ಹೊಸ ಪೆಟ್ರೋಲ್ ಬಂಕ್ ಓಪನ್ ಮಾಡಲು ಬಂಡವಾಳ ಎಷ್ಟು ಬೇಕು.? ಎಷ್ಟು ಲಾಭ ಸಿಗುತ್ತೆ. ಅರ್ಜಿ ಸಲ್ಲಿಸೋದು ಹೇಗೆ ಸಂಪೂರ್ಣ ಮಾಹಿತಿ.

 

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕೂಡ ವಾಹನಗಳ ಸಂಖ್ಯೆ ಅಧಿಕವಾಗಿದೆ. ವಾಹನಗಳಿಗೆ ಇಂಧನವಾಗಿ ಖಂಡಿತ ಪೆಟ್ರೋಲ್ ಅಥವಾ ಡೀಸೆಲ್ ಅವಶ್ಯವಾಗಿ ಬೇಕು. ಹಾಗಾಗಿ ಇಂತಹ ಇಂಧನ ತುಂಬಿಸುವಂತಹ ಪೆಟ್ರೋಲ್ ಬಂಕ್ ಇತ್ಯಾದಿಗಳನ್ನು ಓಪನ್ ಮಾಡಿದರೆ ಆ ಉದ್ಯಮದಲ್ಲಿ ಉತ್ತಮ ಆದಾಯ ಪಡೆಯಬಹುದು ಎನ್ನುವುದು ಎಷ್ಟೋ ಜನರ ಯೋಚನೆ. ಹೌದು, ಈ ಉದ್ಯಮದಲ್ಲಿ ಖಂಡಿತವಾಗಿ ಹೆಚ್ಚಿನ ಲಾಭ ಇದೆ ಇದು ಇದರಿಂದ ಲಕ್ಷಗಟ್ಟಲೆ ಕೂಡ ಆದಾಯವನ್ನು ಪಡೆಯಬಹುದು.

ಆದರೆ ಅದಕ್ಕೂ ಮುಂಚೆ ಇದನ್ನು ಹೇಗೆ ಆರಂಭಿಸಬೇಕು ಅದಕ್ಕೆ ದಾಖಲೆಗಳೆನಾದರೂ ಕೊಡಬೇಕಾ ಅಥವಾ ಇನ್ನಿತರ ಅರ್ಹತೆಗಳು ಇದೆಯಾ ಎನ್ನುವ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡಿರಬೇಕು. ಅದಕ್ಕಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ. ಪೆಟ್ರೋಲ್ ಬಂಕ್ ತೆರೆಯಲು ಬೇಕಾಗಿರುವ ಮುಖ್ಯ ಅರ್ಹತೆ ಏನೆಂದರೆ ನೀವು ಕಡ್ಡಾಯವಾಗಿ ಭಾರತೀಯ ನಾಗರಿಕನಾಗಿರಬೇಕು.

ನಿಮ್ಮ ವಯಸ್ಸು ಸಹ ಕಡ್ಡಾಯವಾಗಿ 21 ವರ್ಷದಿಂದ ಮೇಲ್ಪಟ್ಟು 55 ವರ್ಷದ ಒಳಗಿರಬೇಕು. ನೀವು ಕನಿಷ್ಠ ಎಸ್ ಎಸ್ ಎಲ್ ಸಿ ಅನ್ನು ಉತ್ತೀರ್ಣವಾಗಿರಬೇಕು. ಈ ಮೂರು ಅರ್ಹತೆಗಳು ಇದ್ದರೆ ಪೆಟ್ರೋಲ್ ಬಂಕ್ ತೆರೆಯಲು ನೀವು ಅರ್ಹರಾದಂತೆ. ಇದನ್ನು ಹೊರತುಪಡಿಸಿ ಬಂಡವಾಳವಾಗಿ ನೋಡುವುದಾದರೆ ಇದಕ್ಕೆ ಕೋಟ್ಯಾಂತರರು ಬೇಕಾಗಬಹುದು ಎನ್ನುವುದು ಹಲವರ ಊಹೆ ಆದರೆ ಬಂಡವಾಳದ ವಿವರ ಈ ರೀತಿ ಇರುತ್ತದೆ ನೋಡಿ.

ನೀವೇನಾದರೂ ಪೆಟ್ರೋಲ್ ಬಂಕ್ ಓಪನ್ ಮಾಡಬೇಕು ಎನ್ನುವ ಯೋಜನೆ ಹೊಂದಿದ್ದರೆ ಅದಕ್ಕಾಗಿ ನಿಮ್ಮ ಬಳಿ ಮೊದಲಿಗೆ ಜಾಗ ಇರಬೇಕು. ಹಳ್ಳಿಗಳ ಪ್ರದೇಶದಲ್ಲಿ ಆಗಲಿ ಅಥವಾ ನಗರ ಪ್ರದೇಶದಲ್ಲಿ ಆಗಲಿ ನಿಮ್ಮ ಬಳಿ ಜಾಗ ಇದ್ದರೆ ನೀವು ಪೆಟ್ರೋಲ್ ಬಂಕ್ ಓಪನ್ ಮಾಡಬಹುದು. ಒಂದು ವೇಳೆ ನಿಮ್ಮ ಸ್ವಂತ ಜಾಗ ಇಲ್ಲ ಕುಟುಂಬದವರ ಹೆಸರಿನಲ್ಲಿ ಇದೆ ಅಥವಾ ಮತ್ತೆ ಬೇರೆ ಯಾರಿಂದಲಾದರೂ ನೀವು ಅದನ್ನು ಬಾಡಿಗೆಗೆ ತೆಗೆದುಕೊಳ್ಳುತ್ತೀರ ಎನ್ನುವುದಾದರೆ ಅವರಿಂದ NOC ಪಡೆದಿರಬೇಕು ಮತ್ತು ಸಂಬಂಧಪಟ್ಟ ಅಫಿಡವಿಟ್ ಕೂಡ ಸಲ್ಲಿಸಿರಬೇಕು.

ಅದಕ್ಕೆ ಸಂಬಂಧಿಸಿದ ಎಲ್ಲ ಲೀಗಲ್ ಡಾಕ್ಯುಮೆಂಟ್ಗಳು ಕೂಡ ನಿಮ್ಮ ಬಳಿ ಇರಬೇಕು. ಸ್ವಂತ ಜಾಗ ಇದ್ದರೆ ಖರ್ಚು ಕಮ್ಮಿಯಾಗಬಹುದು ಈ ಅಂದಾಜಿಗೆ ಹೋಲಿಸಿದರೆ ಹಳ್ಳಿಗಳಲ್ಲಿ ಖರ್ಚು ಕಡಿಮೆ ಇರುವುದರಿಂದ 12 ಲಕ್ಷ ಮತ್ತು ನಗರ ಪ್ರದೇಶಗಳಲ್ಲಿ ಮಿನಿಮಮ್ 25 ಲಕ್ಷ ರೂ ಇದ್ದರೆ ಪೆಟ್ರೋಲ್ ಬಂಕ್ ಓಪನ್ ಮಾಡಬಹುದು. ಇದನ್ನು ಓಪನ್ ಮಾಡುವ ಬಗೆ ಹೇಗೆ ಎಂದರೆ ನೀವು ಯಾವ ಕಂಪನಿಯ ಪೆಟ್ರೋಲ್ ಬಂಕ್ ಓಪನ್ ಮಾಡಲು ಇಚ್ಚಿಸುತ್ತೀರಾ ಆ ಕಂಪನಿಯ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಟ್ಟು ಶರತ್ತುಗಳನ್ನು ಗಮನದಲ್ಲಿಟ್ಟಕೊಂಡು ಅಪ್ಲಿಕೇಶನ್ ಅನ್ನು ತುಂಬಬೇಕು.

ಎಲ್ಲಾ ಟರ್ಮ್ಸ್ ಮತ್ತು ಕಂಡಿಶನ್ ಗಳಿಗೆ ಒಪ್ಪಿಕೊಂಡು ಅಪ್ಲಿಕೇಶನ್ ಫಾರಂ ಸಲ್ಲಿಸಿದರೆ ಒಪ್ಪಿಗೆ ಬಂದ ನಂತರವೇ ನೀವು ಈ ಉದ್ಯಮವನ್ನು ಆರಂಭಿಸಬಹುದು. ಇಲ್ಲಿ ಜಾಗ ಮುಖ್ಯ ವಿಷಯ ಆಗಿರುವುದರಿಂದ ನೀವು ಎಷ್ಟು ದೊಡ್ಡ ಜಾಗ ಹೊಂದಿರುತ್ತೀರೋ ಅಷ್ಟು ಆದಾಯವನ್ನು ಗಳಿಸುತ್ತೀರಿ ಎನ್ನುವುದು ಅನುಭವಿಗಳ ಮಾತು. ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಅಥವಾ ಗೊಂದಲಗಳಿದ್ದಲ್ಲಿ ಬೇಕಾದರೆ ನಿಮಗೆ ಪರಿಚಯ ಇರುವ ಪೆಟ್ರೋಲ್ ಬಂಕ್ ಮಾಲೀಕರ ಬಳಿ ವಿಚಾರಿಸಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now