ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹಲವು ನಟ ಮತ್ತು ನಟಿಯರು ಪ್ರೀತಿಸಿ ಮದುವೆಯಾಗುತ್ತಾರೆ ಹಾಗೆಯೇ ನಟ ಪ್ರಜ್ವಲ್ ಅವರು ಸಹ ರಾಗಿಣಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಹಿರಿಯ ನಟ ದೇವರಾಜ್ ಅವರ ಪುತ್ರ ಪ್ರಜ್ವಲ್ ದೇವರಾಜ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಎಲ್ಲರಿಗೂ ಸಹ ಪರಿಚಯ ಇದ್ದಾರೆ, ಹಲವು ಸಿನಿಮಾಗಳನ್ನು ಮಾಡುವ ಮೂಲಕ ಅಭಿಮಾನಿಗಳ ಬಳಗವನ್ನು ಸೃಷ್ಟಿ ಮಾಡಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಕೂಡ ಮಾಡಿದ್ದಾರೆ ಪ್ರಜ್ವಲ್ ದೇವರಾಜ್ ಅವರ ವೈಯಕ್ತಿಕ ಜೀವನ ನೋಡುವುದಾದರೆ ಇವರು ರಾಗಿಣಿ ಎಂಬುವರನ್ನು ಹಲವು ವರ್ಷಗಳ ಕಾಲ ಪ್ರೀತಿಸಿ ನಂತರ ಅವರ ಜೊತೆಯಲ್ಲಿ ಸಪ್ತಪದಿಯನ್ನು ತಿಳಿದಿದ್ದಾರೆ ನಟ ಪ್ರಜ್ವಲ್ ಅವರ ಪತ್ನಿ ರಾಗಿಣಿ ಅವರು ಮೂಲತಹ ತಾಂಜಾವೂರಿನವರು ಈ ಇಬ್ಬರು ಹಲವು ವರ್ಷಗಳು, ಲವ್ ಮಾಡುತ್ತಿದ್ದರು ಸಹ ಇವರ ಪ್ರೀತಿಯ ವಿಚಾರ ಎಲ್ಲಿಯೂ ಸಹ ಹೊರಗೆ ಬಂದಿರಲಿಲ್ಲ ಇವರು ಮದುವೆ ವಿಚಾರವನ್ನು ಹಂಚಿಕೊಂಡ ಸಮಯದಲ್ಲಿ ಎಲ್ಲರಿಗೂ ಕೂಡ ಶಾಕ್ ಆಗಿತ್ತು.
http://https://youtu.be/77N-0lyqN5A no
ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಅವರು ಮಾಡಲಿಂಗ್ ಕ್ಷೇತ್ರದಲ್ಲಿ ಹಲವಾರು ಸಾಧನೆಯನ್ನು ಮಾಡಿದ್ದಾರೆ ಆದರೆ ಇವರು ಜನರಿಗೆ ಹತ್ತಿರವಾಗಿರಲಿಲ್ಲ ಬದಲಾಗಿ ಪ್ರಜ್ವಲ್ ದೇವರಾಜ್ ಅವರನ್ನು ಮದುವೆಯಾದ ನಂತರವೇ ಇವರು ಜನರಿಗೆ ಹೆಚ್ಚು ಪರಿಚಿತರಾದರು ಹಾಗೆಯೇ ಇವರು ಮದುವೆಯ ನಂತರ ಕೆಲವೊಂದು ಸಿನಿಮಾಗಳಲ್ಲಿಯೂ ಸಹ ನಟಿಸಿದ್ದಾರೆ ಈ ಒಂದು ಜೋಡಿಯನ್ನು ನೋಡಿದರೆ ದೃಷ್ಟಿಯಾಗುವಂತೆ ಕಾಣುತ್ತದೆ ಅಷ್ಟರಮಟ್ಟಿಗೆ ಇಬ್ಬರ ನಡುವೆ ಉತ್ತಮವಾದಂತಹ ಬಾಂಧವ್ಯವು ಏರ್ಪಟ್ಟು ಇವರ ಸಂಸಾರವು ಸುಖವಾಗಿ ಸಾಗುತ್ತಿದೆ. ರಾಗಿಣಿ ಅವರು ಮೂಲತಹ ಮಾಡಲಿಂಗ್ ಕ್ಷೇತ್ರದಲ್ಲಿ ಹೆಚ್ಚು ಹೆಸರನ್ನು ಮಾಡಿದ್ದಾರೆ ಅಷ್ಟೇ ಅಲ್ಲದೆ ಇವರು ಭರತನಾಟ್ಯ, ಕಥಕ್ ಮತ್ತು ಫ್ರೀ ಸ್ಟೈಲ್ ಕಲಾವಿದೆ ಕೂಡ ಹೌದು ಇವುಗಳಲ್ಲಿ ಪರಿನಣಿತಿಯನ್ನು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಹಲವಾರು ಬ್ರಾಂಡ್ ಗಳ ರೂಪದರ್ಶಿ ಕೂಡ ಹೌದು.
ಈ ಜೋಡಿ ಪ್ರೀತಿಸಿ ಮದುವೆ ಆದ್ದರಿಂದ ಈ ಜೋಡಿಯ ಮಧ್ಯ ಹೊಂದಾಣಿಕೆ ಬಹಳಷ್ಟು ಇದೆ ರಾಗಿಣಿ ಅವರ ತಂದೆಯ ಮನೆಯಲ್ಲಿ ತಮಿಳು ಮಾತನಾಡುತ್ತಿದ್ದರು. ರಾಗಿಣಿ ಅವರಿಗೆ ಕನ್ನಡ ಕಲಿಸಿದ್ದು ನಟ ಪ್ರಜ್ವಲ್ ಅವರು ಈ ಒಂದು ವಿಚಾರವನ್ನು ಕೇಳಿದರೆ ತುಂಬಾ ಖುಷಿಯಾಗುತ್ತದೆ. ಈ ಇಬ್ಬರು ಏನೇ ಒಂದು ನಿರ್ಧಾರವನ್ನು ತೆಗೆದುಕೊಂಡರು ಸಹ ಏಕ ಮತವಾಗಿರುತ್ತದೆ. ಪ್ರಜ್ವಲ್ ಅವರು ಆಗಾಗ ಟ್ರಾವೆಲಿಂಗ್ ಮಾಡುತ್ತಿದ್ದಾರೆ ಇದೀಗ ಇವರು ತಮ್ಮ ಕುಟುಂಬದವರ ಜೊತೆ ಹಾಗೆ ತಮ್ಮ ಪತ್ನಿಯ ಜೊತೆ ಮಾಲ್ಡೀವ್ಸ್ ಗೆ ಪಯಣ ಬೆಳೆಸಿದ್ದರು ಇವರು ತಮ್ಮ ಪತ್ನಿಯ ಜೊತೆಯಲ್ಲಿ ಮಾಲ್ಡೀವ್ಸ್ ನಲ್ಲಿ ಎಂಜಾಯ್ ಮಾಡಿದಂತಹ ಕ್ಷಣಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಒಂದು ವಿಡಿಯೋವನ್ನು ನೋಡಿದರೆ ಈ ಜೋಡಿಗಳ ಮಧ್ಯೆ ಎಷ್ಟು ಪ್ರೀತಿ ಇದೆ ಎನ್ನುವಂತಹದ್ದು ಎಲ್ಲರಿಗೂ ಸಹ ತಿಳಿಯುತ್ತದೆ. ಈ ಜೋಡಿ ನೋಡುತ್ತಿದ್ದರೆ ಎಲ್ಲರಿಗು ಸ್ಪೂರ್ತಿದಾಯಕವಾಗುತ್ತದೆ ತಾವು ಸಹ ಅವರಂತೆ ಇರಬೇಕು ಎನ್ನುವಂತಹ ಉತ್ಸಾಹ ಮನಸ್ಸಿನಲ್ಲಿ ತುಂಬಿಕೊಳ್ಳುತ್ತದೆ ಅಷ್ಟರ ಮಟ್ಟಿಗೆ ಈ ಜೋಡಿ ತಮ್ಮ ಜೀವನದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಸಾರ್ಥಕತೆಯನ್ನು ಮೆರೆಯುತ್ತಿದ್ದಾರೆ ಹಾಗೆಯೇ ತಮ್ಮ ಜೀವನವನ್ನು ತುಂಬಾ ಎಂಜಾಯ್ ಮಾಡುತ್ತಿದ್ದಾರೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನವನ್ನು ಸಾಗಿಸುತ್ತಾ ಇದ್ದಾರೆ. ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಅವರ ಈ ಒಂದು ಪ್ರೀತಿ, ಬಾಂಧವ್ಯ ಮತ್ತೆ ಹೊಂದಾಣಿಕೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ನಮಗೆ ತಿಳಿಸಿ.