ದೇಶದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೂ ಕೂಡ ಸಿಹಿ ಸುದ್ದಿ ಸಿಕ್ಕಿದೆ. ಅದೇನೆಂದರೆ ಶೀಘ್ರದಲ್ಲಿಯೇ ಬರೋಬ್ಬರಿ 7,500ಕ್ಕೂ ಹೆಚ್ಚು ಹುದ್ದೆಗಳಿಗೆ ಕೇಂದ್ರ ಸರ್ಕಾರವು ನೇಮಕಾತಿ ಮಾಡಿಕೊಳ್ಳುತ್ತಿದೆ. ಅಂಚೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗಾಗಿ ಈ ನೇಮಕಾತಿ ನಡೆಯುತ್ತಿದ್ದು ಭಾರತದಾದ್ಯಂತ ಇರುವ ಎಲ್ಲಾ ಅರ್ಹ ಪುರಷ ಹಾಗೂ ಮಹಿಳಾ ಅಭ್ಯರ್ಥಿಗಳು ಕೂಡ ಇವುಗಳಿಗೆ ಅರ್ಜಿ ಸಲ್ಲಿಸಿ ಉದ್ಯೋಗ ಪಡೆದುಕೊಳ್ಳಬಹುದು.
ಇಲಾಖೆಯು ಇದಕ್ಕಾಗಿ ಅಧಿಕೃತ ಅಧಿಸೂಚನೆಯನ್ನು ಕೂಡ ಹೊರಡಿಸಿದ್ದು ಆಸಕ್ತಿ ಇರುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿರುವ ನಿಯಮಗಳ ಅನುಸಾರವಾಗಿ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಿದೆ. ಈ ಅಂಕಣದಲ್ಲಿ ಆಸಕ್ತ ಅಭ್ಯರ್ಥಿಗಳಿಗೆ ಅನುಕೂಲ ಮಾಡಿ ಕೊಡುವ ಸಲುವಾಗಿ ಅಧಿಸೂಚನೆಯಲ್ಲಿರುವ ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ಅಂಶಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಟ್ಟು ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ತಿಳಿದುಕೊಳ್ಳಬಹುದು.
ಉದ್ಯೋಗ ಇಲಾಖೆ:- ಅಂಚೆ ಇಲಾಖೆ
ಉದ್ಯೋಗ ಸ್ಥಳ:- ಭಾರತದಾದ್ಯಂತ
ಹುದ್ದೆಗಳ ಸಂಖ್ಯೆ:- 7500
ಹುದ್ದೆಗಳ ವಿವರ:-
● ಇನ್ಸ್ಪೆಕ್ಟರ್
● ಅಂಚೆ ಸಹಾಯಕ
● ಶಾರ್ಟಿಂಗ್ ಅಸಿಸ್ಟೆಂಟ್
ವೇತನ ಶ್ರೇಣಿ:- ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಆಯಾ ಹುದ್ದೆಗಳಿಗೆ ಅನುಸಾರವಾಗಿ 18,000 – 81,000ರೂ. ವೇತನ ಮಾಸಿಕವಾಗಿ ಸಿಗಲಿದೆ.
ವಯಸ್ಸಿನ ಮಿತಿ:-
ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಸರಿಯಾಗಿ ಕನಿಷ್ಠ 18 ವರ್ಷ ಪೂರೈಸಿರಬೇಕು, ಗರಿಷ್ಠ 32 ವರ್ಷಗಳನ್ನು ಮೀರಿರಬಾರದು.
ವಯೋಮಾನ ಸಡಿಲಿಕೆ:-
● SC,ST ಅಭ್ಯರ್ಥಿಗಳಿಗೆ 5 ವರ್ಷಗಳು
● OBCಅಭ್ಯರ್ಥಿಗಳಿಗೆ 3 ವರ್ಷಗಳು
ಅರ್ಜಿ ಶುಲ್ಕ:-
● ಸಾಮಾನ್ಯ ಹಾಗೂ OBC ಅಭ್ಯರ್ಥಿಗಳಿಗೆ 100ರೂ.
● ಉಳಿದ ಯಾವುದೇ ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿ ಮಾಡುವ ಅವಶ್ಯಕತೆ ಇಲ್ಲ.
ಶೈಕ್ಷಣಿಕ ವಿದ್ಯಾರ್ಹತೆ:-
ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದ ಅಭ್ಯರ್ಥಿಗಳು ಮಾತ್ರ ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಆಯ್ಕೆ ವಿಧಾನ:-
● ಲಿಖಿತ ಪರೀಕ್ಷೆ
● ಸಂದರ್ಶನ
● ದಾಖಲಾತಿ ಪರಿಶೀಲನೆ
ಅರ್ಜಿ ಸಲ್ಲಿಸುವ ವಿಧಾನ:-
● ಅಧಿಸೂಚನೆಯಲ್ಲಿ ತಿಳಿಸಲಾಗಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು.
● ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
● ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಟ್ಟು, ಅರ್ಜಿ ಫಾರಂ ಭರ್ತಿ ಮಾಡಿ ಅಧಿಸೂಚನೆಯಲ್ಲಿ ಕೇಳಿದ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿಗೆ ಸಂಬಂಧಪಟ್ಟ ಪ್ರಮಾಣ ಪತ್ರ ಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಅರ್ಜಿ ಫಾರಂ ಸಬ್ಮಿಟ್ ಮಾಡಬೇಕು.
● ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮುಗಿದ ನಂತರ ಪ್ರಿಂಟ್ ತೆಗೆದಿಟ್ಟುಕೊಳ್ಳಬೇಕು ಅಥವಾ ಅರ್ಜಿ ಸಂಖ್ಯೆ, ವಿನಂತಿ ಸಂಖ್ಯೆ ಇತ್ಯಾದಿಗಳನ್ನು ದಾಖಲಿಸಿಕೊಳ್ಳಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
● ಇತ್ತೀಚಿನ ಭಾವಚಿತ್ರ ಮತ್ತು ಸಹಿ
●ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ
● ಆಧಾರ್ ಕಾರ್ಡ್
● ಜಾತಿ ಮತ್ತು ಆದಾಯ ಪ್ರಮಾಣ ಪತ್ರ
● ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು
● ಇತ್ಯಾದಿ ಪ್ರಮುಖ ದಾಖಲೆಗಳು
ಪ್ರಮುಖ ದಿನಾಂಕಗಳು
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 3 ಏಪ್ರಿಲ್, 2023
● ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ – 3 ಮೇ, 2023