ಮೇ ತಿಂಗಳಲ್ಲಿಯೇ ಬಿಡುಗಡೆ ಆಗಲಿದೆ PM ಕಿಸಾನ್ ಸಮ್ಮಾನ್ ಯೋಜನೆಯ 14ನೇ ಕಂತು, ಆದ್ರೆ ಈ ರೈತರ ಖಾತೆಗೆ ಮಾತ್ರ ಹಣ ಬರುವುದಿಲ್ಲ. PM ಕಿಸಾನ್ ಸಮ್ಮಾನ್ ಯೋಜನೆಯು ನಮ್ಮ ದೇಶದ ಒಂದು ಜನಪ್ರಿಯ ಯೋಜನೆ. ಯಾಕೆಂದರೆ, ಇದುವರೆಗೆ ಕೇಂದ್ರದಲ್ಲಿ ಬಂದ ಯಾವ ಸರ್ಕಾರವೂ ಕೂಡ ರೈತರ ಖಾತೆಗೆ ಈ ರೀತಿ ನೇರವಾಗಿ ಹಣ ವರ್ಗಾವಣೆ ಮಾಡಿ ಸಹಾಯಧನವನ್ನು ಬಿಡುಗಡೆ ಮಾಡಿರಲಿಲ್ಲ.
ಆದರೆ ಬೇರೆ ರೀತಿಯ ಯೋಜನೆಗಳ ಮೂಲಕ ರೈತರಿಗೆ ಸಾಲ ಕೊಡುವುದು, ಸಬ್ಸಿಡಿ ಸಾಲ ಕೊಡುವುದು ಇಂತಹ ಅನುಕೂಲತೆ ಮಾಡಿಕೊಟ್ಟಿದ್ದವು. ಆದರೆ ಸಹಾಯಧನದ ರೂಪದಲ್ಲಿ ಹಣ ಸಹಾಯ ಮಾಡಿದ್ದು ಈ ಯೋಜನೆ. ಈಗ ದೇಶದಾದ್ಯಂತ ಸುಮಾರು 14 ಕೋಟಿಗೂ ಹೆಚ್ಚು ರೈತರು ಈ ರೈತರ ಸಂಬಂಧಿತ ಯೋಜನೆಗೆ ಫಲಾನುಭವಿಗಳಾಗಲು ನೋಂದಣಿ ಮಾಡಿಸಿದ್ದಾರೆ.
ಪ್ರತಿ ವರ್ಷವೂ ಕೂಡ ಮೂರು ಕಂತುಗಳಲ್ಲಿ ತಲಾ 2,000 ರೂಪಾಯಿಗಳನ್ನು ಕೇಂದ್ರ ಸರ್ಕಾರದ ಕಡೆಯಿಂದ ಸಹಾಯಧನವಾಗಿ ಅರ್ಹ ರೈತರು ಪಡೆಯುತ್ತಿದ್ದಾರೆ. ನಾಲ್ಕು ತಿಂಗಳಿಗೊಮ್ಮೆ ಈ ರೀತಿ 2000 ಸಹಾಯಧನವನ್ನು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಬಿಡುಗಡೆ ಮಾಡಲಿದ್ದಾರೆ. ಈಗಾಗಲೇ 13ನೇ ಕಂತಿನ ಹಣ ಬಿಡುಗಡೆಯಾಗಿ ಹತ್ತಿರ ನಾಲ್ಕು ತಿಂಗಳಾಗುತ್ತಿದೆ. ಹಾಗಾಗಿ ಎಲ್ಲರ ಚಿತ್ತ ಈಗ 14ನೇ ಕಂತಿನ ಬಿಡುಗಡೆಯತ್ತ ತಿರುಗಿದೆ.
13ನೇ ಕಂತಿನ ಪಿಎಂ ಕಿಸಾನ್ ಸಮ್ಮಾನ್ ನಿಧಿ ಹಣವನ್ನು ನಮ್ಮ ರಾಜ್ಯದಲ್ಲಿ ನಡೆದ ಬೆಳಗಾವಿ ಸಮಾವೇಶದಲ್ಲಿ ಪ್ರಧಾನಮಂತ್ರಿಯವರು ಬಿಡುಗಡೆ ಮಾಡಿದ್ದರು. ಫೆಬ್ರವರಿ 26, 2023 ರಂದು PMಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ನೋಂದಾಯಿತರಾಗಿದ್ದ ಎಲ್ಲಾ ಅರ್ಹ ಫಲಾನುಭವಿಗಳ ಖಾತೆಗೆ ಈ ಹಣ ನೇರವಾಗಿ ವರ್ಗಾವಣೆ ಆಗಿತ್ತು. ಹಾಗಾಗಿ ಮುಂದಿನ ಕಂತು ಯಾವಾಗ ಬಿಡುಗಡೆ ಆಗುತ್ತದೆ ಎಂದು ಎಲ್ಲೆಡೆ ಚರ್ಚೆ ಶುರುವಾಗಿದೆ ಇದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಕೆಲವು ಬಲವಾದ ಮೂಲಗಳ ಪ್ರಕಾರ ಮೇ ತಿಂಗಳಿನ ಅಂತ್ಯದಲ್ಲಿ ಈ ಹಣ ಬಿಡುಗಡೆ ಆಗುವ ಸಾಧ್ಯತೆ ಇದೆ. ಯಾಕೆಂದರೆ ಕಳೆದ ವರ್ಷ ಕೂಡ 11ನೇ ಕಂತಿನ ಹಣವು ಮೇ 31, 2022 ರಂದು ಬಿಡುಗಡೆ ಆಗಿತ್ತು. ಹಾಗಾಗಿ ಅದೇ ಲೆಕ್ಕಾಚಾರದಲ್ಲಿ ಈ ವರ್ಷವೂ ಕೂಡ ಮೇ ಅಂತ್ಯದಲ್ಲಿ ಬಿಡುಗಡೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಇನ್ನೂ ಕೆಲವರು ಹೇಳುವ ಪ್ರಕಾರ ಮೇ 15ರ ಒಳಗೆ ರೈತರ ಖಾತೆಗೆ ಬರುವ ಸಾಧ್ಯತೆ ಇದೆ.
ಯಾಕೆಂದರೆ ಈ ಬಾರಿ ದೇಶದಾದ್ಯಂತ ಮಳೆ ಪ್ರಭಾವದಿಂದ ರೈತರು ಬೆಳೆ ಹಾನಿಗೆ ಒಳಗಾಗಿದ್ದಾರೆ, ಆರ್ಥಿಕ ನಷ್ಟ ಹೊಂದಿದ್ದಾರೆ. ಹಾಗಾಗಿ ಈ ಬಾರಿ ಸಹಾಯಧನದ ಹಣವನ್ನು ಬೇಗ ಬಿಡುಗಡೆ ಮಾಡುವ ಸಾಧ್ಯತೆಗಳು ಇವೆ ಎನ್ನುವ ಚರ್ಚೆಗಳು ಇವೆ. ಕಡಾ ಖಂಡಿತವಾಗಿ ಮೇ ತಿಂಗಳ ಅಂತ್ಯ ಅಥವಾ ಜೂನ್ ತಿಂಗಳ ಆರಂಭದಲ್ಲಿಯೇ ಅರ್ಹ ಎಲ್ಲಾ ಫನಾನುಭವಿಗಳ ಖಾತೆಗೆ PMಕಿಸಾನ್ ಸಮ್ಮಾನ್ ನಿಧಿಯ 14ನೇ ಕಂತಿನ ಹಣ ವರ್ಗಾವಣೆ ಆಗುತ್ತಿದೆ.
ಆದರೆ ಈ ಬಾರಿ ನಕಲಿ ಫಲಾನುಭವಿಗಳನ್ನು ತೆಗೆದು ಹಾಕಲು ಸಾಕಷ್ಟು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದ್ದರಿಂದ ಕೊಟ್ಟಿರುವ ದಾಖಲೆಗಳಲ್ಲಿ ಹೊಂದಾಣಿಕೆ ಆಗದ ರೈತರು ಮತ್ತು ನಕಲಿ ಮಾಹಿತಿ ಕೊಟ್ಟು ಯೋಜನೆ ಫಲಾನುಭವಿಗಳ ರೈತರು ಮತ್ತು ಕೆ ವೈ ಸಿ ಅಪ್ಡೇಟ್ ಮಾಡಿಸಿದಂತಹವರು ಇನ್ನು ಮುಂತಾದ ಕಾರಣಗಳನ್ನು ಕೊಟ್ಟು ಕೆಲ ರೈತರ ಹೆಸರನ್ನು ಕೈ ಬಿಡಲಾಗಿದೆ.
ನೀವು ಸಹ 14ನೇ ಕಂತಿನ ಫಲಾನುಭವಿಗಳ ಲಿಸ್ಟ್ ಅಲ್ಲಿ ಇದ್ದೀರಾ ಎನ್ನುವುದರ ಬಗ್ಗೆ ಕೂಡ ಆನ್ಲೈನ್ ಅಲ್ಲಿಯೇ ಚೆಕ್ ಮಾಡಿ ತಿಳಿದುಕೊಳ್ಳಬಹುದು. ಕೂಡಲೇ ಚೆಕ್ ಮಾಡಿ ಅಪ್ಡೇಟ್ ಮಾಡಿಸಿ ಅಥವಾ ಹೊಸ ಫಲಾನುಭವಿಗಳಾಗಿದ್ದರೆ ಹತ್ತಿರದ CSC ಕೇಂದ್ರಕ್ಕೆ ಹೋಗಿ ಯೋಜನೆಗೆ ನೋಂದಣಿ ಮಾಡಿಸಿ ಈ ಯೋಜನೆಯ ಪ್ರಯೋಜನ ಪಡೆಯಿರಿ.