ಪೋಸ್ಟ್ ಆಫೀಸ್ ನಲ್ಲಿ ಕೇವಲ 5 ಲಕ್ಷ ಹೂಡಿಕೆ ಮಾಡಿ ಸಾಕು 2 ಲಕ್ಷದವರೆಗೆ ಬಡ್ಡಿ ಸಿಗುತ್ತೆ. ನಿಮ್ಮ ಹಣ ದುಪ್ಪಟ್ಟು ಮಾಡಲು ಇದಕ್ಕಿಂತ ಬೆಸ್ಟ್ ಸ್ಕೀಮ್ ಮತ್ತೊಂದಿಲ್ಲ ನೋಡಿ.!

 

ಹಣವನ್ನು ದುಡಿಯೋದು ಮಾತ್ರವಲ್ಲದೆ ಅದನ್ನು ವ್ಯವಸ್ಥಿತವಾಗಿ ಉಳಿತಾಯ ಮಾಡಿ ಇಟ್ಟುಕೊಳ್ಳುವುದು ಕೂಡ ಅಷ್ಟೇ ಮುಖ್ಯವಾದ ವಿಷಯ. ದುಡಿಯುವ ವಯಸ್ಸಿನಲ್ಲಿ ಹಣವನ್ನು ಒಳ್ಳೆಯ ಯೋಜನೆಗಳಲ್ಲಿ ಹೂಡಿಕೆ ಮಾಡಿ ಉಳಿತಾಯ ಮಾಡಿಟ್ಟುಕೊಂಡರೆ ಭವಿಷ್ಯದಲ್ಲಿ ಅದು ನಿಮಗೆ ಸಹಾಯಕ್ಕೆ ಬರುತ್ತದೆ. ಈ ರೀತಿ ಹಣ ಹೂಡಿಕೆ ಮಾಡುವವರು ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಗಳ ಮೊರೆ ಹೋಗುತ್ತಾರೆ.

ಕಾರಣ ಅಂಚೆ ಕಚೇರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಹಣಕಾಸಿನ ವ್ಯವಹಾರ ಹೆಚ್ಚು ಸುರಕ್ಷಿತವಾಗಿರುತ್ತದೆ. ಅದರಲ್ಲೂ ಅಂಚೆ ಕಛೇರಿಯಲ್ಲಿ ಹೂಡಿಕೆ ಮಾಡುವಂತಹ ಹಣಕ್ಕೆ ಕೇಂದ್ರ ಸರ್ಕಾರವೇ ಭದ್ರತೆ ಕೊಡುತ್ತದೆ. ಹಾಗಾಗಿ ಹಣ ಹೂಡಿಕೆ ಮಾಡಿ ಲಾಭ ಪಡೆಯಲು ಇಚ್ಚಿಸುವವರು ಲಾಭದ ಜೊತೆಗೆ ಹಣಕ್ಕೆ ಮೋಸ ಆಗಬಾರದು ಎನ್ನುವ ಕಾರಣಕ್ಕೆ ಪೋಸ್ಟ್ ಆಫೀಸ್ನ ಸ್ಕೀಮ್ ಗಳ ಕಡೆ ಮನಸ್ಸು ಮಾಡುತ್ತಾರೆ.

ಪೋಸ್ಟ್ ಆಫೀಸಿನ ಹಲವು ಸ್ಕೀಮ್ ಗಳು ಈಗ ದೇಶದಾದ್ಯಂತ ಹೆಸರುವಾಸಿಯಾಗಿದೆ. ಎಲ್ಲಾ ವರ್ಗದವರಿಗೂ ಅನುಕೂಲವಾಗುವಂತಹ ಯೋಜನೆಗಳು ಪೋಸ್ಟ್ ಆಫೀಸ್ ಮೂಲಕ ಸಿಗುತ್ತಿದ್ದು ಈ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿದರೆ ಅವರ ಅವಶ್ಯಕತೆಯ ಕಾಲಕ್ಕೆ ಹಣ ಸಿಗುತ್ತದೆ. ಇಂತಹ ಯೋಜನೆಗಳ ಪೈಕಿ ಹಿರಿಯ ನಾಗರಿಕರಿಗಾಗಿ ಇರುವ ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಕೂಡ ಒಂದು.

ಈ ಯೋಜನೆ ಉದ್ದೇಶ ಏನೆಂದರೆ ಜೀವನ ಪೂರ್ತಿ ದುಡಿದು ಹಣ ಸಂಗ್ರಹಿಸಿದ್ದ ಹಿರಿಯ ನಾಗರಿಕರು ಆ ಹಣದಿಂದ ಬರುವ ಬಡ್ಡಿಯ ಮೂಲಕ ಉಳಿದ ಬದುಕನ್ನು ನೆಮ್ಮದಿಯಾಗಿ ಕಳೆಯಲಿ ಎನ್ನುವುದು. ಅದಕ್ಕಾಗಿ ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ ದರದ ಜೊತೆ ಅನೇಕ ಅನುಕೂಲತೆ ಕೊಟ್ಟು ಈ ಯೋಜನೆಯನ್ನು ಜಾರಿಗೆ ತಂದಿದೆ. ಅಂಚೆ ಕಛೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಗ್ಗೆ ಕೆಲವು ಪ್ರಮುಖ ಅಂಶಗಳನ್ನು ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.

● ಈ ಯೋಜನೆಯಲ್ಲಿ ಹಿರಿಯ ನಾಗರಿಕರು ಗರಿಷ್ಠ 5 ಲಕ್ಷದವರೆಗೆ ಹೆಚ್ಚಿನ ಬಡ್ಡಿದರದಲ್ಲಿ ಹೂಡಿಕೆ ಮಾಡಬಹುದು.
● 60 ವರ್ಷ ಮೇಲ್ಪಟ್ಟವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
● ಪ್ರಸ್ತುತವಾಗಿ ಈ ಯೋಜನೆಯ ಬಡ್ಡಿ ದರವು 8.2% ಇದೆ.
● ಈ ಯೋಜನೆ ಅಡಿ ಸಿಗುವ ಬಡ್ಡಿ ದರವನ್ನು ನೀವು ತ್ರೈಮಾಸಿಕವಾಗಿ ಅಥವಾ ಅರ್ಧ ವಾರ್ಷಿಕವಾಗಿ ಅಥವಾ ವಾರ್ಷಿಕವಾಗಿ ಹಿಂಪಡೆಯಬಹುದು.

● ನೀವು ಈ ಯೋಜನೆ ಅಡಿ 5 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿದರೆ ಮೂರು ತಿಂಗಳಿಗೆ ಒಮ್ಮೆ 10,000 ಬಡ್ಡಿ ರೂಪದಲ್ಲಿ ಪಡೆಯುತ್ತೀರಿ ಅಥವಾ ವಾರ್ಷಿಕವಾಗಿ ಪಡೆಯುವುದಾದರೆ 41,000 ರೂಗಳು ಸಿಗುತ್ತದೆ.
● ನೀವು 5 ವರ್ಷಗಳವರೆಗೆ 5 ಲಕ್ಷ ರೂಪಾಯಿಗಳನ್ನು ಹಿರಿಯ ನಾಗರಿಕರ ಉಳಿತಾಯ ಯೋಜನೆಯಡಿ ಹೂಡಿಕೆ ಮಾಡಿದ್ದೆ ಆದರೆ 5 ವರ್ಷಕ್ಕೆ ನೀವು ಪಡೆಯುವ ಬಡ್ಡಿ ಹಣವು 2 ಲಕ್ಷಕ್ಕಿಂತ ಹೆಚ್ಚಾಗಿರುತ್ತದೆ.

● ಈ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ನಾಮಿನಿ ಫೆಸಿಲಿಟಿ ಕೂಡ ಇದ್ದು ಹೂಡಿಕೆ ಮಾಡಿದ ಹಿರಿಯ ನಾಗರಿಕರು ಯೋಜನೆಯ ಅವಧಿ ಪೂರ್ಣಗೊಳ್ಳುವ ಮುನ್ನ ಮೃತಪಟ್ಟಲ್ಲಿ ಯೋಜನೆ ಕ್ಯಾನ್ಸಲ್ ಆಗುತ್ತದೆ ಮತ್ತು ಅವರಿಗೆ ಸಲ್ಲಬೇಕಾದ ಹಣವು ಅವರ ಕಾನೂನಾತ್ಮಕ ವಾರಸುದಾರರಿಗೆ ಸಲ್ಲುತ್ತದೆ.
● ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಿಮ್ಮ ಗ್ರಾಮದಲ್ಲಿರುವ ಅಂಚೆ ಕಚೇರಿಗೆ ಹೋಗಿ ವಿಚಾರಿಸಬಹುದು ಅಥವಾ ಇಲಾಖೆಯ ಅಧಿಕೃತ ವೆಬ್ಸೈಟ್ಗಳಲ್ಲಿ ಸರ್ಚ್ ಮಾಡುವ ಮೂಲಕ ಪೂರ್ತಿ ಮಾಹಿತಿ ತಿಳಿದುಕೊಳ್ಳಬಹುದು.

Leave a Comment

%d bloggers like this: