ಪಿತ್ರಾರ್ಜಿತವಾದ ಅಥವಾ ಸ್ವಯಾರ್ಜಿತವಾಗಿ ಒಬ್ಬ ವ್ಯಕ್ತಿಯು ಸಂಪಾದಿಸಿದ ಆಸ್ತಿಯ ಮೇಲೆ ಆತನ ವಾರಸುದಾರರುಗಳಿಗೆ ಯಾವ ಯಾವ ಸಂದರ್ಭದಲ್ಲಿ ಯಾವ ರೀತಿ ಹಕ್ಕು ಇರುತ್ತದೆ ಎನ್ನುವುದನ್ನು ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತಿಳಿದುಕೊಂಡಿರಲೇಬೇಕು. ಸದ್ಯಕ್ಕೆ ಈಗ ದೇಶದಲ್ಲಿ ಈ ರೀತಿ ಆಸ್ತಿಯ ಮೇಲಿನ ಒಡೆತನದ ಹಕ್ಕಿನ ಕುರಿತು ಸಾಕಷ್ಟು ಗೊಂದಲಗಳು ಜನಸಾಮಾನ್ಯರಿಗೆ ಇದೆ.
ಈ ಗೊಂದಲಗಳನ್ನು ಕಾನೂನು ಮೂಲಕವಾಗಿ ನ್ಯಾಯಾಲಯಗಳಲ್ಲಿ ಇತ್ಯರ್ಥ ಮಾಡಲಾಗುತ್ತಿದೆ. ಇಂದು ಕೌಟುಂಬಿಕ ನ್ಯಾಯಾಲಯಗಳಲ್ಲಿ ದಾಖಲಾಗುತ್ತಿರುವ ದೂರುಗಳಲ್ಲಿ ಈ ರೀತಿ ಆಸ್ತಿ ಮೇಲಿನ ಹಕ್ಕುಗಳ ಕುರಿತ ಪ್ರಕರಣಗಳ ಸಂಖ್ಯೆಯೇ ಅತಿ ಹೆಚ್ಚಾಗಿವೆ. ಆದರೆ ಎಲ್ಲಾ ಪ್ರಕರಣಗಳಲ್ಲೂ ತೀರ್ಪು ಒಂದೇ ರೀತಿ ಬರುತ್ತದೆ ಎಂದು ಹೇಳಲು ಆಗುವುದಿಲ್ಲ ಆದರೆ ಕೆಲವೊಂದು ಪ್ರಮುಖ ಪ್ರಕರಣಗಳ ತೀರ್ಪುಗಳ ಆಧಾರದ ಮೇಲೆ ಇದನ್ನು ಊಹಿಸಬಹುದು ಅಷ್ಟೇ.
ಒಬ್ಬ ವ್ಯಕ್ತಿ ಮರಣ ಹೊಂದಿದ ನಂತರ ಆತನ ಪತ್ನಿಯ ಹೆಸರಿನಲ್ಲಿರುವ ಆಸ್ತಿಯ ಮೇಲೆ ಆ ಮಹಿಳೆಯ ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳಿಗೆ ಮತ್ತು ಅವರ ಪತಿ ಪತ್ನಿಗೆ ಹಕ್ಕು ಇರುತ್ತದೆ ಎನ್ನುವುದನ್ನು ಎಲ್ಲರೂ ತಿಳಿದುಕೊಂಡಿದ್ದಾರೆ. ಆದರೆ ಇದು ಎಲ್ಲಾ ಸಮಯದಲ್ಲೂ ಕೂಡ ಅನ್ವಯ ಆಗುವುದಿಲ್ಲ. ಇತ್ತೀಚಿಗೆ ದೆಹಲಿ ಕೋರ್ಟ್ ನಲ್ಲಿ ದಾಖಲಾಗಿದ್ದ ಲಾಜ್ವಂತಿ ದೇವಿ ಎನ್ನುವರ ಪ್ರಕರಣದಲ್ಲಿ ಕೋರ್ಟ್ ನೀಡಿದ ತೀರ್ಪು ಎಲ್ಲರಿಗೂ ಉದಾಹರಣೆಯಾಗಿದೆ.
ಈ ಪ್ರಕರಣದ ಹಿನ್ನಡೆಯನ್ನು ನೋಡುವುದಾದರೆ ಲಾಜ್ವಂತಿ ದೇವಿ ಅವರ ಪತಿ 1966 ಮನೆ ಖರೀದಿಸಿದರು ಇದು ಆ ವ್ಯಕ್ತಿಯ ಸ್ವಂತ ಹಣದಿಂದ ಖರೀದಿಸಿದ್ದರಿಂದ ಅದು ಅವರ ಸ್ವಯಾರ್ಜಿತ ಆಸ್ತಿ ಆಗಿತ್ತು. ಆ ವ್ಯಕ್ತಿ ಅವರ ಮರಣಕ್ಕೂ ಮುನ್ನ ಲಾಜ್ವಂತಿ ದೇವಿ ಅವರಿಗೆ ಮನೆ ಹಕ್ಕನ್ನು ವರ್ಗಾವಣೆ ಮಾಡಿದ್ದರು. ನಂತರ ಆ ಮನೆಯಲ್ಲಿ ಆಕೆಯ ಮಗಳು ಹಾಗೂ ಅಳಿಯ ಕೂಡ ವಾಸಿಸುತ್ತಿದ್ದರು.
2014ರಲ್ಲಿ 85 ವರ್ಷ ವಯಸ್ಸಿನ ಲಾಜ್ವಂತಿ ದೇವಿ ಅವರು ಕೋರ್ಟ್ ನಲ್ಲಿ ಪ್ರಕರಣ ಒಂದನ್ನು ದಾಖಲಿಸಿದರು. ತಮ್ಮ ಮಗಳು ಮತ್ತು ಅಳಿಯ ತಮ್ಮ ಇಚ್ಛೆಗೆ ವಿರೋಧವಾಗಿ ಆ ಮನೆಯಲ್ಲಿ ವಾಸವಾಗಿದ್ದರೆ ಎಂದು ಈ ದೂರಿನಲ್ಲಿ ತಿಳಿಸಿದರು. ಲಾಜ್ವಂತಿ ದೇವಿ ಪುತ್ರಿ ಹಾಗೂ ಅಳಿಯನ ವಾದವು ಇದು ತಾಯಿಯ ಆಸ್ತಿ ಆದ್ದರಿಂದ ತಮಗೂ ಪಾಲಿದೆ, ಹಾಗಾಗಿ ವಾಸಿಸುತ್ತಿದ್ದೇವೆ ಎನ್ನುವುದಾಗಿತ್ತು.
ಆದರೆ ಈ ಪ್ರಕರಣದ ಬಗ್ಗೆ ಕುಲಂಕುಶವಾಗಿ ತನಿಖೆ ನಡೆಸಿದ ದೆಹಲಿಯ ಕೋರ್ಟ್ ಲಾಜ್ವಂತಿ ದೇವಿ ಅವರ ಇಚ್ಛೆಗೆ ವಿರೋಧವಾಗಿ ಆಕೆಯ ಮಗಳು ಹಾಗೂ ಅಳಿಯ ಅಲ್ಲಿ ವಾಸಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿ ತಕ್ಷಣವೇ ಅಲ್ಲಿಂದ ಖಾಲಿ ಮಾಡಲು ಸೂಚಿಸಿತು.
ಹಾಗೂ ಈ ಪ್ರಕರಣದಲ್ಲಿ 2014ರಿಂದ ಲಾಜ್ವಂತಿ ದೇವಿಯವರು ಕೋರ್ಟಿಗೆ ಪ್ರಕರಣಕ್ಕಾಗಿ ಬರುತ್ತಿದ್ದ ಕಾರಣ ತಿಂಗಳಿಗೆ 10,000 ಲೆಕ್ಕದಲ್ಲಿ ತೀರ್ಪು ಹೊರಬೀಳು ಸಮಯದ ತನಕ ಕೂಡ ಮಗಳು ಹಾಗೂ ಅಳಿಯ ಅವರಿಗೆ ಹಣವನ್ನು ಕೊಡಬೇಕು ಎನ್ನುವುದನ್ನು ಕೂಡ ಕೋರ್ಟ್ ಹೇಳಿತ್ತು. ಮಗಳು ಹಾಗೂ ಅಳಿಯ ಅವರ ಮನವನ್ನು ಓಲೈಸಿ ಅವರನ್ನು ಪ್ರೀತಿಯಿಂದ ನೋಡಿಕೊಂಡಿದ್ದ ಪಕ್ಷದಲ್ಲಿ ಈ ಪರಿಸ್ಥಿತಿ ಅವರಿಗೆ ಬರುತ್ತಿರಲಿಲ್ಲ. ಇಂತಹ ಪ್ರಕರಣಗಳು ಆಗಾಗ ದೇಶದಾದ್ಯಂತ ಎಲ್ಲರ ಗಮನ ಸೆಳೆಯುತ್ತವೆ. ಈ ಪ್ರಕರಣದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.