ನಿಮ್ಮ ಮನೆಯಲ್ಲಿಯೂ ಚಿನ್ನದ ಆಭರಣಗಳು ಇವೆಯಾ, ಹಾಗಾದರೆ ತಪ್ಪದೇ ಈ ಸುದ್ದಿ ನೋಡಿ ಕೇಂದ್ರ ಸರ್ಕಾರ ಚಿನ್ನದ ಅಭರಣ ಮತ್ತು ಚಿನ್ನದ ಕಲಾಕೃತಿ ವಿಷಯದ ಕುರಿತವಾಗಿ ಮಹತ್ವದ ನಿರ್ಧಾರ ಒಂದಕ್ಕೆ ಬಂದಿದೆ. ಅದೇನೆಂದರೆ ಏಪ್ರಿಲ್ ಒಂದರಿಂದ ಆರು ಅಂಕಿಗಳ HUID ಮಾರ್ಕ್ ಇರದ ಚಿನ್ನದ ಆಭರಣಗಳನ್ನು ಮಾರುವಂತಿಲ್ಲ ಮತ್ತು ಖರೀದಿಸುವಂತಿಲ್ಲ ಎಂದು ಗ್ರಾಹಕರ ಹಿತದೃಷ್ಟಿಯನ್ನು ಮನದಲ್ಲಿ ಇಟ್ಟುಕೊಂಡು ಮಾರ್ಚ್ 31 ರಿಂದಲೇ ಈ ನಿರ್ಧಾರಕ್ಕೆ ಬರಲಾಗುವುದು ಎಂದು ಗ್ರಾಹಕ ವ್ಯವಹಾರ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ನಿಧಿ ಖರೆ ತಿಳಿಸಿದ್ದಾರೆ.
ಏನಿದು HUID ಎಂದು ನೋಡುವುದಾದರೆ ಇದೊಂದು ಅಲ್ಫಾ ನ್ಯೂಮರಿಕ್ ಕೋಡ್ ಆಗಿದೆ, ಇದನ್ನು ಇದನ್ನು ಹಾಲ್ ಮಾರ್ಕ್ ಯೂನಿಕ್ ಐಡೆಂಟಿಫೈಕೇಶನ್ ಮಾಡಲು ಬಳಸಲಾಗುತ್ತದೆ. ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಇಂದ ಪ್ರಮಾಣಿತ ಗೊಂಡ ಅಸೇಯಿಂಗ್ ಮತ್ತು ಹಾಲ್ ಮಾರ್ಕಿಂಗ್ ಕೇಂದ್ರಗಳಲ್ಲಿ ಈ ಗುರುತನ್ನು ಹಾಕಲಾಗುತ್ತದೆ. HUID ಅನ್ನು ಮಾನವ ಹಸ್ತಕ್ಷೇಪ ಇಲ್ಲದ ಸ್ವಯಂ ಚಾಲಿತ ಯಂತ್ರಗಳಿಂದ ಹಾಕಿಸಲಾಗುತ್ತದೆ ಎನ್ನುವುದು ಬಹಳ ವಿಶೇಷ, ಇದರಿಂದ ಆಭರಣಗಳ ಶುದ್ಧತೆಯನ್ನು ಯಾವುದೇ ಅನುಮಾನ ಇಲ್ಲದೆ ನಂಬಬಹುದಾಗಿದೆ.
ಹಾಗೂ ಇದರಲ್ಲಿ ಮೋಸ ಮಾಡುವ ಸಾಧ್ಯತೆಗಳು ಕೂಡ ಇಲ್ಲವೇ ಇಲ್ಲ. ಬಹಳ ಸುರಕ್ಷಿತವಾಗಿ ಇದನ್ನು ನಡೆಸಲಾಗುತ್ತಿದ್ದು ,ಡಾಟಾ ಗೌಪ್ಯತೆ ಕಾಪಾಡಿಕೊಳ್ಳುತ್ತದೆ ಎಂದು ನಂಬಲಾಗಿದೆ. ಈ ಹಿಂದೆ ಕೇಂದ್ರ ಸರ್ಕಾರವು 2021ರ ಜೂನ್ 16ರಿಂದ ಚಿನ್ನದ ಆಭರಣ ಮಾರಾಟ ಮತ್ತು ಚಿನ್ನದ ಕಲಾಕೃತಿಗಳ ಮಾರಾಟಕ್ಕೆ ಬಿಐಎಸ್ ಮಾರ್ಕನ್ನು ಕಡ್ಡಾಯ ಎಂದು ಘೋಷಿಸಿತ್ತು. ಈಗ ಅದನ್ನು ಗ್ರಾಹಕರಿಗೆ ಇನ್ನೂ ಹೆಚ್ಚಿನ ಭದ್ರತೆಯನ್ನು ಚಿನ್ನದ ವಿಷಯವಾಗಿ ಕೊಡಿಸುವ ಸಲುವಾಗಿ ಮತ್ತೊಮ್ಮೆ ಪರೀಷ್ಕೃತಗೊಳಿಸಿದೆ.
ಗ್ರಾಹಕ ವ್ಯವಹಾರ ಇಲಾಖೆಗಳ ಪ್ರಕಾರ ಎಚ್ ಯು ಐ ಡಿ ಕೋಡ್ ಪ್ರತಿಯೊಂದು ಚಿನ್ನದ ಆಭರಣಕ್ಕೆ ಯೂನಿಕ್ ಆದ ಗುರುತನ್ನು ನೀಡುವುದರಿಂದ ಒಂದು ವೇಳೆ ಚಿನ್ನ ಕಳ್ಳತನ ಆದಲ್ಲಿ ಅದನ್ನು ಪತ್ತೆ ಹಚ್ಚುವುದಕ್ಕೆ ಬಹಳ ಬೇಗ ಅನುಕೂಲವಾಗಲಿದೆ. ಚಿನ್ನದ ಆಭರಣಗಳ ಮೇಲೆ ಹಾಲ್ ಮಾರ್ಕ್ ಅಂತೆಯೇ ಇದು ಸಹ ನಂಬಿಕೆಯನ್ನು ಹೆಚ್ಚು ಗೊಳಿಸುತ್ತದೆ ಎಂದು ಅಭಿಪ್ರಾಯ ಪಡಲಾಗಿದೆ. ಒಂದು ವೇಳೆ ಇದರ ಗುಣಮಟ್ಟದಲ್ಲಿ ಅನುಮಾನ ಬಂದರೆ BHSK ಬಿಡುಗಡೆ ಮಾಡಿರುವ BIS ಆಪಲ್ಲಿ HUID ಕೋಡ್ ಧೃಡೀಕರಣವನ್ನು ಪರೀಕ್ಷಿಸಬಹುದಾಗಿದೆ.
ಈ ಹಿಂದೆ HUID ಕೋಡ್ ನಾಲ್ಕು ಅಂಕಿಗಳದಾಗಿತ್ತು, ಈಗ ನಾಲ್ಕರಿಂದ ಆರು ಅಂಕಿಗಳ ತನಕ ಬಳಸಲಾಗುತ್ತಿದೆ. ಹಾಗಾಗಿ ಹೊಸ ನಿಯಮದ ನಂತರ ಮಾರ್ಚ್ 31 ರಿಂದ ಆರು ಅಂಕಿಗಳ ಆಲ್ಫಾ ನ್ಯೂಮರಿಕ್ ಕೋಡ್ ಹೊಂದಿರುವ ಚಿನ್ನದ ಆಭರಣಗಳ ಮಾರಾಟಕ್ಕೆ ಮಾತ್ರ ಅನುಮತಿ ದೊರೆಯಲಿದೆ. ಸದ್ಯಕ್ಕೆ ಚಿನ್ನದ ಗುಣಮಟ್ಟದಲ್ಲಿ ಇರುವ ಪರೀಷ್ಕೃತ ಚಿಹ್ನೆಗಳೆಂದರೆ BIS ಲೋಗೋ, ಶುದ್ಧತೆ ಮತ್ತು ಗುಣಮಟ್ಟದ ಗ್ರೇಡ್ ಹಾಗೂ ಆರು ಅಂಕಿಗಳ HUID ಕೋಡ್. ಇನ್ನು ಮುಂದೆ ಭಾರತದಾದ್ಯಂತ ಇರುವ ಎಲ್ಲಾ ಗ್ರಾಹಕರು ಈ ವಿಷಯವನ್ನು ಗಮನದಲ್ಲಿ ಇಟ್ಟುಕೊಂಡು ಆಭರಣ ಖರೀದಿಯಲ್ಲಿ ಇದನ್ನು ಪಾಲಿಸಬೇಕು ಮತ್ತು ನೀವು ಆಭರಣವಾಗಿ ಮಾರುವಾಗ ಇದು ಅನ್ವಯವಾಗುತ್ತದೆ ಎನ್ನುವುದನ್ನು ತಿಳಿದುಕೊಂಡಿರಬೇಕು. ಹಾಗಾಗಿ ಈ ಮಾಹಿತಿಯನ್ನು ಹೆಚ್ಚಿನ ಜನರಿಗೆ ತಲುಪುವಂತೆ ಶೇರ್ ಮಾಡಿ.