ಭಾರತದಲ್ಲಿ ಆಸ್ತಿ ಹಂಚಿಕೆ ಕುರಿತು ಸಾಕಷ್ಟು ಬಾರಿ ಕಾನೂನು ತಿದ್ದುಪಡಿಯಾಗಿದೆ. ಆದರೆ ಪ್ರತಿ ಬಾರಿ ಕೂಡ ಈ ರೀತಿ ಆಸ್ತಿ ವಿಚಾರವಾಗಿ ತಿದ್ದುಪಡಿ ಆದಾಗ ಕಾನೂನಿನಲ್ಲಿ ಈ ಬಗ್ಗೆ ಏನು ಬದಲಾವಣೆ ಆಗಿದೆ ಎನ್ನುವುದನ್ನು ಪ್ರತಿಯೊಬ್ಬರು ಕೂಡ ತಿಳಿದುಕೊಳ್ಳಲೇಬೇಕು. ನ್ಯಾಯಾಲಯಗಳಲ್ಲಿ ಈಗ ಹೂಡಲಾಗುತ್ತಿರುವ ದಾವೆಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿ ಕುರಿತ ವಿವಾದಗಳೇ ಇರುತ್ತವೆ.
ಈ ಹಿಂದೆ ರಕ್ತ ಸಂಬಂಧಗಳು ಹಾಗೂ ದಾಯಾದಿ ಕಲಹದಿಂದ ಏರ್ಪಡುತ್ತಿದ್ದ ಕೋರ್ಟ್ ಕಚೇರಿ ಗಲಾಟೆಗಳು ಈಗ ಒಂದೇ ಕುಟುಂಬದ ಸದಸ್ಯರ ನಡುವೆ ಏರ್ಪಡುತ್ತಿದೆ. ಅಕ್ಕತಂಗಿ, ಅಣ್ಣತಮ್ಮ, ಮಾತ್ರವಲ್ಲದೆ ತಾಯಿ ತಂದೆ ಜೊತೆ ಮಕ್ಕಳು ಕೂಡ ಆಸ್ತಿಗಾಗಿ ಕಿತ್ತಾಡಿಕೊಂಡು ಕೋರ್ಟ್ ಮೆಟ್ಟಿಲು ಏರುತ್ತಿರುವ ಪ್ರಕರಣಗಳಿಗೆ ಕಡಿಮೆ ಏನಿಲ್ಲ ಭಾರತದ ಆಸ್ತಿ ನಿಯಮದ ಪ್ರಕಾರ ತಂದೆ ಆಸ್ತಿಯಲ್ಲಿ ಹುಟ್ಟಿದಾಗಲಿಂದಲೇ ಮಕ್ಕಳು ಕೂಡ ಹಕ್ಕುದಾರರಾಗಿರುತ್ತಾರೆ.
ಸೂಕ್ತ ಕಾರಣಗಳು ಇಲ್ಲದೇ ಇದ್ದ ಪಕ್ಷದಲ್ಲಿ ಮಕ್ಕಳ ಅನುಮತಿ ಇಲ್ಲದೆ ಪೋಷಕರು ಆಸ್ತಿ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಸ್ವಯಾರ್ಜಿತ ಆಸ್ತಿ ಆಗಿದ್ದರೆ ಆ ತಂದೆ ತಾಯಿಯರು ತಮ್ಮ ಆಸ್ತಿಯನ್ನು ಯಾರಿಗೆ ಬೇಕಾದರೂ ದಾನವಾಗಿ ಅಥವಾ ಕ್ರಯವಾಗಿ ಅಥವಾ ವಿಭಾಗ ಮಾಡಿಕೊಡಬಹುದು. ಅದನ್ನು ಕೇಳುವ ಹಕ್ಕು ಯಾವ ಮಕ್ಕಳಿಗೂ ಇರುವುದಿಲ್ಲ ಆದರೆ ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನು ಈ ರೀತಿ ಮಾಡಲು ಸಾಧ್ಯವಿಲ್ಲ.
ಎಲ್ಲಾ ಮಕ್ಕಳಿಗೂ ಕೂಡ ಸಮಾನವಾಗಿ ಆಸ್ತಿ ಹಂಚಿಕೆ ಮಾಡಲೇಬೇಕು. ಈ ರೀತಿ ಪಿತ್ರಾರ್ಜಿತವಾಗಿ ತಂದೆಯು ಮಕ್ಕಳಿಗೆ ಆಸ್ತಿಯನ್ನು ವಿಭಾಗ ಮಾಡಿಕೊಟ್ಟ ಮೇಲೆ ಆ ಆಸ್ತಿಯನ್ನು ವಾಪಸ್ಸು ಪಡೆಯುವುದಕ್ಕೂ ಕೂಡ ಕಾನೂನು ಇದೆ ಎನ್ನುವ ವಿಚಾರ ಹೆಚ್ಚಿನ ಜನರಿಗೆ ತಿಳಿದಿಲ್ಲ, ಅದರ ಬಗ್ಗೆ ಈ ಅಂಕಣದಲ್ಲಿ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ.
ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ ಎನ್ನುವ ಕಾಯ್ದೆ 2007 ರಿಂದ ಜಾರಿಗೆ ಬಂದಿದ್ದು ಒಂದು ವೇಳೆ ಪೋಷಕರಿಂದ ಆಸ್ತಿ ಪಡೆದ ಮೇಲೆ ಆಸ್ತಿಯನ್ನು ಪಡೆದ ಮಕ್ಕಳು ಪೋಷಕರ ಜವಾಬ್ದಾರಿ ತೆಗೆದುಕೊಳ್ಳದಿದ್ದರೆ, ಅವರ ವೈದ್ಯಕೀಯ ಖರ್ಚುಗಳು ಅಥವಾ ಜೀವನ ನಿರ್ವಹಣೆಯ ಖರ್ಚನ್ನು ಭರಿಸದೆ ಇದ್ದ ಪಕ್ಷದಲ್ಲಿ ಕೋರ್ಟ್ ನಲ್ಲಿ ದಾವೇ ಹೂಡುವ ಮೂಲಕ ಪೋಷಕರು ತಾವು ನೀಡಿದ ತಮ್ಮ ಆಸ್ತಿಯನ್ನು ವಾಪಸ್ ಪಡೆದುಕೊಳ್ಳಬಹುದು.
ಇಷ್ಟು ಮಾತ್ರ ಅಲ್ಲದೆ ಪೋಷಕರು ಆಸ್ತಿಯನ್ನು ಮಕ್ಕಳಿಗೆ ದಾನ ಅಥವಾ ವಿಭಾಗ ಮಾಡಿಕೊಡುವಾಗ ಪ್ರೀತಿ ಮತ್ತು ವಾತ್ಸಲ್ಯದಿಂದ ಕೊಡುತ್ತಿದ್ದೇನೆ ಎಂದು ಹೇಳಿ ತಮ್ಮ ಆಸ್ತಿಯ ಮೇಲಿನ ಹಕ್ಕನ್ನು ಬಿಟ್ಟು ಕೊಟ್ಟಿದ್ದರೆ ಆ ಸಮಯದಲ್ಲೂ ಕೂಡ ಪೋಷಕರು ಯಾವಾಗ ಬೇಕಾದರೂ ಮಕ್ಕಳ ಮೇಲೆ ವಿಶ್ವಾಸ ಕಡಿಮೆ ಆದಾಗ ತಮ್ಮ ಆಸ್ತಿಯನ್ನು ವಾಪಸ್ಸು ಪಡೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ.
ಆದರೆ ಆಸ್ತಿ ಮತ್ತು ಹಣ ಎನ್ನುವುದು ತಂದೆ ತಾಯಿಗಿಂತ ಹಿರಿದಲ್ಲ, ಇದನ್ನು ಅರಿತು ಮಕ್ಕಳು ಪೋಷಕರು ಋಣ ಮತ್ತು ಜವಾಬ್ದಾರಿ ಎಂದುಕೊಂಡು ಜನ್ಮ ಕೊಟ್ಟ ತಂದೆ ತಾಯಿಯ ಸೇವೆ ಮಾಡಬೇಕು. ನಮ್ಮ ಭಾರತ ದೇಶದಲ್ಲಿ ಈ ರೀತಿ ಮೌಲ್ಯಗಳನ್ನು ಬಾಲ್ಯದಿಂದಲೇ ಕಲಿಸಲಾಗುತ್ತದೆ ಆದರೆ ಬೆಳೆಯುತ್ತಾ ಮಕ್ಕಳು ಈ ರೀತಿ ಹಣದ ಮೇಲೆ ವ್ಯಾಮೋಹ ಹೊಂದಿ.
ಉಳಿದ ಸಂಬಂಧಗಳಂತೆ ಕರುಳ ಸಂಬಂಧವನ್ನು ಕೂಡ ಕಳೆದುಕೊಳ್ಳುವುದಕ್ಕೆ ಹೋಗುತ್ತಿರುವುದು ಖೇದದ ಸಂಗತಿಯಾಗಿದೆ. ಪ್ರತಿ ಮಕ್ಕಳು ಕೂಡ ತಮ್ಮ ಹೆತ್ತ ತಂದೆ ತಾಯಿಯನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಜೋಪಾನವಾಗಿ ಕೊನೆ ಕಾಲದಲ್ಲಿ ನೋಡಿಕೊಳ್ಳಲಿ ಎನ್ನುವುದಷ್ಟೇ ಈ ಅಂಕಣದ ಆಶಯ.