MRI ಎಂದರೆ ಮ್ಯಾಗ್ನಟೆಕ್ ರೆಸೋನೆನ್ಸ್ ಇಮೇಜಿಂಗ್ ಎಂದು ಇದರ ಅರ್ಥ. ಇದೊಂದು ಸ್ಕ್ಯಾನಿಂಗ್ ಆಗಿದೆ. ಹಲವಾರು ವೈದ್ಯಕೀಯ ಕಾರಣಗಳಿಗಾಗಿ ಡಾ. ಈ ರೀತಿ MRI ಸ್ಕ್ಯಾನ್ ಮಾಡಿಸಲು ವೈದ್ಯರು ಸಲಹೆ ಕೊಡುತ್ತಾರೆ. ಆದರೆ ಅದನ್ನು ಮಾಡಿಸುವ ಮುನ್ನ ಅದರ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡಿರಬೇಕು.
ಈ ರೀತಿ MRI ಸ್ಕ್ಯಾನ್ ಮಾಡಿಸುವುದರಿಂದ ದೇಹಕ್ಕೆ ಏನಾದರೂ ಸೈಡ್ ಎಫೆಕ್ಟ್ ಆಗಲಿದೆಯಾ? ಯಾರು ಇದನ್ನು ಮಾಡಿಸಬೇಕು ಯಾರು ಮಾಡಿಸಬಾರದು, ಮಾಡಿಸುವುದರಿಂದ ಆಗುವ ಪ್ರಯೋಜನಗಳು ಏನು ಎಷ್ಟು ಖರ್ಚಾಗಬಹುದು ಹಾಗೂ ಪ್ರಕ್ರಿಯೆ ಹೇಗಿರುತ್ತದೆ ಈ ರೀತಿ ಸಾಮಾನ್ಯ ವಿಷಯಗಳನ್ನು ತಪ್ಪದೆ ತಿಳಿದುಕೊಂಡು ನಂತರ ಇದಕ್ಕೆ ಒಳಗಾಗಬೇಕು.
ಇದರ ಬಗ್ಗೆ ತಿಳಿಸುವುದಕ್ಕಾಗಿ ಈ ಅಂಕಣದಲ್ಲೂ ಸಹ MRI ಸ್ಕ್ಯಾನ್ ಕುರಿತ ಹಲವು ಅಂಶಗಳನ್ನು ತಿಳಿಸುತ್ತಿದ್ದೇವೆ. ದೇಹ ರಚನೆ ಆಗಿರುವ ಸೈನ್ಸ್ ಮತ್ತು ಅದು ಈಗ ಕಾರ್ಯನಿರ್ವಹಿಸುತ್ತಿರುವ ರೀತಿಯನ್ನು ರೇಡಿಯೋ ಇಮೇಜಿಂಗ್ ಪಡೆಯುವ ಟೆಕ್ನಿಕ್ ಇದಾಗಿದೆ. ಈ ರೀತಿ MRI ಸ್ಕ್ಯಾನಿಂಗ್ ಮಾಡಿದಾಗ ವೈದ್ಯರಿಗೆ ದೇಹದ ಯಾವ ಯಾವ ಅಂಗಗಳು ಯಾವ ರೀತಿ ಕೆಲಸ ಮಾಡುತ್ತದೆ, ದೇಹದ ಯಾವುದಾದರೂ ಭಾಗಗಳು ಹಾಳಾಗಿದೆ ಅಥವಾ ನೀವು ತೆಗೆದುಕೊಳ್ಳುವ ಔಷಧಿಗಳು ಯಾವ ರೀತಿ ನಿಮ್ಮ ಮೇಲೆ ವರ್ಕ್ ಆಗಿದೆ ಎಂಬುದನ್ನು ಚೆಕ್ ಮಾಡಲು ಬಹಳ ಅನುಕೂಲವಾಗುತ್ತದೆ.
ಆದರೆ ಇದರಲ್ಲಿ ಸೂಸುವ ವಿಕಿರಣಗಳು ಬಹಳ ತೀಕ್ಷ್ಣವಾಗಿರುವುದರಿಂದ ಅದಕ್ಕೂ ಮುನ್ನ ಕೆಲ ಮುಂಜಾಗ್ರತೆಗಳನ್ನು ತೆಗೆದುಕೊಳ್ಳಬೇಕು. ಕೆಲವೊಮ್ಮೆ ಪೂರ್ತಿ ದೇಹವನ್ನು MRI ಸ್ಕ್ಯಾನ್ ಮಾಡಿಸಲು ಹೇಳುತ್ತಾರೆ. ಕೆಲವು ಸಮಯದಲ್ಲಿ ಕೆಲವೊಂದು ಅಂಗಗಳಲ್ಲಿ ತೊಂದರೆ ಇರುವುದು ಗೊತ್ತಾಗುವುದರಿಂದ ಅದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಈ ರೀತಿ ವೈದ್ಯರೇ ಸ್ಕ್ಯಾನ್ ಮಾಡಿಸುವ ಸಲಹೆ ನೀಡುತ್ತಾರೆ.
ಇದು 30 ನಿಮಿಷಗಳಿಂದ 90 ನಿಮಿಷಗಳ ಕಾಲ ನಡೆಯುವ ಒಂದು ಪ್ರೊಸೀಜರ್ ಆಗಿದೆ. ಇದಕ್ಕೆ ಕನಿಷ್ಠ 10,000 ದಿಂದ 25,000 ದವರೆಗೂ ಕೂಡ ಹಣ ಖರ್ಚಾಗುತ್ತದೆ. ಒಂದು ವೇಳೆ ನೀವು MRI ಸ್ಕ್ಯಾನ್ ಮಾಡಿಸುವ ಸಂದರ್ಭದಲ್ಲಿ ಪ್ರೆಗ್ನೆಂಟ್ ಆಗಿದ್ದರೆ ಆ ವಿಷಯವನ್ನು ತಪ್ಪದೆ ವೈದ್ಯರಿಗೆ ತಿಳಿಸಬೇಕು. ಯಾಕೆಂದರೆ ಇದರಲ್ಲಿರುವ ವಿಕಿರಣಗಳು ಮಗುವಿಗೆ ಹಾನಿ ಮಾಡುವ ಸಂಭವ ಇರುತ್ತದೆ.
ಮುಂಚಿತವಾಗಿ ಆ ವಿಷಯವನ್ನು ವೈದ್ಯರಿಗೆ ತಿಳಿಸಿದರೆ ಅದಕ್ಕೆ ತಕ್ಕನಾದ ಕಡಿಮೆ ಆವೃತ್ತಿಯ ವಿಕಿರಣ ಬಳಸಿ ಯಾವುದೇ ರೀತಿ ಅಡ್ಡ ಪರಿಣಾಮ ಆಗದ ರೀತಿ ಪ್ರಕ್ರಿಯೆಯನ್ನು ಮುಂದುವರಿಸುತ್ತಾರೆ. ಜೊತೆಗೆ ಯಾವುದೇ ಮೆಟಲ್ ಕಂಟೆಂಟ್ ಅನ್ನು ಕೂಡ ನೀವು ಹಾಕಿಕೊಳ್ಳುವಂತಿಲ್ಲ. ಯಾಕೆಂದರೆ ಅತಿಯಾದ ವಿಕಿರಣಗಳು ಅವುಗಳನ್ನು ಕರಗಿಸಿ ಮೇಲ್ಟ್ ಮಾಡಿಬಿಡುತ್ತವೆ ಆದ್ದರಿಂದ ಅವು ದೇಹಕ್ಕೆ ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ.
ಯಾವುದೇ ರೀತಿಯ ಬಂಗಾರದ ಒಡವೆಗಳು ವಾಚ್ ಮುಂತಾದ ಯಾವುದೇ ವಸ್ತುಗಳನ್ನು ಧರಿಸುವಂತಿಲ್ಲ. ಅಲ್ಲದೆ ನಿಮ್ಮ ವಸ್ತ್ರ ತೆಗೆದು ಆಸ್ಪತ್ರೆಯ ಗೌನ್ ಹಾಕಿಕೊಳ್ಳಲು ಕೊಡುತ್ತಾರೆ. ಅದನ್ನು ಧರಿಸಿಕೊಂಡು MRI ಸ್ಕ್ಯಾನ್ ಗೆ ಒಳಪಡಬೇಕು. ಶಬ್ಧ ಆಗುತ್ತದೆ ಎನ್ನುವ ಕಾರಣಕ್ಕೆ ಹೆಡ್ ಸೆಟ್ ಕೊಡುತ್ತಾರೆ ಅದನ್ನು ಸಹ ನೀವು ಹಾಕಿಕೊಳ್ಳಬೇಕು.
ಈ ಸ್ಕ್ಯಾನ್ ಮಾಡುವ ನಾಲ್ಕು ಗಂಟೆಗೂ ಮುಂದಿನಿಂದ ನೀವು ಯಾವುದೇ ರೀತಿ ಆಹಾರ ಪದಾರ್ಥಗಳನ್ನು ಕೂಡ ಸೇವಿಸಿರಬಾರದು. ಅವಶ್ಯಕತೆ ಬಿದ್ದಲ್ಲಿ ವೈದ್ಯರು ಸಲಹೆ ಮಾಡಿದರೆ MRI ಸ್ಕ್ಯಾನ್ ಮಾಡಿಸಿ ಇದರಿಂದ ಯಾವುದೇ ರೀತಿಯ ಲಕ್ಷಣಗಳು ತೋರದ ಖಾಯಿಲೆಗಳು ದೇಹದಲ್ಲಿದ್ದರೂ ಕೂಡ ಬೆಳಕಿಗೆ ಬರುತ್ತದೆ.