ದಿನೇ ದಿನೇ ಸೈಬರ್ ಕ್ರೈಂನಲ್ಲಿ ದಾಖಲಾಗುತ್ತಿರುವ ದೂರುಗಳ ಸಂಖ್ಯೆ ಹೆಚ್ಚಾಗುತ್ತದೆ ಮತ್ತು ಇವುಗಳ ಪೈಕಿ ಆರ್ಥಿಕ ವಂಚನೆ ಕಾರಣದಿಂದಾಗಲೇ ಹೆಚ್ಚಿನ ದೂರಗಳು ಇವೆ ಎನ್ನುವುದು ಗಮನಾರ್ಹ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಒಂದು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಇಲಾಖೆಗಳ ತನಿಖಾ ಸಂಸ್ಥೆಗಳು ಮೊಬೈಲ್ ಸಂಖ್ಯೆಗಳ ಮೂಲಕವೇ ಈ ರೀತಿಯ ವಂಚನೆ ಪ್ರಕರಣಗಳು ಅತಿ ಹೆಚ್ಚಾಗಿ ನಡೆಯುತ್ತಿರುವುದು ಎನ್ನುವುದನ್ನು ಪತ್ತೆ ಹಚ್ಚಿದೆ.
ಈ ಅಂಕಿ ಅಂಶಗಳ ಪ್ರಕಾರವಾಗಿ 2023ನೇ ವರ್ಷದಲ್ಲಿಯೇ ಸೈಬರ್ ವಂಚನೆಯ ಮೂಲಕ 10,319 ಕೋಟಿ ಹಣ ನಷ್ಟವಾಗಿದೆ, ಒಟ್ಟು ಸೈಬರ್ ವಂಚನೆಯ ಕುರಿತು ದಾಖಲಾಗಿರುವ ದೂರುಗಳ ಸಂಖ್ಯೆ 6.94 ಲಕ್ಷದಷ್ಟು ಇದೆ. DoT ಅಧಿಕಾರಿಗಳು ಈ ಪ್ರಕರಣದ ಬೆನ್ನತ್ತಿ ಅಪರಾಧಿಗಳನ್ನು ಪತ್ತೆಹಚ್ಚಲು ಪ್ರಯತ್ನಪಟ್ಟಿದೆಯಾದರೂ ಅಷ್ಟೇ ಜಾಗರೂಕತೆಯಿಂದ ಅವರು ತಪ್ಪಿಸಿಕೊಳ್ಳುತ್ತಿದ್ದಾರೆ.
ಈ ಸುದ್ದಿ ಓದಿ:- ಭಾರತೀಯ ವಾಯುಪಡೆಯಲ್ಲಿ ನೇಮಕಾತಿ, 304 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ, ವೇತನ 1,77,500.!
ತನಿಖಾ ಸಂಸ್ಥೆಗಳ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಪದೇಪದೇ ಮೊಬೈಲ್ ಸಂಖ್ಯೆಗಳನ್ನು ಬದಲಾಯಿಸುವುದು ಹ್ಯಾಂಡ್ಸೆಟ್ ಬದಲಾಯಿಸುವುದು ಮತ್ತು ದೆಹಲಿ NCR ನಲ್ಲಿ ಜಾರ್ಖಾಂಡ್ ಮತ್ತು ಪಶ್ಚಿಮ ಬಂಗಾಳದ ಸಿಮ್ ಕಾರ್ಡ್ ಬಳಸಿ ರೇಡರ್ ಅಡಿಯಲ್ಲಿ ಗೋಚರವಾಗದಂತೆ ಇನ್ವೆಸ್ಟಿಕೇಶನ್ ಟ್ರಾಕ್ ನಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.
ತಾವು ಬಳಸುವ ಮೊಬೈಲ್ ಮೂಲಕ ಒಂದೇ ಒಂದು ಔಟ್ ಗೋಯಿಂಗ್ ಕಾಲ್ ಮಾಡಿ ನಂತರ ಹ್ಯಾಡ್ ಸೆಟ್ ಮತ್ತು ಸಿಮ್ ಗಳನ್ನು ಬಿಸಾಡುವುದರಿಂದ ಅಪರಾಧಿಗಳ ಪತ್ತೆ ಹಚ್ಚುವುದು ತನಿಖಾ ಸಂಸ್ಥೆಗಳಿಗೆ ಕೂಡ ಸವಾಲಿನ ಕೆಲಸವಾಗಿದೆ. ಹಾಗಾಗಿ ಕೇಂದ್ರ ಸರ್ಕಾರವೇ ಈ ನಿಟ್ಟಿನಲ್ಲಿ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ.
ಮುಂದಿನ 15 ದಿನಗಳಲ್ಲಿ ಸುಮಾರು 18 ಲಕ್ಷ ಸಿಮ್ ಕಾರ್ಡ್ ಗಳು ಮತ್ತು ಸಿಮ್ ಕಾರ್ಡ್ ಗಳನ್ನು ಬಳಸುತ್ತಿರುವ ಮೊಬೈಲ್ ಹ್ಯಾಂಡ್ ಸೆಟ್ಗಳನ್ನು ಬ್ಲಾಕ್ ಮಾಡಲು ಸರ್ಕಾರ ನಿರ್ಧರಿಸಿ ಮೇ 9ರಂದು ಟೆಲಿಕಾಂ ಸಂಸ್ಥೆಗಳಾದ ಏರ್ಟೆಲ್ ಜಿಯೋ ಹಾಗೂ ಇತರ ಟೆಲಿಕಾಂ ಕಂಪನಿ ಆಪರೇಟರ್ ಗಳಿಗೂ ಕೂಡ 28,200 ಮೊಬೈಲ್ ಬ್ಯಾಂಡ್ ಗಳನ್ನು ಮುಚ್ಚುವಂತೆ ಸೂಚನೆ ಕೊಟ್ಟಿದ್ದಾರೆ.
ಈ ಸುದ್ದಿ ಓದಿ:- ಕೆನರಾ ಬ್ಯಾಂಕ್ ನಲ್ಲಿ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 30,000
ಇದರೊಂದಿಗೆ ಸುಮಾರು 20 ಲಕ್ಷ ಮೊಬೈಲ್ ಸಂಪರ್ಕಗಳನ್ನು ಮರುಪರಿಶೀಲನೆಗೆ ಆದೇಶ ನೀಡಿದೆ. ಸರ್ಕಾರ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮೊಬೈಲ್ ಹಾಗೂ ಸಿಮ್ ಕಾರ್ಡ್ಗಳನ್ನು ಸ್ಥಗಿತಗೊಳಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅಂದರೆ ಕಳೆದ ವರ್ಷ ಕೂಡ ಈ ಹಾದಿಯಾಗಿ ಮೊದಲ ಹೆಜ್ಜೆ ಇಟ್ಟಿತ್ತು ಸೈಬರ್ ವಂಚನೆಯಲ್ಲಿ ತೊಡಗಿದ್ದ 37 ಸಾವಿರ ಸಿಮ್ ಕಾರ್ಡ್ ಗಳನ್ನು ಕಳೆದ ವರ್ಷ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು.
ಆದರೆ ಈ ವರ್ಷ ಇದನ್ನು ಇನ್ನೂ ದೊಡ್ಡ ಮಟ್ಟದಲ್ಲಿ ಮಟ್ಟ ಹಾಕಲು ಶೀಘ್ರವಾಗಿ ಸೈಬರ್ ಕ್ರೈಂ ಸಮಸ್ಯೆಗಳಿಗೆ ಪರಿಹಾರ ನೀಡಲು ಶತ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಈ ಮೇಲೆ ತಿಳಿಸಿದ 23200 ಮೊಬೈಲ್ ಹ್ಯಾಂಡ್ಸೆಟ್ ಗಳಲ್ಲಿ ಸುಮಾರು 20 ಲಕ್ಷ ಮೊಬೈಲ್ ಸಂಖ್ಯೆಗಳನ್ನು ಬಳಸಲಾಗಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಆದರೆ ಒಂದೇ ಬಾರಿಗೆ ಇವೆಲ್ಲದರ ಪರಿಶೀಲನೆ ಕೂಲಂಕುಶವಾಗಿ ಮಾಡಲು ಸಾಧ್ಯವಾಗದ ಕಾರಣ ಮತ್ತು ಇದನ್ನು 15 ದಿನಗಳೊಳಗೆ ಪೂರ್ಣಗೊಳಿಸುವ ಗಡುವು ಇದ್ದಿದ್ದರಿಂದ ಈ ಎರಡು ಮಿಲಿಯನ್ ಮೊಬೈಲ್ ಸಂಖ್ಯೆಗಳಲ್ಲಿ ಶೇಕಡ 10 ರಷ್ಟು ಮರು ಪರಿಶೀಲನೆಗೆ ಒಳಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಶೀಘ್ರವಾಗಿ ಉಳಿದ ಕಾರ್ಯವನ್ನು ಕೂಡ ಪೂರ್ತಿ ಕಳಿಸಿ ಬರದೇ ನೀಡಲಾಗುವುದು ಎಂದು ದೂರ ಸಂಪರ್ಕ ಇಲಾಖೆ ಅಧಿಕಾರಗಳ ಮೂಲದಿಂದ ಮಾಹಿತಿ ತಿಳಿದು ಬಂದಿದೆ.
ಈ ಸುದ್ದಿ ಓದಿ:- ಅರ್ಧಕ್ಕರ್ಧ ಡೌನ್ ಆಗಲಿದೆ ಚಿನ್ನದ ರೇಟ್.! ಚಿನ್ನ ಖರೀದಿಸುವ ಮುನ್ನ ಈ ವಿಚಾರಗಳು ಗೊತ್ತಿರಲಿ.!