ನಿಮ್ಮ ಮನೆ ಮಿಕ್ಸಿ ಪದೇ ಪದೇ ಕೆಟ್ಟು ಹೋಗುತ್ತಿದ್ದೀಯಾ ಈ ವಿಧಾನ ಕಲಿತರೆ ನೀವೇ ರೆಡಿ ಮಾಡಿಕೊಳ್ಳಬಹುದು.!

 

WhatsApp Group Join Now
Telegram Group Join Now

ಮನೆಯಲ್ಲಿ ಪದೇಪದೇ ಹಾಳಾಗುವ ಒಂದು ಎಲೆಕ್ಟ್ರಿಕಲ್ ವಸ್ತು ಎಂದರೆ ಅದು ಮಿಕ್ಸಿ ಗ್ರೈಂಡರ್. ಯಾಕೆಂದರೆ ಮನೆಯಲ್ಲಿ ಮಿಕ್ಸಿ ಗ್ರೈಂಡರ್ ಅನ್ನು ಹೆಚ್ಚು ಉಪಯೋಗಿಸುತ್ತೇವೆ. ಮಸಾಲೆ ರುಬ್ಬಲು, ಚಟ್ನಿ ಮಾಡಲು, ದೋಸೆ ಮತ್ತು ಇಡ್ಲಿಗಳಿಗೆ ಅಕ್ಕಿ ರುಬ್ಬಲು ಹೀಗೆ ನಾನಾ ಕಾರಣಗಳಿಗಾಗಿ ಪದೇ ಪದೇ ಉಪಯೋಗಿಸುವುದರಿಂದ, ಅದರಲ್ಲಿ ಅತಿಯಾದ ಲೋಡ್ ಗಳನ್ನು ಹಾಕಿ ರುಬ್ಬುವುದರಿಂದ ಅವು ಆಗಾಗ ಕೈ ಕೊಡುತ್ತಾ ಇರುತ್ತವೆ.

ಇವುಗಳ ರಿಪೇರಿಗೆ ಪಕ್ಕದಲ್ಲಿರುವ ಅಂಗಡಿಗಳಿಗೆ ಕೊಟ್ಟರೆ ರೆಡಿ ಮಾಡಿಸಿ ತಂದ ಎರಡು ದಿನಗಳಲ್ಲಿ ಮತ್ತೆ ಅವು ಹಿಂದಿನ ರೀತಿ ಆಗುವುದು ಗೃಹಿಣಿಯರಿಗೆ ಇನ್ನಷ್ಟು ಕಿರಿಕಿರಿ ಮಾಡುತ್ತದೆ. ಹಾಗಾಗಿ ಮಿಕ್ಸಿ ಗ್ರೈಂಡರ್ ಅನ್ನು ನಾವೇ ರಿಪೇರಿ ಮಾಡಿಕೊಳ್ಳುವ ರೀತಿ ಆಗಿದ್ದರೆ ಎನ್ನುವ ಯೋಚನೆ ಬರುತ್ತದೆ. ನಿಮಗೂ ಸಹ ಹಾಗೆ ಅನಿಸಿದರೆ ಈ ಅಂಕಣವನ್ನು ನೋಡಿ.

ಯಾಕೆಂದರೆ ನಿಮ್ಮ ಮನೆ ಮಿಕ್ಸಿ ಗ್ರೈಂಡರ್ ಅನ್ನು ನೀವೇ ರಿಪೇರಿ ಮಾಡಿಕೊಳ್ಳ ಬಹುದಾದಂತಹ ಒಂದು ಸುಲಭ ವಿಧಾನವನ್ನು ಈ ಅಂಕಣದಲ್ಲಿ ನಾವು ತಿಳಿಸಿಕೊಡುತ್ತಿದ್ದೇವೆ. ಮಿಕ್ಸಿ ಗ್ರೈಂಡರ್ ಒಳಗೆ ಮೋಟರ್ ಮತ್ತು ಇಂಡಿಕೇಟರ್ ಹಾಗೂ ಸ್ಪೀಡ್ ಕಂಟ್ರೋಲ್ ಮಾಡುವ ರೆಗ್ಯುಲೇಟರ್ಗಳಿಗೆ ಕಲೆಕ್ಷನ್ಗಳು ಇರುತ್ತವೆ. ಇವುಗಳಲ್ಲಿ ಯಾವುದಾದರು ಕೆಟ್ಟು ಹೋದರೆ ಅಥವಾ ಯಾವುದಾದರೂ ಕನೆಕ್ಷನ್ ಕಟ್ ಆದರೆ ಆಗ ಮಿಕ್ಸಿ ಜಾರ್ ವರ್ಕ್ ಆಗುವುದಿಲ್ಲ.

ಇದರಲ್ಲಿ ಯಾವ ಭಾಗ ಹಾಳಾಗಿದೆ ಎಂದು ತಿಳಿದುಕೊಳ್ಳುವುದು ಮೊದಲು ಮುಖ್ಯ. ಸಾಮಾನ್ಯವಾಗಿ ಯಾರದೇ ಮನೆಯ ಮಿಕ್ಸಿ ಗ್ರೈಂಡರ್ ಆಗಿದ್ದರೂ ಕೂಡ ಮೊದಲಿಗೆ ನೇರವಾಗಿ ಅದರ ಮೋಟಾರ್ ಗೆ ಹಾನಿ ಆಗುವುದಿಲ್ಲ. ಯಾಕೆಂದರೆ ಇಂಡಿಕೇಟರ್ ಮೂಲಕ ಅದಕ್ಕೆ ಕನೆಕ್ಷನ್ ಇರುತ್ತದೆ ಅದು ಹೆಚ್ಚು ಲೋಡ್ ಮೋಟಾರ್ ಮೇಲೆ ಬೀಳದಂತೆ ನೋಡಿಕೊಳ್ಳುತ್ತಿರುತ್ತದೆ.

ಹಾಗಾಗಿ ಮಿಕ್ಸಿ ಗ್ರೈಂಡರ್ ರುಬ್ಬುವಾಗ ನಿಂತು ಹೋದರೆ ನಾವು ಇಂಡಿಕೇಟರ್ ಸ್ವಿಚ್ ಅನ್ನು ಆನ್ ಆಫ್ ಮಾಡಿ ನೋಡುತ್ತೇವೆ. ಸ್ಪೀಡ್ ಕಂಟ್ರೋಲ್ ಮಾಡುವ ರೆಗುಲೇಟರ್ ಕನೆಕ್ಷನ್ ಗಳಿಗೂ ಕೂಡ ಹೆಚ್ಚಾಗಿ ಸಮಸ್ಯೆ ಆಗುವುದಿಲ್ಲ, ಅವುಗಳು ಕೂಡ ವಿರಳ ಸಮಯದಲ್ಲಿ ಕೆಟ್ಟಿರುತ್ತವೆ, ಆದರೆ ನೇರವಾಗಿ ರೆಗ್ಯುಲೇಟರ್ ವೈರ್ ಗಳು ಯಾವಾಗಲೂ ತೊಂದರೆಗೆ ಒಳಗಾಗುತ್ತವೆ. ಇದು ಪೂರ್ತಿಯಾಗಿ ಕನೆಕ್ಷನ್ ಕಳೆದುಕೊಂಡು ಹಾಳಾಗಿದೆಯಾ ಎಂದು ಮೂರು ವಿಧಾನಗಳಿಂದ ನಾವು ಚೆಕ್ ಮಾಡಬಹುದು.

ಈ ರೀತಿ ಮಾಡಲು ಮೊದಲು ಮಿಕ್ಸಿ ಜಾರನ್ನ ಕೆಳಗೆ ಇರುವ ನೆಟ್ ಗಳನ್ನು ಬಿಚ್ಚಿ ಓಪನ್ ಮಾಡಬೇಕು. ಒಂದು ಮಲ್ಟಿಮೀಟರ್ ತೆಗೆದುಕೊಂಡು ಆ ಮಲ್ಟಿಮೀಟರ್ ಅನ್ನು ಈ ಇಂಡಿಕೇಟರ್ ಗೆ ಕನೆಕ್ಟ್ ಮಾಡಿ ನೋಡಬೇಕು. ಅದು ಕಂಟಿನ್ಯೂಟ್ ಇದ್ದರೆ ಬೀಪ್ ಸೌಂಡ್ ಬರುತ್ತದೆ ಈಗ ಅದನ್ನು ರಿಪೇರಿ ಮಾಡಬೇಕು ಎಂದರ್ಥ.

ಈ ರೀತಿ ಮಿಕ್ಸಿ ಗ್ರೈಂಡರ್ ನ ಯಾವ ಪಾರ್ಟ್ ಹಾಳಾಗಿದೆ ಎಂದು ತಿಳಿದುಕೊಳ್ಳಲು ಇನ್ನು ಎರಡು ವಿಧಾನಗಳು ಇವೆ. ಜೊತೆಗೆ ಇವುಗಳ ರಿಪೇರಿಯನ್ನು ಹೇಗೆ ಮಾಡಬೇಕು. ಯಾವ ಭಾಗದ ರಿಪೇರಿ ಆದರೆ ಯಾವ ರೀತಿ ಅದನ್ನು ಸರಿಪಡಿಸಿಕೊಳ್ಳಬೇಕು ಎನ್ನುವ ಮಾಹಿತಿ ಕೂಡ ಇದೆ. ಇದನ್ನೆಲ್ಲ ಪೂರ್ತಿಯಾಗಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಮತ್ತು ನಿಮ್ಮ ಕುಟುಂಬದವರ ಹಾಗೂ ಸ್ನೇಹಿತರ ಜೊತೆಗೂ ಕೂಡ ಈ ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡು ಅವರಿಗೂ ಸಹಾಯವಾಗುವಂತೆ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now