ಬಹಳ ಹಿಂದಿನ ಕಾಲದಿಂದಲೂ ಕೂಡ ಆಸ್ತಿ ವಿಚಾರವಾಗಿ ಕೆಲವೊಂದಷ್ಟು ಗೊಂದಲದ ಪ್ರಶ್ನೆಗಳು ಎಲ್ಲರಲ್ಲಿಯೂ ಕೂಡ ಇರುತ್ತದೆ ಅಂದರೆ ತಂದೆಯ ಆಸ್ತಿ ಕೇವಲ ಗಂಡು ಮಕ್ಕಳಿಗೆ ಸೇರುವಂತದ್ದ ಅಥವಾ ಹೆಣ್ಣು ಮಕ್ಕಳಿಗೂ ಸೇರಬೇಕ ಈ ವಿಷಯವಾಗಿ ಎಲ್ಲರಲ್ಲಿಯೂ ಕೂಡ ಒಂದು ಗೊಂದಲದ ಪ್ರಶ್ನೆ ಇದೆ. ಆದರೆ ಅದೇ ವಿಷಯವಾಗಿ ಈ ದಿನ ಅಂದರೆ ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಎಷ್ಟು ಪಾಲು ಸೇರುತ್ತದೆ.
ಹಾಗೂ ತಂದೆಯ ಆಸ್ತಿ ಹಾಗೂ ತಂದೆಗೆ ಅವರ ಪಿತ್ರಾರ್ಜಿತ ಆಸ್ತಿ ಏನಾದರೂ ಇದ್ದರೆ ಅದರಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ ಸೇರುತ್ತದ ಅಥವಾ ಸೇರುವುದಿಲ್ಲವ ಎನ್ನುವ ವಿಷಯವಾಗಿ ಈ ದಿನ ಕೆಲವೊಂದಷ್ಟು ಮಾಹಿತಿಗಳ ಬಗ್ಗೆ ಚರ್ಚಿಸೋಣ. ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತೆ 2005ರ ನಂತರ ನ್ಯಾಯಾಲಯದಲ್ಲಿ ಒಂದು ತೀರ್ಮಾನವನ್ನು ಹೊರಡಿಸಿದ್ದು ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಾನವಾದ ಪಾಲು ಇದೆ ಎಂದೇ ಆದೇಶವನ್ನು ಹೊರಡಿಸಿತು.
ಆನಂತರ 2005ರ ಮೇಲೆ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ತನ್ನ ತಂದೆಯ ಆಸ್ತಿಯಲ್ಲಿ ಸಮಾನವಾದ ಆಸ್ತಿ ಸಿಗುತ್ತದೆ ಎಂದು ಎಲ್ಲರೂ ಕೂಡ ತಿಳಿದುಕೊಂಡಿದ್ದರು. ಆದರೆ ಈ ವಿಷಯದಲ್ಲಿ ಹೆಣ್ಣು ಮಕ್ಕಳು ತಿಳಿದುಕೊಳ್ಳಬೇಕಾದ ವಿಷಯ ಏನು ಎಂದರೆ ನಿಮ್ಮ ತಂದೆಯ ಸ್ವಯಂ ಆಸ್ತಿ ಅಂದರೆ ಸ್ವಂತ ಸಂಪಾದನೆಯಿಂದ ಸಂಪಾದನೆ ಮಾಡಿದಂತಹ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಕೂಡ ಸಮನಾದ ಅಧಿಕಾರ ಇರುತ್ತದೆ.
ಅದೇ ರೀತಿ ತಂದೆಗೆ ಅವರ ತಂದೆ ಅಂದರೆ ಪಿತ್ರಾರ್ಜಿತ ಆಸ್ತಿ ಏನಾದರೂ ಅವರ ಹೆಸರಿನಲ್ಲಿ ಇದ್ದರೆ ಅದೇನಾದರೂ 2005ರ ಹಿಂದೆಯೇ ವಿಭಾಗವಾಗಿದ್ದರೆ ಆ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯಾದಂತಹ ಹಕ್ಕು ಇರುವುದಿಲ್ಲ. ತದನಂತರ 2005ರ ನಂತರ ಪಿತ್ರಾರ್ಜಿತ ಆಸ್ತಿಯಲ್ಲಿಯೂ ಕೂಡ ಹೆಣ್ಣು ಮಕ್ಕಳಿಗೆ ಸಮನಾದ ಪಾಲು ಕೊಡಬೇಕು ಎಂಬ ಆದೇಶವನ್ನು ಹೊರಡಿಸಿದ ನಂತರವೇ ಹೆಣ್ಣು ಮಕ್ಕಳಿಗೂ ಕೂಡ ಆಸ್ತಿಯಲ್ಲಿ ಸಮನಾದ ಪಾಲುಗಳನ್ನು ಹಂಚುತ್ತಿದ್ದಾರೆ.
ಹಾಗೂ ಕೆಲವೊಮ್ಮೆ ಈ ವಿಚಾರವಾಗಿ ತಂದೆ 2005ರ ನಂತರ ಮ.ರ.ಣ.ವನ್ನು ಹೊಂದಿದ್ದರೆ ಅವರು ತಮ್ಮ ಆಸ್ತಿಯನ್ನು ಯಾರ ಹೆಸರಿನಲ್ಲಿ ಮಾಡಿರದೆ ಇದ್ದರೂ ಸಹ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮನಾದ ಹಕ್ಕು ಇರುತ್ತದೆ. ಬದಲಿಗೆ ಅವನ ಹೆಂಡತಿ ಹಾಗೂ ಮಗನ ಅಂದರೆ ದೊಡ್ಡ ಮಗನ ಹೆಸರಿನಲ್ಲಿ ಇದ್ದರೆ ಆಸ್ತಿ ಅವರಿಗೆ ಸೇರುವುದಿಲ್ಲ ಬದಲಿಗೆ ಆಸ್ತಿಗೆ ಸಂಬಂಧಿಸಿದ ಕೆಲವೊಂದು ವಿಚಾರಕ್ಕೆ ಅವರ ಹೆಸರನ್ನು ಸೇರಿಸಿರುತ್ತಾರೆ ಹೊರತು ಎಲ್ಲಾ ಆಸ್ತಿ ಅವರಿಗೆ ಸೇರುವುದಿಲ್ಲ.
ಉದಾಹರಣೆಗೆ ಒಂದು ಮನೆಯಲ್ಲಿ ಒಬ್ಬ ತಂದೆ 2005ರ ನಂತರ ಮ.ರ.ಣ ಹೊಂದುವುದಕ್ಕೂ ಮುಂಚೆ ತನ್ನ ಹೆಂಡತಿ ಹೆಸರಿನಲ್ಲಿ ಆಸ್ತಿಯನ್ನು ವಿಭಾಗ ಮಾಡಿದ್ದರೆ ಆ ಆಸ್ತಿ ಹೆಣ್ಣು ಮಕ್ಕಳಿಗೆ ಸೇರುವುದಿಲ್ಲ. ಕೇವಲ ಹೆಂಡತಿಗೆ ಮತ್ತು ಅವಳ ಗಂಡು ಮಕ್ಕಳಿಗೆ ಮಾತ್ರ ಸೇರುತ್ತದೆ ಎಂದು ತಿಳಿದುಕೊಳ್ಳುವುದು ತಪ್ಪು ಬದಲಿಗೆ ತಂದೆ 2005ರ ನಂತರ ಮ.ರ.ಣ ಹೊಂದಿದರು ಕೂಡ ಆಸ್ತಿ ತನ್ನ ಹೆಂಡತಿಯ ಹೆಸರಿನಲ್ಲಿ ಇದ್ದರೂ ಕೂಡ ಮಗಳಿಗೂ ಕೂಡ ಆಸ್ತಿಯಲ್ಲಿ ಸಮಪಾಲು ಸಿಗುತ್ತದೆ.
ಆದ್ದರಿಂದ ಪ್ರತಿಯೊಬ್ಬರೂ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿರು ವುದು ಬಹಳ ಮುಖ್ಯವಾಗಿರುತ್ತದೆ. ಕೆಲವೊಂದಷ್ಟು ಮನೆಗಳಲ್ಲಿ ಆಸ್ತಿಯನ್ನು ಪಡೆದುಕೊಳ್ಳುವುದಿಲ್ಲ ಬದಲಿಗೆ ಇಂತಿಷ್ಟು ಹಣವನ್ನು ಪಡೆದು ಕೊಳ್ಳುವುದರ ಮುಖಾಂತರ ಅವರಿಂದ ಹಕ್ಕು ಬಿಡುಗಡೆ ಪತ್ರವನ್ನು ಕೂಡ ಮಾಡಿಸಿಕೊಂಡು ಗಂಡು ಮಕ್ಕಳು ಆಸ್ತಿಯನ್ನು ಪಡೆದುಕೊಳ್ಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ