ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯವಾಗಿ ಮಾಡಲೇಬೇಕು ಎಂದು ಸರ್ಕಾರ ಮೂರು ವರ್ಷಗಳ ಹಿಂದೆ ಘೋಷಿಸಿತ್ತು. ಅದಕ್ಕಾಗಿ ಉಚಿತವಾಗಿ ಮೂರು ವರ್ಷ ಕಾಲಾವಕಾಶವನ್ನು ನೀಡಿತ್ತು. ನಂತರ 2022 ಏಪ್ರಿಲ್ 1ರವರೆಗೆ 500 ದಂಡ ಸಮೇತ ಈ ಪ್ರಕ್ರಿಯೆ ಪೂರ್ತಿಗೊಳಿಸಲು ಅವಕಾಶ ನೀಡಿತ್ತು. ಇನ್ನು ಸಹ ಜನ ಈ ಬಗ್ಗೆ ನಿರ್ಲಕ್ಷ ತೋರುತ್ತಿರುವುದ್ದರಿಂದ ಸರ್ಕಾರ ಈ ಬಾರಿ ಎಲ್ಲರಿಗೂ ಶಾ’ಕ್ ನೀಡಿತ್ತು.
ಮಾರ್ಚ್ 31, 2023 ರ ತನಕ 1000ರೂ. ರೂಪಾಯಿ ದಂಡ ಸಮೇತ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಇಲ್ಲವಾದಲ್ಲಿ ಅಂತವರ ಪಾನ್ ಕಾರ್ಡ್ ಮಾನ್ಯತೆ ಕಳೆದುಕೊಳ್ಳುತ್ತದೆ ಎಂದು ಹೇಳಿದ್ದೇ ತಡ ಎಲ್ಲರೂ ಸಹ ಮುಗಿಬಿದ್ದು ಈ ಪ್ರಕ್ರಿಯ ಪೂರ್ತಿಗೊಳಿಸಲು ಪ್ರಯತ್ನಪಡುತ್ತಿದ್ದಾರೆ. ಕೆಲವರು ಈ ವಿಷಯ ನಮ್ಮತನಕ ತಲುಪಿರಲಿಲ್ಲ ಎನ್ನುವ ಮಾತುಗಳನ್ನು ಸಹ ನುಡಿದರು, ಅದಕ್ಕಾಗಿ ಕಡೇ ದಿನಗಳಲ್ಲಿ ಸರ್ವರ್ ಪ್ರಾಬ್ಲಮ್ ಇದ್ದದ್ದನ್ನು ಮತ್ತು ಜನರಿಗೆ ಇನ್ನೂ ಮಾಹಿತಿ ಕೊರತೆ ಇದೆ ಎನ್ನುವುದನ್ನು ಪರಿಗಣಿಸಿದ ಸರ್ಕಾರ ಜುಲೈ 30ರವರೆಗೆ ಮತ್ತೆ ಮೊದಲ ರೀತಿ 1000ರೂ. ದಂಡ ಸಮೇತ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಲು ತಿಳಿಸಿದೆ.
ಈ ಬಾರಿ ತುಂಬಾ ಕಟ್ಟುನಿಟ್ಟಾಗಿ ಆದೇಶ ಹೊರಡಿಸಿದೆ. ಒಂದು ವೇಳೆ ಇನ್ನೂ ಸಹ ನಿರ್ಲಕ್ಷತೋರಿ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡದವರಿಗೆ ಬಾರಿ ಮೊತ್ತದ ದಂಡದ ಜೊತೆಗೆ ಸಮಸ್ಯೆ ಎದುರಾಗಲಿದೆ ಎನ್ನುವುದರ ಬಗ್ಗೆ ತಿಳಿಸುವ ಪ್ರಯತ್ನವನ್ನೇ ಮಾಡುತ್ತಿದ್ದೇವೆ. ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎನ್ನುವುದು ಸರ್ಕಾರದ ನಿಯಮ. ಯಾಕೆಂದರೆ ಈ ಪ್ರಕ್ರಿಯೆ ಪೂರ್ತಿಗೊಳ್ಳುವುದರಿಂದ ಮತ್ತು TDS ಮತ್ತು TCS ಸಂಬಂಧಿಸಿದ ಸಮಸ್ಯೆಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಹಣಕಾಸು ಸಚಿವಲಯದ ಹೇಳಿದೆ.
ಮಾರ್ಚ್ 28ರಂದು ಮಾನ್ಯ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರೇ ಈ ಕುರಿತು ಒಂದು ಸುದ್ದಿಗೋಷ್ಠಿ ಕೂಡ ನಡೆಸಿ ಮಾತನಾಡಿದರು. ಅದೇನೆಂದರೆ ಪಾನ್ ಕಾರ್ಡ್ ಜೊತೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಲೇಬೇಕು. ಆದಾಯ ತೆರಿಗೆ ಕಾಯ್ದೆ ಯ1961ರ ಅಡಿಯಲ್ಲಿ ಜುಲೈ 1, 2017ಕ್ಕಿಂತ ಹಿಂದೆ ಪಾನ್ ಕಾರ್ಡ್ ಮಾಡಿದವರು ಕೂಡಲೇ ಆಧಾರ್ ಕಾರ್ಡ್ ಜೊತೆ ಲಿಂಕ್ ಆಗಲೇಬೇಕು ಒಂದು ವೇಳೆ ಇನ್ನು ಸಹ ಜನ ಈ ಇದನ್ನು ಪೂರ್ತಿ ಗೊಳಿಸಿದೆ ಹೋದರೆ ಅಂತವರ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ ಮುಂದೆ ಅವರು TDS ಮತ್ತು TCS ಗೆ ಸಂಬಂಧಿಸಿದ ಕ್ಲೈಮ್ ಪಡೆಯುವಾಗ ತೊಂದರೆ ಅನುಭವಿಸಬೇಕಾಗುತ್ತದೆ.
ಜುಲೈ 30, 2023 ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡುವುದಕ್ಕೆ ಕೊನೆಯ ಗಡುವು ಆಗಿದ್ದು, ದಿನ ಮುಂದೂಡುತ್ತಾ ಹೋದಂತೆ ದಂಡದ ಮೊತ್ತ ಕೂಡ ಹೆಚ್ಚಿಗೆ ಆಗುವ ಸಾಧ್ಯತೆ ಇದೆ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಆ ಗಡುವು ಮುಗಿದ ಮೇಲೂ ಕೂಡ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ ಎಂದರೆ ಅಂತಹ ಪ್ಯಾನ್ ಕಾರ್ಡ್ಗಳು ನಿಷ್ಕ್ರಿಯಗೊಳ್ಳುತ್ತವೆ. ಅದರಿಂದ ಈ ಉಪಯುಕ್ತ ಮಾಹಿತಿಯನ್ನು ಹೆಚ್ಚಿನ ಜನರ ಜೊತೆ ಶೇರ್ ಮಾಡಿಕೊಳ್ಳಿ ಎಲ್ಲರಿಗೂ ಮಾಹಿತಿ ತಲುಪುವಂತೆ ಮಾಡಿ.