ರೇಷನ್ ಕಾರ್ಡ್ (Rationcard) ಈಗ ಒಂದು ಅಗತ್ಯ ದಾಖಲೆಯಾಗಿದೆ. ಇದನ್ನು ಗುರುತಿನ ಚೀಟಿಯಾಗಿ ಕೂಡ ಬಳಸಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡುವ BPL ಮತ್ತು AAY ಕಾರ್ಡ್ ಹೊಂದಿರುವ ಕುಟುಂಬದ ರೈತನಿಗೆ, ಕಾರ್ಮಿಕನಿಗೆ, ವಿದ್ಯಾರ್ಥಿಗೆ, ವೃದ್ಧರಿಗೆ ಸರಕಾರದಿಂದ ಹಲವು ವಿನಾಯಿತಿಗಳು ಸಿಗುತ್ತಿವೆ.
ಸದ್ಯಕ್ಕೆ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆ ಮತ್ತು ಗೃಹಲಕ್ಷ್ಮಿ ಗ್ಯಾರೆಂಟಿ ಯೋಜನೆಗಳ (Annabhagya and Gruhalakshmi Schemes) ಹಣ ಪಡೆದುಕೊಳ್ಳಬೇಕು ಎಂದರೆ ರೇಷನ್ ಕಾರ್ಡ್ ಇರಲೇಬೇಕು.
ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ.! ಜನವರಿ 15 ಕಡೆ ದಿನಾಂಕ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!
ಕೇಂದ್ರ ಸರ್ಕಾರದ ಸಹಾಯೋಗದೊಂದಿಗೆ ಕರ್ನಾಟಕ ಆಹಾರ ಇಲಾಖೆ ಪರಿಚಯಿಸಿರುವ ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್ಗಳನ್ನು (ABHA) ಪಡೆದುಕೊಳ್ಳಲು ಕೂಡ ರೇಷನ್ ಕಾರ್ಡ್ ಬೇಕು. ಈ ರೀತಿ ರೇಷನ್ ಕಾರ್ಡ್ ಮೂಲಕ ಪಡೆದುಕೊಳ್ಳುವ ಸೌಲಭ್ಯಗಳು ನಮ್ಮ ಕುಟುಂಬದ ಎಲ್ಲ ಸದಸ್ಯರಿಗೂ ಸಿಗಬೇಕು ಎಂದರೆ ನಮ್ಮ ಕುಟುಂಬದಲ್ಲಿರುವ ಎಲ್ಲಾ ಸದಸ್ಯರ ಹೆಸರು ಕೂಡ ರೇಷನ್ ಕಾರ್ಡ್ ನಲ್ಲಿ ಇರಬೇಕು ಮತ್ತು ಅವರ ಇ-ಕೆವೈಸಿ (e-KYC) ಅಪ್ಡೇಟ್ ಆಗಿರಬೇಕು.
ಆದರೆ ಹಲವಾರು ಕಾರಣಗಳಿಂದ ರೇಷನ್ ಕಾರ್ಡ್ ಗಳಲ್ಲಿ ಕೆಲವರು ಹೆಸರು ಬಿಟ್ಟು ಹೋಗಿದೆ. ಉದಾಹರಣೆಗೆ, ಹೊಸದಾಗಿ ಮದುವೆ ಆಗಿ ಬಂದವರು ತಮ್ಮ ಪತಿ ಮನೆ ರೇಷನ್ ಕಾರ್ಡ್ ಗೆ ಹೆಸರು ಸೇರಿಸದೆ ಇರುವುದು ಅಥವಾ ಈಗ ಹುಟ್ಟಿರುವ ಮಗುವಿನ ಹೆಸರನ್ನು ರೇಷನ್ ಕಾರ್ಡ್ ಗೆ ಸೇರಿಸದೆ ಇರುವುದು ಇನ್ನು ಮುಂತಾದ ಅನೇಕ ಸಮಸ್ಯೆಗಳಿಂದಾಗಿ ರೇಷನ್ ಕಾರ್ಡ್ ಗಳಲ್ಲಿ ಕುಟುಂಬದ ಸದಸ್ಯರ ಹೆಸರು ಇಲ್ಲದಂತಾಗಿದೆ.
ಗ್ರಾಮೀಣ ಬ್ಯಾಂಕ್ ಗಳಲ್ಲಿ ಉದ್ಯೋಗವಕಾಶ, ಕನ್ನಡಿಗರಿಗೆ ಮೊದಲ ಆದ್ಯತೆ, ವೇತನ 35,000/- ಆಸಕ್ತರು ಅರ್ಜಿ ಸಲ್ಲಿಸಿ.!
ಇದನ್ನು ತಿದ್ದುಪಡಿ ಮಾಡಿಕೊಳ್ಳುವುದಕ್ಕೆ ಗ್ಯಾರಂಟಿ ಯೋಜನೆಗಳು ಜಾರಿಯಾದ ಮೇಲೂ ಕೂಡ ಸರ್ಕಾರ ಮೂರ್ನಾಲ್ಕು ಬಾರಿ ಅವಕಾಶ ಮಾಡಿಕೊಟ್ಟಿದೆ. ಪ್ರತಿಬಾರಿಯೂ ಸರ್ವರ್ ಒತ್ತಡ ಹಾಗೂ ಇನ್ನಿತರ ಟೆಕ್ನಿಕಲ್ ತೊಂದರೆಗಳಿಂದಾಗಿ (technical issues) ಸಂಪೂರ್ಣವಾಗಿ ಈ ಪ್ರಕ್ರಿಯೆ ಯಶಸ್ವಿ ಆಗಿಲ್ಲ.
ಈಗ ಸರ್ಕಾರದ ವತಿಯಿಂದ ಮತ್ತೊಂದು ಅವಕಾಶ ಸಿಗುತ್ತಿದ್ದು ಈ ಬಾರಿ ರೇಷನ್ ಕಾರ್ಡ್ ಗೆ ಹೊಸ ಸದಸ್ಯರ ಹೆಸರನ್ನು ಸೇರ್ಪಡೆ (add Name to Rationcard) ಮಾಡಲು ಮಾತ್ರ ಅನುಮತಿ ನೀಡಲಾಗುತ್ತಿದೆ. ಈಗ ನಾವು ಹೇಳುವ ಈ ವಿಧಾನವನ್ನು ಅನುಸರಿಸಿ ನೀವೇ ರೇಷನ್ ಕಾರ್ಡ್ ನಲ್ಲಿ ನಿಮ್ಮ ಕುಟುಂಬದ ಸದಸ್ಯರ ಹೆಸರನ್ನು ಸೇರ್ಪಡಿಸಲು ಆನ್ಲೈನಲ್ಲಿ ಅರ್ಜಿ ಸಲ್ಲಿಸಬಹುದು.
ಬೇಕಾಗುವ ದಾಖಲೆಗಳು:-
* ಮಗುವಿನ ಜನನ ಪ್ರಮಾಣ ಪತ್ರ
* ರೇಷನ್ ಕಾರ್ಡ್ ನಲ್ಲಿ ಇರುವ ಮುಖ್ಯಸ್ಥರ ಆಧಾರ್ ಕಾರ್ಡ್
* ಪಡಿತರ ಚೀಟಿ
ಅರ್ಜಿ ಸಲ್ಲಿಸುವ ವಿಧಾನ:-
* ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್, https://ahara.kar.nic.in/Home/EServices ಅನ್ನು ಕ್ಲಿಕ್ ಮಾಡಿ. * ಆಹಾರ ಇಲಾಖೆಯ ಇ – ಸರ್ವಿಸ್ (E-service) ಪೇಜ್ ತೆರೆದುಕೊಳ್ಳುತ್ತದೆ.
* ಇಲ್ಲಿ ನೀವು ಪಡಿತರ ಖಾತೆಗೆ ಹೊಸ ಸದಸ್ಯರ ಹೆಸರು ಸೇರಿಸಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಹಾಗೂ ಇತರ ವಿವರಗಳನ್ನು ಭರ್ತಿ ಮಾಡಿ.
* ಹೆಸರು ಸೇರಿಸಲು ಕೇಳಿರುವ ದಾಖಲೆಗಳನ್ನು ನೀಡಿ ಸಬ್ಮಿಟ್ ಎಂದು ಕ್ಲಿಕ್ ಮಾಡಿದರೆ ನಿಮ್ಮ ತಿದ್ದುಪಡಿ ಮನವಿ ಸಲ್ಲಿಕೆ ಆಗುತ್ತದೆ.
* ಅಪ್ಲಿಕೇಶನ್ ಸ್ಥಿತಿಯನ್ನು ಪರಿಶೀಲಿಸಲು ಫಲಾನುಭವಿಗಳ ಸ್ಥಿತಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ ತಿಳಿದುಕೊಳ್ಳಿ.