ಮಾನ್ಯ ಪ್ರಧಾನ ಮಂತ್ರಿ ಅವರು ಈಗಾಗಲೇ ದೇಶದ ಪ್ರತಿಯೊಬ್ಬರಿಗಾಗಿ ನಾನು ಯೋಜನೆಗಳ ಘೋಷಣೆ ಮಾಡಿದ್ದಾರೆ. ಕಾರ್ಮಿಕರು, ರೈತರು, ವಿದ್ಯಾರ್ಥಿಗಳು ಮಹಿಳೆಯರು ಈ ರೀತಿ ಅವರುಗಳಿಗೆ ಪ್ರತ್ಯೇಕವಾಗಿ ಮತ್ತು ವಿಶೇಷವಾಗಿ ಅನುಕೂಲ ಆಗುವಂತಹ ಕೆಳವೊಂದು ಯೋಜನೆಗಳನ್ನು ಅವರಿಗಾಗಿಯೇ ಜಾರಿಗೆ ತಂದಿದ್ದಾರೆ. ಇದೆಲ್ಲದರ ನಡುವೆ ದೇಶದಲ್ಲಿರುವ ರೋಗಿಗಳಿಗೂ ಕೂಡ ಬಂಪರ್ ಸಿಹಿಸುದ್ದಿ ಎಂದು ನೀಡಿದ್ದಾರೆ.
ಈವರಿಗೆ ಆರೋಗ್ಯ ಇಲಾಖೆ ವತಿಯಿಂದ ಅಥವಾ ಆರೋಗ್ಯಕ್ಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ರಿಯಾಯಿತಿಗಳ ಬಗ್ಗೆ ಅಥವಾ ಮತ್ತಿತರ ವಿಷಯಗಳ ಬಗ್ಗೆ ಯೋಜನೆಗಳನ್ನು ಕೇಳಿದ್ದೆವು. ಆದರೆ ಮೊದಲ ಬಾರಿಗೆ ದೇಶದ ಪ್ರಧಾನ ಮಂತ್ರಿ ಒಬ್ಬರು ದೇಶದಲ್ಲಿರುವ ಎಲ್ಲಾ ಬಿಪಿ ಶುಗರ್ ಸೇರಿದಂತೆ ಹೃದ್ರೋಗದ ವರೆಗಿನ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗಾಗಿ ವಿಶೇಷವಾದ ಯೋಜನೆ ಮೂಲಕ ಬಂಪರ್ ಕೊಡುಗೆ ನೀಡಿ ದೇಶದ ಗಮನವನ್ನು ಸೆಳೆದಿದ್ದಾರೆ.
ದೇಶದ ರೋಗಿಗಳ ಬಗ್ಗೆ ನರೇಂದ್ರ ಮೋದಿ ಅವರು ಗಮನ ಹರಿಸಿರುವುದು ಹಾಗೂ ಅವರಿಗಾಗಿ ಘೋಷಣೆ ಮಾಡಿರುವುದು ಹೊಸ ಕೊಡುಗೆ ನೀಡಿರುವುದು ಬಹಳ ಸಮಾಧಾನದ ವಿಷಯವಾಗಿದೆ. ರಕ್ತದೊತ್ತಡ ಸಕ್ಕರೆ ಕಾಯಿಲೆ ಇವುಗಳಿಂದ ಹೃದ್ರೋಗದಂತಹ ದೊಡ್ಡ ಆರೋಗ್ಯ ಸಮಸ್ಯೆಗಳನ್ನೂ ಕೂಡ ತಕ್ಷಣವೇ ಗುರುತಿಸಲು ದೇಶದ ವಿಶಿಷ್ಟ ಆರೋಗ್ಯ ಮಾದರಿಯನ್ನು ಸಿದ್ಧಪಡಿಸಲಾಗುತ್ತಿದೆ.
ದೇಶದಾದ್ಯಂತ ವಿವಿಧ ರಾಜ್ಯಗಳ ಜಿಲ್ಲೆಗಳು ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಮನೆಯಿಂದ ಕೆಲವೇ ಹೆಜ್ಜೆ ದೂರದಲ್ಲಿ 1.5 ಲಕ್ಷ ಆರೋಗ್ಯ ಕೇಂದ್ರಗಳನ್ನು ರಚಿಸುವ ಮೂಲಕ ಈ ಮಾದರಿಯನ್ನು ಸಿದ್ಧಪಡಿಸಲಾಗುತ್ತಿದೆ. ಇದರಿಂದ ದೇಶದಲ್ಲಿ ಜೀವನಶೈಲಿ ಕಾರಣದಿಂದ ಆರೋಗ್ಯದಲ್ಲಿ ಆಗುತ್ತಿರುವ ಅಡ್ಡ ಪರಿಣಾಮಗಳನ್ನು ಸಕಾಲದಲ್ಲಿ ತಡೆಗಟ್ಟಬಹುದು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಈ ದೊಡ್ಡ ದೃಷ್ಟಿಕೋನವನ್ನು ಕೇಂದ್ರದ ಆರೋಗ್ಯ ಸಚಿವಾಲಯವು ತನ್ನ ಸಂಪೂರ್ಣ ಸಿದ್ಧತೆಗಳನ್ನು ಪ್ರಾರಂಭಿಸಿದೆ.
ಇದಲ್ಲದೆ ದೇಶದಲ್ಲಿ ಡ್ರೋನ್ ಗಳಿಂದ ಔಷಧಿ ಸರಬರಾಜು ಮತ್ತು ಪರೀಕ್ಷಾ ಸೇವೆಗಳಿಗೆ ಪ್ರಮುಖ ಸಿದ್ಧತೆಗಳು ಪ್ರಾರಂಭವಾಗಿದೆ. ನರೇಂದ್ರ ಮೋದಿ ಅವರ ದೂರ ದೃಷ್ಟಿ ಮತ್ತು ಧ್ಯೇಯವನ್ನು ಪೂರೈಸುವ ಸಲುವಾಗಿ ಕೇಂದ್ರ ಆರೋಗ್ಯ ಸಚಿವಾಲಯವು ತನ್ನ ಸಂಪೂರ್ಣ ತಂಡವನ್ನು ದೇಶದ ನಾನಾ ಭಾಗಗಳಲ್ಲಿ ನಿಯೋಜಿಸಿದೆ. ಇದರಿಂದ ರಕ್ತದೊತ್ತಡ ಸಕ್ಕರೆ ಹೃದ್ರೋಗ ಇನ್ನು ಮುಂತಾದ ಹೊಸ ಗಂಭೀರ ಖಾಯಿಲೆಗಳನ್ನು ತಡೆಗಟ್ಟಬಹುದು.
ಹಾಗೆಯೇ ಚಿಕಿತ್ಸೆಯನ್ನು ಕೂಡ ಸ್ಥಳದಲ್ಲಿಯೇ ಪ್ರಾರಂಭ ಮಾಡಬಹುದು. ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಪ್ರಕಾರ ದೇಶದಲ್ಲಿ ಸಾಂಕ್ರಾಮಿಕವಲ್ಲದ ರೋಗಗಳನ್ನು ತಡೆಯುವ ಅಭಿಯಾನದ ಮಟ್ಟದಲ್ಲಿ ದೊಡ್ಡ ಯೋಜನೆಗಳು ಮತ್ತು ಸಿದ್ಧತೆಗಳನ್ನು ಪ್ರಾರಂಭಿಸಲಾಗಿದೆ. ಆರಂಭಿಕ ಹಂತದಲ್ಲಿ ಈ ಯೋಜನೆಯನ್ನು ದೇಶದ 1.5 ಲಕ್ಷಕ್ಕೂ ಹೆಚ್ಚು ಆರೋಗ್ಯ ಕೇಂದ್ರಗಳ ಯೋಜನೆಯಲ್ಲಿ ಆರಂಭಿಸುವ ಮೂಲಕ ಆರಂಭ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳ ಮೂಲ ತಿಳಿಸಿದೆ.
ಇದು ಜನರ ಮನೆಗಳಿಗೆ ಬಹಳ ಹತ್ತಿರದಲ್ಲಿದೆ. ಈ ಆರೋಗ್ಯ ಕೇಂದ್ರಗಳನ್ನು ರಕ್ತದೊತ್ತಡ, ಮಧುಮೇಹ ಮತ್ತು ಹೃದ್ರೋಗದಂತಹ ರೋಗಗಳನ್ನು ತಕ್ಷಣವೇ ತಡೆಗಟ್ಟಲು ಬಳಸಿಕೊಂಡು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡಲು ಉಪಯೋಗಿಸಿ ಕೊಳ್ಳಬಹುದು. ಸದ್ಯಕ್ಕೆ 1.5 ಲಕ್ಷ ಆರೋಗ್ಯ ಕೇಂದ್ರಗಳಲ್ಲಿ ತಯಾರಾಗುತ್ತಿರುವ ಈ ಯೋಜನೆ ನಂತರ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ದೇಶದಾದ್ಯಂತ ಶೀಘ್ರವಾಗಿ ಏರಿಕೆ ಆಗುವ ಸಾಧ್ಯತೆಗಳು ಇದೆ. ಈ ವಿಷಯದ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.