ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಕುಟುಂಬದ ಹಣಕಾಸಿನ ತೊಂದರೆ ಕಾರಣದಿಂದಾಗಿ ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಹಾಗೂ ಸರ್ಕಾರೇತರವಾಗಿ ಅನೇಕ ಪ್ರತಿಷ್ಠಿತ ಕಂಪನಿಗಳು ವಿದ್ಯಾರ್ಥಿ ವೇತನ ನೀಡುವ ಮೂಲಕ ಈ ವಿದ್ಯಾರ್ಥಿಗಳ ಬದುಕನ್ನು ಪ್ರಜ್ವಲ ಗೊಳಿಸುತ್ತಿವೆ.
ಈ ಸಾಲಿನಲ್ಲಿ ದೇಶದ ಹೆಸರಾಂತ ಎಲೆಕ್ಟ್ರಾನಿಕ್ಸ್ ಕಂಪನಿಯಾದ LG (Life Good) ಕೂಡ ಸೇರಿದೆ. LG 2023-24ನೇ ಸಾಲಿನಲ್ಲಿ ವಿದ್ಯಾಭ್ಯಾಸ ಪೂರೈಸಿರುವಂತಹ ಅರ್ಹ ಅಭ್ಯರ್ಥಿಗಳು ಮುಂದಿನ ವಿದ್ಯಾಭ್ಯಾಸಕ್ಕಾಗಿ ಈ ಸ್ಕಾಲರ್ಶಿಪ್ (LG Scholarship) ನೀಡುತ್ತಿದೆ. ಅರ್ಜಿ ಸಲ್ಲಿಸುವುದಕ್ಕೆ ಇರುವ ಇನ್ನಿತರ ಮಾನದಂಡಗಳೇನು? ಅರ್ಜಿ ಸಲ್ಲಿಸುವ ವಿಧಾನ ಹೇಗೆ ಇತ್ಯಾದಿ ವಿವರ ಹೀಗಿದೆ ನೋಡಿ…
ಈ ಸುದ್ದಿ ಓದಿ:- ಇನ್ಮುಂದೆ ಸರ್ಕಾರಿ ಶಾಲೆಗಳಲ್ಲೂ LKG, UKG ಆರಂಭ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!
ಅರ್ಜಿ ಸಲ್ಲಿಸಲು ಅರ್ಹತೆಗಳು:-
* ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದಲ್ಲಿ ಮಾನ್ಯತೆ ಪಡೆದ ಯಾವುದೇ ಆಯ್ದ ಕಾಲೇಜಿನಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಗೆ ದಾಖಲಾಗಿರಬೇಕು
* ದ್ವಿತೀಯ PUC ಯನ್ನು ಕನಿಷ್ಠ 60 ಅಂಕಗಳಿಗೆ ಕಡಿಮೆ ಇಲ್ಲದಂತೆ ಉತ್ತೀರ್ಣರಾಗಿರಬೇಕು.
* ಎರಡನೇ ಅಥವಾ ಮೂರನೇ ತರಗತಿ ಪದವಿ ಓದುತ್ತಾ ಇರುವ ವಿದ್ಯಾರ್ಥಿಗಳು ಕೂಡ ಈ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಬಹುದು. ಆದರೆ ಕಳೆದ ವರ್ಷದ ಪರೀಕ್ಷೆಯಲ್ಲಿ ಫಲಿತಾಂಶ ಶೇಕಡಾ 60% ಗಿಂತ ಹೆಚ್ಚಿಗೆ ಇರಬೇಕು
* ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 8 ಲಕ್ಷಕ್ಕಿಂತ ಕಡಿಮೆ ಇರಬೇಕು
ಈ ಸುದ್ದಿ ಓದಿ:- ಅಗ್ನಿಶಾಮಕ ಇಲಾಖೆ ನೇಮಕಾತಿ, 975ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ.!
* ಸಿಗುವ ಅನುದಾನ:-
ವಾರ್ಷಿಕವಾಗಿ ರೂ.1,00,000 ದವರೆಗೆ ಆಯಾ ಕೋರ್ಸ್ ಗೆ ಅನುಗುಣವಾಗಿ ವಿದ್ಯಾರ್ಥಿ ವೇತನ ಸಿಗುತ್ತದೆ
ಬೇಕಾಗುವ ದಾಖಲೆಗಳು:-
* 12ನೇ ತರಗತಿ ಅಂಕಪಟ್ಟಿ / ಪದವಿ ಅಥವಾ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಾಗಿದ್ದರೆ ಕಳೆದ ವರ್ಷದ ಅಥವಾ ಸೆಮಿಸ್ಟರ್ ಗಳ ಅಂಕಪಟ್ಟಿ
* ವಿದ್ಯಾರ್ಥಿಯ ಆಧಾರ್ ಕಾರ್ಡ್
* ವಿದ್ಯಾರ್ಥಿಯ ವಿಳಾಸ ಪುರಾವೆ
* ಕುಟುಂಬದ ಆದಾಯ ಪ್ರಮಾಣ ಪತ್ರ
* BPL ರೇಷನ್ ಕಾರ್ಡ್
* ಪ್ರಸಕ್ತ ಸಾಲಿನಲ್ಲಿ ವಿದ್ಯಾಭ್ಯಾಸಕ್ಕೆ ದಾಖಲಾಗಿರುವ ಬಗ್ಗೆ ಕಾಲೇಜಿನಿಂದ ನೀಡುವ ಗುರುತಿನ ಚೀಟಿ ಅಥವಾ ಶುಲ್ಕ ಪಾವತಿಸಿರುವ ರಶೀದಿ
* ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್ ವಿವರ
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ಐಡಿ
* ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
* ಇತ್ಯಾದಿ ಪ್ರಮುಖ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:-
https://www.buddy4study.com/page/life-s-good-scholarship-program ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
* ನೋಂದಾಯಿತ ಐಡಿಯನ್ನು ಬಳಸಿಕೊಂಡು ಆನ್ಲೈನ್ ಅರ್ಜಿ ನಮೂನೆ ಪೇಜ್ ಗೆ ಹೋಗಿ ಮೊಬೈಲ್ ಅಥವಾ ಇಮೇಲ್ ಐಡಿ ಮೂಲಕ Buddy4study ನಲ್ಲಿ ನೋಂದಾಯಿಸಿ
* LG Scholarship-2024 ಪುಟಕ್ಕೆ ಮರು ನಿರ್ದೇಶಿಸಲಾಗುತ್ತದೆ
* ಅಪ್ಲಿಕೇಶನ್ ಪ್ರಾರಂಭಿಸಿ ಎನ್ನುವ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ಈ ಸುದ್ದಿ ಓದಿ:- ಹೈನುಗಾರಿಕೆಯಿಂದ ತಿಂಗಳಿಗೆ 1.8 ಲಕ್ಷ ಆದಾಯ ಪಡೆಯುತ್ತಿರುವ ರೈತ, ದಿನಕ್ಕೆ 45 ಲೀ. ಹಾಲು ಕೊಡುವ ಹಸುಗಳು ಕೂಡ ಇವರ ಬಳಿ ಇವೆ.!
* ಅರ್ಜಿ ಫಾರಂ ಓಪನ್ ಆಗುತ್ತದೆ ಅದರಲ್ಲಿ ಕೇಳಿರುವ ಎಲ್ಲಾ ಸ್ವ-ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ
* ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ನಿಯಮಗಳು ಹಾಗೂ ಶರತ್ತುಗಳನ್ನು ಒಪ್ಪಿಕೊಂಡಿರುವುದಾಗಿ ಪೂರ್ವ ವೀಕ್ಷಣೆ ಕ್ಲಿಕ್ ಮಾಡಿ ಮುಂದುವರೆಯಿರಿ
* ಎಲ್ಲವನ್ನು ಮತ್ತೊಮ್ಮೆ ಪರಿಶೀಲಿಸಿ ತಪ್ಪುಗಳಿದ್ದರೆ ಸರಿಪಡಿಸಿ ಅಂತಿಮವಾಗಿ ಅಪ್ಲೈ ಎನ್ನುವದರ ಮೇಲೆ ಕ್ಲಿಕ್ ಮಾಡಿ ಪೂರ್ತಿ ಗೊಳಿಸಿ
ಪ್ರಮುಖ ದಿನಾಂಕಗಳು:-
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ಈಗಾಗಲೇ ಆರಂಭಗೊಂಡಿದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 23 ಮೇ, 2024.