ಕೂದಲು ವಿಪರೀತ ಉದುರುವುದು, ಕೂದಲು ತುದಿಯಲ್ಲಿ ಕವಲು ಹೊಡೆಯುವುದು, ವಯಸಿಗೂ ಮುಂಚೆನೇ ಕೂದಲು ಬಿಳಿ ಆಗುವುದು, ಕೂದಲು ಬಲಿಷ್ಠ ವಾಗಿರದೆ ದುರ್ಬಲ ಆಗಿರುವುದು, ಕೂದಲು ಒರಟಾಗಿರುವುದು, ತಲೆಯಲ್ಲಿ ಹೊಟ್ಟು ಇರುವುದು, ತುರಿಕೆ ಬರುವುದು, ಪ್ಯಾಚಸ್ ಆಗಿರುವುದು ಇನ್ನು ಮುಂತಾದ ಅನೇಕ ಸಮಸ್ಯೆಗಳ ಜೊತೆ ಕೂದಲ ದಟ್ಟ ಮತ್ತು ಉದ್ದವಾದ ಬೆಳವಣಿಗೆಗೆ, ಕೂದಲಿನ ಶೈನಿಂಗ್ ಹೆಚ್ಚಾಗುವುದಕ್ಕೆ ಸ್ಟ್ರೆಸ್ ಕಡಿಮೆ ಆಗುವುದಕ್ಕೆ, ತಲೆನೋವು ಕಡಿಮೆ ಆಗುವುದಕ್ಕೆ ಈ ಅದ್ಭುತವಾದ ಮನೆ ಮದ್ದು ಮಾಡಿ ನೋಡಿ. ಕೂದಲಿನ ಸಮಸ್ಯೆಗಳು ಇತ್ತೀಚೆಗೆ ಎಲ್ಲರಿಗೂ ತುಂಬಾ ಕಾಮನ್ ಆಗಿಬಿಟ್ಟಿದೆ ಇದಕ್ಕೆಲ್ಲ ಕಾರಣ ನಾವು ಕೂದಲಿನ ಆರೋಗ್ಯದ ಬಗ್ಗೆ ಅದು ಹಾಳಾಗುವ ತನಕ ಗಮನ ಕೊಡದೆ ಇರುವುದು. ನಾವು ಹೇಗೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತೇವೋ ಹಾಗೆಯೇ ಸೌಂದರ್ಯದ ವಿಷಯದಲ್ಲೂ ಕೂಡ ಗಮನ ಇರಬೇಕು ಅದರಲ್ಲೂ ಮುಖ್ಯವಾಗಿ ಕೂದಲಿನ ಆರೋಗ್ಯದ ಬಗ್ಗೆ.
ಇದರಲ್ಲಿ ಹೆಣ್ಣು ಮಕ್ಕಳಲ್ಲಿ ಯಾರಿಗೆ ದಟ್ಟ ಹಾಗೂ ಉದ್ದವಾದ ಕಪ್ಪು ಕೂದಲು ಇರುತ್ತದೆಯೋ ಅವರು ತುಂಬಾ ಸುಲಭವಾಗಿ ಎಲ್ಲರನ್ನು ಆಕರ್ಷಿಸುತ್ತಾರೆ. ಹೆಣ್ಣಿಗೆ ಕಪ್ಪು ಮತ್ತು ಉದ್ದವಾಗಿ ದಟ್ಟದಾದ ಕೂದಲು ಇರುವುದೇ ಲಕ್ಷಣ ಎಂದು ಹೇಳುತ್ತಾರೆ. ಇಂತಹ ಕೂದಲನ್ನು ಪಡೆಯಲು ಎಲ್ಲಾ ಹೆಣ್ಣು ಮಕ್ಕಳೂ ಕೂಡ ಆಸೆ ಪಡುತ್ತಾರೆ. ಕೂದಲು ಹಾಳಾಗುವ ಮುನ್ನವೇ ಇದರ ಬಗ್ಗೆ ಯೋಚನೆ ಮಾಡುವುದು ತುಂಬಾ ಒಳ್ಳೆಯದು ಅಕಸ್ಮಾತ್ ನೀವು ಈ ಮೇಲೆ ಹೇಳಿದ ಎಲ್ಲ ಸಮಸ್ಯೆಗಳಿಂದ ಬಳಲುತ್ತಿದ್ದರೂ ಕೂಡ ತಕ್ಷಣವೇ ನಾವು ಈಗ ಹೇಳುತ್ತಿರುವ ಮನೆಮದ್ದನ್ನು ನೋಡಿ ಮಾಡಿಕೊಂಡರೆ ಅತಿ ಕಡಿಮೆ ಸಮಯದಲ್ಲಿ ಅಂದರೆ ಕೇವಲ ಎರಡು ವಾರಗಳಲ್ಲಿ ಆ ಎಲ್ಲಾ ಸಮಸ್ಯೆಗಳಿಂದ ಆಚೆ ಬಂದು ಎಲ್ಲರೂ ಆಶ್ಚರ್ಯ ಪಡುವ ರೀತಿಯಲ್ಲಿ ನಿಮ್ಮ ಕೂದಲನ್ನು ಬೆಳೆಸಬಹುದು.
ಗಂಡು ಮಕ್ಕಳಿಗೂ ಕೂಡ ಇತ್ತೀಚಿಗೆ ಕೂದಲಿನ ಸಮಸ್ಯೆ ಇರುವುದು ಕಾಮನ್ ಆಗಿಬಿಟ್ಟಿದೆ. ಕಡಿಮೆ ವಯಸ್ಸಿಗೆ ಬೋಳು ತಲೆ ಆಗಿಬಿಡುವುದು ಅವರಿಗೆ ತುಂಬಾ ನಾಚಿಕೆಯ ವಿಷಯವಾಗಿದೆ. ಹೀಗಾಗಿ ಈಗ ಅವರು ಕೂಡ ಕೂದಲ ಆರೋಗ್ಯದ ಬಗ್ಗೆ ಗಮನ ಕೊಡುತ್ತಿದ್ದಾರೆ. ಇತ್ತೀಚೆಗೆ ಈ ರೀತಿ ಎಲ್ಲರಿಗೂ ಕೂದಲಿನ ಸಮಸ್ಯೆ ಉಂಟಾಗಲು ಕಾರಣ ನಾವು ಬದುಕುತ್ತಿರುವ ಜೀವನ ಶೈಲಿ ನಮ್ಮ ಮನಸ್ಸಿಗೆ ತೆಗೆದುಕೊಳ್ಳುತ್ತಿರುವ ಅತಿಯಾದ ಒತ್ತಡ ಕೂದಲಿಗೆ ಸರಿಯಾದ ಪೋಷಕಾಂಶ ಸಿಗದೇ ಇರುವುದು ಹಾಗೂ ತುಂಬಾ ಧೂಳು ಹಾಗೂ ಕಲ್ಮಶ ಇರುವ ಕಡೆ ನಾವು ಕೂದಲು ಒಡ್ಡಿಕೊಂಡಿರುವುದು ಇವೆಲ್ಲವೂ ಕೂಡ ಕಾರಣವಾಗುತ್ತದೆ. ಈ ರೀತಿ ನಮ್ಮ ತಪ್ಪುಗಳನ್ನು ತಿದ್ದುಕೊಂಡು ಜೊತೆಗೆ ಕೆಲವೊಂದು ಮನೆಮದ್ದುಗಳ ಪಾಲನೆ ಮಾಡುವುದರಿಂದ ಸಮಸ್ಯೆ ಸರಿ ಹೋಗುತ್ತದೆ.
ಈ ರೀತಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರು ನಮ್ಮ ಹಿರಿಯರು ಹೇಳಿಕೊಟ್ಟ ಒಂದು ಅದ್ಭುತವಾದ ಮನೆ ಮದ್ದನ್ನು ಮಾಡಿ. ಅದಕ್ಕಾಗಿ ಬೇಕಾಗಿರುವುದು ಕೇವಲ ಮೂರು ಪದಾರ್ಥಗಳು ಮಾತ್ರ ಹರಳೆಣ್ಣೆ, ಕೊಬ್ಬರಿ ಎಣ್ಣೆ ಮತ್ತು ಮೆಂತ್ಯೆ ಕಾಳುಗಳು. ಮೂರು ಕೂದಲಿನ ಆರೋಗ್ಯದ ವಿಷಯದಲ್ಲಿ ತುಂಬಾ ಮಹತ್ವದ ಸ್ಥಾನ ವಹಿಸುತ್ತವೆ. ಮೊದಲಿಗೆ ಮೆಂತೆ ಕಾಳುಗಳನ್ನು ತೆಗೆದುಕೊಂಡು ಚೆನ್ನಾಗಿ ಮಿಕ್ಸಿ ಜಾರ್ ನ ಸಹಾಯದಿಂದ ಪುಡಿ ಮಾಡಿಕೊಳ್ಳಿ. ಇದರಲ್ಲಿ ಇರುವ ಔಷಧೀಯ ಗುಣಗಳು ಕೂದಲು ಶೈನಿಂಗ್ ಆಗುವುದಕ್ಕೆ ಕಾರಣವಾಗುತ್ತದೆ. ಹಾಗೂ ಕೂದಲ ತುರಿಕೆ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ಜೊತೆಗೆ ಯಾರಿಗೆ ಉಷ್ಣದ ಸಮಸ್ಯೆ ಇರುತ್ತದೆಯೋ ಅವರು ಮೆಂತೆ ಕಾಳುಗಳನ್ನು ಎಣ್ಣೆಯ ಜೊತೆ ಬಳಸುವುದರಿಂದ ತಂಪು ಮಾಡಿಕೊಳ್ಳ ಬಹುದು ಅಥವಾ ಮೆಂತೆ ಕಾಳುಗಳನ್ನು ನೆನೆಸಿ ಅದನ್ನು ರುಬ್ಬಿಕೊಂಡು ಕೂದಲಿಗೆ ಹಚ್ಚಿ ಸ್ವಪ ಸಮಯ ಬಿಟ್ಟು ತಲೆ ಸ್ನಾನ ಮಾಡುವುದರಿಂದ ಕೂಡ ಈ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
ಪುಡಿ ಮಾಡಿಕೊಂಡ ಮೆಂತ್ಯೆ ಕಾಳುಗಳನ್ನು ಜಾಲರಿ ಸಹಾಯದಿಂದ ಶೋಧಿಸಿಕೊಳ್ಳಿ. ತುಂಬಾ ನೈಸ್ ಇರುವ ಪುಡಿಯನ್ನು ಮಾತ್ರ ತೆಗೆದುಕೊಂಡು, ನಾಲ್ಕು ಟೇಬಲ್ ಸ್ಪೂನ್ ಅಷ್ಟು ಮೆಂತ್ಯೆ ಕಾಳಿನ ಪುಡಿಯನ್ನು ಒಂದು ಗಾಜಿನ ಕಂಟೇನರ್ ಅಥವಾ ಸ್ಟೀಲ್ ಅಥವಾ ಸಿಲ್ವರ್ ಕಂಟೇನರ್ ಅಲ್ಲಿ ಹಾಕಿ. ಆಮೇಲೆ ಇದಕ್ಕೆ ಶುದ್ಧವಾದ ಹರಳೆಣ್ಣೆಯನ್ನು ಎಂಟು ಸ್ಪೂನ್ಗಳಷ್ಟು ಹಾಕಿ. ಅಥವಾ ಇದು ತುಂಬಾ ಜಿಡ್ಡಾಗುತ್ತದೆ ಇಷ್ಟು ಪ್ರಮಾಣದಲ್ಲಿ ಬೇಡ ಎಂದು ತಿಳಿದುಕೊಳ್ಳುವವರು ಇದಕ್ಕೆ ಆರು ಚಮಚಗಳಷ್ಟು ಹರಳೆಣ್ಣೆ ಹಾಕಿ, ಮತ್ತೆರಡು ಚಮಚದಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿ ಅಥವಾ ಕೊಬ್ಬರಿ ಎಣ್ಣೆಯ ಬದಲು ಆಲಿವ್ ಆಯಿಲ್ ಅಥವಾ ಆಲ್ಮಂಡ್ ಆಯಿಲ್ ಕೂಡ ಬಳಸಬಹುದು. ಈಗ ಇದೆಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚುಳ ಹಾಕಿ ಒಂದು ಪಾತ್ರೆಯಲ್ಲಿ ನೀರನ್ನು ಕುದಿಯಲು ಇಡಿ. ಆ ನೀರು ಕುದಿಯುತ್ತಿರುವಾಗ ಸ್ಟವ್ ಆಫ್ ಮಾಡಿ.
ನಂತರ ನೀವು ಎಲ್ಲವನ್ನು ಮಿಶ್ರಣ ಮಾಡಿಕೊಂಡ ಕಂಟೇನರ್ ಅನ್ನು ಮುಚ್ಚಳ ಬಿಗಿಯಾಗಿ ಹಾಕಿ ಆ ಕುದಿಯುತ್ತಿರುವ ನೀರಿನ ಒಳಗಡೆ ಇಡಿ. ಸ್ವಲ್ಪ ಹೊತ್ತಿನಲ್ಲಿಯೇ ಇದು ಬಿಸಿ ಆಗುತ್ತದೆ. ಆಗ ಇದನ್ನು ಹೊರಗಡೆ ತೆಗೆದುಕೊಂಡು ಪರೀಕ್ಷಿಸಿ. ನೀವು ತಲೆಗೆ ಎಣ್ಣೆ ಹಚ್ಚುವಷ್ಟು ಹದಕ್ಕೆ ಇದು ಬಿಸಿಯಾಗಿ ಇದ್ದಾಗ ಅದನ್ನು ತೆಗೆದುಕೊಂಡು ನಿಮ್ಮ ತಲೆಕೂದಲಿಗೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ ಅಥವಾ ಮನೆಯಲ್ಲಿ ಹಿರಿಯರಿದ್ದಾರೆ ಅವರಿಂದ ಮಸಾಜ್ ಮಾಡಿಸಿಕೊಳ್ಳಿ. ಈ ರೀತಿ ಚೆನ್ನಾಗಿ ಮಸಾಜ್ ಕೊಡುವುದರಿಂದ ನಿಮ್ಮ ಸ್ಟ್ರೆಸ್, ತಲೆನೋವು ಎಲ್ಲವೂ ಕೂಡ ಮಾಯವಾಗಿ ಬಿಡುತ್ತದೆ ಜೊತೆಗೆ ಕೂದಲಿನ ಆರೋಗ್ಯಕ್ಕೂ ಕೂಡ ಇದು ತುಂಬಾ ಒಳ್ಳೆಯದು. ಪೂರ್ತಿ ಎಲ್ಲಾ ಕೂದಲಿಗೂ ಚೆನ್ನಾಗಿ ಎಣ್ಣೆಯನ್ನು ಹಚ್ಚಿಸಿಕೊಳ್ಳಿ. ಆಮೇಲೆ ಮರುದಿನ ಬೆಳಿಗ್ಗೆ ಬೆಚ್ಚಗಿನ ನೀರಿನಿಂದ ನೀವು ಉಪಯೋಗಿಸುವ ಯಾವುದೇ ಶಾಂಪೂ ತೆಗೆದುಕೊಂಡು ಕೂದಲನ್ನು ವಾಶ್ ಮಾಡಿಕೊಳ್ಳಿ. ವಾರದಲ್ಲಿ ಎರಡು ಅಥವಾ ಮೂರು ದಿನ ಈ ರೀತಿ ಮಾಡುವುದರಿಂದ ತುಂಬಾ ಶೀಘ್ರವಾಗಿ ಪರಿಣಾಮವನ್ನು ನೋಡುತ್ತೀರಿ.