ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಉದ್ಯೋಗ ಮಹಾನ್ ನಿರ್ದೇಶನಾಲಯ, ನವದೆಹಲಿ ಕಡೆಯಿಂದ ದೇಶದಾದ್ಯಂತ ಇರುವ ಎಲ್ಲಾ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ ಯುವತಿಯರಿಗೆ ನಿಗಮದ ಕಡೆಯಿಂದ ಒಂದು ಬಿಗ್ ಅಪ್ಡೇಟ್ ಇದೆ.
ರಾಜ್ಯಾದಾದ್ಯಂತ ಇರುವ ಸಾವಿರಾರು ನಿರುದ್ಯೋಗಿ ಯುವ ಜನಾಂಗಕ್ಕೆ ಉದ್ಯೋಗದ ಭರವಸೆ ನೀಡಿ ಅವರ ಕುಟುಂಬಕ್ಕೆ ನೆರವಾಗುವಂತಹ ಕಾರ್ಯಕಾರ ಇದಾಗಿದ್ದು ಇದಕ್ಕಾಗಿ ಒಂದು ವಿಶೇಷವಾದ ಪತ್ರಿಕ ಪ್ರಕಟಣೆ ಹೊರಡಿಸಲಾಗಿದೆ.
ಈ ಸುದ್ದಿ ಓದಿ:- 2024-25 ನೇ ಸಾಲಿನ ಮುಂಗಾರು ಬೆಳೆಗೆ ವಿಮೆ ಅರ್ಜಿ ಸಲ್ಲಿಕೆ ಪ್ರಾರಂಭ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!
ಇದರಲ್ಲಿರುವ ಪ್ರಮುಖ ಅಂಶಗಳು ಏನು ಇದರ ಮೂಲಕ ಯುವ ಜನತೆಗೆ ಪ್ರಯೋಜನವೇನು? ಇತ್ಯಾದಿ ಮಾಹಿತಿ ತಿಳಿದುಕೊಳ್ಳಲು ಅಂಕಣವನ್ನು ಕೊನೆಯವರೆಗೂ ಓದಿ ಮತ್ತು ತಪ್ಪದೇ ಈ ಉದ್ಯೋಗ ಮಾಹಿತಿ ಬಗ್ಗೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ವಿಷಯ ಹಂಚಿಕೊಳ್ಳಿ.
ಬೆಂಗಳೂರಿನಲ್ಲಿ ಇರುವಂತಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ರಾಷ್ಟ್ರೀಯ ವೃತ್ತಿ ಸೇವಾ ಕೇಂದ್ರ, ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ಆವರಣ, ಕೌಶಲ್ಯ ಭವನ ಹಿಂಭಾಗ, ಡೈರಿ ಸರ್ಕಲ್ ಬೆಂಗಳೂರು – 560029 ಕಚೇರಿಯಲ್ಲಿ ಭಾರತ ಸರ್ಕಾರದ ಕಾರ್ಮಿಕ ಹಾಗೂ ಉದ್ಯೋಗ ಮಂತ್ರಾಲಯವು.
SC / ST ವರ್ಗಕ್ಕೆ ಸೇರಿದ ನಿರುದ್ಯೋಗ ಯುವಕ / ಯುವತಿಯರಿಗೆ ಬೆಂಗಳೂರಿನಲ್ಲಿರುವ ನೋಂದಾಯಿತ ಶೈಕ್ಷಣಿಕ ಸಂಸ್ಥೆಗಳ ಮೂಲಕ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಒಂದು ವರ್ಷದ ಅವಧಿಗೆ ವಿಶೇಷ ಕೌಶಲ್ಯ ತರಬೇತಿ ಅವಕಾಶ ಕಲ್ಪಿಸಿಕೊಡಲು ನಿರ್ಧರಿಸಿದೆ ಈ ಬಗ್ಗೆ ಆಸಕ್ತಿರಾದಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದಾಗಿದೆ.
ಈ ಸುದ್ದಿ ಓದಿ:- Canara Bank: ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಸಿಹಿ ಸುದ್ದಿ.!
ಒಟ್ಟು ಆರು ಬಗೆಯ ತರಬೇತಿಗಳು ನಡೆಯಲಿದ್ದು. ಸರಿಯಾದ ಹಾಜರಾತಿಯೊಂದಿಗೆ ಆಸಕ್ತಿಯಿಂದ ಕಲಿಯುವಂತಹ ಅಭ್ಯರ್ಥಿಗಳಿಗೆ ತರಬೇತಿ ಬಗ್ಗೆ ಸಿಗುವುದರೊಂದಿಗೆ ಉದ್ಯೋಗ ಭರವಸೆ ಕೂಡ ದೊರೆಯುತ್ತದೆ. ತರಬೇತಿ ಮತ್ತು ಇವುಗಳಿಗೆ ಅರ್ಜಿ ಸಲ್ಲಿಸುವ ವಿಧಾನದ ವಿವರ ಹೀಗಿದೆ.
ಕಲಿಸಲಾಗುವ ಕೋರ್ಸ್ ಗಳು:-
* ಒಟ್ಟು ಆರು ಬಗೆಯ ತರಬೇತಿಗಳಿವೆ
1. ವಿಶೇಷ ತರಬೇತಿ ಯೋಜನೆ
2. ಓ ಲೆವೆಲ್ ಕಂಪ್ಯೂಟರ್ ತರಬೇತಿ
3. ಓ ಲೆವೆಲ್ ಕಂಪ್ಯೂಟರ್ CHM
4. ಆಫೀಸ್ ಆಟೋಮೋಷನ್ ಅಕೌಂಟಿಂಗ್ ಮತ್ತು ಪಬ್ಲಿಷಿಂಗ್ ಅಸಿಸ್ಟೆಂಟ್
5. ಕಂಪ್ಯೂಟರ್ ಅಪ್ಲಿಕೇಶನ್ಸ್ ಮತ್ತು ಬಿಸಿನೆಸ್ ಅಕೌಂಟಿಂಗ್ ಅಸೋಸಿಯೇಟ್
6. ಸೈಬರ್ ಸೆಕ್ಯೂರ್ಡ್ ವೆಬ್ ಡೆವಲಪ್ಮೆಂಟ್ ಅಸೋಸಿಯೇಟ್
ಅರ್ಹತೆಗಳು:-
* 18 ವರ್ಷ ಮೇಲ್ಪಟ್ಟ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಯುವಕ / ಯುವತಿಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
* ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ದ್ವಿತೀಯ PUC ಉತ್ತೀರ್ಣರಾಗಿರಬೇಕು
* ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು ಸಲ್ಲಿಸಲು ಜೂನ್ 10 2024 ಕಡೆ ದಿನ. ನಂತರ ಬಂದ ಅರ್ಜಿಗಳು ತಿರಸ್ಕೃತವಾಗುತ್ತವೆ.
ಅರ್ಜಿ ಸಲ್ಲಿಸುವ ವಿಧಾನ:-
* ಅರ್ಜಿ ಫಾರಂ ಗಳನ್ನು ಈ ಮೇಲೆ ತಿಳಿಸಿದ ಕಚೇರಿಯ ಕಚೇರಿ ಸಮಯದಲ್ಲಿ ಬಂದು ಪಡೆದುಕೊಳ್ಳಬಹುದು
* ತುಂಬಿದ ಅರ್ಜಿ ನಮೂನೆಗಳನ್ನು ತಿಳಿಸಲಾದ ಕಡೆ ದಿನಾಂಕದೊಳಗೆ ಕಚೇರಿಗೆ ತಲುಪುವಂತೆ ಅಂಚೆ ಮೂಲಕ ಅಥವಾ ಖುದ್ದಾಗಿ ಬಂದು ಸಲ್ಲಿಸಬಹುದು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
ಉಪ ಪ್ರಾದೇಶಿಕ ಉದ್ಯೋಗಾಧಿಕಾರಿಗಳು,
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ರಾಷ್ಟ್ರೀಯ ವೃತ್ತಿ ಸೇವಾ ಕೇಂದ್ರ,
ಡೈರಿ ಸರ್ಕಲ್,
ಬೆಂಗಳೂರು – 560029.
080-29756192, 09916188914, 7027923924.