ಎಲ್ಲಾ ನಿರುದ್ಯೋಗಿಗಳಿಗೆ ಹಾಗೂ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಭಾರತೀಯ ಪಶುಪಾಲನಾ ಇಲಾಖೆ (BPNL Recruitment – 2024) ವತಿಯಿಂದ ನೇಮಕಾತಿ ಕುರಿತಂತೆ ಸಿಹಿ ಸುದ್ದಿ ಇದೆ. ಅದೇನೆಂದರೆ, ರಾಜ್ಯದಾದ್ಯಂತ ಖಾಲಿ ಇರುವ 1,100 ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಕಡಿಮೆ ವಿದ್ಯಾಭ್ಯಾಸ ಪಡೆದವರು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಎನ್ನುವುದು ಬಹಳ ಸಮಾಧಾನಕರವಾದ ವಿಷಯ. ನೀವು ಕೂಡ ಆಸಕ್ತರಾಗಿದ್ದರೆ ತಪ್ಪದೆ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸುವವರ ಅನುಕೂಲತೆಗಾಗಿ ನೋಟಿಫಿಕೇಶನ್ ನಲ್ಲಿ ತಿಳಿಸಿರುವ ಎಲ್ಲ ಪ್ರಮುಖ ಅಂಶಗಳ ಬಗ್ಗೆ ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ.
ನೇಮಕಾತಿ ಸಂಸ್ಥೆ:- ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ (BPNL)
ಹುದ್ದೆ ಹೆಸರು:- ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 1125
ಈ ಸುದ್ದಿ ಓದಿ:- ಮಹಿಳೆಯರಿಗೆ ಉಚಿತ ಹೋಲಿಗೆ ತರಬೇತಿ.! ಆಸಕ್ತರು ಅರ್ಜಿ ಸಲ್ಲಿಸಿ ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ.!
ಹುದ್ದೆಗಳ ವಿವರ:-
* ಕೇಂದ್ರದ ಉಸ್ತುವಾರಿ – 125
* ಕೇಂದ್ರದ ವಿಸ್ತರಣಾಧಿಕಾರಿ – 250
* ಕೇಂದ್ರ ಸಹಾಯಕ – 750
ಉದ್ಯೋಗ ಸ್ಥಳ:- ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳು ಭಾರತದಾದ್ಯಂತ ಯಾವುದೇ ವಿಭಾಗದಲ್ಲಿ ಕಾರ್ಯ ನಿರ್ವಹಿಸಲು ಸಿದ್ಧವಿರಬೇಕು.
ವೇತನ ಶ್ರೇಣಿ:- ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 15,000 ರಿಂದ ರೂ. 25,000/- ವರೆಗೆ ವೇತನ ಸಿಗುತ್ತದೆ.
ಈ ಸುದ್ದಿ ಓದಿ:- ಕೇವಲ 1 ಲಕ್ಷದಲ್ಲಿ ಮನೆ ಆಗುತ್ತೆ, ಬಾಡಿಗೆ ಕೊಡೋಕೆ ಬೆಸ್ಟ್, ಸಣ್ಣ ಫ್ಯಾಮಿಲಿಗೆ ಸರಿಹೊಂದುವ ಕಡಿಮೆ ಬಜೆಟ್ ಮನೆ…
ಶೈಕ್ಷಣಿಕ ವಿದ್ಯಾರ್ಹತೆ:-
* ಕೇಂದ್ರ ಉಸ್ತುವಾರಿ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು
* ಕೇಂದ್ರ ವಿಸ್ತರಣಾಧಿಕಾರಿ ಹುದ್ದೆಗಳಿಗೆ 12 ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
* ಕೇಂದ್ರ ಸಹಾಯಕ ಹುದ್ದೆಗಳಿಗೆ 10 ನೇ ತರಗತಿ ತತ್ಸಮಾನವಾದ ವಿದ್ಯಾರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ:-
* ಕೇಂದ್ರ ಉಸ್ತುವಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು
ಕನಿಷ್ಠ ವಯೋಮಿತಿ 21 ವರ್ಷಗಳು
ಗರಿಷ್ಟ ವಯೋಮಿತಿ 40 ವರ್ಷಗಳು
* ಕೇಂದ್ರ ವಿಸ್ತರಣಾಧಿಕಾರಿ & ಕೇಂದ್ರ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು
ಕನಿಷ್ಠ ವಯೋಮಿತಿ 18 ವರ್ಷಗಳು
ಗರಿಷ್ಟ ವಯೋಮಿತಿ 40 ವರ್ಷಗಳು
ಅರ್ಜಿ ಸಲ್ಲಿಸುವ ವಿಧಾನ:-
* 2 ವಿಧಾನಗಳಲ್ಲಿ ಅರ್ಜಿ ಸಲ್ಲಿಸಬಹುದು
* ಆನ್‌ಲೈನ್ ಅರ್ಜಿ ಸಲ್ಲಿಸಲು https://pay.bharatiyapashupalan.com/onlinerequirment
ಲಿಂಕ್ ಮೇಲೆ ಕ್ಲಿಕ್ ಮಾಡಿ ವಿವರಗಳನ್ನು ತುಂಬಿಸಿ, ದಾಖಲೆಗಳನ್ನು ಸಲ್ಲಿಸಿ ಅರ್ಜಿ ಶುಲ್ಕ ಪಾವತಿಸಿ ಸಬ್ಮಿಟ್ ಆದಮೇಲೆ ಪ್ರಿಂಟ್ ಪಡೆಯಿರಿ.
* ಆಫ್‌ಲೈನ್ ಅರ್ಜಿ ಸಲ್ಲಿಲಿಸಲು ಇಚ್ಛಿಸುವವರು ನಿಮ್ಮ ಹತ್ತಿರದ BPNL ಕಚೇರಿಯನ್ನು ಸಂಪರ್ಕಿಸಿ.
* ಹೆಚ್ಚಿನ ಮಾಹಿತಿಗಾಗಿ BPNL ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ನೋಟಿಫಿಕೇಶನ್ ಓದಿ
ಆಯ್ಕೆ ವಿಧಾನ:-
* ಲಿಖಿತ ಪರೀಕ್ಷೆ
* ಸಂದರ್ಶನ
* ದಾಖಲೆಗಳ ಪರಿಶೀಲನೆ
ಅರ್ಜಿ ಶುಲ್ಕ:-
* ಆನ್ಲೈನ್ ನಲ್ಲಿ ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ / UPI ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬಹುದು
* ಕೇಂದ್ರ ಉಸ್ತುವಾರಿ ಹುದ್ದೆಗಳಿಗೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ರೂ.944
* ಕೇಂದ್ರ ವಿಸ್ತರಣಾಧಿಕಾರಿ ಹುದ್ದೆಗಳಿಗೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ರೂ.826
* ಕೇಂದ್ರ ಸಹಾಯಕ ಹುದ್ದೆಗಳಿಗೆ ಎಲ್ಲ ವರ್ಗದ ಅಭ್ಯರ್ಥಿಗಳಿಗೂ ರೂ.708
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 10 ಮಾರ್ಚ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 21 ಮಾರ್ಚ್, 2021.