ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2019ರಲ್ಲಿ ದೇಶದಾದ್ಯಂತ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿರುವಂತ ರೈತರಿಗೆ ಆರ್ಥಿಕ ನೆರವಾಗಲು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಎನ್ನುವ ಯೋಜನೆಯನ್ನು ಜಾರಿಗೆ ತಂದರು. ಮೊಟ್ಟಮೊದಲಿಗೆ ದೇಶದಲ್ಲಿ ರೈತರಿಗಾಗಿ ಸಹಾಯಧನ ಕೊಡುವಂತಹ ಯೋಜನೆ ಇದಾಗಿದ್ದು ಈ ಯೋಜನೆಯ ವಿಶೇಷತೆ ಏನೆಂದರೆ ಯಾವುದೇ ಮಧ್ಯವರ್ತಿಯ ಹಾವಳಿ ಇಲ್ಲದೆ ರೈತರ ಖಾತೆಗಳಿಗೆ ವರ್ಷದಲ್ಲಿ ಮೂರು ಕಂತಿನ ಪ್ರಕಾರ ತಲಾ 2,000 ರೂಪಾಯಿಗಳು ಎಲ್ಲಾ ರೈತರ ಖಾತೆಗೂ ವರ್ಗಾವಣೆಯಾಗುತ್ತಿದೆ.
5 ಹೆಕ್ಟೇರ್ ಗಿಂತ ಕಡಿಮೆ ಭೂ ಪ್ರದೇಶ ಹೊಂದಿದ್ದ ದೇಶದ 14 ಕೋಟಿಗೂ ಹೆಚ್ಚಿನ ರೈತರು ಈ ಯೋಜನೆಯನ್ನು ಪ್ರಯೋಜನವನ್ನು ಪಡೆಯುತ್ತಿದ್ದರು. ಕರ್ನಾಟಕ ರಾಜ್ಯದಲ್ಲೂ ಕೂಡ ಸಾಕಷ್ಟು ರೈತರು ಈ ಯೋಜನೆಯ ಫಲಾನುಭವಿಗಳು ಆಗಿರುವುದಲ್ಲದೆ ಕೇಂದ್ರದ ಈ ಯೋಜನೆಯ ಪ್ರಯೋಜನ ಪಡೆದಿರುವಂತಹ ಕರ್ನಾಟಕ ರೈತರಿಗೂ ಕೂಡ ರಾಜ್ಯ ಸರ್ಕಾರದಿಂದ ಸಿಎಂ ಕಿಸಾನ್ ಸಮ್ಮಾನ್ ಯೋಜನೆ ಹೆಸರಿನಲ್ಲಿ ವರ್ಷಕ್ಕೆ ಎರಡು ಕಂತುಗಳಲ್ಲಿ 2,000ರೂ.
ರೈತರ ಖಾತೆಗೆ ನೇರವಾಗಿ ಈ ಯೋಜನೆಯ ಸಹಾಯಧನವನ್ನು ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ವಿನಯೋಗಿಸಿಕೊಳ್ಳುತ್ತಿದ್ದರು. ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಆರಂಭಗೊಂಡು ನಾಲ್ಕು ವರ್ಷಗಳು ಕಳೆದಿದ್ದು ಯಶಸ್ವಿಯಾಗಿ 12ನೇ ಕಂತಿನ ತನಕ ಈ ಯೋಜನೆಗೆ ನೋಂದಣಿ ಆಗಿದ್ದ ಎಲ್ಲಾ ರೈತರು ಸಹ ಆರ್ಥಿಕ ಧನ ಸಹಾಯವನ್ನು ಪಡೆದಿದ್ದಾರೆ. ಆದರೆ ಕಳೆದ ಜನವರಿ ತಿಂಗಳಲ್ಲಿ ಬಿಡುಗಡೆ ಆದ 13ನೇ ಕಂತಿನ ಹಣದಿಂದ ಬಹಳಷ್ಟು ರೈತರು ವಂಚಿತರಾಗಿದ್ದಾರೆ.
ಇದಕ್ಕೆ ಮುಖ್ಯ ಕಾರಣ ರೈತರ ಕೊಟ್ಟಿರುವಂತಹ ಮಾಹಿತಿಗಳಲ್ಲಿ ಹೊಂದಾಣಿಕೆ ಆಗದೆ ಇರುವುದು. ಜೊತೆಗೆ ನಕಲಿ ಫಲಾನುಭವಿಗಳು ಕೂಡ ಈ ಯೋಜನೆಯ ಉಪಯೋಗ ಪಡೆಯುತ್ತಿದ್ದರಿಂದ ಅಂಥಹವರನ್ನು ಪಟ್ಟಿ ಮಾಡಿ 13ನೇ ಕಂತಿನ ಹಣ ಬಿಡುಗಡೆಯಲ್ಲಿ ಅವರ ಹೆಸರನ್ನು ಕೇಂದ್ರ ಸರ್ಕಾರ ಕೈ ಬಿಟ್ಟಿದೆ. ಮುಂದಿನ ಹಂತಗಳಲ್ಲಿ ಇನ್ನು ಕಟ್ಟುನಿಟ್ಟಿದ ನಿಯಮಗಳನ್ನು ಅನುಸರಿಸಲು ನಿರ್ಧರಿಸಿರುವ ಸರ್ಕಾರ 14 ಕಂತಿನ ಹಣವನ್ನು ಪಡೆಯುವ ಮುನ್ನವೇ ರೈತರಿಗೆ ಎಚ್ಚರಿಕೆಯೊಂದನ್ನು ನೀಡಿದೆ.
ಯಾಕೆಂದರೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ನೋಂದಣಿ ಹಾಕಿ e-kyc ಮಾಡಿಸದೆ ಇರುವಂತಹ ರೈತರ ಖಾತೆಗಳಿಗೆ 14ನೇ ಕಂತಿನ ಹಣವು ಬಿಡುಗಡೆಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರವು ಘೋಷಿಸಿದೆ. ಆದ್ದರಿಂದ ಇದುವರೆಗೆ ಯಾವ ರೈತರು e-kyc ಮಾಡಿಸಿಲ್ಲ ಕೂಡಲೇ ಹತ್ತಿರದಲ್ಲಿರುವ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಅಥವಾ ಇಂಟರ್ನೆಟ್ ಸೆಂಟರ್ ಗಳಿಗೆ ಹೋಗಿ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಕೊಡುವ ಮೂಲಕ ಈ e-kyc ಅಪ್ಡೇಟ್ ಮಾಡಿಸಬೇಕು.
ಹಾಗೆಯೇ 13ನೇ ಕಂತಿನ ಹಣದಿಂದ ವಂಚಿತರಾಗಿದ್ದ ಪಕ್ಷದಲ್ಲಿ ದಾಖಲೆಗಳನ್ನೆಲ್ಲ ಮತ್ತೊಮ್ಮೆ ಪರಿಶೀಲಿಸಿ ದಾಖಲೆಯಲ್ಲಿರುವ ಲೋಪವನ್ನು ಸರಿಪಡಿಸಿ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು. ಇಲ್ಲವಾದಲ್ಲಿ 14ನೇ ಕಂತಿನ ಹಣವನ್ನು ಕೂಡ ತಡೆಹಿಡಿಯಬಹುದು. ಮಾಧ್ಯಮ ಮಾಹಿತಿಗಳ ಪ್ರಕಾರ 14ನೇ ಕಂತಿನ ಹಲವು ಮೇ ತಿಂಗಳ ಅಂತ್ಯದಲ್ಲಿ ಅಥವಾ ಜೂನ್ ಮೊದಲ ತಿಂಗಳ ಮೊದಲ ವಾರದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದ್ದು ಸಮಯಾವಕಾಶ ಕಡಿಮೆ ಇರುವುದರಿಂದ ಈ ಕೂಡಲೇ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.