ನಟಿ ಪ್ರೇಮ ಅವರು ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು ಮಲಯಾಳಂ ಚಿತ್ರಗಳಲ್ಲೂ ಮಿಂಚಿದ್ದಂತಹ ನಟಿ ಒಂದು ಕಾಲದಲ್ಲಿ ಟಾಪ್ ನಲ್ಲಿ ಇದ್ದಂತಹ ನಟಿ ಎಂದರೆ ಪ್ರೇಮ. ಬಹುತೇಕ ಎಲ್ಲಾ ಹೀರೋಗಳೊಂದಿಗೆ ಕಾಣಿಸಿಕೊಂಡು ಅದ್ಭುತವಾಗಿ ನಟನೆಯನ್ನು ತೋರಿಸಿದಂತಹ ನಟಿ ಎಂದು ಹೇಳಬಹುದು. ಕಲೆಯ ಮೇಲೆ ಇವರಿಗೆ ಇದ್ದ ಆಸಕ್ತಿ ಚಿತ್ರರಂಗದಲ್ಲಿ ಉನ್ನತ ಸ್ಥಾನಕ್ಕೆ ಏರಲು ಸಹಾಯ ಮಾಡಿತು ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸಿದರು ಆದರೆ ವೈಯಕ್ತಿಕ ಬದುಕಿನಲ್ಲಿ ಸ್ವಲ್ಪ ಏರುಪೇರು ಉಂಟಾಯಿತು. ಪ್ರೇಮ ಅವರು ಮೂಲತಃ ಕೊಡವ ಕುಟುಂಬದವರು. ಪ್ರೇಮ ಅವರಿಗೆ ಅಭಿನಯದ ಕಡೆ ಹೆಚ್ಚಿನ ಆಸಕ್ತಿ ಇರುತ್ತದೆ ಪ್ರೇಮ ಅವರು ಸವ್ಯಸಾಚಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ ನಂತರದಲ್ಲಿ ಆಟ ಹುಡುಗಾಟ ಎನ್ನುವ ಸಿನಿಮಾದಲ್ಲೂ ಸಹ ನಟನೆ ಮಾಡುತ್ತಾರೆ ಆದರೆ ಈ ಎರಡು ಸಿನಿಮಾಗಳು ಸಹ ಪ್ರೇಮಾ ಅವರಿಗೆ ಯಶಸ್ಸನ್ನು ನೀಡುವುದಿಲ್ಲ.
ಪ್ರೇಮ ಅವರಿಗೆ ಯಶಸ್ಸನ್ನು ತಂದುಕೊಂಡಂತಹ ಸಿನಿಮಾ ಎಂದರೆ ಓಂ ಈ ಒಂದು ಸಿನಿಮಾ ಬಿಗ್‌ಹಿಟ್ ಆಗಿ ಪ್ರೇಮ ಅವರ ಬದುಕನ್ನೇ ಬದಲಾಯಿಸಿ ಬಿಡುತ್ತದೆ ಇದಾದ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾ ಆಫರ್ ಗಳು ಇವರಿಗೆ ಒದಗಿ ಬರುತ್ತದೆ. ಒಂದು ಕಾಲದಲ್ಲಿ ಹಿಟ್ ಸಿನಿಮಾ ಕೊಟ್ಟಂತಹ ಖ್ಯಾತಿ ಇವರಿಗೆ ದೊರಕುತ್ತದೆ. ಸಿನಿಮಾ ರಂಗದಲ್ಲಿ ಉತ್ತುಂಗದಲ್ಲಿ ಇದ್ದಂತಹ ಸಂದರ್ಭದಲ್ಲಿ ಇವರಿಗೆ ಮದುವೆ ಮಾಡಬೇಕು ಎಂದು ಪ್ರೇಮಾ ಅವರ ಕುಟುಂಬದವರು ನಿರ್ಧರಿಸಿ ಜೀವನ್ ಅಪಚ್ಚು ಎನ್ನುವಂತಹವರ ಜೊತೆಯಲ್ಲಿ ಮದುವೆಯನ್ನು ಮಾಡುತ್ತಾರೆ. ಮದುವೆಯ ನಂತರ ಇವರು ಸಿನಿಮಾದಿಂದ ಸ್ವಲ್ಪ ಗ್ಯಾಪ್ ತೆಗೆದುಕೊಳ್ಳುತ್ತಾರೆ ಆರಂಭದಲ್ಲಿ ಇವರ ದಾಂಪತ್ಯ ಜೀವನ ಚೆನ್ನಾಗಿ ಇರುತ್ತದೆ. ದಿನಗಳು ಕಳೆದಂತೆ ಪ್ರೇಮ ಅವರು ಹಾಗೂ ಅವರ ಪತಿಯ ಮಧ್ಯೆ ಕೆಲವೊಂದು ಭಿನ್ನಾಪ್ರಾಯಗಳು ಉಂಟಾಗಿ ಈ ಇಬ್ಬರು ಸಹ ವಿ’ಚ್ಛೇ’ದ’ನ ಪಡೆದುಕೊಂಡು ದೂರಾಗುತ್ತಾರೆ.
ಕೆಲವೊಂದಷ್ಟು ವಯಕ್ತಿಕ ಕಾರಣಗಳಿಂದ ಚಿತ್ರರಂಗದಿಂದ ದೂರ ಉಳಿದುಕೊಂಡಂತಹ ನಟಿ ಪ್ರೇಮ ಅವರು ವರ್ಷಗಟ್ಟಲೆ ಸಿನಿಮಾಗಳನ್ನು ಮಾಡದೆ ಹಾಗೆ ಉಳಿದುಬಿಟ್ಟರು. ಇದೀಗ ನಟಿ ಪ್ರೇಮ ಅವರು ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ ವಿಭಿನ್ನವಾದಂತಹ ಪಾತ್ರದೊಂದಿಗೆ ಮತ್ತೆ ಕನ್ನಡ ಚಿತ್ರರಂಗಕ್ಕೆ ಬರಲು ಸಜ್ಜಾಗಿದ್ದಾರೆ ಹೌದು ‘ವೆಡ್ಡಿಂಗ್ ಗಿಫ್ಟ್’ ಎನ್ನುವಂತಹ ಕನ್ನಡ ಸಿನಿಮಾದಲ್ಲಿ ನಟಿ ಪ್ರೇಮ ಅವರು ನಟಿಸುತ್ತಿದ್ದಾರೆ. ಪ್ರೇಮ ಅವರನ್ನು ಮತ್ತೆ ತೆರೆಯ ಮೇಲೆ ನೋಡಬೇಕು ಎನ್ನುವಂತಹ ಆಸೆ ಸಾಕಷ್ಟು ಅಭಿಮಾನಿಗಳಿಗೆ ಇದ್ದು ಸದ್ಯದಲ್ಲೇ ಅಭಿಮಾನಿಗಳ ಆಸೆಯನ್ನು ಹೀಡೇರಿಸುವ ಸಲುವಾಗಿ ವೆಡ್ಡಿಂಗ್ ಗಿಫ್ಟ್ ಸಿನಿಮಾದ ಮೂಲಕ ತೆರಿಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಇನ್ನು ಈ ಸಿನಿಮಾದ ಕುರಿತಾಗಿ ಮಾಧ್ಯಮದೊಂದಿಗೆ ಮಾತನಾಡಿರುವಂತಹ ಪ್ರೇಮ ಅವರು ಕ್ಯಾಮರಾ ಎದುರು ನಿಂತಾಗ ಕ್ಯಾಮರವನ್ನೇ ಪ್ರೇಕ್ಷಕರು ಎಂದು ಭಾವಿಸಿ ಆ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸುವ ನಟಿ ಪ್ರೇಮ ನಿಮ್ಮ ಲವ್ವರ್ ಯಾರು ಅಂತ ಕೇಳಿದರೆ ಕ್ಯಾಮರಾವೆ ನನ್ನ ಲವರ್ ಎಂದು ಹೇಳಿದ್ದಾರೆ.
ಕ್ಯಾಮೆರಾ ಮುಂದೆ ನಿಂತುಕೊಂಡರೆ ನನ್ನ ಅಭಿಮಾನಿಗಳು ನನ್ನನ್ನು ನೋಡುತ್ತಿದ್ದಾರೆ ಎಂದೆನಿಸಿ ನಾನು ಉತ್ತಮವಾಗಿ ನಟಿಸಲು ಸಾಧ್ಯವಾಗುತ್ತದೆ ಆದ್ದರಿಂದ ಕ್ಯಾಮರಾ ನನ್ನ ಲವ್ವರ್ ಇದ್ದಂತೆ ಎಂದು ಹೇಳಿದ್ದಾರೆ. ಇವರ ಈ ಮಾತುಗಳನ್ನು ಕೇಳಿದರೆ ಮುಂದೆ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರುವಂತಹ ಸಾಕಷ್ಟು ಸನ್ನಿವೇಶ ಕಾಣಿಸುತ್ತಿದೆ. ಅಭಿನಯ ಮಾಡಲು ನನಗೆ ಯಾವುದೇ ಭಯ ಇಲ್ಲ ಕ್ಯಾಮರಾ ಎಂದರೆ ನನಗೆ ತುಂಬಾ ಇಷ್ಟ ಕ್ಯಾಮರಾ ಮುಂದೆ ನಿಂತರೆ ಸಾಕು ತಾನಾಗಿಯೇ ನಟನೆಯ ಬಂದು ಬಿಡುತ್ತದೆ ಎಂದು ಹೇಳಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಮೆಂಟ್ಸ್ ಮೂಲಕ ತಿಳಿಸಿ.