ಗೃಹಲಕ್ಷ್ಮಿ ಯೋಜನೆಯು (Gruhalakshmi Scheme) ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಯಲ್ಲಿ ಒಂದಾಗಿ ಜುಲೈ 19 ರಿಂದ ರಾಜ್ಯದಲ್ಲಿ ಚಾಲ್ತಿಯಲ್ಲಿದೆ. ಜುಲೈ 19 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿರುವ ರೇಷನ್ ಕಾರ್ಡ್ ಹೊಂದಿ, ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಯರು ಪ್ರತಿ ತಿಂಗಳು ಸರ್ಕಾರದಿಂದ ರೂ.2000 ಸಹಾಯಧನವನ್ನು ಪಡೆಯುತ್ತಿದ್ದಾರೆ.
30 ಆಗಸ್ಟ್ 2023 ರಂದು ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣ ಬಿಡುಗಡೆಯಾಗಿದೆ. ಆ ಪ್ರಕಾರವಾಗಿ ಇಲ್ಲಿನವರಿಗೆ ಒಟ್ಟು 3 ಕಂತಿನ ಹಣ ಬಿಡುಗಡೆ ಆಗಿದ್ದು ಈಗ ನಾಲ್ಕನೇ ಕಂತಿನ ಹಣದ ನಿರೀಕ್ಷೆ ಹೆಚ್ಚಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (KWCWD) ನೀಡಿರುವ ಮಾಹಿತಿಯ ಪ್ರಕಾರ 1.17 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ.
ಆದರೆ ಇದರಲ್ಲಿ 5-6 ಲಕ್ಷ ಮಹಿಳೆಯರ ಖಾತೆಗೆ dbt ಮೂಲಕ ಹಣ ವರ್ಗಾವಣೆ ಮಾಡಲು ತಾಂತ್ರಿಕ ಸಮಸ್ಯೆಗಳು (technical issues) ಎದುರಾಗಿವೆ. ಇದಕ್ಕೆ ಕಳೆದ ತಿಂಗಳು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು (CM Siddaramaih)ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಗೃಹಲಕ್ಷ್ಮಿ ಪ್ರಗತಿ ಪರಿಶೀಲರ ಸಭೆಯಲ್ಲಿ (Gruhalakshmi Pragathi Parisheelana Sabhe) ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಅದಾಲತ್ ಕ್ಯಾಂಪ್ (Gruhalakshmi Camp) ನಡೆಸಿ ಸಮಸ್ಯೆ ಪರಿಹಾರ ಪರಿಹರಿಸಬೇಕು ಎಂದು ಸೂಚನೆ ಕೊಟ್ಟಿದ್ದರು.
ಆ ಪ್ರಕಾರವಾಗಿ ಡಿಸೆಂಬರ್ 27ರಿಂದ 30ರವರೆಗೆ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಗೃಹಲಕ್ಷ್ಮಿ ಕ್ಯಾಂಪ್ನಲ್ಲಿ ಹಣ ಪಡೆಯಲು ಸಮಸ್ಯೆಯಾಗಿದ್ದ ಮಹಿಳೆಯರು ಭಾಗವಹಿಸಿ ತಮ್ಮ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ. ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗದೆ ಇರುವುದು, ಬ್ಯಾಂಕ್ ಖಾತೆ ಆಕ್ಟಿವ್ ಇಲ್ಲದೆ ಇರುವುದು, e-KYC ಇನ್ನಿತರ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಿರುವುದರಿಂದ ಈಗ ನಾಲ್ಕನೇ ಕಂತಿನ ಹಣ ಬಿಡುಗಡೆಗೆ ಸರ್ಕಾರ ಸಿದ್ಧವಾಗಿದೆ.
ಇತ್ತೀಚಿಗೆ ಸಿಕ್ಕಿರುವ ಬಲವಾದ ಮೂಲಗಳ ಮಾಹಿತಿಯ ಪ್ರಕಾರ ಜನವರಿ 12ನೇ ತಾರೀಖಿನೊಳಗೆ ಮೊದಲ ಹಂತದಲ್ಲಿ ರಾಜ್ಯದ ಈ ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣ ವರ್ಗಾವಣೆ ಆಗುತ್ತಿದೆ.
* ಕಲ್ಬುರ್ಗಿ
* ಮೈಸೂರು
* ಗದಗ
* ರಾಯಚೂರು
* ಉತ್ತರ ಕನ್ನಡ
* ದಾವಣಗೆರೆ
* ವಿಜಯಪುರ
* ಧಾರವಾಡ
* ಬಾಗಲಕೋಟೆ
* ಚಿತ್ರದುರ್ಗ
* ಬೆಂಗಳೂರು
* ಮಂಡ್ಯ
* ಬೆಳಗಾವಿ
ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗಳಿಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಿದರೆ ಹಣ ವರ್ಗಾವಣೆ ಯಾಗಿರುವ ಕುರಿತು ಬ್ಯಾಂಕ್ ನಿಂದ SMS ಸಂದೇಶವನ್ನು ಪಡೆಯುತ್ತಾರೆ. ಕೆಲವೊಮ್ಮೆ ಸರ್ಕಾರದ ವತಿಯಿಂದಲೂ ಕೂಡ SMS ಬಂದಿರುತ್ತದೆ.
ಸರ್ವರ್ ಒತ್ತಡದಿಂದಾಗಿ SMS ಸರಿಯಾದ ಸಮಯಕ್ಕೆ ತಲುಪದೆ ಇದ್ದಲ್ಲಿ ಫಲಾನುಭವಿಗಳು ತಮ್ಮ ಬ್ಯಾಂಕ್ ಶಾಖೆಗೆ ಬೇಟಿಕೊಟ್ಟು ಪಾಸ್ ಬುಕ್ ಚೆಕ್ ಮಾಡಿಸಬೇಕಾಗುತ್ತದೆ. ಆದರೆ ಬಹುತೇಕರು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾಗ ಯಾವ ಖಾತೆಗೆ ಹಣ ವರ್ಗಾವಣೆ ಆಗಿದೆ ಎನ್ನುವುದು ಗೊಂದಲವಾಗುತ್ತದೆ. ಇದಕ್ಕೆಲ್ಲ ಸರ್ಕಾರದ ಕಡೆಯಿಂದಲೇ ಪರಿಹಾರ ಇದೆ.
ಅದೇನೆಂದರೆ, ಕರ್ನಾಟಕ ಸರ್ಕಾರ ಅಭಿವೃದ್ಧಿಪಡಿಸಿರುವ ಡಿಬಿಟಿ ಕರ್ನಾಟಕ ಆಪ್ (DBT Karnataka app) ಡೌನ್ಲೋಡ್ ಮಾಡಿಕೊಂಡು ಮೊಬೈಲ್ ನಲ್ಲಿಯೇ ನಿಮ್ಮ ಆಧಾರ್ ಕಾರ್ಡ್ ಮಾಹಿತಿ ನೀಡುವ ಮೂಲಕ ನಾಲ್ಕನೇ ಕಂತಿನ ಹಣವು ಕೊಡ ವರ್ಗಾವಣೆ ಆಗಿದೆಯೇ ಎನ್ನುವುದನ್ನು ಆಪ್ ನಲ್ಲಿಯೇ ನೋಡಿ ತಿಳಿದುಕೊಳ್ಳಬಹುದು.
ಗೃಹಲಕ್ಷ್ಮಿ ಯೋಜನೆ ಹಣ ಮಾತ್ರ ಅಲ್ಲದೆ ಅನ್ನಭಾಗ್ಯ ಯೋಜನೆ ಹಣ ಅಥವಾ ಸರ್ಕಾರದಿಂದ ಮಂಜೂರಾಗಿರುವ ವಿದ್ಯಾರ್ಥಿ ವೇತನಗಳು, ವಸತಿ ಯೋಜನೆಗಳ ಸಹಾಯಧನ ಮತ್ತು ಇನ್ಯಾವುದೇ ಕಲ್ಯಾಣ ಯೋಜನೆಗಳ ಪ್ರೋತ್ಸಾಹ ಧನ ವರ್ಗಾವಣೆ ಆಗಿದ್ದರು ಅದರ ಸಂಪೂರ್ಣ ವಿವರ ಕೂಡ ಇರುತ್ತದೆ, ಇದನ್ನು ಪರಿಶೀಲನೆ ಮಾಡಿ ತಿಳಿದುಕೊಳ್ಳಬಹುದು.