ತುಂಬಾ ಜನರು ತುಂಬಾ ಚಿಕ್ಕವಯಸ್ಸಿಗೆ ಅನೇಕ ರೀತಿಯಾದಂತಹ ಕಾಯಿಲೆಗಳಿಂದ ಬಳಲುತ್ತಾ ಇದ್ದಾರೆ ನಾವಿಲ್ಲಿ ತಿಳಿಸುವಂತಹ ಈ ಒಂದು ಕಷಾಯವನ್ನು ಕುಡಿಯುವುದರಿಂದ ಅನೇಕ ರೀತಿಯಾದಂತಹ ಕಾಯಿಲೆಗಳು ದೂರವಾಗುತ್ತದೆ. ಅಷ್ಟೊಂದು ಔಷಧೀಯ ಗುಣಗಳು ಈ ಕಷಾಯದಲ್ಲಿ ಇದೆ ದಿನಕ್ಕೆ ಈ ಒಂದು ಲೋಟ ಕಷಾಯವನ್ನು ಕುಡಿಯುತ್ತಾ ಬಂದರೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ, ಎಷ್ಟೇ ವಯಸ್ಸಾದರೂ ಸಹ ನಾವು ಲವಲವಿಕೆಯಿಂದ ಚಿಕ್ಕ ವಯಸ್ಕರಂತೆ ಓಡಾಡಿಕೊಂಡು ಇರಬಹುದು. ನಮಗೆ ಸುಸ್ತು, ಆಯಾಸ ಇದ್ದರೂ ಸಹ ನಿವಾರಣೆಯಾಗುತ್ತದೆ ಯಾವುದೇ ರೀತಿಯಾದಂತಹ ರೋಗಗಳು ನಮ್ಮ ಹತ್ತಿರ ಸುಳಿಯದಂತೆ ಇದು ಕಾಪಾಡುತ್ತದೆ.
ಈ ಒಂದು ಕಷಾಯವನ್ನು ಮಾಡಿಕೊಳ್ಳಲು ಬೇಕಾಗಿರುವಂತಹದ್ದು ಮುಖ್ಯವಾಗಿ ಜೀರಿಗೆ ಈ ಒಂದು ಜೀರಿಗೆ ಎಲ್ಲಾ ಅಡುಗೆ ಮನೆಯಲ್ಲಿ ಸಹ ಇದ್ದೇ ಇರುತ್ತದೆ ಜೀರಿಗೆಯಲ್ಲಿ ಅತ್ಯುತ್ತಮವಾದಂತಹ ಔಷಧೀಯ ಗುಣಗಳು ಇದೆ ಈ ಜೀರಿಗೆಯನ್ನು ಆಯುರ್ವೇದದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಲಾಗಿದೆ ಅಷ್ಟೊಂದು ಅದ್ಭುತವಾದಂತಹ ಔಷದಿಯ ಗುಣಗಳನ್ನು ಹೊಂದಿದೆ. ನಮ್ಮ ದೇಹಕ್ಕೆ ಇದು ತಂಪು ಮತ್ತು ಹೀಟ್ ಎರಡು ತರಹದ ಅಂಶಗಳನ್ನು ಒದಗಿಸುತ್ತದೆ ಇದರ ಬಳಕೆಯನ್ನು ನಾವು ಸರಿಯಾದ ವಿಧಾನದಲ್ಲಿ ಮಾಡಿದ್ದೆ ಆದಲ್ಲಿ ಇದರ ಪ್ರಯೋಜನವನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ. ಈ ಒಂದು ಜೀರಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಐರನ್ ಕ್ಯಾಲ್ಸಿಯಂ ಮೆಗ್ನೀಷಿಯಂ ಅದರ ಜೊತೆಗೆ ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಸಿ, ವಿಟಮಿನ್ ಕೆ ಹೇರಳವಾಗಿ ಇರುವುದರಿಂದ ಇದು ನಮ್ಮ ದೇಹಕ್ಕೆ ತುಂಬಾನೆ ಒಳ್ಳೆಯದು.
ಇನ್ನು ಜೀರಿಗೆಯಲ್ಲಿ ಇರುವಂತಹ ವಿಟಮಿನ್ ಎ ಮತ್ತು ವಿಟಮಿನ್ ಸಿ ಆಂಟಿಆಕ್ಸಿಡೆಂಟ್ ರೀತಿಯಲ್ಲಿ ಕೆಲಸ ಮಾಡುವುದರಿಂದ ನಮ್ಮ ದೇಹಕ್ಕೆ ತಗಲುವಂತಹ ಸೋಂಕನ್ನು ಇದು ನಿವಾರಣೆ ಮಾಡುತ್ತದೆ. ಈ ಒಂದು ಕಷಾಯವನ್ನು ಮಾಡುವ ವಿಧಾನ ನೋಡುವುದಾದರೆ ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಅರ್ಧ ಟೇಬಲ್ ಸ್ಪೂನ್ ನಷ್ಟು ಜೀರಿಗೆಯನ್ನು ಹಾಕಿ ಅದಕ್ಕೆ ಒಂದು ಲೋಟದಷ್ಟು ನೀರನ್ನು ಹಾಕಿ ಅದನ್ನು ರಾತ್ರಿ ಮಲಗುವ ಮುನ್ನ ಮುಚ್ಚಿ ನೆನೆಸಿ ಇಟ್ಟುಕೊಳ್ಳಬೇಕು ಬೆಳಿಗ್ಗೆ ಎದ್ದ ನಂತರ ಜೀರಿಗೆಯಲ್ಲಿ ಇದ್ದಂತಹ ಅಂಶಗಳು ನೀರಿನಲ್ಲಿ ಬಿಟ್ಟಿರುತ್ತದೆ ನಂತರ ಅದನ್ನು ಒಂದು ಪಾತ್ರೆಗೆ ಹಾಕಿಕೊಂಡು ನಾಲ್ಕರಿಂದ ಐದು ನಿಮಿಷಗಳ ಕಾಲ ಚೆನ್ನಾಗಿ ಕುಳಿತು ಕುದಿಸಿಕೊಳ್ಳಬೇಕು ಇದನ್ನು ನೀವು ಹಾಗೆ ಕುಡಿಯಲು ಆಗುವುದಿಲ್ಲ ಎಂದುಕೊಂಡರೆ ಸ್ವಲ್ಪ ಬೆಲ್ಲವನ್ನು ಇದಕ್ಕೆ ಸೇರಿಸಿಕೊಳ್ಳಬಹುದು.
ಈ ರೀತಿಯಾಗಿ ನೀವು ಜೀರಿಗೆ ಕಷಾಯವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಕಲ್ಮಶವನ್ನು ಇದು ಹೊರಗೆ ಹಾಕುತ್ತದೆ. ಅದರ ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಯಾವುದೇ ರೀತಿಯಾದಂತಹ ಕಾಯಿಲೆಗಳು ನಮ್ಮ ಹತ್ತಿರ ಬಾರದೆ ಇರುವ ಹಾಗೆ ಇದು ಕಾಪಾಡುತ್ತದೆ. ಈ ಒಂದು ಕಷಾಯವನ್ನು ನೀವು ಸ್ವಲ್ಪ ಬೆಚ್ಚಗೆ ಇರುವಾಗಲೆ ಕುಡಿಯಬೇಕು. ಯಾರಿಗೆಲ್ಲ ಅಸಿಡಿಟಿ ಹಾಗೆ ಗ್ಯಾಸ್ ಸಮಸ್ಯೆ, ಬೊಜ್ಜಿನ ಸಮಸ್ಯೆ ನಿವಾರಣೆಯಾಗುತ್ತದೆ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಪೀರಿಯಡ್ ಸಮಯದಲ್ಲಿ ಬರುವಂತಹ ಹೊಟ್ಟೆ ನೋವನ್ನು ಸಹ ಈ ಜೀರಿಗೆ ಕಷಾಯ ಕಡಿಮೆ ಮಾಡುತ್ತದೆ.