ಈ ಸಮಸ್ಯೆ ಹೆಚ್ಚಾಗಿ ಹೆಣ್ಣು ಮಕ್ಕಳಿಗೆ ಅವರ ತವರಿನ ಆಸ್ತಿಯ ಬಗ್ಗೆ ಆಗುತ್ತಿರುತ್ತದೆ. ಯಾಕೆಂದರೆ ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಕೂಡ ಸಮಾನ ಅಧಿಕಾರ ಇದೆ. ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳ ಕೂಡ ತಂದೆ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರು ಎಂದು ಸರ್ಕಾರ ತೀರ್ಪು ಕೊಟ್ಟ ಮೇಲೆ ಈಗ ಹೆಣ್ಣು ಮಕ್ಕಳುಗಳು ಕೂಡ ತಂದೆ ಆಸ್ತಿಯಲ್ಲಿ ಭಾಗ ಪಡೆದುಕೊಳ್ಳುತ್ತಿದ್ದಾರೆ.
ಆದರೆ ಕೆಲವರು ಸಮನ ಆಸ್ತಿಯನ್ನು ಭಾಗ ಪಡೆದುಕೊಂಡಿದ್ದರೆ ಇನ್ನು ಕೆಲವರು ಕುಟುಂಬದವರ ಮೇಲಿನ ನಂಬಿಕೆಯಿಂದ ಹಕ್ಕು ಬಿಡುಗಡೆ ಪತ್ರದ ಮೂಲಕ ತಮ್ಮ ಆಸ್ತಿ ಹಕ್ಕನ್ನು ಬಿಟ್ಟು ಕೊಟ್ಟು ಬಿಡುತ್ತಾರೆ. ನಂತರ ಅದರ ಅರಿವಾದಾಗ ಹೆಣ್ಣು ಮಕ್ಕಳು ಕೋರ್ಟಲ್ಲಿ ಇದಕ್ಕೆ ಪರಿಹಾರ ಇದೆಯಾ ಎಂದು ನ್ಯಾಯಾಂಗದ ಮೊರೆ ಹೋಗುತ್ತಾರೆ.
ಹಕ್ಕು ಖುಲಾಸೆ ಪತ್ರದ ಮೂಲಕ ನೀವು ನಿಮ್ಮ ಪಾಲಿನ ಆಸ್ತಿ ಹಕ್ಕನ್ನು ಬಿಟ್ಟು ಕೊಟ್ಟಿದ್ದರೆ ಒಂದು ವೇಳೆ ನಿಮಗೆ ಒಳ ಒಪ್ಪಂದದ ಪ್ರಕಾರ ನಿಮಗೆ ಬೇರೆ ಏನಾದರೂ ಬೆಲೆ ಬಾಳುವುದನ್ನು ಕೊಡುತ್ತೇವೆ ಎಂದು ಹೇಳಿ ಈ ರೀತಿ ಹಕ್ಕು ಬಿಡುಗಡೆ ಪತ್ರಕ್ಕೆ ಸಹಿ ಹಾಕಿಸಿಕೊಂಡು ನಂತರ ಅದಾದ ಮೇಲೆ ಮೋಸ ಮಾಡಿದ್ದರೆ ಅಥವಾ ನಿಮಗೆ ಪತ್ರದಲ್ಲಿ ಏನಿದೆ ಎಂದು ತಿಳಿಸದೆ ಸಹಿ ಹಾಕಿಸಿಕೊಂಡು ನಂತರ ಮೋಸ ಮಾಡಿದ್ದರೆ.
ಅಥವಾ ಇದು ಬೇರೆ ಯಾವುದೋ ಪತ್ರ ಎಂದು ಹೇಳಿ ಮೋಸ ಮಾಡಿ ಸಹಿ ಹಾಕಿಸಿಕೊಂಡಿದ್ದರೆ, ಒಂದು ವೇಳೆ ನೀವು ಅನಕ್ಷರಸ್ಥರೇ ಆಗಿದ್ದು ಪತ್ರದಲ್ಲಿ ಏನಿದೆ ಎಂದು ತಿಳಿದುಕೊಳ್ಳದೆ ಕುಟುಂಬದವರ ಅಥವಾ ಸಂಬಂಧಿಕರ ದಾಕ್ಷಿಣ್ಯಕ್ಕೆ ಬಿದ್ದು ನಂಬಿಕೆ ಮೇಲೆ ಸಹಿ ಮಾಡಿ ಕೊಟ್ಟು ಮೋಸ ಹೋಗಿದ್ದರೆ ಅದು ನಿಮ್ಮ ಅರಿವಿಗೆ ಬಂದ ನಂತರ ನಿಮಗೆ ನ್ಯಾಯಾಲಯದಲ್ಲಿ ಖಂಡಿತ ಪರಿಹಾರ ಸಿಗುತ್ತದೆ ಆದರೆ ಅದಕ್ಕೂ ಮೊದಲು ನೀವು ಕೆಲವು ಅಂಶಗಳನ್ನು ತಿಳಿದುಕೊಂಡಿರಬೇಕು.
ನೀವು ಒಂದು ವೇಳೆ ರಿಲೀಸ್ ಡೀಡ್ ಗೆ ಸಹಿ ಹಾಕಿ ಕೊಟ್ಟಿದ್ದರು ಕೂಡ 1908ರ ಇಂಡಿಯನ್ ಸ್ಟ್ಯಾಂಪ್ ರಿಜಿಸ್ಟ್ರೇಷನ್ ಆಕ್ಟ್ ಪ್ರಕಾರ ಯಾವುದೇ ಆಸ್ತಿ ಪತ್ರವೇ ಆಗಿರಲಿ ಮತ್ಯಾವುದೇ ಪತ್ರವೇ ಆಗಿದ್ದರೂ ಕೂಡ ನೂರು ರೂಪಾಯಿ ಪೇಪರ್ ಗಿಂತ ಹೆಚ್ಚಿನ ಮೊತ್ತದ್ದಾಗಿದ್ದರೆ ಅದು ರಿಜಿಸ್ಟ್ರೇಷನ್ ಆಗಿರಲೇಬೇಕು, ಅದು ನೋಂದಣಿ ಆಗಿದ್ದಾಗ ಮಾತ್ರ ಕಾನೂನಿನಿಂದ ಊರ್ಜಿತವಾಗುತ್ತದೆ ಲೀಗಲಿ ವ್ಯಾಲಿಡ್ ಆಗುತ್ತದೆ. ನೋಂದಣಿ ಆಗಿರದಿದ್ದರೆ ಅದು ಮಾನ್ಯವಾಗುವುದಿಲ್ಲ, ಅದು ಅಸಿಂಧುವಾಗುತ್ತದೆ.
ಆದ್ದರಿಂದ ನೀವು ಹಕ್ಕು ಬಿಡುಗಡೆ ಪತ್ರ ಮಾಡಿಕೊಟ್ಟಿದ್ದರು ಅದು ರಿಜಿಸ್ಟ್ರೇಷನ್ ಆಗಿಲ್ಲ ಎಂದರೆ ರಿಜಿಸ್ಟ್ರೇಷನ್ ಆಫೀಸ್ಗೆ ಹೋಗಿ ಫೋಟೋ ಕೊಟ್ಟು ಸಹಿ ಮತ್ತು ಹೆಬ್ಬಟ್ಟು ಮುದ್ರೆ ಕೊಟ್ಟು ರಿಜಿಸ್ಟ್ರೇಷನ್ ಮಾಡಿರದೆ ಇದ್ದಲ್ಲಿ, ಮನೆಯಲ್ಲಿಯೇ ಅಥವಾ ಹೊರಗಡೆ ಕೇವಲ ಪತ್ರದಲ್ಲಿ ಸಹಿ ಹಾಕಿಕೊಟ್ಟಿದ್ದರೆ ಅದು ಮಾನ್ಯ ವಾಗುವುದಿಲ್ಲ. ಜೊತೆಗೆ ನೀವು ಹಕ್ಕು ಬಿಡುಗಡೆ ಪತ್ರ ಮಾಡಿಕೊಟ್ಟಿದ್ದ ಸಮಯದಲ್ಲಿ ನಿಮಗೆ ಉಡುಗೊರೆ ರೂಪದಲ್ಲಿ ಕೊಟ್ಟ ಹಣ ನೀವು ಬಿಟ್ಟು ಕೊಟ್ಟ ಆಸ್ತಿ ಮೌಲ್ಯಕಿಂತ ತೀರಾ ಕಡಿಮೆ ಮೊತ್ತದಾಗಿದ್ದರೆ ಆಗಲು ಸಹ ಹಕ್ಕು ಬಿಡುಗಡೆ ಪತ್ರ ಅಸಿಂಧು ಆಗುತ್ತದೆ, ಯಾಕೆಂದರೆ ಅದು ರಿಜಿಸ್ಟರ್ ಆಗಿರುವುದಿಲ್ಲ. ಈ ರೀತಿ ನೀವು ಸಮಾನ ಹಕ್ಕುದಾರರಾಗ ಮೋಸ ಹೋಗಿದ್ದರೆ ಈ ರೀತಿಯಾಗಿ ಕಾನೂನಿನ ಸಹಾಯ ಪಡೆಯಬಹುದು.