ಕರ್ನಾಟಕದಲ್ಲಿ ಈಗ ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ ಗ್ಯಾರಂಟಿ ಕಾರ್ಡ್ ಯೋಜನೆಗಳ ಬಗ್ಗೆಯೇ ಚರ್ಚೆ. ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ದಿನಕೊಂದು ಸುದ್ದಿ ಇದರ ಕುರಿತು ಪ್ರಸಾರ ಆಗುತ್ತಲಿದೆ. ನಮ್ಮ ಸರ್ಕಾರ ಈ ವರ್ಷ ವಿಧಾನಸಭೆ ಎಲೆಕ್ಷನ್ ಅಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಿ ಗ್ಯಾರಂಟಿ ಕಾರ್ಡ್ಗಳನ್ನು ಪಕ್ಷದವರು ವಿತರಿಸಿದ್ದರು.
ಅಂತೆಯೇ ಜನರ ವಿಶ್ವಾಸ ಗಳಿಸಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಏರಿದ್ದಾರೆ. ಕೊಟ್ಟ ಮಾತಿನಂತೆಯೇ ಮೊದಲ ಸಚಿವ ಸಂಪುಟದಲ್ಲಿ ಚರ್ಚಿಸಿ ಪ್ರಮಾಣವಚನ ಸ್ವೀಕರಿಸಿದ ದಿನವೇ ತಾತ್ವಿಕ ಅನುಮೋದನೆಯನ್ನು ನೀಡಿದ್ದಾರೆ. ಆದರೆ ಮಾರ್ಗಸೂಚಿ ಮತ್ತು ನಿಯಮಗಳ ಬಗ್ಗೆ ಮತ್ತೊಂದು ಆದೇಶ ಪತ್ರ ಹೊರಡಿಸಿ ಹೇಳಲಿದ್ದೇವೆ ಎಂದು ಇದಕ್ಕೆ ಸಮಯವಕಾಶ ಕೇಳಿದ್ದರೂ ಜನಸಾಮಾನ್ಯರು ಮಾತ್ರ ಇದು ಫ್ರೀ ಆಗಿಯೇ ಘೋಷಣೆ ಆಗಿದೆ ಎನ್ನುವಂತೆ ವರ್ತಿಸುತ್ತಿದ್ದಾರೆ.
ಅದರಲ್ಲೂ ಗೃಹ ಜ್ಯೋತಿ ಯೋಜನೆ ಅಡಿ ಘೋಷಿಸಿರುವ 200 ಯೂನಿಟ್ ವಿದ್ಯುತ್ ಉಚಿತ ಮತ್ತು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎನ್ನುವ ಗ್ಯಾರಂಟಿ ಕಾರ್ಡ್ ಯೋಜನೆ ಬಗ್ಗೆ ಆದೇಶ ಪತ್ರ ಹೊರಬೀಳುವ ಮೊದಲೇ ಜನರು ಉಚಿತ ಇದು ಎನ್ನುವಂತೆ ವರ್ತಿಸುತ್ತಿದ್ದಾರೆ. ವಿದ್ಯುತ್ ಬಿಲ್ ಸಂಗ್ರಹ ಮಾಡಲು ಬರುವ ಪ್ರತಿನಿಧಿಗಳ ಜೊತೆ ಹಾಗೂ ಟಿಕೆಟ್ ಗೆ ಹಣ ಕೇಳುವ ಕಂಡಕ್ಟರ್ ಗಳ ವಿರುದ್ಧ ಮಹಿಳೆಯರು ತಿರುಗಿ ಬೀಳುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಹಣ ಕೇಳುವವರನ್ನು ಮುಖ್ಯಮಂತ್ರಿಗಳನ್ನು ಕೇಳಿ ಕಾಂಗ್ರೆಸ್ ಪಕ್ಷವನ್ನು ಕೇಳಿ ಎಂದು ಜನ ಹೇಳುತ್ತಿದ್ದಾರೆ. ಕೆಲವು ಕಡೆ ಪರಿಸ್ಥಿತಿ ಮಿತಿಮೀರಿ ಹಲ್ಲೆಗಳು ಕೂಡ ಆಗುತ್ತಿವೆ. ಆದ್ದರಿಂದ ಶೀಘ್ರವಾಗಿ ಕಾಂಗ್ರೆಸ್ ಪಕ್ಷವು ಈ ಯೋಜನೆಗಳ ಬಗ್ಗೆ ಸ್ಪಷ್ಟ ಆದೇಶವನ್ನು ಹೊರಡಿಸಬೇಕಾದ ಒತ್ತಡ ಇದೆ. ಮತ್ತೊಂದೆಡೆ ಈ ಯೋಜನೆ ಬಗ್ಗೆ ಹೇಳುವುದಾದರೆ ಭಾರತದ ಇತಿಹಾಸದಲ್ಲಿ ಅನೇಕ ರಾಜ್ಯಗಳಲ್ಲಿ ಈ ರೀತಿ ಫ್ರೀ ಯೋಜನೆಗಳು ಘೋಷಣೆ ಆಗಿವೆ.
ಹಿಂದೊಮ್ಮೆ ತಮಿಳುನಾಡು ಸರ್ಕಾರ ಕಲರ್ ಟಿವಿ ಫ್ರೀ ಲ್ಯಾಪ್ಟಾಪ್ ಉಚಿತ ಶಿಕ್ಷಣ ಕೊಡುವುದಾಗಿ ಹೇಳಿದ್ದರ ವಿರುದ್ಧ ಸುಪ್ರೀಂ ಕೋರ್ಟ್ ಅಲ್ಲಿ ಕೇಸ್ ದಾಖಲಾಗಿದ್ದರೂ ಕೂಡ ಅಂತಿಮವಾಗಿ ಸುಪ್ರೀಂ ಕೋರ್ಟ್ ಜನರಿಗೆ ಉಚಿತವಾಗಿ ಕೊಡುವುದನ್ನು ಲಂಚ ಅಥವಾ ಆಮಿಷ ಎಂದು ಹೇಳಲಾಗುವುದಿಲ್ಲ ಎನ್ನುವ ತೀರ್ಪು ನೀಡುತ್ತು. ಇದೇ ಟ್ರಿಕ್ ಅನ್ನು ದೆಹಲಿಯಲ್ಲೂ ಕೂಡ ಆಮ್ ಪಕ್ಷವು ಬಳಸಿ ಅಧಿಕಾರಕ್ಕೆ ಬಂತು.
ಪಕ್ಷವು ದೆಹಲಿಯಲ್ಲಿರುವ ಎಲ್ಲರಿಗೂ ಕೂಡ 200 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ಕೊಡುವುದಾಗಿ ಹೇಳಿತ್ತು. ಇದರ ಉದ್ದೇಶ ಜನರು 200 ಯೂನಿಟ್ ಒಳಗೆ ವಿದ್ಯುತ್ ಬಳಸಲಿ ಎನ್ನುವುದಾಗಿತ್ತು. ಆದರೆ ಇದೆ ಅವರಿಗೆ ತಿರುಗುಬಾಣ ಆಯ್ತು ಅಲ್ಲಿಯವರೆಗೂ ಕೂಡ 50 ರಿಂದ 80 ಯೂನಿಟ್ ಬಳಸುತ್ತಿದ್ದವರೆಲ್ಲಾ 150 ರಿಂದ 180 ಯೂನಿಟ್ ವಿದ್ಯುತ್ ಬಳಸುವಂತೆ ಆಯಿತು.
ಈಗ ದೆಹಲಿ ಸರ್ಕಾರಕ್ಕೆ ಉಚಿತ ವಿದ್ಯುತ್ ಯೋಜನೆ ತಲೆನೋವಾಗಿ ಪರಿಣಮಿಸಿದೆ ಅದೇ ಪರಿಸ್ಥಿತಿ ಈಗ ಕರ್ನಾಟಕದಲ್ಲಿ ಎದುರಾಗಿದೆ. ಯಾಕೆಂದರೆ ಕಾಂಗ್ರೆಸ್ ಪಕ್ಷವು ಪ್ರತಿ ಕುಟುಂಬಕ್ಕೂ 200 ಯೂನಿಟ್ ವಿದ್ಯುತ್ ಉಚಿತ ಎಂದು ಹೇಳಿರುವುದರಿಂದ ಇಲ್ಲಿನ ಜನಸಂಖ್ಯೆಯ ಪ್ರಕಾರ ಅತಿ ಹೆಚ್ಚಿನ ಮೊತ್ತವಾಗಲಿದೆ. ಸರ್ಕಾರ ಯಾವುದೇ ಬೆಲೆಯನ್ನು ತೆತ್ತಾದರೂ ಈ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳಿದೆ.
ಆದರೆ 200 ಯೂನಿಟ್ ಕಿಂತ ಹೆಚ್ಚು ವಿದ್ಯುತ್ ಬಳಸಿದರೆ ಅವರಿಗೆ ಯಾವುದೇ ಸಬ್ಸಿಡಿ ಇರುವುದಿಲ್ಲ ಪೂರ್ತಿ ವಿದ್ಯುತ್ ದರವನ್ನು ಅವರು ಕಟ್ಟಬೇಕಾಗುತ್ತದೆ. ಇದನ್ನು ಲೆಕ್ಕ ಹಾಕುವುದು ಹೇಗೆ ಎಂದು ನೋಡುವುದಾದರೆ ನಮ್ಮ ಕರೆಂಟ್ ಬಿಲ್ ಅಲ್ಲಿ ಹಿಂದಿನ ತಿಂಗಳ ಮಾಪನ ಹಾಗೂ ಇಂದಿನ ಮಾಪನವನ್ನು ಚೆಕ್ ಮಾಡಿ ಇಂದಿನ ಮಾಪನದಿಂದ ಹಳೆಯದನ್ನು ಮೈನಸ್ ಮಾಡಿದರೆ ತಿಂಗಳಿಗೆ ಎಷ್ಟು ಯೂನಿಟ್ ಬಳಸುತ್ತಿದ್ದೇವೆ ಎನ್ನುವುದು ತಿಳಿಯುತ್ತದೆ.
ಸರಳವಾಗಿ ಹೇಳಬೇಕು ಎಂದರೆ ಯಾರ ಮನೆ ಕರೆಂಟ್ ಬಿಲ್ 1200 ರೂಪಾಯಿಗಿಂತ ಕಡಿಮೆ ಬರುತ್ತಿದೆ ಅವರು 200 ಯೂನಿಟ್ ಒಳಗೆ ವಿದ್ಯುತ್ ಬಳಸಿದ್ದಾರೆ ಎಂದು ಅರ್ಥ. ನಮ್ಮ ಮನೆಯ ಮೀಟರ್ ಬಾಕ್ಸ್ ನೋಡಿಯೂ ಇದನ್ನು ಲೆಕ್ಕ ಹಾಕಬಹುದು. ಇಂದಿನ ಮಾಪನವನ್ನು ಬರೆದಿಟ್ಟುಕೊಂಡು ಪ್ರತಿದಿನವೂ ಅಲ್ಲಿ ತೋರಿಸುವ KW/h ನೋಡಿ ಅದನ್ನು ಮೈನಸ್ ಮಾಡಿಕೊಂಡರೆ ಪ್ರತಿದಿನ ಎಷ್ಟು ವಿದ್ಯುತ್ ಬಳಸುತ್ತಿದ್ದೇವೆ ತಿಂಗಳಿಗೆ ಎಷ್ಟು ಯೂನಿಟ್ ಬಳಸುತ್ತಿದ್ದೇವೆ ಎನ್ನುವುದರ ಲೆಕ್ಕ ಸಿಗುತ್ತದೆ.