಂದ ರೂ.20,000 ದವರೆಗೆ ಇದು ಬೆಲೆ ಬಾಳುತ್ತದೆ.

ಈ ಸುದ್ದಿ ಓದಿ:- ಇನ್ಮುಂದೆ ಪೇಂಟಿಂಗ್ ಗೆ ಹೇಳಿ ಬೈ ಬೈ, ಕಡಿಮೆ ಖರ್ಚಿನಲ್ಲಿ ಮನೆಯ ಅಂದ ಹೆಚ್ಚಿಸಲು ಸಿಗುತ್ತಿದೆ ಮಾರ್ಬಲ್ ಶೀಟ್ಸ್, ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.!

ಒಂದು ಎಕರೆ ಜಮೀನಿನಲ್ಲಿ ನೀವು ಚಿಯಾ ಸೀಡ್ಸ್ ಬೆಳೆದರೆ ಮತ್ತು ಅದನ್ನು ಸರಿಯಾಗಿ ನಿಗಾವಹಿಸಿ ನೋಡಿಕೊಂಡರೆ 5-6 ಕ್ವಿಂಟಾಲ್ ಚಿಯಾ ಸೀಡ್ಸ್ ಬೆಳೆಯಬಹುದು. ಇದಕ್ಕೆ ಎಷ್ಟು ಖರ್ಚಾಗುತ್ತದೆ? ಯಾವ ರೀತಿ ಬೆಳೆಯಬೇಕು? ಇದರ ಉಳಿಮೆ ಹೇಗೆ ಮಾರ್ಕೆಟಿಂಗ್ ಹೇಗೆ ಎಲ್ಲಾ ವಿಚಾರಗಳನ್ನು ಕೂಡ ಈ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಮೊದಲಿಗೆ ಈ ರೈತರ ಹೇಳುವುದು ಏನೆಂದರೆ ಚಿಯಾ ಸೀಡ್ಸ್ ಕೃಷಿ ಮಾಡುವುದೇ ಆದರೆ ನೀವು ಮಳೆಯನ್ನು ನಂಬಿ ಮಾಡಬೇಡಿ. ಯಾಕೆಂದರೆ ಇದಕ್ಕೆ ಪ್ರತಿನಿತ್ಯವೂ ಕನಿಷ್ಠ ಒಂದೂವರೆ ಗಂಟೆಗಳ ಕಾಲ ಸ್ಪ್ರಿಂಕಲ್ ಒದಗಿಸಬೇಕು ಆಗಿದ್ದಾಗ ಮಾತ್ರ ನಿರೀಕ್ಷಿಸಿದ ಬೆಳೆ ಸಿಗುತ್ತದೆ.

ಹಾಗಾಗಿ ನೀರಾವರಿ ಸೌಲಭ್ಯ ಇರುವವರು ಮಾತ್ರ ಇದನ್ನು ಮಾಡುವುದು ಉತ್ತಮ ಹಾಗೂ ಇದನ್ನು ಮುಂಗಾರಿನ ಸಮಯದಲ್ಲಿ ಮಾಡುವುದಕ್ಕಿಂತ ಯಾವುದಾದರೂ ಬೆಳೆ ಬೆಳೆದ ನಂತರ ಉಳಿದ ಸಮಯದಲ್ಲಿ ಅಂದರೆ ಸೆಪ್ಟೆಂಬರ್ ನಿಂದ ಮಾರ್ಚ್ ವರೆಗೆ ಬೆಳೆಯುವುದು ಬೆಸ್ಟ್ ಎನ್ನುವ ಸಲಹೆಯನ್ನು ಕೂಡ ನೀಡುತ್ತಾರೆ.

ಈ ಸುದ್ದಿ ಓದಿ:- ಯಾವ ಬೈಕ್ ತೆಗೆದುಕೊಳ್ಳುವುದು ಬೆಸ್ಟ್? ಇದನ್ನು ಡಿಸೈಡ್ ಮಾಡುವುದು ಹೇಗೆ ನೋಡಿ.!

ಪ್ರತಿ ಮೂರು ತಿಂಗಳಿಗೆ ಒಮ್ಮೆ ಸೆಪ್ಟೆಂಬರ್ ನಿಂದ ಮಾರ್ಚ್ ಅವಧಿಗೆ ಎರಡು ಬಾರಿ ಬೇಕಾದರೂ ಚಿಯಾ ಸೀಡ್ಸ್ ಬೆಳೆಯಬಹುದು. ಮಾಮೂಲಿಯಾಗಿ ಸಿಗುವ ಚಿಯಾ ಸೀಡ್ಸ್ ಕೂಡ ನೀವು ಬಿತ್ತನೆಗೆ ಬಳಸಬಹುದು ಆದರೆ ಡೈರೆಕ್ಟಾಗಿ ಚಿಯಾ ಸೀಡ್ಸ್ ಭೂಮಿಗೆ ಹಾಕುವುದರಿಂದ ಇದು ಎಳ್ಳಿಗಿಂತ ಕಡಿಮೆ ಭಾರ ಹೊಂದಿರುವುದರಿಂದ ಗಾಳಿಗೆ ತೂರಿ ಹೋಗಬಹುದು‌

ಇರುವೆ ತಿನ್ನಬಹುದು ಇತ್ಯಾದಿ ಸಮಸ್ಯೆ ಆಗಬಹುದು ಮತ್ತು ಇವೆಲ್ಲ ಸಮಸ್ಯೆಗಳನ್ನು ತಪ್ಪಿಸಲು 1KG ಚಿಯಾ ಸೀಡ್ಸ್ ಗೆ 10KG ಯೂರಿಯ ಬೆರೆಸಿ 2-3 ಪ್ಯಾಕೆಟ್ ಆಂಟ್ ಪೌಡರ್ ಮಿಕ್ಸ್ ಮಾಡಿ ಉದ್ದುದ್ದ ಸಾಲುಗಳನ್ನು ಹೊಡೆದು 3 ಫೀಟ್ ಅಂತರದಲ್ಲಿ ಸಾಲುಗಳನ್ನು ಮಾಡಿ ಚಿಯಾ ಸೀಡ್ಸ್ ಬಿತ್ತುತ್ತಾ ಹೋಗಬೇಕು.

ಉದ್ದದ ಸಾಲುಗಳಲ್ಲಿ ಹಾಕಿಕೊಂಡು ಹೋದರೆ ಆ ಸಾಲುಗಳಲ್ಲಿ ದಟ್ಟವಾಗಿ ಇದು ಬೆಳೆಯುತ್ತದೆ. ಬೆದೆ ಎನಿಸಿದರೆ ನಂತರ ತೆಗೆದು ಮೊಳಕೆ ಬಂದಿರದ ಜಾಗದಲ್ಲಿ ಮತ್ತೆ ಹಾಕಿಕೊಳ್ಳಬಹುದು. ಮೂರು ದಿನಗಳಲ್ಲಿ ಮೊಳಕೆ ಬರುತ್ತದೆ 25 ದಿನಗಳು ಒಳಗೆ ನೀವು ಇದನ್ನು ಕಿತ್ತು ಬೇರೆ ಕಡೆ ನಾಟಿ ಮಾಡುವುದಾದರೆ ಮಾಡಬೇಕು.

ಈ ಸುದ್ದಿ ಓದಿ:- ಹಳ್ಳಿ ಜನರು ಕೂಡ ಸುಲಭವಾಗಿ ಮಾಡಬಹುದಾದ ಬಿಸಿನೆಸ್ ಇದು, ಖಾಲಿ ಬಿಯರ್ ಬಾಟಲ್ ನಿಂದ ಲಕ್ಷ ಲಕ್ಷ ಸಂಪಾದನೆ.!

ಗೊಬ್ಬರವಾಗಿ ಯೂರಿಯಾ ವನ್ನು ಎಕರೆಗೆ 10KG ಯಂತೆ ನೀಡಬೇಕಾಗುತ್ತದೆ. ಇದಿಷ್ಟು ಇದರ ಬಂಡವಾಳ ಈ ಕೃಷಿ ಕುರಿತು ಇನ್ನಷ್ಟು ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now