ಪೋಸ್ಟ್ ಆಫೀಸ್ ನಲ್ಲಿ 1500 ಹೂಡಿಕೆ ಮಾಡಿದ್ರೆ ಸಾಕು 31 ಲಕ್ಷ ಗಳಿಸಬಹುದು ಹೇಗೆ ಅಂತ ನೋಡಿ. ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ಕೊಡುವ ಸ್ಕೀಮ್

ಜ್ಯೋತಿಷ್ಯ ಜಾಹೀರಾತು
ಜ್ಯೋತಿಷ್ಯ ಜಾಹೀರಾತು

ಈಗ ಬ್ಯಾಂಕ್ ಗಳಂತೆ ಪೋಸ್ಟ್ ಆಫೀಸ್ (Post office) ಅಲ್ಲೂ ಕೂಡ ಹಣಕಾಸಿನ ವ್ಯವಹಾರ ಮಾಡಲು ಮತ್ತು ಹಣವನ್ನು ಹೂಡಿಕೆ ಮಾಡಲು ಜನಸಾಮಾನ್ಯರು ಆಸಕ್ತಿ ತೋರುತ್ತಿದ್ದಾರೆ. ಪೋಸ್ಟ್ ಆಫೀಸ್ ಅಲ್ಲಿ ಹೂಡಿಕೆ ಮಾಡುವುದರಿಂದ ಹಣಕ್ಕೆ ಹೆಚ್ಚಿನ ಭದ್ರತೆ ಇರುವುದು ಮತ್ತು ಆಕರ್ಷಣೀಯ ಯೋಜನೆಗಳು ಇರುವುದರಿಂದ ಜನ ಈಗ ಅಂಚೆ ಕಚೇರಿ ಅತ್ತ ಹೋಗುತ್ತಿದ್ದಾರೆ. ಜೊತೆಗೆ ಪ್ರತಿ ಹಳ್ಳಿಯಲ್ಲೂ ಕೂಡ ಬ್ಯಾಂಕ್ ಗಳು ಇರುವುದಿಲ್ಲ, ಆದರೆ ಅಂಚೆ ಕಛೇರಿ ಸೌಲಭ್ಯ ಇರುತ್ತದೆ.

ಹಾಗಾಗಿ ಜನರಿಗೆ ಬ್ಯಾಂಕ್ ಗಳಿಗಿಂತಲೂ ಅಂಚೆ ಕಚೇರಿಯನ್ನು ಸಂಪರ್ಕಿಸುವುದು ಹತ್ತಿರವಾಗಿರುವ ಕಾರಣ ಜನ ಅಂಚೆ ಕಛೇರಿ ಸೇವೆಯನ್ನು ಬಯಸುತ್ತಿದ್ದಾರೆ. ಆಗಾಗ ಅಂಚೆ ಇಲಾಖೆಯು ಹೊಸ ಹೊಸ ಯೋಜನೆಯನ್ನು (New sceme) ತರುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡುತ್ತಿದೆ ಈಗ ಅಂತಹದ್ದೇ ಒಂದು ಹೊಸ ಯೋಜನೆಯನ್ನು ತಂದಿದೆ ಈ ಯೋಜನೆ ಹೇಗಂದರೆ ಪ್ರತಿ ತಿಂಗಳು ನೀವು 1500 ಗಳನ್ನು ಹೂಡಿಕೆ (invest) ಮಾಡಿದರೆ, ಒಮ್ಮೆಲೇ 31 ಲಕ್ಷಗಳನ್ನು ಪಡೆಯಬಹುದಾಗಿದೆ.

ಪೋಸ್ಟ್ ಆಫೀಸಿನ ಗ್ರಾಮೀಣ ಸುರಕ್ಷಾ ಯೋಜನೆ ಅಡಿಯಲ್ಲಿ ಈ ಯೋಜನೆ ಜಾರಿಗೆ ತರಲಾಗಿದ್ದು, 19 ವರ್ಷ ಮೇಲ್ಪಟ್ಟ ಹಾಗೂ 55 ವರ್ಷದ ಒಳಗಿನ ವಯೋಮಾನದವರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಈ ಯೋಜನೆಯಲ್ಲಿ ಹತ್ತು ಸಾವಿರದಿಂದ ಹತ್ತು ಲಕ್ಷದವರೆಗೂ ಸಹ ಹೂಡಿಕೆ ಮಾಡಬಹುದು. ಹೂಡಿಕೆ ಮಾಡುವ ಹಣದ ಮೊತ್ತವನ್ನು ಪ್ರತಿ ತಿಂಗಳು ಅಥವಾ ಮೂರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೆ ಒಂದು ಬಾರಿ ಯಾವ ರೀತಿ ಬೇಕಾದರೂ ಪಾವತಿ ಮಾಡಬಹುದು.

80 ವರ್ಷದ ಆದ ಬಳಿಕ ಅಥವಾ ಅದಕ್ಕಿಂತಲೂ ಹೆಚ್ಚಿನ ವಯಸ್ಸಾದ ಬಳಿಕ ಈ ಪ್ರೀಮಿಯಂ ಹಣದ ಮೊತ್ತವು ನಿಮ್ಮ ಕೈ ಸೇರಲಿದೆ. ಇದೊಂದು ದೂರಾಲೋಚನೆಯ ಯೋಜನೆ ಆಗಿದ್ದು ವಯಸ್ಸಾದ ಕಾಲದಲ್ಲಿ ಖಂಡಿತ ನಿಮ್ಮ ಉಪಯೋಗಕ್ಕೆ ಬರುತ್ತದೆ. 19 ವರ್ಷ ವಯಸ್ಸಿದ್ದಾಗ ಆರಂಭಿಸಿ ತಿಂಗಳಿಗೆ 1500 ಹೂಡಿಕೆ ಮಾಡುತ್ತಾ ಬಂದರೆ 31 ಲಕ್ಷ ರೂಗಳನ್ನು ನೀವು 80 ವರ್ಷ ಆದ ಬಳಿಕ ಗಳಿಸುತ್ತೀರಿ. ಒಂದು ವೇಳೆ ಮಧ್ಯದಲ್ಲಿ ಹಣ ಕಟ್ಟಲು ಸಾಧ್ಯವಾಗದೆ ಡೀಫಾಲ್ಟ್ ಆಗಿದ್ದರೆ ಉಳಿದಿರುವ ಹಣದ ಮೊತ್ತವನ್ನು ಕಟ್ಟಿ ಇದನ್ನು ಮುಂದುವರೆಸಿಕೊಂಡು ನೀವು ಹೋಗಬಹುದು.

ಈ ಯೋಜನೆಯಲ್ಲಿ ನೀವು ಹಣ ಹೂಡಿಕೆ ಮಾಡಿದ ನಂತರ ನಿಮಗೆ ಇದರಲ್ಲಿ ಸಾಲ ಸೌಲಭ್ಯವು ಕೂಡ ಸಿಗಲಿದೆ. ಜೊತೆಗೆ ಮೂರು ವರ್ಷ ಆದ ಬಳಿಕ ನೀವು ಪಾಲಿಸಿಯನ್ನು ಸರಂಡರ್ ಕೂಡ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ವಿಧಾನ ಈ ರೀತಿಯಾಗಿ ಇರಲಿದೆ. ನೀವು 10 ಲಕ್ಷಕ್ಕೆ ಯೋಜನೆ ಹಾಕಿಕೊಂಡು 19ನೇ ವಯಸ್ಸಿನಲ್ಲಿ ಆರಂಭ ಮಾಡಿದರೆ ನಿಮಗೆ ತಿಂಗಳ ವಿಮೆ 1500 ಬೀಳಲಿದೆ.

ನೀವು 55 ವರ್ಷಗಳ ಕಾಲ 1500 ಗಳನ್ನು ಪ್ರತಿ ತಿಂಗಳು ಹೂಡಿಕೆ ಮಾಡಬೇಕು ಹಾಗಿದ್ದಲ್ಲಿ ಅಂತ್ಯದಲ್ಲಿ 31.60ಲಕ್ಷ ಕೈ ಸೇರಲಿದೆ. ಒಂದು ವೇಳೆ 58 ವರ್ಷಕ್ಕೆ ನೀವು ಹೂಡಿಕೆ ಮಾಡಬಯಸಿದರೆ,1463 ರೂಪಾಯಿ ಬೀಳಲಿದ್ದು 33.40 ಲಕ್ಷ ಮೆಚ್ಯುರಿಟಿ ಆದ ವೇಳೆ ಕೈ ಸೇರಲಿದೆ. ಒಂದು ವೇಳೆ 60 ವರ್ಷದವರೆಗೂ ನೀವು ಹಣ ಕಟ್ಟ ಬಯಸಿದರೆ 1411 ರೂ ಬೀಳಲಿದೆ ಮತ್ತು ಅಂತ್ಯದಲ್ಲಿ ನಿಮಗೆ 34.60 ಲಕ್ಷಹಣ ಕೈ ಸೇರಲಿದೆ. ಈ ಪ್ರೀಮಿಯಂಗಳ ಹಣದ ಮೊತ್ತವನ್ನು ಕಟ್ಟಲು ನಿಮಗೆ 30 ದಿನಗಳ ಕಾಲ ಗ್ರೇಸ್ ಅವಧಿಯು ಸಹ ಸಿಗಲಿದೆ. ಈ ಉಪಯುಕ್ತ ಮಾಹಿತಿಯ ವಿವರಗಳನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರೊಡನೆಯೂ ಹಂಚಿಕೊಳ್ಳಿ.

Leave a Comment

%d bloggers like this: