ಕಾಂಗ್ರೆಸ್ ಸರ್ಕಾರವು ಘೋಷಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ (Gyarantee) ಗೃಹಲಕ್ಷ್ಮಿ ಯೋಜನೆಯು (Gruhalakshmi) ಹೈ ಬಜೆಟ್ ಯೋಜನೆ ಆಗಿದೆ. ಪಡಿತರ ಚೀಟಿ ಹೊಂದಿರುವ ಮತ್ತು ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಇರುವ ಮಹಿಳೆಗೆ ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ 2,000ರೂ. ಸಹಾಯಧನವನ್ನು ಸರ್ಕಾರದ ವತಿಯಿಂದ ನೀಡಲಾಗುತ್ತಿದೆ.
ಈ ಹಣವು ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ DBT ಮೂಲಕ ವರಾಖಾವಣೆಯಾಗುತ್ತಿದೆ. ಕಳೆದ ಜುಲೈ ತಿಂಗಳಲ್ಲಿನಿಂದಲೂ ಗೃಹಲಕ್ಷ್ಮಿ ಯೋಜನೆಗೆ ಅರ್ಹರಿಂದ ಅರ್ಜಿ ಸ್ವೀಕರಿಸಲಾಗುತ್ತಿದ್ದು, ಆಗಸ್ಟ್ 30ರಂದು ಮೊದಲನೇ ಕಂತಿನ ಹಣ ಮತ್ತು ಸೆಪ್ಟೆಂಬರ್ ತಿಂಗಳ ಎರಡನೇ ಕಂತಿನ ಹಣವು ಕೂಡ ವರ್ಗಾವಣೆ ಆಗಿದೆ.
ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಎಂದರೆ ಅಥವಾ ಮೊದಲನೇ ಕಂತಿನ ಹಣ ಬಂದಿದ್ದು ಎರಡನೇ ಕಂತಿನ ಹಣ ಬಂದಿಲ್ಲ ಎಂದರೆ ಆಹಾರ ಇಲಾಖೆಯ (food and civil supply department website) ಬಿಡುಗಡೆ ಮಾಡುವ ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯೇ ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕು.
ಆಹಾರ ಇಲಾಖೆಯ ಈ ಪಟ್ಟಿಯಲ್ಲಿ ಇರುವ ಫಲಾನುಭವಿಗಳಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಆಗುವುದರಿಂದ ನೀವು ಕೂಡ ನಿಮ್ಮ ಹೆಸರು ಈ ಲಿಸ್ಟ್ ನಲ್ಲಿ ಇದೆಯೇ ಇಲ್ಲವೇ ಎಂದು ಒಮ್ಮೆ ಚೆಕ್ ಮಾಡಿ ನೋಡಿ, ಅದಕ್ಕಾಗಿ ಈಗ ನಾವು ಹೇಳುವ ಈ ಹಂತಗಳನ್ನು ಪಾಲಿಸಿ.
● ಮೊದಲಿಗೆ ಗೂಗಲ್ ಗೆ ಹೋಗಿ ಆಹಾರ ಎಂದು ಟೈಪ್ ಮಾಡಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ ಲಿಂಕ್ ಸಿಗುತ್ತದೆ ಅದನ್ನು ಕ್ಲಿಕ್ ಮಾಡಿ
● ಪೇಜ್ ಎಡಭಾಗದಲ್ಲಿ ವಿಭಾಗಗಳು ಎಂದು ಕಾಣಿಸುತ್ತದೆ ಅದರಲ್ಲಿ ಇ-ರೇಷನ್ ಕಾರ್ಡ್ (e-ration card) ಎನ್ನುವುದನ್ನು ಕ್ಲಿಕ್ ಮಾಡಿ, ನಂತರ ಗ್ರಾಮ ಪಟ್ಟಿಯನ್ನು ತೋರಿಸು (show village list) ಎನ್ನುವ ಆಪ್ಷನ್ ಸೆಲೆಕ್ಟ್ ಮಾಡಬೇಕು.
● ಸ್ಕ್ರೀನ್ ಮೇಲೆ ವಿಲೇಜ್ ಲಿಸ್ಟ್ ಎನ್ನುವ ಫಾರ್ಮ್ ಕಾಣುತ್ತದೆ. ಅದರಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಎಲ್ಲವನ್ನು ಸರಿಯಾಗಿ ಸೆಲೆಕ್ಟ್ ಮಾಡಿ Go ಎನ್ನುವುದರ ಮೇಲೆ ಕ್ಲಿಕ್ ಮಾಡಿ.
● ಈ ರೀತಿ ಕ್ಲಿಕ್ ಮಾಡಿದ ತಕ್ಷಣವೇ ಸೆಲೆಕ್ಟ್ ಮಾಡಿರುವ ಗ್ರಾಮ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ರೇಷನ್ ಕಾರ್ಡ್ ಗಳ ಪಟ್ಟಿ ಸಿಗುತ್ತದೆ. ಅದರಲ್ಲಿ ರೇಷನ್ ಕಾರ್ಡ್ ಸಂಖ್ಯೆ, ಮುಖ್ಯಸ್ಥರ ಹೆಸರು, ವಿಳಾಸ ಮತ್ತು ಯಾವ ಬಗೆಯ ರೇಷನ್ ಕಾರ್ಡ್ ಹಾಗೂ ಒಟ್ಟು ಸದಸ್ಯರ ಸಂಖ್ಯೆ ವಿವರ ಸಮೇತ ಇರುತ್ತದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಖಂಡಿತವಾಗಿಯೂ ಆ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಬರುತ್ತದೆ ಎಂದರ್ಥ.
ಗೃಹಲಕ್ಷ್ಮಿ ಹಣವನ್ನು ರೇಷನ್ ಕಾರ್ಡ್ (ration card) ಆಧಾರದ ಮೇಲೆ ನೀಡಲಾಗುತ್ತಿತ್ತು. ಗೃಹಲಕ್ಷ್ಮಿ ಯೋಜನೆಯ ಸಹಾಯಧನ ಪಡೆಯಲು ರೇಷನ್ ಕಾರ್ಡ್ ಸಕ್ರಿಯವಾಗಿರುವುದು ಬಹಳ ಮುಖ್ಯ. ಪ್ರತಿ ತಿಂಗಳು ಕೂಡ ರೇಷನ್ ಕಾರ್ಡ್ ತಿದ್ದುಪಡಿಗಳು ಆಗುತ್ತಿರುತ್ತವೆ ಮತ್ತು ಆಹಾರ ಇಲಾಖೆಯಿಂದ ಕೂಡ ರೇಷನ್ ಕಾರ್ಡ್ ಗಳ ಪರಿಶೀಲನೆ ನಡೆಯುತ್ತಿರುವುದರಿಂದ ಕೆಲವೊಮ್ಮೆ ಕೆಲವು ಕಾರಣಗಳಿಂದ ರೇಷನ್ ಕಾರ್ಡ್ ಗಳು ಸ್ಥಗಿತಗೊಂಡಿರಬಹುದು (ration card Cancel). ಮ
ಆಗ ನಿಮಗೆ ರೇಷನ್ ಕಾರ್ಡ್ ಆಧಾರಿತ ಯಾವುದೇ ಅನುದಾನಗಳು ಸಿಗುವುದಿಲ್ಲ. ಹಾಗಾಗಿ ನಿಮಗೆ ಇನ್ನೂ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಎಂದರೆ ಒಂದು ಬಾರಿ ಈಗ ನಾವು ಹೇಳಿದ ಈ ವಿಧಾನದ ಮೂಲಕ ನಿಮ್ಮ ರೇಷನ್ ಕಾರ್ಡ್ ಲಿಸ್ಟ್ ಚೆಕ್ ಮಾಡಿ ನೋಡಿ ಒಂದು ವೇಳೆ ಬಂದ್ ಆಗಿದ್ದರೆ ಯಾವ ಸಮಸ್ಯೆಯಿಂದ ಆಗಿದೆ ಎನ್ನುವುದನ್ನು ತಿಳಿದುಕೊಂಡು ಅದನ್ನು ತಿದ್ದುಪಡಿ ಮಾಡಿಸಿಕೊಳ್ಳಿ ನಂತರ ಮುಂದಿನ ತಿಂಗಳು ಸಹ ಈ ಪಟ್ಟಿ ಪರಿಶೀಲನೆ ಮಾಡಿ ನಿಮ್ಮ ಹೆಸರಿದ್ದರೆ ನಿಮಗೆ ಸಹಾಯಧನ ಬರುತ್ತದೆ.