ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಕ್ಕೆ ಬಂದಾದ ಮೇಲೆ ಕರ್ನಾಟಕದಲ್ಲಿ ಸಾಕಷ್ಟು ಜನಪರ ಯೋಜನೆಗಳನ್ನು ಕೈಗೊಂಡಿದ್ದಾರೆ. ಎಲ್ಲಾ ವರ್ಗಗಳ ಅಭಿವೃದ್ಧಿಗೂ ಪಣ ತೊಟ್ಟಿರುವ ಇವರು ರೈತರು, ಮಹಿಳೆಯರು, ವಿದ್ಯಾರ್ಥಿಗಳು, ಶ್ರಮಿಕ ವರ್ಗ ಸೇರಿದಂತೆ ಎಲ್ಲರ ಸಲುವಾಗಿ ಮಹತ್ತರ ಯೋಜನೆಗಳನ್ನು ಕೈಗೊಂಡು ನೆರವಾಗಿದ್ದಾರೆ. ಈಗ ಹಸುವನ್ನು ದತ್ತು ತೆಗೆದುಕೊಳ್ಳುವವರಿಗಾಗಿ ಬೊಂಬಾಟ್ ಗಿಫ್ಟ್ ಕೂಡ ನೀಡಿದ್ದಾರೆ.
2021 ರಲ್ಲಿ ನಮ್ಮ ಸರ್ಕಾರವು ಗೋ ಸಂರಕ್ಷಣೆ ಕಾಯ್ದೆಯನ್ನು ಅಂಗೀಕರಿಸಿದೆ. ಅದರ ಅಂಗವಾಗಿ ಹಸುಗಳನ್ನು ದತ್ತು ತೆಗೆದುಕೊಳ್ಳುವವರಿಗೆ ಸರ್ಕಾರವು ಪುಣ್ಯಕೋಟಿ ದತ್ತು ಯೋಜನೆ ಎಂಬ ಯೋಜನೆಯನ್ನು ಜಾರಿಗೆ ತಂದು ಈಗ ಅದಕ್ಕೆ ಹೊಸ ಗಿಫ್ಟ್ ನೀಡುವ ಮೂಲಕ ಯುವಜನತೆ ಅದರತ್ತ ಆಕರ್ಷಿತವಾಗುವಂತೆ ಮತ್ತಷ್ಟು ಉತ್ತೇಜನ ನೀಡುತ್ತಿದೆ.
ಜಾನುವಾರುಗಳ ಹತ್ಯೆಗಳನ್ನು ತಡೆಗಟ್ಟಲು ಮತ್ತು ಅವುಗಳ ರಕ್ಷಣೆ ಮಾಡಲು ಪ್ರತಿ ಜಿಲ್ಲೆಗಳಲ್ಲಿ ಗೋಶಾಲೆ ಸ್ಥಾಪನೆ ಮಾಡಲು ನಿರ್ಧಾರ ಮಾಡಿದೆ. ಮೊದಲೆಲ್ಲಾ ಹಳ್ಳಿಗಳಲ್ಲಿ ಪ್ರತಿ ಮನೆಗಳ್ಳಲ್ಲೂ ಕೂಡ ಗೋಶಾಲೆ ಇರುತ್ತಿತ್ತು. ಈಗ ಪ್ರತಿ ಮನೆಯಲ್ಲಿ ಕನಿಷ್ಠ ಒಂದು ಹಸುವನ್ನಾದರೂ ಕಾಣುವುದು ಕಷ್ಟ ಆಗಿದೆ. ಇದರಿಂದ ಹಸುಗಳ ಸಾಂಪ್ರದಾಯಿಕ ತಳಿಗಳು ನಶಿಸಿ ಹೋಗುತ್ತವೆ ಮತ್ತು ಹಸು ಸಾಕಾಣಿಕೆ ತೊರೆದಿರುವ ರೈತ ಆರ್ಥಿಕ ಸಂಕಷ್ಟಕ್ಕೂ ಸಿಲುಕಿದ್ದಾನೆ.
ನಗರೀಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಮನೆಗಳನ್ನು ಕೂಡ ಹಸುಗಳನ್ನು ಸಾಕಲು ಮನಸಿದ್ದರೂ ಕೂಡ ಮನೆಯಲ್ಲಿ ಹಸುವನ್ನು ಸಾಕಲು ಬೇಕಾದ ವಾತಾವರಣ ಇಲ್ಲ. ಹಾಗಾಗಿ ಈ ಯೋಜನೆಯನ್ನು ಕೈಗೆತ್ತಿಕೊಂಡಿರುವ ಸರ್ಕಾರ ಗೋವುಗಳನ್ನು ರಕ್ಷಣೆ ಮಾಡುವ ನಿರ್ಧಾರಕ್ಕೆ ಬದ್ಧವಾಗಿದೆ. ಮತ್ತು ಸಾಧ್ಯವಾದಷ್ಟು ಸಾರ್ವಜನಿಕರು ಹಾಗೂ ಖಾಸಗಿ ವಲಯದವರು ಕೂಡ ಗೋ ಶಾಲೆಗಳಲ್ಲಿ ಇರುವ ಜಾನುವಾರುಗಳನ್ನು ಅಳವಡಿಸಿಕೊಳ್ಳುವಂತೆ ಮನವಿ ಸಹ ಮಾಡಿದೆ.
ಕರ್ನಾಟಕ ರಾಜ್ಯದಲ್ಲಿರುವವರು ಪುಣ್ಯಕೋಟಿ ದತ್ತು ಯೋಜನೆ ಕರ್ನಾಟಕ ಸರ್ಕಾರ ಈ ಯೋಜನೆಗೆ ಪಾಲುದಾರರಾಗುವ ಮೂಲಕ ಹಸುಗಳನ್ನು ದತ್ತು ಪಡೆದು ಕೊಳ್ಳಬಹುದಾಗಿದೆ. ಇಲ್ಲಿ ಹಸುಗಳನ್ನು ಆರು ತಿಂಗಳು ಅಥವಾ ವಾರ್ಷಿಕವಾಗಿ ನಿಮ್ಮ ಸಾಮರ್ಥ್ಯಾನುಸಾರ ದತ್ತು ಪಡೆದುಕೊಳ್ಳುವ ಸೌಲಭ್ಯ ಕೂಡ ಇದೆ. ಹಸುಗಳನ್ನು ದತ್ತು ನೀಡುವ ಉದ್ದೇಶದಿಂದಲೇ ಸ್ಥಾಪಿತವಾಗಿರುವ ಈ ಯೋಜನೆಯಲ್ಲಿ ಆಫ್ಲೈನ್ ಅಥವಾ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಹಸುಗಳನ್ನು ದತ್ತು ಪಡೆದುಕೊಳ್ಳಬಹುದು.
ಈ ರೀತಿ ದತ್ತು ಪಡೆದುಕೊಂಡವರಿಗೆ ಸರ್ಕಾರದಿಂದ ಗಿಫ್ಟ್ ಸಿಕ್ಕಿದೆ ಅದೇನೆಂದರೆ ಈ ರೀತಿ ದತ್ತು ಪಡೆದ ಹಸುಗಳು ಚರ್ಮ ಗಂಟು ರೋಗದಿಂದ ಮೃತಪಟ್ಟ ಪಕ್ಷದಲ್ಲಿ ಹಸುಗಳಿಗೆ 20,000ರೂ. ಹಾಗೂ ಎತ್ತುಗಳಿಗೆ ರೂ.30000ರೂ. ಪರಿಹಾರ ನಿಧಿಯನ್ನು ನೀಡುವುದಾಗಿ ಘೋಷಣೆ ಮಾಡಿದೆ. ಇದು ಸಹ ಯೋಜನೆಯ ಭಾಗ ಆಗಿದೆ. ಈ ಯೋಜನೆಯಲ್ಲಿ ಇನ್ನು ಅನೇಕ ಅನುಕೂಲತೆಗಳು ಕೂಡ ಇವೆ. ಮತ್ತು ಗೋವುಗಳ ಸಂರಕ್ಷಣೆಯೇ ಇದರ ಸದುದ್ದೇಶ ಆಗಿದೆ.
ಪುಣ್ಯಕೋಟಿ ಯೋಜನೆ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಟ್ಟರೆ ನೀವು ಅಲ್ಲಿ ಸಾಕುತ್ತಿರುವ ಹಸುಗಳಿಗೆ ನಿಮ್ಮ ಕೈಲಾದಷ್ಟು ಸಹಾಯಧನವನ್ನು ಕೂಡ ನೀಡಿ ಅಲ್ಲಿ ಅವುಗಳ ಪೋಷಣೆ ಮಾಡಲು ನೆರವಾಗಬಹುದು. ಅಥವಾ ಅವುಗಳ ವಿವರಗಳನ್ನು ಪುಣ್ಯಕೋಟಿ ವೆಬ್ಸೈಟ್ ಮೂಲಕ ಭೇಟಿ ಕೊಟ್ಟು ತಿಳಿದುಕೊಂಡು ನೀವು ಅದನ್ನು ದತ್ತು ಪಡೆದುಕೊಂಡು ಮನೆಗೆ ತರಬಹುದು. ಇನ್ನು ಅನೇಕ ವಿಶೇಷತೆಗಳು ಈ ಯೋಜನೆಗಳಿದ್ದು ಇದನ್ನೆಲ್ಲ ವಿವರವಾಗಿ ತಿಳಿದುಕೊಳ್ಳಲು ನೀವು ಇದರ ಅಧಿಕೃತ ವ್ಯಕ್ತಿಗೆ ಭೇಟಿ ನೀಡಿ.