ಈ ನ್ಯಾಚುರಲ್ ಹೇರ್ ಡೈ ತಿಂಗಳಿಗೆ ಒಮ್ಮೆ ಹಚ್ಚಿ ಸಾಕು ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಿ 50ರ ವಯಸ್ಸಿನಲ್ಲು 20ರ ವಯಸ್ಸಿನಂತೆ ಕಾಣುತ್ತಿರ.

ನಾವು ಸಾಮಾನ್ಯವಾಗಿ ತಲೆಯಲ್ಲಿ ಬಿಳಿ ಕೂದಲು ಆಯಿತು ಎಂದು ತಕ್ಷಣ ಮಾರುಕಟ್ಟೆಗಳಲ್ಲಿ ಸಿಗುವಂತಹ ರಾಸಾಯನಿಕ ಯುಕ್ತ ಪದಾರ್ಥಗಳನ್ನು ತಂದು ತಲೆ ಕೂದಲಿಗೆ ಹಚ್ಚಿಕೊಳ್ಳುತ್ತೇವೆ ಇದರಿಂದ ಚರ್ಮಕ್ಕೆ ಸಂಬಂಧಿಸಿದಂತಹ ಹಲವಾರು ಕಾಯಿಲೆ ಗಳು ಬರುತ್ತವೆ ಎಂದು ವೈದ್ಯರು ಹೇಳುತ್ತಾರೆ ಆದರೂ ಕೂಡ ಹೆಚ್ಚಿನ ಜನರು ಇಂತಹ ಡೈಗಳನ್ನು ಹಚ್ಚುತ್ತಾರೆ ಆದರೆ ಈಗ ನಾವು ಹೇಳುತ್ತಿರುವಂತಹ ಈ ಒಂದು ವಿಧಾನವನ್ನು ಅಂದರೆ ಯಾವುದೇ ರೀತಿಯ ರಾಸಾಯನಿಕ ಪದಾರ್ಥಗಳನ್ನು ಬಳಸದೆ ನಿಮ್ಮ ಮನೆಯಲ್ಲಿ ಸಿಗುವಂತಹ.

ನೈಸರ್ಗಿಕವಾಗಿ ಔಷಧಿಯುಕ್ತವಾಗಿ ಸಿಗುವಂತಹ ಕೆಲವೊಂದು ಪದಾರ್ಥಗಳನ್ನು ಬಳಸಿಕೊಂಡು ಹೇಗೆ ನೀವೇ ನಿಮ್ಮ ಮನೆಯಲ್ಲಿ ಹೇರ್ ಡೈ ಮಾಡಿಕೊಳ್ಳುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿ ನಂತೆ ತಿಳಿದುಕೊಳ್ಳುತ್ತಾ ಹೋಗೋಣ. ಸಾಮಾನ್ಯವಾಗಿ ಒಬ್ಬ ಮನುಷ್ಯನಿಗೆ ತಲೆಯಲ್ಲಿ ಕೂದಲು ಬೆಳ್ಳಗಾಯಿತು ಎಂದರೆ ಅವರಿಗೆ ವಯಸ್ಸಾ ಗುತ್ತಿರುವುದರ ಕಾರಣ ತಲೆಯಲ್ಲಿ ಕೂದಲು ಬೆಳ್ಳಗಾಗುತ್ತಿದೆ ಎಂದು ಹೇಳುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಗೂ ಕೂಡ ತಲೆಯಲ್ಲಿ ಬಿಳಿಕೂದಲು ಬರಲು ಪ್ರಾರಂಭಿಸಿದೆ.

ಏಕೆಂದರೆ ಇದಕ್ಕೆ ಕಾರಣ ಇತ್ತೀಚಿನ ದಿನಗಳಲ್ಲಿ ನಾವು ತಿನ್ನುತ್ತಿರುವಂತಹ ಆಹಾರಕ್ರಮವೂ ಕೂಡ ಇದಕ್ಕೆ ಮುಖ್ಯವಾದ ಕಾರಣ ಎಂದೇ ಹೇಳಬಹುದಾಗಿದೆ. ಹಾಗೂ ದೇಹದಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾ ದಾಗ ನಮ್ಮ ತಲೆಯಲ್ಲಿ ಕೂದಲು ಬೆಳ್ಳಗಾಗುತ್ತಾ ಹೋಗುತ್ತದೆ ಆದ್ದರಿಂದ ನಾವು ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವನೆ ಮಾಡುವುದು ಕೂಡ ಬಹಳ ಮುಖ್ಯವಾಗಿರುತ್ತದೆ. ಹಾಗೆ ಈ ದಿನ ನಾವು ಮನೆಯಲ್ಲಿ ಹೇಗೆ ಡೈ ಅನ್ನು ಮಾಡಿಕೊಳ್ಳುವುದು ಅದಕ್ಕೆ ಯಾವುದೆಲ್ಲ ಪದಾರ್ಥ ಗಳು ಬೇಕು ಎಂಬುದನ್ನು ಈ ಕೆಳಗೆ ನೋಡುತ್ತಾ ಹೋಗೋಣ.

ಮೊದಲನೆಯದಾಗಿ ತಲೆಕೂದಲನ್ನು ಕಪ್ಪಾಗಿಸಲು ಬೇಕಾದಂತಹ ಮುಖ್ಯವಾದ ಪದಾರ್ಥ ಯಾವುದು ಹಾಗೂ ಯಾವ ವಿಧಾನವನ್ನು ಬಳಸಿ ಇದನ್ನು ತಯಾರಿಸಿಕೊಳ್ಳಬಹುದು. ಹಾಗೂ ಇದನ್ನು ಹೇಗೆ ನಮ್ಮ ತಲೆಯ ಕೂದಲಿಗೆ ಹಚ್ಚಿಕೊಳ್ಳಬೇಕು ಎಂಬ ಹಲವಾರು ಮಾಹಿತಿಯನ್ನು ನೋಡುವುದಾದರೆ ಮೊದಲನೆಯದಾಗಿ ಮೆಹಂದಿ ಪೌಡರ್ ಅನ್ನು ತೆಗೆದುಕೊಳ್ಳಬೇಕು ಮೆಹಂದಿಯು ನಮ್ಮ ತಲೆಯ ಕೂದಲನ್ನು ಯಾವುದೇ ಹಾನಿಗೆ ಒಳಗಾಗದೆ ಇರುವ ಹಾಗೆ ನೋಡಿಕೊಳ್ಳುತ್ತದೆ ಹಾಗೂ ತಲೆಯಲ್ಲಿ ಕೂದಲು ಉದುರುತ್ತಿದ್ದರೆ ಅದನ್ನು ಇದು ತಪ್ಪಿಸುತ್ತದೆ.

ಹಾಗೂ ಸೀಳು ಕೂದಲು ಏನಾದರೂ ಇದ್ದರೆ ಅದನ್ನು ಕೂಡ ನಿವಾರಣೆ ಮಾಡುವುದಕ್ಕೆ ಮೆಹಂದಿ ಪೌಡರ್ ಬಹಳ ಮುಖ್ಯವಾಗಿ ಬೇಕಾಗುತ್ತದೆ. ಮೆಹಂದಿ ಪೌಡರ್ ಅನ್ನು ಒಂದು ಪಾತ್ರೆಗೆ ಹಾಕಿ ಉಗುರು ಬೆಚ್ಚಗಿನ ನೀರಲ್ಲಿ ಕಲಸಿ ಇಡೀ ದಿನ ರಾತ್ರಿ ನೆನೆಯಲು ಬಿಡಬೇಕು ನಂತರ ಮಾರನೇ ದಿನ ಅದಕ್ಕೆ ಮಾರುಕಟ್ಟೆಯಲ್ಲಿ ಸಿಗುವಂತಹ ಇಂಡಿಗೋ ಪೌಡರ್ ಅನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಇದನ್ನು ಕೂಡ ಉಗುರು ಬೆಚ್ಚಗೆ ಇರುವ ನೀರಿನಲ್ಲಿ ಚೆನ್ನಾಗಿ ಕಲಸಿಕೊಳ್ಳಬೇಕು.

ನಂತರ ಇದಕ್ಕೆ ಮೆಹಂದಿ ಯನ್ನು ಕಲಸಿಟ್ಟಂತಹ ಮಿಶ್ರಣವನ್ನು ಇಂಡಿಗೋ ಪೌಡರ್ ಜೊತೆಗೆ ಎರಡನ್ನು ಚೆನ್ನಾಗಿ ಕಲಸಬೇಕು. ನಂತರ ಇದನ್ನು ಕಲಸಿದ ತಕ್ಷಣವೇ ತಲೆ ಕೂದಲಿಗೆ ಹಚ್ಚಬೇಕು ಈ ರೀತಿ ಹಚ್ಚಿ ಸುಮಾರು ಒಂದು ಗಂಟೆಗಳ ಕಾಲ ಬಿಟ್ಟು ತಲೆಯನ್ನು ತೊಳೆಯಬೇಕು ಹೀಗೆ ಮಾಡುವುದ ರಿಂದ ತಲೆಯಲ್ಲಿ ಇರುವಂತಹ ಬಿಳಿ ಕೂದಲು ಕಪ್ಪಾ ಗುವುದಕ್ಕೆ ಪ್ರಾರಂಭಿಸುತ್ತದೆ ಮತ್ತು ತಲೆ ಕೂದಲು ಉದುರುವುದನ್ನು ಕೂಡ ಇದು ನಿಲ್ಲಿಸುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

%d bloggers like this: