ಹಿಂದೂ ಕಾನೂನಿನ ಪ್ರಕಾರ ಆಸ್ತಿ ವಿಭಜನೆ ಸಮಯದಲ್ಲಿ ತಂದೆಯ ಮನೆಯ ಪಿತ್ರಾಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಕೂಡ ಸಮಾನವಾದ ಪಾಲು ಕೊಡಬೇಕು ಎನ್ನುವುದು 2020ರ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೊರ ಬಿದ್ದಿದೆ. ರಾಕೇಶ್ ಶರ್ಮ ಮತ್ತು ವಿನಿತಾ ಶರ್ಮ ಇವರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇದನ್ನು ಸ್ಪಷ್ಟವಾಗಿ ತಿಳಿಸಿದೆ.
ಆದರೆ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಯಾವ ಮಕ್ಕಳಿಗೂ ಕೂಡ ಪಾಲು ಕೇಳಲು ಹಕ್ಕು ಬರುವುದಿಲ್ಲ ತಂದೆ ತನಗೆ ಇಷ್ಟವಾದ ಯಾವ ಮಕ್ಕಳಿಗೆ ಆಗಲಿ ಅಥವಾ ಮತ್ಯಾರಿಗೆ ಆಗಲಿ ಅದನ್ನು ಮಾಡಿಕೊಡಬಹುದು. ತಂದೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳಲು ಹೆಚ್ಚಾಗಿ ಹೆಣ್ಣು ಮಕ್ಕಳೇ ಮುಂದೆ ಬರುತ್ತಾರೆ. ಇದರಲ್ಲಿ 2020ರಲ್ಲಿ ಈ ತೀರ್ಪು ಬಂದ ನಂತರ ಹಾಗೂ ಇದಕ್ಕೂ ಹಿಂದೆ 2005 ರ ತಿದ್ದುಪಡಿ ಆದಾಗಲಿಂದಲೂ ಈ ಪ್ರಕರಣಗಳು ಹೆಚ್ಚಾಗಿವೆ.
ಒಂದು ದೇಶದ ಯಾವುದೇ ನ್ಯಾಯಾಲಯಕ್ಕೆ ಹೋದರು ಕೂಡ ಈ ರೀತಿ ಕುಟುಂಬದ ಆಸ್ತಿ ವ್ಯಾಜ್ಯಕ್ಕೆ ಸಂಬಂಧಪಟ್ಟ ಕೇಸುಗಳ ಸಂಖ್ಯೆಯೇ ಅತಿ ಹೆಚ್ಚಿಗೆ ಇರುತ್ತವೆ. ಹಿಂದು ಕಾನೂನಿನ ಪ್ರಕಾರ ಆಸ್ತಿ ವಿಂಗಡಣೆ ಬಗ್ಗೆ ಸಾಕಷ್ಟು ಗೇಜಲು ಇರುವುದರಿಂದ ಇಂದಿಗೂ ಅನೇಕ ವಿಷಯಗಳಲ್ಲಿ ಅನೇಕರಿಗೆ ಗೊಂದಲಗಳು ಇದ್ದೇ ಇದೆ. ಹೀಗಾಗಿ ಎಲ್ಲ ಸಮಸ್ಯೆಗಳಿಗೂ ನ್ಯಾಯಾಲಯದಲ್ಲಿ ದಾವೆ ಕೊಡುವ ಮೂಲಕ ನ್ಯಾಯ ಕೇಳುವ ಪರಿಸ್ಥಿತಿ ಬಂದಿದೆ.
ಆದರೆ ಈ ರೀತಿ ಮಾಡುವ ಮುನ್ನ ಕಾನೂನಿನಲ್ಲಿ ಈ ಬಗ್ಗೆ ಏನು ಇದೆ ಎನ್ನುವುದನ್ನು ಸರಿಯಾಗಿ ತಿಳಿದುಕೊಳ್ಳಲು ಮುಖ್ಯ. ಉದಾಹರಣೆಗೆ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಮೊದಲು ಯಾರು ಪಾಲು ಕೇಳಬೇಕು ಗಂಡು ಮಕ್ಕಳ ಅಥವಾ ಹೆಣ್ಣು ಮಕ್ಕಳ ಎನ್ನುವ ವಿಷಯದ ಬಗ್ಗೆ ಇಲ್ಲಿ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ.
ಸಾಮಾನ್ಯವಾಗಿ ತಂದೆಯ ಪಿತ್ರಾರ್ಜಿತ ಆಸ್ತಿ ಪಾರ್ಟಿಷನ್ ಬಗ್ಗೆ ಗಂಡು ಮಕ್ಕಳು ಕಮ್ಮಿ ಹೆಣ್ಣು ಮಕ್ಕಳೇ ಈ ಬಗ್ಗೆ ಕೇಳುವುದು ಹೆಚ್ಚು. ಒಂದು ವೇಳೆ ಮನೆಯಲ್ಲಿ ಈ ಬಗ್ಗೆ ಮಾತಾಡುವಾಗ ಹೆಚ್ಚಿನ ಜನರು ಹೆಣ್ಣು ಮಕ್ಕಳು ತಂದೆ ಆಸ್ತಿಯಲ್ಲಿ ಪಾಲು ಕೇಳಿದಾಗ ಆ ಮಾತು ನಡೆಯುವುದಿಲ್ಲ ಅಥವಾ ತಂದೆಗೆ ಎಷ್ಟು ಜನ ಮಕ್ಕಳು ಇದ್ದಾರೆ ಅವರೆಲ್ಲರೂ ಸಹ ಈ ಬಗ್ಗೆ ಕೋರ್ಟಿಗೆ ಹೋಗಬೇಕು ಒಬ್ಬರಿಂದ ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಅದನ್ನು ಅಲ್ಲೇ ಮುಚ್ಚಿ ಹಾಕಲು ಮಾಡುವ ಪ್ರಯತ್ನವೇ ಹೆಚ್ಚು.
ಆದರೆ ಇದು ಬರಿ ಬಾಯಿ ಮಾತಿನ ಮಾತು ಅಷ್ಟೇ ಕಾನೂನು ಪ್ರಕಾರ ಈ ರೀತಿಯಾಗಿ ಯಾವ ನಿಯಮವು ಸಹ ಇಲ್ಲ. ಹಿಂದೂ ಕಾನೂನಿನ ಪ್ರಕಾರ ತಂದೆಯ ಪಿತ್ರಾರ್ಜಿತ ಆಸ್ತಿಯ ವಿಭಜನೆ ಬಗ್ಗೆ ಹೆಣ್ಣು ಮಕ್ಕಳು ಕೂಡ ಮೊದಲು ನ್ಯಾಯಾಲದ ಮೊರೆ ಹೋಗಬಹುದು. ಆಸ್ತಿಯಲ್ಲಿ ಪಾಲು ಕೇಳಿ ಗಂಡು ಮಕ್ಕಳು ಮೊದಲು ಹೋಗಬೇಕು ಎಂದು ಕೂಡ ನಿಯಮ ಇಲ್ಲ. ಹೆಣ್ಣು ಮಕ್ಕಳಾಗಲಿ ಅಥವಾ ಗಂಡು ಮಕ್ಕಳೇ ಆಗಲಿ ಯಾರು ಬೇಕಾದರೂ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳಲು ಕೋರ್ಟಿಗೆ ಹೋಗಬಹುದು.
ಆದರೆ ಇದೆಲ್ಲಕ್ಕಿಂತ ಮುಂಚೆ ಕುಟುಂಬದಲ್ಲೇ ಒಮ್ಮೆ ಎಲ್ಲರ ಸಮ್ಮುಖದಲ್ಲಿ ಕೂತು ಮಾತನಾಡಿ ಮಾತು ಕಥೆಯಿಂದ ಬಗೆಹರಿಸಿಕೊಂಡರೆ ಸಂಬಂಧಗಳ ನಡುವೆ ಈ ರೀತಿ ವ್ಯಾಜ್ಯ ಆಗುವುದು ತಪ್ಪುತ್ತದೆ. ಈ ವಿಷಯದ ಬಗ್ಗೆ ಇನ್ನೂ ವಿವರವಾದ ಮಾಹಿತಿ ಬೇಕಾದಲ್ಲಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.