ಕಂದಾಯ ಇಲಾಖೆಯ ಹೊಸ ನೀತಿ ಇನ್ನು ಮುಂದೆ ಐದು ಗುಂಟೆಗಿಂತ ಕಡಿಮೆ ಜಮೀನು ಮಾರಾಟ ಮಾಡುವಂತಿಲ್ಲ.

 

WhatsApp Group Join Now
Telegram Group Join Now

ಕರ್ನಾಟಕ ಸರ್ಕಾರದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತ ಮನೀಷ್ ಮೌದ್ಗಿಲ್ ಅವರು ಜಮೀನು ಮಾರಾಟ ನೀತಿಯ ಕುರಿತು ಹೊಸ ಆದೇಶವನ್ನು ಹೊರಡಿಸಿ ರಾಜ್ಯಾದ್ಯಂತ ಇರುವ ಎಲ್ಲ ಸಣ್ಣ ರೈತರಿಗೋಸ್ಕರಿಗೂ ಶಾ’ಕ್ ನೀಡಿದ್ದಾರೆ. ಸದ್ಯಕ್ಕೀಗ ರಾಜ್ಯ ಸರ್ಕಾರ ಜಮೀನುಗಳ ಮಾರಾಟ ಕುರಿತು ಮಾಡಿರುವ ಹೊಸ ನೀತಿ ಯಾವುದೆಂದರೆ ಇನ್ನು ಮುಂದೆ ಕರ್ನಾಟಕದಲ್ಲಿ ಯಾವುದೇ ರೈತರು 5 ಗುಂಟೆಗಿಂತ ಕಡಿಮೆ ಕೃಷಿ ಜಮೀನನ್ನು ಮಾರಾಟ ಮಾಡುವಂತಿಲ್ಲ.

ಒಂದು ವೇಳೆ ಮಾರಾಟ ಮಾಡಿದರೆ ಅವರಿಗೆ ಸರ್ಕಾರದಿಂದ ಸಿಗಬೇಕಾದ ದಾಖಲೆಯಾಗಿದ್ದ ಭೂಮಾಪನ ಇಲಾಖೆಯು ನೀಡುವ ದಾಖಲೆಯಾದ ಪೋಡಿ ಮತ್ತು ಫಾರ್ಮ್ ನಂಬರ್ 11 ಸಿಗುವುದಿಲ್ಲ. ಕರ್ನಾಟಕದಾದ್ಯಂತ ಇದೇ ಮಿತಿಯನ್ನು ಕೃಷಿ ಜಮೀನು ಮಾರಾಟ ಮಾಡುವವರಿಗೆ ಹೇರಲಾಗಿದ್ದು, ಕೆಲ ಜಿಲ್ಲೆಗಳಲ್ಲಿ ಈ ಮಿತಿಯನ್ನು ಇನ್ನೂ ಕಡಿಮೆ ಮಾಡಲಾಗಿದೆ.

ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಮಿತಿಯನ್ನು ಮೂರು ಗುಂಟೆಗೆ ಇಳಿಸಲಾಗಿದೆ. ಈ ನಾಲ್ಕು ಜಿಲ್ಲೆಗಳಲ್ಲಿ ಮೂರು ಗುಂಟೆಗಿಂತ ಕಡಿಮೆ ಕೃಷಿ ಭೂಮಿಯನ್ನು ಮಾರಾಟ ಮಾಡಲು ಅವಕಾಶವೇ ಇಲ್ಲ. ಸರ್ಕಾರದ ಇಂತಹ ನಿರ್ಧಾರಕ್ಕೆ ಹಲವು ಕಾರಣಗಳಿವೆ. ಕೃಷಿ ಉದ್ದೇಶಕ್ಕಾಗಿ ಬಳಸಲಾಗುತ್ತಿರುವ ಕೃಷಿ ಭೂಮಿಗಳ ಸರ್ವೇ ನಂಬರ್ ಗಳಲ್ಲಿ ಇರುವ ವಿಸ್ತೀರ್ಣವು ತೀರ ಕಡಿಮೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ.

ಇದಕ್ಕೆ ಕಾರಣ ರೈತರು ತಮ್ಮ ಭೂಮಿಯನ್ನು ತುಂಡು ತುಂಡಾಗಿ ಮಾರಾಟ ಮಾಡಿರುವುದು. ತುಂಡು ಭೂಮಿಗಳಲ್ಲಿ ಕೃಷಿ ಮಾಡುವುದು ಸಾಧ್ಯವಿಲ್ಲ, ಜೊತೆಗೆ ಇವುಗಳಿಗೆ ದಾಖಲೆ ಮಾಡಿ, ಸರ್ವೆ ನಂಬರ್ ಕೊಡುವುದು ಇದೆಲ್ಲ ತುಂಬಾ ಗೊಂದಲ ಮಾಡುವ ವಿಷಯಗಳಾಗಿವೆ. ಅದರಿಂದ ಬೇಸತ್ತು ಸರ್ಕಾರ ಈ ನಿರ್ಧಾರಕ್ಕೆ ಬರಲೇಬೇಕಾಗಿಯಿತು.

ಇನ್ನೊಂದು ಪ್ರಮುಖ ಕಾರಣ ಏನು ಎಂದರೆ ಈ ರೀತಿ ಸಣ್ಣ ಸಣ್ಣ ತುಂಡುಗಳಾಗಿ ಮಾಡಿ ಕೃಷಿ ಉದ್ದೇಶಕ್ಕಾಗಿ ಇದ್ದ ಜಮೀನನ್ನು ರೆವೆನ್ಯೂ ಸೈಟ್ಗಳಾಗಿ ಮಾಡಿ ಹಂಚಲಾಗುತ್ತಿದೆ. ರೆವೆನ್ಯೂ ಬಡಾವಣೆಗಳಲ್ಲಿ ಒಂದು ಗುಂಟೆಗಿಂತ ಕಡಿಮೆ ಜಮೀನನ್ನು ಒಂದು ಸೈಟ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ನಗರ ಪ್ರದೇಶಗಳ ಹೊರಭಾಗದಲ್ಲಿರುವ ಕೃಷಿ ಜಮೀನುಗಳಲ್ಲಿ ಈ ರೀತಿಯ ಪ್ರಕ್ರಿಯೆಗಳು ಹೆಚ್ಚಾಗಿ ನಡೆಯುತ್ತಿವೆ.

ಇದರಿಂದ ಇಂತಹ ಸೈಟ್ಗಳಲ್ಲಿ ಕಟ್ಟಲಾಗುವ ನಿವೇಶನಗಳಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ರಸ್ತೆ ಇಂಥವುಗಳನ್ನು ಒದಗಿಸುವುದು ಕಷ್ಟ. ಇದಕ್ಕೆಲ್ಲ ಕಡಿವಾಣ ಹಾಕಲು ಸರ್ಕಾರ ಇಂತಹ ನಿರ್ಧಾರಕ್ಕೆ ಬಂದಿದೆ.

ಆದರೆ ಸರ್ಕಾರದ ಈ ನಿಯಮದಿಂದ ಸಣ್ಣ ರೈತರಿಗೆ ತಮ್ಮ ಕಡಿಮೆ ವಿಸ್ತೀರ್ಣದ ಜಮೀನನ್ನು ಮಾರಾಟ ಮಾಡಲು ತೊಂದರೆ ಆಗಬಹುದು. ಆದ್ದರಿಂದ ಕೆಲವರಿಗೆ ಮಾತ್ರ ಇದರಿಂದ ವಿನಾಯಿತಿ ನೀಡಲಾಗಿದೆ. ಏನೆಂದರೆ, ಪಿತ್ರಾರ್ಜಿತವಾಗಿ ಮತ್ತು ಅನುವಂಶಿಕವಾಗಿ ಇದೇ ವಿಸ್ತೀರ್ಣದ ಜಮೀನನ್ನು ಅವರು ಪಡೆದಿದ್ದರೆ ಅಂತವರು ಹೊಸ ಪಹಣಿ ಪಡೆಯಬಹುದು ಮತ್ತು ಪೋಡಿ ನಿರ್ಮಿಸಬಹುದು.

ಸರ್ಕಾರದ ಈ ಹೊಸ ನೀತಿಗೂ ಮೊದಲು ಸರ್ವೆ ನಂಬರ್ ಗಳಲ್ಲಿ ಈ ರೀತಿ ಕಡಿಮೆ ಜಮೀನು ಇದ್ದರೆ ಅಂತವರು ಮಾರಾಟ ಮಾಡಬಹುದು, ಅವರ ಸರ್ವೇ ನಂಬರ್ಗಳು ಮತ್ತು ಪಹಣಿಗಳು ಮಾನ್ಯವಾಗಿರುತ್ತವೆ. ಈಗಾಗಲೇ ಪಹಣಿಗಳಲ್ಲಿ ದಾಖಲಾಗಿ ಅಸ್ತಿತ್ವದಲ್ಲಿ ಚಿತ್ರದಲ್ಲಿ ಇರುವ ಕಡಿಮೆ ವಿಸ್ತೀರ್ಣದ ಮಾಲೀಕರ ಹಕ್ಕುಗಳನ್ನು ಹೊಂದಿರುವ ಪೋಡಿಗಳು ಕಡಿಮೆ ವಿಸ್ತೀರ್ಣದಲ್ಲಿ ಇದ್ದರೆ ಅವು ಮಾನ್ಯವಾಗುತ್ತವೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now