ಕೇಂದ್ರ ವಿದ್ಯುತ್ ಇಲಾಖೆ ಅಡಿಯಲ್ಲಿ ಬರುವ ಸಟ್ಲೆಜ್ ಜಲ ವಿದ್ಯುತ್ ನಿಗಮದಲ್ಲಿ SJVN ಹಲವು ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಇದೊಂದು ಕೇಂದ್ರ ಸರ್ಕಾರದ ಹುದ್ದೆ ಆಗಿದ್ದು, ದೇಶದ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಇದು ಸದಾವಕಾಶವಾಗಿದೆ. ಯಾರಿಗಾದರೂ ಸರ್ಕಾರಿ ಉದ್ಯೋಗ ಪಡೆಯಬೇಕು ಎನ್ನುವ ಆಸಕ್ತಿ ಇದ್ದರೆ ಸಟ್ಲೆಜ್ ಜಲವಿದ್ಯುತ್ ನಿಗಮ ಹೊರಡಿಸಿರುವ ಅದಿಸೂಚನೆಯಲ್ಲಿರುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೆ ಈ ಕೂಡಲೇ ಅರ್ಜಿ ಸಲ್ಲಿಸಿ ಉದ್ಯೋಗ ಪಡೆದುಕೊಳ್ಳಲಿ.
ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ಅಂಕಣದಲ್ಲಿ ಉದ್ಯೋಗದ ಕುರಿತು ಕೆಲ ಪ್ರಮುಖ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಅವುಗಳನ್ನೆಲ್ಲ ಓದಿ ಅರ್ಥೈಸಿಕೊಂಡು ಆ ಪ್ರಕಾರವಾಗಿ ಅರ್ಜಿ ಸಲ್ಲಿಸಿ.
ಇಲಾಖೆ ಕೇಂದ್ರ:- ವಿದ್ಯುತ್ ಇಲಾಖೆ
ಸಂಸ್ಥೆ:- ಸಟ್ಲೆಜ್ ಜಲ ವಿದ್ಯುತ್ ನಿಗಮ SJVN
ಹುದ್ದೆಗಳ ಸಂಖ್ಯೆ:- 50
ಹುದ್ದೆಗಳ ವಿವರ
● ಫೀಲ್ಡ್ ಮ್ಯಾನೇಜರ್ ಎಲೆಕ್ಟ್ರಿಕಲ್ – 12
● ಫೀಲ್ಡ್ ಮ್ಯಾನೇಜರ್ ಮೆಕಾನಿಕಲ್ – 14
● ಫೀಲ್ಡ್ ಮ್ಯಾನೇಜರ್ ಸಿವಿಲ್ – 24
ವೇತನ ಶ್ರೇಣಿ:-
● ಆಯ್ಕೆ ಆದ ಎಲ್ಲ ಅಭ್ಯರ್ಥಿಗಳಿಗೂ ಕೂಡ ಕನಿಷ್ಠ 80,000 ದಿಂದ 1,18,000 ವರೆಗೆ ವೇತನ ಇರಲಿದೆ
● ಇದರೊಂದಿಗೆ ಪ್ರತ್ಯೇಕವಾಗಿ DA ಮತ್ತು HRA ದೊರೆಯಲಿದೆ.
ಶೈಕ್ಷಣಿಕ ಅರ್ಹತೆಗಳು:-
● ಜಲ ವಿದ್ಯುತ್ ನಿಗಮ ಹೊರಡಿಸಿರುವ ಅಧಿಸೂಚನೆ ಪ್ರಕಾರ ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್, ಮೆಕಾನಿಕಲ್ ಅಥವಾ ಸಿವಿಲ್ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಹೊಂದಿರಬೇಕು.
● ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಠ ಆರು ವರ್ಷಗಳ ಅನುಭವ ಹೊಂದಿರಬೇಕು.
ವಯೋಮಿತಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯ 18 ವರ್ಷ ಉಳಿದಿರಬೇಕು ಗರಿಷ್ಠ 35 ವರ್ಷಗಳನ್ನು ಮೀರಿರಬಾರದು.
ವಯೋಮಿತಿ ಸಡಿಲಿಕೆ:-
● SC, ST ಪ್ರವರ್ಗ1 ಅಕಭ ಐದು ವರ್ಷಗಳು
● OBC ವರ್ಷ ಅಭ್ಯರ್ಥಿಗಳಿಗೆ 3 ವರ್ಷಗಳು
● ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವರ್ಷಗಳು
ಅರ್ಜಿ ಶುಲ್ಕ:-
● ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳು ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ
● ಇನ್ನುಳಿದ ಎಲ್ಲಾ ಅಭ್ಯರ್ಥಿಗಳಿಗೂ ಕೂಡ 500 + GST
●ಇಂಟರ್ನೆಟ್ ಬ್ಯಾಂಕಿಂಗ್ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಆನ್ ಲೈನ್ ಮೂಲಕ ಫೀಸ್ ಪೇ ಮಾಡಬಹುದು.
ಆಯ್ಕೆ ವಿಧಾನ:-
● ಸ್ಪರ್ಧಾತ್ಮಕ ಪರೀಕ್ಷೆ
● ಸಂದರ್ಶನ
● ದಾಖಲೆಗಳ ಪರಿಶೀಲನೆ
ಅರ್ಜಿ ಸಲ್ಲಿಸುವ ಪ್ರಕ್ರಿಯೆ:-
● ಸಟ್ಲೆಜ್ ಜಲ ವಿದ್ಯುತ್ ನಿಗಮ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿರುವ ಅರ್ಹತೆಗಳನ್ನು ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಸಬೇಕು.
● ವೆಬ್ ಸೈಟ್ ಗೆ ತೆರಳಿ ಅರ್ಜಿ ಫಾರಂ ಪಡೆದು ಮಾಹಿತಿ ತುಂಬಿ ಅಗತ್ಯವಾದ ದಾಖಲೆಗಳನ್ನೆಲ್ಲ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಪ್ರಕ್ರಿಯ ಪೂರ್ತಿಗೊಳಿಸಬಹುದು.
ನಿಮ್ಮ ಅನುಕೂಲಕ್ಕಾಗಿ ಅರ್ಜಿ ಸಲ್ಲಿಕೆ ಪ್ರಿಂಟ್ ಔಟ್ ತೆಗೆದುಕೊಳ್ಳಿ ಅಥವಾ ಅರ್ಜಿ ಸಂಖ್ಯೆ ,ವಿನಂತಿ ಸಂಖ್ಯೆ ಬರೆದಿಟ್ಟುಕೊಳ್ಳಿ.
ವೆಬ್ಸೈಟ್ ವಿಳಾಸ:-
www.sjvn.nic.in
ಪ್ರಮುಖ ದಿನಾಂಕಗಳು
ಅತಿ ಸಲ್ಲಿಸಲು ಮೊದಲ ದಿನಾಂಕ – 07.04.2023
ಅರ್ಜಿ ಸಲ್ಲಿಸುವ ಕಡೆ ದಿನಾಂಕ – 28.4.2023