ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ತುರ್ತುಪರಿಸ್ಥಿತಿಗಳಲ್ಲಿ ಸಾಲ ಮಾಡುವ ಸಂದರ್ಭದಲ್ಲಿ ಬರುತ್ತದೆ. ಬಡವರಿಂದ ಹಿಡಿದು ಧನವಂತನ ತನಕ ಶಿಕ್ಷಣ, ವ್ಯಾಪಾರ,ಅನಾರೋಗ್ಯ, ಮದುವೆ ಅಥವಾ ಇನ್ನಿತರ ಖರ್ಚುಗಳ ಉದ್ದೇಶದಿಂದ ಸಣ್ಣ ಮೊತ್ತದಿಂದ ಕೋಟಿಗಟ್ಟಲೆ ಸಾಲ ಮಾಡಿರುತ್ತಾರೆ.
ಈ ರೀತಿ ಸಾಲ ಮಾಡುವಾಗ ಹಲವಾರು ವಿಷಯಗಳ ಬಗ್ಗೆ ಗಮನ ಕೊಡಲೇಬೇಕಾಗುತ್ತದೆ. ಸಾಲಗಳಲ್ಲೂ ಕೂಡ ಹಲವಾರು ವಿಧವಾದ ಸಾಲಗಳು ಪ್ರಮುಖವಾಗಿ ನಾವು ನಮ್ಮ ಚಿನ್ನ ಅಥವಾ ಆಸ್ತಿಯನ್ನು ಅಡವಿಟ್ಟು ಪಡೆಯುವ ಸಾಲ ಅಥವಾ ಯಾವುದೇ ದಾಖಲೆಯಿಲ್ಲದೇ ಪಡೆಯುವ ವೈಯಕ್ತಿಕ ಸಾಲ ಎಂದು ಗುರುತಿಸಬಹುದು.
ಇದರಲ್ಲಿ ವೈಯುಕ್ತಿಕ ಸಾಲ ಅಥವಾ ಚಿನ್ನದ ಅಡವಿಟ್ಟು ಸಾಲ ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಿದೆ ಎಂದು ಹೇಳಲಾಗುತ್ತದೆ ಹಾಗಾಗಿ ಈ ಎರಡು ವಿಷಯಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. ಅತಿ ಸುಲಭವಾಗಿ ಸಿಗುವ ಸಾಲಗಳೆಂದರೆ ವೈಯಕ್ತಿಕ ಸಾಲ ಹಾಗೂ ಚಿನ್ನದ ಮೇಲಿನ ಸಾಲ.
ವೈಯಕ್ತಿಕ ಸಾಲ ಪಡೆದುಕೊಳ್ಳಬೇಕು ಎಂದರೆ ನಮ್ಮ ಯಾವುದೇ ಆಸ್ತಿಯನ್ನು ಅಡಮಾನ ಇಡದೆ ಕಡಿಮೆ ದಾಖಲೆ ಪತ್ರಗಳಲ್ಲಿ ಕೇವಲ ನಮ್ಮ ವೈಯಕ್ತಿಕ ಮಾಹಿತಿಗಳನ್ನು ಸರಿಯಾಗಿ ತುಂಬಿಸಿ ನಮ್ಮ ಆದಾಯಕ್ಕೆ ತಕ್ಕ ಹಾಗೆ ಸಾಲವನ್ನು ಪಡೆಯಬಹುದು. ಆದರೆ ಯಾವುದೇ ಅಡಮಾನ ಇಲ್ಲದೆ ಸಾಲ ನೀಡುವುದರಿಂದ ಒಂದು ವೇಳೆ ಸಾಲ ತೆಗೆದುಕೊಂಡ ವ್ಯಕ್ತಿಯು ಮರುಪಾವತಿ ಮಾಡದೇ ಇದ್ದಾಗ ಬ್ಯಾಂಕ್ ಗಳಿಗೆ ನ’ಷ್ಟ ಆಗುತ್ತದೆ.
ಹಾಗಾಗಿ ಹೆಚ್ಚಿನ ಬಡ್ಡಿಯನ್ನು ವಿಧಿಸುತ್ತಾರೆ ಹಾಗೆ ನೀವೇನಾದರೂ ಈ ವೈಯಕ್ತಿಕ ಸಾಲವನ್ನು ಸರಿಯಾಗಿ ನಿರ್ವಹಿಸುತ್ತಿದ್ದರೆ ಡೀಫಾಲ್ಟರ್ (defaulter) ಆಗಿ ನಿಮ್ಮ ಸಿಬಿಲ್ ಸ್ಕೋರ್ (Cibil Score) ಕುಸಿಯುತ್ತದೆ. ವೈಯಕ್ತಿಕ ಸಾಲಕ್ಕಿಂತಲೂ ವೇಗವಾಗಿ ಕೆಲವೇ ನಿಮಿಷಗಳಲ್ಲಿ ಚಿನ್ನದ ಮೇಲೆ ಸಾಲ ಸಿಗುತ್ತದೆ ಚಿನ್ನದ ಮೇಲೆ ಸಾಲ ಕೊಡುವುದಕ್ಕೆ ಈಗ ಹಲವಾರು ಕಂಪನಿಗಳು ಇದೆ.
ಮುತ್ತೂಟ್ ಫೈನಾನ್ಸ್, ಮಣಿಪುರಂ ಲೋನ್, ಅಟ್ಟಿಕ ಗೋಲ್ಡ್ ಲೋನ್ ಇಂತಹ ಫೈನಾನ್ಸ್ ಕಂಪನಿಗಳು ಮಾತ್ರವಲ್ಲದೇ ಬ್ಯಾಂಕ್ ಗಳಲ್ಲಿಯೂ ಕೂಡ ನಾವು ಚಿನ್ನವನ್ನು ಅಡವಿಟ್ಟು ಸಾಲ ಪಡೆಯಬಹುದು. ವೈಯಕ್ತಿಕ ಸಾಲಕ್ಕಿಂತ ಬಹಳ ಕಡಿಮೆ ದರದಲ್ಲಿ ಚಿನ್ನದ ಮೇಲೆ ಸಾಲ ಕೊಡುತ್ತಾರೆ ಹಾಗೂ ಇದು ಕಂಪನಿಯಿಂದ ಕಂಪನಿಗೆ ಒಂದು ಬ್ಯಾಂಕಿಂದ ಮತ್ತೊಂದು ಬ್ಯಾಂಕಿಗೆ ವ್ಯತ್ಯಾಸವಾಗುತ್ತದೆ.
ಸಾಮಾನ್ಯವಾಗಿ ನಮ್ಮ ಭಾರತದಲ್ಲಿ ಚಿನ್ನದ ಮೇಲೆ 8% ನಿಂದ 25% ವರೆಗೂ ಕೂಡ ಬಡ್ಡಿದರ ಅನ್ವಯವಾಗುತ್ತಿದೆ. ಇಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿಲ್ಲ ಎಂದರೂ ಕೂಡ ಚಿನ್ನದ ಮೇಲೆ ಸಾಲವನ್ನು ಕೊಡುತ್ತಾರೆ. ವೈಯಕ್ತಿಕ ಸಾಲದಲ್ಲಿ EMI ರೂಪದಲ್ಲಿ ಬಡ್ಡಿದರ ಜೊತೆಗೆ ಸಾಲದ ಒಂದಷ್ಟು ಮೊತ್ತವನ್ನು ಪ್ರತಿ ತಿಂಗಳು ಪಾವತಿ ಮಾಡಬೇಕು, ಆದರೆ ಚಿನ್ನದ ಮೇಲೆ ಸಾಲ ತೆಗೆದುಕೊಂಡಾಗ ಈ ರೀತಿ ಅಸಲನ್ನು ಪ್ರತಿ ತಿಂಗಳು ಪಾವತಿಸಬೇಕಾದ ಅವಶ್ಯಕತೆ ಇಲ್ಲ.
ಕೇವಲ ಬಡ್ಡಿಯನ್ನು ಪಾವತಿಸಿಕೊಂಡು ಕೊನೆಯ ಅವಧಿ ಮುಗಿದರೊಳಗೆ ಒಟ್ಟಿಗೆ ಸಾಲ ತೀರಿಸಿದರು ನಡೆಯುತ್ತದೆ, ಇದನ್ನು ಉತ್ತಮವಾಗಿ ನಿಭಾಯಿಸಿದರೆ ಕ್ರೆಡಿಟ್ ಸ್ಕೋರ್ (Credit Score) ಕೂಡ ಉತ್ತಮವಾಗುತ್ತದೆ. ಅದು ಮುಂದೆ ಸಾಲ ಪಡೆಯಲು ಅನುಕೂಲವಾಗುತ್ತದೆ.
ಈಗ ಚಿನ್ನದ ಬೆಲೆ ಹೆಚ್ಚು ಇರುವುದರಿಂದ ಚಿನ್ನಕ್ಕೆ ದೊಡ್ಡ ಮೊತ್ತದಲ್ಲಿ ಸಾಲ ಸಿಗುತ್ತದೆ ಆದರೆ ನಿಮ್ಮ ಚಿನ್ನಕ್ಕೆ ಎಷ್ಟು ಸಾಲ ನೀಡಬೇಕು ಎನ್ನುವುದನ್ನು ಆ ಬ್ಯಾಂಕ್ ಗಳೇ ನಿರ್ಧರಿಸುತ್ತವೆ. ಹಾಗಾಗಿ ಕೆಲವರಿಗೆ ವೈಯಕ್ತಿಕ ಸಾಲಕ್ಕಿಂತ ಚಿನ್ನದ ಮೇಲಿನ ಸಾಲ ಉತ್ತಮ ಎನಿಸುತ್ತದೆ.