ಅನ್ನ ಭಾಗ್ಯ ಅಕ್ಕಿ ಹಣ ಪಡೆಯಲು ಹೊಸ ರೂಲ್ಸ್ ಜಾರಿ.!

 

WhatsApp Group Join Now
Telegram Group Join Now

ಎಲ್ಲರಿಗೂ ತಿಳಿದಿರುವಂತೆ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು (Karnataka Government) ಐದು ಗ್ಯಾರಂಟಿ ಯೋಜನೆಗಳನ್ನು (five Guaranty Schemes) ಕೊಟ್ಟ ವಾಗ್ದಾನದಂತೆ ಜಾರಿಗೆ ತಂದಿದೆ. ರಾಜ್ಯದ ಜನತೆ ಈಗ ಶಕ್ತಿ ಯೋಜನೆ, ಗೃಹ ಜ್ಯೋತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ಅನ್ನ ಭಾಗ್ಯ ಮತ್ತು ಯುವನಿಧಿ ಯೋಜನೆ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

ಆದರೆ ಅನ್ನಭಾಗ್ಯ ಯೋಜನೆಯಲ್ಲಿ ಕೆಲವು ಮಾರ್ಪಾಟುಗಳಾಗಿವೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ತಮ್ಮ ಸರ್ಕಾರ ಜಾರಿಗೆ ಬಂದರೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ (BPL) ಪ್ರತಿಯೊಬ್ಬ ಸದಸ್ಯನಿಗೂ 10KG ಪಡಿತರವನ್ನು ಉಚಿತವಾಗಿ ಕೊಡುವುದಾಗಿ ಘೋಷಿಸಿತ್ತು.

ಆದರೆ ಈಗ ದಾಸ್ತಾನು ಕೊರತೆ ಉಂಟಾಗಿರುವುದರಿಂದ ಎಂದಿನಂತೆ ಕೇಂದ್ರ ಸರ್ಕಾರದ 5Kg ಅಕ್ಕಿಯೊಂದಿಗೆ ಉಳಿದ 5Kg ಅಕ್ಕಿ ಬದಲಿಗೆ ಪ್ರತಿ ಕೆಜಿಗೆ 34 ರೂಪಾಯಿಯಂತೆ ಕುಟುಂಬದ ಎಲ್ಲಾ ಸದಸ್ಯರ ಅಕ್ಕಿ ಹಣವನ್ನು ಆ ಕುಟುಂಬದ ಮುಖ್ಯಸ್ಥೆ ಖಾತೆಗೆ (HOF) DBT ಮೂಲಕ ವರ್ಗಾವಣೆ ಮಾಡುತ್ತಿದೆ.

ಈ ಸುದ್ದಿ ಓದಿ:- LPG ಗ್ರಾಹಕರಿಗೆ ಮತ್ತೊಂದು ಸಿಹಿಸುದ್ದಿ, ಸಿಲಿಂಡರ್ ಬೆಲೆ ಇಳಿಕೆ.!

ಹೀಗೆ ಯಶಸ್ವಿಯಾಗಿ ಇಲ್ಲಿಯವರೆಗೂ 10 ಕಂತುಗಳ ಅನ್ನಭಾಗ್ಯ ಯೋಜನೆ ಹಣವು ಅರ್ಹ ಫಲಾನುಭವಿಗಳ ಖಾತೆಗೆ ತಲುಪಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗೃಹಲಕ್ಷ್ಮಿ ಯೋಜನೆ ಹಣ ಪಡೆದಿರುವ ಮಹಿಳೆಯರ ಖಾತೆಗೆ ಅನ್ನ ಭಾಗ್ಯ ಯೋಜನೆ ಹಣವು ಕೂಡ ಸೇರುತ್ತಿದೆ ಮತ್ತು ಕುಟುಂಬದ ಮುಖ್ಯಸ್ಥ ಪುರುಷ ನಾಗಿರುವಂತಹ ಕುಟುಂಬಗಳಲ್ಲಿ ಮಾತ್ರ ಪುರುಷರ ಖಾತೆಗೆ ಅನ್ನ ಭಾಗ್ಯ ಯೋಜನೆ ಹಣವು ಜಮೆ ಆಗುತ್ತಿದೆ.

ಆದರೆ ಕಳೆದ ಎರಡು ತಿಂಗಳಿನಿಂದ ಅನ್ನ ಭಾಗ್ಯ ಯೋಜನೆ ಹಣ ಪಡೆಯುತ್ತಿದ್ದ ಅನೇಕರಿಗೆ ಈ ಹಣ ತಲುಪಿಲ್ಲ ಇದರಿಂದ ಎಲ್ಲರೂ ಗೊಂದಲಕ್ಕೊಳಗಾಗಿದ್ದಾರೆ. ಇವರಿಗೆಲ್ಲ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪರವರೇ ಸಮಜಾಯಿಸಿ ನೀಡಿದ್ದಾರೆ.

ಇತ್ತೀಚೆಗೆ ಮಾಧ್ಯಮ ಮಿತ್ರರೊಡನೆ ಮಾಹಿತಿ ಹಂಚಿಗೊಂಡ ಆಹಾರ ಸಚಿವರಾದ ಕೆ.ಎಚ್ ಮುನಿಯಪ್ಪ ರವರು ಕಳೆದ ಎರಡು ತಿಂಗಳಿಂದ ಅನ್ನ ಭಾಗ್ಯ ಯೋಜನೆ ಹಣ ತಲುಪಲು ಕೆಲವರಿಗೆ ಟೆಕ್ನಿಕಲ್ ಸಮಸ್ಯೆಗಳಾಗಿವೆ. ಮೇ 31ನೇ ತಾರೀಕು ಅಥವಾ ಜೂನ್ ತಿಂಗಳ ಮೊದಲ ವಾರದಲ್ಲಿ ಒಟ್ಟಿಗೆ ಹಣ ಜಮೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿ:- ತಿಂಗಳಿಗೆ 3 ಬಾರಿ ಜೇನುತುಪ್ಪ, ಒಂದು ಪೆಟ್ಟಿಗೆಯಲ್ಲಿ 15KG ಜೇನು, ಜೇನು ಸಾಕಾಣಿಕೆ ಮಾಡಿ ತಿಂಗಳಿಗೆ 4 ಲಕ್ಷ ಆದಾಯ ಗಳಿಸುತ್ತಿರುವ ಯುವಕ

ಮತ್ತು ಇದನ್ನು ಹೊರತುಪಡಿಸಿ ಇನ್ನು ಅನೇಕ ಕಾರಣಗಳಿಂದಾಗಿ ಯೋಜನೆ ಹಣ ಪಲಾನುಭವಿಗಳಿಗೆ ತಲುಪತ್ತಿಲ್ಲ ಅದಕ್ಕೆ ಕಾರಣಗಳು ಹೀಗಿದೆ ಅನ್ನ ಭಾಗ್ಯ ಯೋಜನೆ ಹಣ ಪಡೆಯಲಾಗದವರು ಈ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸೂಚಿಸಲಾಗಿದೆ.

* ಕಳೆದ ಹತ್ತು ವರ್ಷಗಳಿಂದ ಯಾರು ಒಮ್ಮೆ ಕೂಡ ಆಧಾರ್ ಅಪ್ಡೇಟ್ ಮಾಡಿರುವುದಿಲ್ಲ ಅಂತಹ ಫಲಾನುಭವಿಗಳು ಕೂಡಲೇ ತಮ್ಮ ಆಧಾರ್ ಅಪ್ಡೇಟ್ ಮಾಡಿಕೊಳ್ಳಬೇಕು ಮತ್ತು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕಿಂಗ್ NPCI ಮ್ಯಾಪಿಂಗ್ ಆಗಿದೆಯೇ ಎಂದು ಚೆಕ್ ಮಾಡಿಕೊಳ್ಳಬೇಕು.

* ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇದೆಯೇ ಎನ್ನುವುದನ್ನು ದೃಢಪಡಿಸಿಕೊಳ್ಳಬೇಕು
* ಪ್ರತಿ ತಿಂಗಳು ಆಹಾರ ಇಲಾಖೆ ಕಡೆಯಿಂದ ಅನರ್ಹ ರೇಷನ್ ಕಾರ್ಡ್ ಗಳು ರದ್ದಾಗುತ್ತವೆ ಅಥವಾ ತಾತ್ಕಾಲಿಕವಾಗಿ ತಡೆಹಿಡಿಯಲ್ಪಡುತ್ತದೆ. ಆ ಪಟ್ಟಿಯಲ್ಲಿ ನಿಮ್ಮ ರೇಷನ್ ಕಾರ್ಡ್ ಕೂಡ ಇದ್ದರೆ ಆ ತಿಂಗಳ ಅನ್ನಭಾಗ್ಯ ಹಣ ಬರುವುದಿಲ್ಲ. ಮಾಹಿತಿ ಕಣಜ ವೆಬ್ಸೈಟ್ ಮೂಲಕ ಅಥವಾ ಆಹಾರ ಇಲಾಖೆಯ ವೆಬ್ಸೈಟ್ ಮೂಲಕ ಇದನ್ನು ಪರಿಶೀಲಿಸಿಕೊಳ್ಳಬಹುದು.

* ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡನ್ನು ರೇಷನ್ ಕಾರ್ಡ್ ಗೆ ಲಿಂಕ್ ಮಾಡಿರಬೇಕು, ಇಲ್ಲವಾದಲ್ಲಿ ಅನ್ನಭಾಗ್ಯ ಯೋಜನೆ ಹಣ ಸಿಗುವುದಿಲ್ಲ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now