ಮುಖದ ಮೇಲೆ ಬರುವಂತಹ ಅನಗತ್ಯ ಕೂದಲುಗಳನ್ನು ತೆಗೆದು ಹಾಕುವುದಕ್ಕೆ ಈ ಮನೆಮದ್ದು ಬಳಕೆ ಜೀವನದಲ್ಲಿ ಎಂದಿಗೂ ಕೂಡ ನಿಮಗೆ ಮತ್ತೆ ಇಂತಹ ಸಮಸ್ಯೆಗಳು ಬರುವುದಿಲ್ಲ. ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ತುಟಿಯ ಮೇಲ್ಭಾಗದಲ್ಲಿ ಅಥವಾ ಕೆನ್ನೆಯ ಭಾಗದಲ್ಲಿ ಹೆಚ್ಚಾಗಿ ಕೂದಲು ಬರುವುದನ್ನು ನಾವು ನೋಡಬಹುದು. ಈ ರೀತಿ ಕೂದಲು ಬಂದರೆ ನೋಡುವುದಕ್ಕೆ ಒಂದು ರೀತಿಯಲ್ಲಿ ಅಸಹ್ಯವಾಗಿ ಕಾಣುತ್ತದೆ. ಅಷ್ಟೇ ಅಲ್ಲದೆ ಗಂಡಸರ ರೀತಿಯಲ್ಲಿ ಮೀಸೆ ಇರುವುದನ್ನು ನಾವು ನೋಡಬಹುದು ಹಾಗಾಗಿ ಬಹಳಷ್ಟು ಮಹಿಳೆಯರು ಈ ಸಮಸ್ಯೆಯಿಂದ ಪರಿತಪಿಸುತ್ತಾರೆ. ಅಷ್ಟೇ ಅಲ್ಲದೆ ಪ್ರತಿ ಬಾರಿಯೂ ಕೂಡ ಪಾರ್ಲರ್ ಗೆ ಹೋಗಿ ಕೂದಲನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ.
ಹಾಗಾಗಿ ಇಂದು ನೈಸರ್ಗಿಕ ವಿಧಾನದಿಂದ ಮನೆಯಲ್ಲಿ ತುಟಿಯ ಮೇಲೆ ಇರುವಂತಹ ಕೂದಲು ಆಗಿರಬಹುದು ಅಥವಾ ಕೆನ್ನೆಯಲ್ಲಿ ಇರುವಂತಹ ಕೂದಲು ಆಗಿರಬಹುದು ಅಥವಾ ಕಂಕುಳಿನಲ್ಲಿ ಆಗಿರಬಹುದು ಇನ್ನಿತರ ಯಾವುದೇ ಜಾಗದಲ್ಲಿ ಕೂದಲು ವಿಪರೀತವಾಗಿ ಬೆಳೆಯುತ್ತಿದ್ದರೆ ಅದನ್ನು ಯಾವ ರೀತಿಯಾಗಿ ನಿವಾರಣೆ ಮಾಡಿಕೊಳ್ಳಬಹುದು ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಲೇಖನದಲ್ಲಿ ತಿಳಿಸುತ್ತೇವೆ ನೋಡಿ. ನಾವು ತಿಳಿಸುವಂತಹ ಮಾಹಿತಿಯನ್ನು ತಪ್ಪದೇ ಪರಿಪಾಲನೆ ಮಾಡಿದರೆ ಖಚಿತವಾಗಿಯೂ ಕೂಡ ಕೂದಲು ಸಮಸ್ಯೆಗೆ ಪರಿಹಾರ ಎಂಬುದು ದೊರೆಯುತ್ತದೆ. ಹಾಗಾದರೆ ಆ ಮನೆಮದ್ದು ಯಾವುದು ಹಾಗೂ ಈ ಮನೆಮದ್ದು ಬಳಕೆ ಮಾಡುವುದಕ್ಕೆ ಬೇಕಾಗುವಂತಹ ಪದಾರ್ಥಗಳು ಏನು ಮನೆ ಮದ್ದು ಯಾವ ಸಮಯದಲ್ಲಿ ಹಚ್ಚಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇವೆ ನೋಡಿ.
ಮನೆ ಮದ್ದು ಸಿದ್ಧಪಡಿಸುವುದಕ್ಕೆ ನಿಮಗೆ ಬೇಕಾಗುವಂತಹ ಪದಾರ್ಥಗಳು ಟೂತ್ ಪೇಸ್ಟ್ ಎರಡನೆಯದಾಗಿ ನಿಂಬೆಹಣ್ಣು ಮೂರನೆಯದಾಗಿ ಅಡುಗೆ ಸೋಡ ಈ ಮೂರು ಪದಾರ್ಥಗಳು ಇದ್ದರೆ ಸಾಕು ಅದ್ಭುತವಾದಂತಹ ಮನೆಮದ್ದನ್ನು ನೀವು ತಯಾರಿ ಮಾಡಿಕೊಳ್ಳಬಹುದಾಗಿದೆ. ಮೊದಲಿಗೆ ಒಂದು ಬಟ್ಟಲಿಗೆ 1 ಟೇಬಲ್ ಸ್ಪೂನ್ ಟೂತ್ ಪೇಸ್ಟ್ ಅನ್ನು ಹಾಕಬೇಕಾಗುತ್ತದೆ ನೀವು ಪ್ರತಿನಿತ್ಯ ಹಲ್ಲು ಹುಜ್ಜುವುದಕ್ಕೆ ಯಾವ ಟೂಥ್ ಪೇಸ್ಟ್ ಬಳಕೆ ಮಾಡುತ್ತಿರ ಅದೇ ಪೇಸ್ಟ್ ಅನ್ನು ನೀವು ಇಲ್ಲಿ ಬಳಕೆ ಮಾಡಬಹುದು. ತದನಂತರ ಇದಕ್ಕೆ ಒಂದು ಟೇಬಲ್ ಸ್ಪೂನ್ ನಿಂಬೆ ಹಣ್ಣಿನ ರಸವನ್ನು ಹಾಕಿ ಇವರನ್ನು ಕೂಡ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಒಂದು ಟೇಬಲ್ ಸ್ಪೂನ್ ಅಡುಗೆ ಸೋಡವನ್ನು ಹಾಕಿ ಈಗ ಈ ಮಿಶ್ರಣವನ್ನು ಕೂಡ ಚೆನ್ನಾಗಿ ಒಂದು ಬಾರಿ ಕಲಸಿಕೊಳ್ಳಬೇಕು.
ತಯಾರಿಸಿದಂತಹ ಈ ಮಿಶ್ರಣವನ್ನು ಐದರಿಂದ ಹತ್ತು ನಿಮಿಷಗಳ ಕಾಲ ಹಾಗೆಯೇ ಬಿಡಿ ತದನಂತರ ನೀವು ಮಾಡಬೇಕಾದಂತಹ ವಿಧಾನ ಏನು ಅಂದರೆ ಮೊದಲಿಗೆ ತುಟಿಯ ಮೇಲೆ ಅಥವಾ ಕೆನ್ನೆಯ ಮೇಲೆ ಅಥವಾ ಮುಖದ ಮೇಲೆ ಇರುವಂತಹ ಕೂದಲನ್ನು ತೆಗೆಯಬೇಕು ಅಂದರೆ ವೀಟ್ ಅಥವಾ ಥ್ರಡ್ ನಾ ಸಹಾಯದ ಮೂಲಕ ಮುಖದ ಮೇಲೆ ಇರುವಂತಹ ಕೂದಲನ್ನು ಮೊದಲೇ ತೆಗೆದುಕೊಂಡಿರಬೇಕು ಇಲ್ಲವಾದರೆ ಪಾರ್ಲರ್ ನಲ್ಲಿಯೂ ಕೂಡ ನೀವು ತೆಗೆಸಿಕೊಂಡು ಬಂದಿರಬೇಕು. ಈಗ ಸಿದ್ಧಪಡಿಸಿದಂತಹ ಮಿಶ್ರಣವನ್ನು ನಿಮ್ಮ ಮುಖದ ತುಟಿಯ ಮೇಲ್ಭಾಗದ ಮೇಲೆ ಆಗಿರಬಹುದು ಅಥವಾ ಕಂಕಳಿನ ಭಾಗದಲ್ಲಿ ಆಗಿರಬಹುದು ಅಥವಾ ದೇಹದ ಯಾವುದೇ ಭಾಗದ ಮೇಲಾದರೂ ಕೂಡ ಅದನ್ನು ಹಚ್ಚಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಹಾಗೆಯೇ ಬಿಡಬೇಕು.
ತದನಂತರ ತಣ್ಣೀರಿನಿಂದ ತೊಳೆದುಕೊಳ್ಳಬೇಕು ಈ ರೀತಿ ವಾರಕ್ಕೆ ಒಂದು ಬಾರಿ ಮಾಡಿ ಖಚಿತವಾಗಿ ಕೂಡ ಜೀವನದಲ್ಲಿ ಎಂದಿಗೂ ಕೂಡ ನಿಮಗೆ ಮತ್ತೆ ಕೂದಲು ಹುಟ್ಟುವುದಿಲ್ಲ. ಸಾಮಾನ್ಯವಾಗಿ ನೀವು ವ್ಯಾಕ್ಸ್ ಮಾಡಿಸಿಕೊಂಡರೆ ಅಥವಾ ವೀಟ್ ಉಪಯೋಗ ಮಾಡಿದರೆ 15 ರಿಂದ 20 ದಿನಗಳಾದ ಮೇಲೆ ನಂತರ ಅದೇ ಜಾಗದಲ್ಲಿ ಕೂದಲು ಹುಟ್ಟುವುದನ್ನು ನೀವು ನೋಡಬಹುದು. ಆದರೆ ನಾವು ಹೇಳುವಂತಹ ಈ ಮನೆಮದ್ದನ್ನು ನೀವು ಬಳಕೆ ಮಾಡಿದರೆ ಖಚಿತವಾಗಿಯೂ ಕೂಡ ಆ ಜಾಗದಲ್ಲಿ ಕೂದಲು ಹುಟ್ಟುವುದಿಲ್ಲ. ಈ ರೀತಿ ನೀವು ನಾಲ್ಕರಿಂದ ಐದು ಬಾರಿ ಈ ಮನೆಮದ್ದನ್ನು ಬಳಕೆ ಮಾಡಿದರೆ ಸಾಕು ಶಾಶ್ವತವಾಗಿ ಕೂದಲು ಬೆಳೆಯುವುದಿಲ್ಲ. ಅಷ್ಟೇ ಅಲ್ಲದೆ ನಿಮ್ಮ ಮುಖ ಕೋಮಲವಾಗಿರುತ್ತದೆ ಎಲ್ಲಿಯೂ ಕೂಡ ಮುಖದಲ್ಲಿ ರೋಮಗಳು ಕಂಡು ಬರುವುದಿಲ್ಲ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ದನ್ಯವಾದಗಳು