ಕೇಂದ್ರ ಸರ್ಕಾರವು (Governmebt Schemes) ತನ್ನ ಅಧೀನ ಇಲಾಖೆಯಾಗಿರುವ ಅಂಚೆ ಕಚೇರಿ (post office) ಮೂಲಕ ಸಾಕಷ್ಟು ಯೋಜನೆಗಳನ್ನು ಪರಿಚಯಿಸುತ್ತಿದೆ. ಅಂಚೆ ಕಚೇರಿಯ ಈ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಭವಿಷ್ಯದಲ್ಲಿ ಉತ್ತಮ ಲಾಭಗಳನ್ನು ಹೊಂದಬಹುದು.
ಸುಕನ್ಯಾ ಸಮೃದ್ಧಿ ಯೋಜನೆ, ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಕಿಸಾನ್ ವಿಕಾಸ್ ಪತ್ರ, ಅಂಚೆ ಕಚೇರಿ ಮಹಿಳಾ ಸಮ್ಮಾನ್ ಯೋಜನೆ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಸೇರಿದಂತೆ ಸುಮಾರು ಹತ್ತಕ್ಕೂ ಹೆಚ್ಚು ಯೋಜನೆಗಳಿವೆ. ಇವುಗಳಲ್ಲಿ ದೇಶದ ನಾಗರಿಕರು ತಮಗೆ ಅನುಕೂಲ ಆಗುವ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು.
ಈ ರೀತಿ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡುವ ಹಣವು ನೂರಕ್ಕೆ ನೂರರಷ್ಟು ಸರ್ಕಾರವೇ ಗ್ಯಾರಂಟಿಯಾಗಿರುತ್ತದೆ ಮತ್ತು ನಿಶ್ಚಿತ ಲಾಭವು ಇರುತ್ತದೆ. ಆದರೆ ಯೋಜನೆ ಅವಧಿ ಮುನ್ನ ಹಣ ಹಿಂಪಡೆಯುವುದಾದರೆ ಲಾಭವನ್ನು ನಿರೀಕ್ಷಿಸಲು ಆಗುವುದಿಲ್ಲ ಜೊತೆಗೆ ಇನ್ನು ಮುಂದೆ ಮೆಚ್ಯುರಿಟಿ ಅವಧಿಗೂ ಮುನ್ನ ಸ್ಕೀಮ್ ಕ್ಯಾನ್ಸಲ್ ಮಾಡಿ ಹಣ ಪಡೆಯುವುದು ಕ’ಷ್ಟ ಸಾಧ್ಯ.
ಯಾಕೆಂದರೆ ಅಂಚೆ ಕಚೇರಿ ಈ ಯೋಜನೆಗೆ ಹೊಸದೊಂದು ನಿಯಮ ಜಾರಿಗೆ ತಂದಿದೆ. ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆಯಡಿ (SCSS) ಹಿರಿಯ ನಾಗರಿಕರು 5 ವರ್ಷಗಳ ಅವಧಿಗೆ ಹಣ ಹೂಡಿಕೆ ಮಾಡಿ ನಂತರ 3 ವರ್ಷದವರೆಗೆ ವಿಸ್ತರಿಸಬಹುದಿತ್ತು ಮತ್ತು ಯೋಜನೆ ಆರಂಭಿಸಿದ ಮೊದಲ ವರ್ಷದಲ್ಲಿಯೇ ಯೋಜನೆ ರದ್ದುಪಡಿಸಿ ಹಣ ಹಿಂಪಡೆಯುವುದಾದರೆ ಅದಕ್ಕೆ ಯಾವುದೇ ಲಾಭ ರೂಪದ ಬಡ್ಡಿ ಹಣವನ್ನು ನೀಡದೆ ಅಸಲಿ ಮೊತ್ತವನಷ್ಟೇ ಹಿಂತಿರುಗಿಸಲಾಗುತ್ತಿತ್ತು.
ಆದರೆ ಇನ್ನು ಮುಂದೆ ಈ ರೀತಿ ಆಗುವುದಿಲ್ಲ ಒಂದು ವೇಳೆ ಹಿರಿಯ ನಾಗರಿಕರು ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿ ಮೊದಲ ವರ್ಷದಲ್ಲಿ ಹಿಂಪಡೆಯುವುದಾದರೆ 1% ಹೂಡಿಕೆ ಮೊತ್ತದಲ್ಲಿ ಹಣವನ್ನು ಕಡಿತಗೊಳಿಸಲಾಗುತ್ತದೆ. ಹಾಗಾಗಿ ಯೋಚನೆ ಮಾಡಿ ಹೂಡಿಕೆ ಮಾಡುವುದು ಉತ್ತಮ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಯಡಿ ಹೂಡಿಕೆ ಮಾಡುವುದರಿಂದ ಬಹಳಷ್ಟು ಲಾಭವಿದೆ ಹಾಗಾಗಿ ಯೋಜನೆ ಕುರಿತ ಪ್ರಮುಖ ಮಾಹಿತಿ ಬಗ್ಗೆ ಕೂಡ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
* ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಸರ್ಕಾರಿ ಹೂಡಿಕೆ ಯೋಜನೆಯಾಗಿದ್ದು, ಇದು ಅಂಚೆ ಕಛೇರಿಯ ಸಣ್ಣ ಉಳಿತಾಯ ಯೋಜನೆಯಡಿ ಬರುತ್ತದೆ. ಭಾರತದ ನಾಗರಿಕನಾಗಿರುವ 60 ವರ್ಷ ಪೂರೈಸಿದ ಯಾವುದೇ ವ್ಯಕ್ತಿ ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
* VRS ನಿವೃತ್ತಿಯನ್ನು ಪಡೆದುಕೊಂಡ ವ್ಯಕ್ತಿಯು 55 ವರ್ಷ ಮೇಲ್ಪಟ್ಟು 60 ವರ್ಷದೊಳಗೆ ಈ SCSS ಖಾತೆಯನ್ನು ತೆರೆಯಬಹುದು. ಮಿಲಿಟರಿ ಸೇವೆಗಳಿಂದ ನಿವೃತ್ತರಾದ ವ್ಯಕ್ತಿಯು 50 ವರ್ಷ ವಯಸಿನಲ್ಲಿಯೂ SCSS ಖಾತೆ ತೆರೆಯಬಹುದು.
* ಒಂದೇ ಬಾರಿಗೆ ಹಣವನ್ನು ಠೇವಣಿ ಇಡುವಂತಹ ಯೋಜನೆ ಇದಾಗಿದೆ, ಕನಿಷ್ಠ 1000 ರೂ. ಇಂದ ಈ ಯೋಜನೆಯನ್ನು ಪ್ರಾರಂಭಿಸಬಹುದು ಮತ್ತು ಗರಿಷ್ಠ 30 ಲಕ್ಷ ಹೂಡಿಕೆ ಇಡಬಹುದು.
* ಯೋಜನೆಯ ಮೆಚುರಿಟಿ ಅವಧಿ 5 ವರ್ಷಗಳು. ಇದಾದ ನಂತರ ಮೂರು ವರ್ಷಗಳವರೆಗೆ ವಿಸ್ತರಿಸಬಹುದು.
* ಈ ಯೋಜನೆಯಡಿ ಮಾಡಿರುವ ಹೂಡಿಕೆ ಮೇಲೆ ಪಡೆಯುವ ಆದಾಯಕ್ಕೆ ಆದಾಯ ತೆರಿಗೆಯ ಸೆಕ್ಷನ್ 80C ಯ ಅನ್ವಯ ತೆರಿಗೆ ವಿನಾಯಿತಿ ಇರುತ್ತದೆ. ಇದರ ಮೂಲಕ ನೀವು 1.5 ಲಕ್ಷದವರೆಗೆ ರಿಯಾಯಿತಿ ಪಡೆಯಬಹುದು.
* ಈ ಯೋಜನೆಯಲ್ಲಿ ಹಿರಿಯ ನಾಗರಿಕರು ಹೂಡಿಕೆ ಮಾಡುವ ಹಣಕ್ಕೆ 8.2%ರಷ್ಟು ಬಡ್ಡಿಯನ್ನು ಸರ್ಕಾರವು ಗೆ ನೀಡುತ್ತಿದೆ. ಹಾಗೂ ಪ್ರತಿ ತ್ರೈಮಾಸಿಕಕೊಮ್ಮೆ ಇದು ಪರಿಷ್ಕೃತಗೊಳ್ಳುತ್ತಿರುತ್ತದೆ.