ರಾಜ್ಯದಲ್ಲಿ ಹೊಸ ಟ್ರಾಫಿಕ್ ರೂಲ್ಸ್ ಜಾರಿ, ಜುಲೈ 1 ರಿಂದಲೇ ಅನ್ವಯ, ವಾಹನ ಚಾಲನೆ ಮಾಡುವ ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು.!

ಜನಸಾಮಾನ್ಯರ ದಿನನಿತ್ಯ ಸಮಸ್ಯೆಗಳಲ್ಲಿ ಪದೇಪದೇ ಸಂಚಾರ ನಿಯಮಗಳು ಬದಲಾಗುತ್ತಿವೆ ಮತ್ತು ಬಿಗಿಗೊಳ್ಳುತ್ತಿವೆ ಎನ್ನುವುದು ಒಂದು ದೂರು. ಈಗಾಗಲೇ ಕೇಂದ್ರ ಸರ್ಕಾರವು ಹಲವಾರು ಮೋಟಾರ್ ಕಾಯಿದೆ ನೀತಿಗಳನ್ನು ಜಾರಿಗೆ ತಂದು ಇದನ್ನು ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸುತ್ತಿದೆ. ಇದರೊಂದಿಗೆ ವಾಹನ ಚಾಲನೆ ಮಾಡುವವರಿಗೆ ಕೆಲ ಸಾಮಾನ್ಯ ನಿಯಮಗಳು ಇವೆ.

WhatsApp Group Join Now
Telegram Group Join Now

ಇವುಗಳ ಉಲ್ಲಂಘನೆ ಆದಲ್ಲಿ ಟ್ರಾಫಿಕ್ ಪೊಲೀಸ್ ದಂಡ ವಿಧಿಸುತ್ತಾರೆ. ಆಗಿದ್ದರೂ ಕೂಡ ಕೆಲವರು ಪ್ರತಿನಿತ್ಯ ಕೂಡ ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡುತ್ತಿರುತ್ತಾರೆ. ಅವುಗಳಲ್ಲಿ ಪ್ರಮುಖವಾದದ್ದು ತಮಗೆ ಕೊಟ್ಟಿರುವ ಡ್ರೈವಿಂಗ್ ಲೈಸೆನ್ಸ್ ಅನ್ನು ಮನೆಯಲ್ಲೇ ಬಿಟ್ಟು ವಾಹನ ತೆಗೆದುಕೊಡು ರಸ್ತೆಗೆ ಇಳಿಯುವುದು. ಇದು ಒಂದು ದಂಢಾರ್ಹ ಅಪರಾಧವಾಗಿದೆ.

ಯಾಕೆಂದರೆ ವಾಹನ ಚಾಲನೆ ಮಾಡುವವರು ತಮ್ಮ DL ಅನ್ನು ಜೊತೆಯಲ್ಲಿ ಇಟ್ಟುಕೊಂಡಿರಬೇಕು ಮತ್ತು ತಪಾಸಣೆ ಮೇಲೆ ಅದನ್ನು ತೋರಿಸಬೇಕು ಎನ್ನುವ ನಿಯಮ ಇದೆ ಅನೇಕರು ಎಷ್ಟು ಬಾರಿ ದಂಡ ಕಟ್ಟಿದ್ದರೂ ಕೂಡ ಸಾಮಾನ್ಯವಾಗಿ ಮರೆತು ಹೋಗುವ ಸಂಗತಿಯಾಗಿದೆ. ವಾಹನಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ವಾಹನಗಳ ಜೊತೆ ಇಟ್ಟುಕೊಳ್ಳುವುದು ಇದರ ಜೊತೆಗೆ ತಾವು ಚಾಲನೆ ಮಾಡುವುದಕ್ಕೆ ಪರೀಕ್ಷಾ ಪಾಸು ಮಾಡಿ ಪಡೆದ ಪರವಾನಗಿ ಅಂದರೆ ಡ್ರೈವಿಂಗ್ ಲೈಸೆನ್ಸ್ ಅನ್ನು ಜೊತೆಯಲ್ಲೇ ಇಟ್ಟುಕೊಳ್ಳಬೇಕಾದದ್ದು ಒಬ್ಬ ಚಾಲಕನ ಕರ್ತವ್ಯ.

18 ವರ್ಷ ತುಂಬುವುದಕ್ಕೂ ಮುನ್ನ ಈ ರೀತಿ ಸಾರ್ವಜನಿಕ ರಸ್ತೆಯಲ್ಲಿ ವಾಹನಗಳನ್ನು ಓಡಿಸುವಂತಿಲ್ಲ, 18 ವರ್ಷ ತುಂಬಿದ ಬಳಿಕವೂ ಕೂಡ ಮೊದಲಿಗೆ ಚಾಲನೆ ಕಲಿಕಾ ಪರವಾನಗಿ ಅಂದರೆ LL ಇದಾದ ಬಳಿಕ ಪರೀಕ್ಷೆ ಪಾಸ್ ಮಾಡಿ RTO ಅಧಿಕಾರಿಗಳಿಂದ ಪಡೆದ DL ಅನ್ನು ಪಡೆಯಬೇಕು. DL ಅನ್ನು ಹೊಂದಿ ವಾಹನಗಳನ್ನು ಚೆನ್ನಾಗಿ ಚಾಲನೆ ಮಾಡಲು ಕಲಿತ ಮೇಲೂ ಕೂಡ ಯಾವುದೇ ದ್ವಿಚಕ್ರ ವಾಹನ ಬಳಸುವಾಗ ಅಥವಾ ಮೋಟಾರು ವಾಹನ ಅಥವಾ ಕಾರು ಚಾಲನೆ ಮಾಡುವಾಗ ಅವುಗಳ ಚಾಲನೆಗೆ ಪಡೆದ ಪರವಾನಗಿಯನ್ನು ತಪ್ಪದೆ ಇಟ್ಟುಕೊಳ್ಳಬೇಕು ಅನ್ನುವುದು ಇಲ್ಲಿಯ ತನಕ ಇದ್ದ ನಿಯಮ ಆಗಿತ್ತು.

ಆದರೆ ಇನ್ನು ಮುಂದೆ ನೀವು ನಿಮ್ಮ ಬಳಿ DL ಇಟ್ಟುಕೊಳ್ಳದೆ ವಾಹನ ಚಾಲನೆ ಮಾಡಬಹುದು, ಅದಕ್ಕೆ ಪರ್ಮಿಷನ್ ಸಿಕ್ಕಿದೆ. ಇನ್ನು ಮುಂದೆ ನಿಮ್ಮನ್ನು ಯಾರು DL ಮೂಲ ಪ್ರತಿ ಕೇಳುವುದಿಲ್ಲ. ಟ್ರಾಫಿಕ್ ಪೊಲೀಸ್ ತಡೆದರೂ ಕೂಡ DL ಮೂಲ ಪ್ರತಿ ಪರಿಶೀಲನೆಗಾಗಿ ಕೇಳುವುದಿಲ್ಲ,, ಆದರೆ ಆ ಸಮಯದಲ್ಲಿ ಅವರಿಗೆ ನೀವು ಚಾಲನಪರವಾಗಿ ಪಡೆದಿದ್ದೀರ ಎಂದು ಸಾಬೀತುಪಡಿಸುವುದಕ್ಕೆ ಮತ್ತೊಂದು ವ್ಯವಸ್ಥೆಯನ್ನು ಹೊಂದಿರಬೇಕು.

ಈ ವಿಷಯ ಬಹಳ ಗೊಂದಲ ಎನಿಸಬಹುದು ಆದರೆ ಇದನ್ನು ಪೂರ್ತಿ ಓದಿದರೆ ನಿಮಗೆ ಸರಿಯಾದ ಮಾಹಿತಿ ತಿಳಿಯುತ್ತದೆ. ಭಾರತವನ್ನು ಡಿಜಿಟಲ್ ಇಂಡಿಯಾ ಮಾಡುವ ಉದ್ದೇಶದಿಂದ ಇಂತಹ ಒಂದು ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆ. ಈಗಾಗಲೇ ವರ್ಷಗಳ ಹಿಂದಿಯೇ ಡಿಜಿಟಲ್ ಲಾಕರ್ ಎನ್ನುವ ಆಪ್ ಅನ್ನು ಬಿಡುಗಡೆ ಮಾಡಿತ್ತು.

ಈ ಆಪ್ ಅಲ್ಲಿ ಒಬ್ಬ ನಾಗರಿಕನು ತನಗೆ ಅತ್ಯಗತವಾಗಿ ಬೇಕಾಗಿರುವ ಎಲ್ಲಾ ದಾಖಲೆಗಳ ಸಾಫ್ಟ್ ಕಾಪಿಯನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದು. ಅವಶ್ಯಕತೆ ಬಂದಾಗ ಅದನ್ನು ಡಿಜಿಟಲ್ ಲಾಕರ್ ಆಪ್ ಅಲ್ಲಿಯೇ ತೋರಿಸಬಹುದು. ಈ ರೀತಿ ಡಿಜಿಟಲ್ ಲಾಕರ್ ಅಲ್ಲಿ ಹೊಂದಿರುವ ಸಾಫ್ಟ್ ಕಾಪಿಗಳು ಎಲ್ಲಾ ಕಡೆ ಮಾನ್ಯವಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಇದರಿಂದ ಇನ್ನು ಮುಂದೆ ನೀವು ನಿಮ್ಮ ಡ್ರೈವಿಂಗ್ ಲೈಸೆನ್ಸ್ ಸಾಫ್ಟ್ ಕಾಪಿಯನ್ನು ಈ ಡಿಜಿಟಲ್ ಲಾಕರ್ ಅಲ್ಲಿ ಇಟ್ಟುಕೊಂಡರೆ ನಿಮ್ಮನ್ನು ಪೊಲೀಸರು ತಪಾಸಣೆ ಮಾಡುವ ವೇಳೆ ಅದನ್ನೇ ತೋರಿಸಿ ಮುಂದೆ ಹೋಗಬಹುದು. ನೀವು ಡ್ರೈವಿಂಗ್ ಲೈಸೆನ್ಸ್ ಅನ್ನು ಮನೆಯಲ್ಲೇ ಇಟ್ಟು ಬಂದಿದ್ದರು ಕೂಡ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಜುಲೈ 1 ರಿಂದಲೇ ಈ ನಿಯಮ ಜಾರಿಗೆ ಬರುವ ಸಾಧ್ಯತೆ ಇದ್ದು ಸರ್ಕಾರದಿಂದಲೇ ಅಧಿಕೃತವಾಗಿ ಘೋಷಣೆ ಆಗಲಿದೆ.

 

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now