ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಅವರ ಅಭಿಮಾನಿಗಳಿಗೆ ಸಂತಸದ ಸುದ್ದಿ ಅದೇನೆಂದರೆ ಅಂಬರೀಶ್ ಹಾಗು ಪುನೀತ್ ರಾಜ್ಕುಮಾರ್ ಅವರು ದೈಹಿಕವಾಗಿ ಎಲ್ಲರನ್ನು ಅಗಲಿದ್ದರೂ ಸಹ ಕನ್ನಡಿಗರ ಹೃದಯದಲ್ಲಿ ಸದಾ ಅಜರಾ ಮರರಾಗಿರುತ್ತಾರೆ. ಇದೀಗ ಪುನೀತ್ ರಾಜ್ಕುಮಾರ್ ಮತ್ತು ಅಂಬರೀಶ್ ಅವರ ಅಭಿಮಾನಿಗಳು ಒಂದೇ ಗುಡಿಯಲ್ಲಿ ಇಬ್ಬರು ಮೇರು ನಟರಾದಂತಹ ಪುನೀತ್ ಮತ್ತು ಅಂಬರೀಶ್ ಅವರ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ತಮ್ಮ ಅಭಿಮಾನ ಎಷ್ಟಿದೆ ಎಂದು ವ್ಯಕ್ತಪಡಿಸಿದ್ದಾರೆ. ಮದ್ದೂರು ತಾಲೂಕಿನ ಡಿ ಹೊಸೂರು ಗ್ರಾಮದ ಅಪ್ಪು ಮತ್ತು ಅಂಬರೀಶ್ ಅವರ ಫ್ಯಾನ್ಸ್ ಇಂತಹ ಅಪರೂಪದ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ.
ಒಂದೇ ಗುಡಿಯಲ್ಲಿ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಅವರ ಪುತ್ತಳಿಯನ್ನು ನಿರ್ಮಿಸಿ 12 ಲಕ್ಷ ರೂ ವೆಚ್ಚದಲ್ಲಿ ಈ ಗುಡಿಯನ್ನು ಕಟ್ಟಲಾಗಿದೆ ಎಂದು ಮೂಲಗಳ ಪ್ರಕಾರ ತಿಳಿದು ಬರುತ್ತಿದೆ. ಅಲ್ಲದೆ ನಾಳೆ ಸಂಜೆ ಇಬ್ಬರ ಪುತ್ತಳಿಯನ್ನು ಸಂಸದೆ ಸುಮಲತಾ ಹಾಗೂ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಅನಾವರಣ ಗೊಳಿಸಲ್ಲಿದ್ದಾರೆ ಎನ್ನುವುದು ಸಹ ತಿಳಿದುಬರುತ್ತದೆ. ಸಾಮಾನ್ಯವಾಗಿ ಇಂಡಸ್ಟ್ರಿಯಲ್ಲಿ ಒಬ್ಬರು ನಟರನ್ನು ಕಂಡರೆ ಇನ್ನೊಬ್ಬ ನಟರ ಅಭಿಮಾನಿಗಳು ಸಹಿಸುವುದಿಲ್ಲ ಅಂತಹ ಕಾಲದಲ್ಲಿ ಒಗ್ಗಟ್ಟಿನಿಂದ ಇಬ್ಬರು ನಟರ ಅಭಿಮಾನಿಗಳಿಂದ ನಿರ್ಮಾಣ ಮಾಡಿರುವಂತಹ ಅಪ್ಪು ಮತ್ತು ಅಂಬಿ ಗುಡಿ ನಿಜಕ್ಕೂ ಹೆಮ್ಮೆಯ ವಿಷಯ ಎಂದು ಹೇಳಬಹುದು. ಇವರ ಅಭಿಮಾನಕ್ಕೆ ಎಷ್ಟು ಕೃತಜ್ಞತೆ ಹೇಳಿದರು ಸಾಲುವುದಿಲ್ಲ.
ಇನ್ನು ಅಂಬರೀಶ್ ಮತ್ತು ಪುನೀತ್ ರಾಜ್ಕುಮಾರ್ ಅವರ ನಡುವೆ ಇದ್ದಂತಹ ಬಾಂಧವ್ಯ ಕುರಿತು ಎಲ್ಲರಿಗೂ ಸಹ ತಿಳಿದಿದೆ ಪುನೀತ್ ರಾಜ್ಕುಮಾರ್ ಅವರು ಚಿಕ್ಕವರಿದ್ದಾಗ ಸುಮಲತಾ ಅವರನ್ನು ಮದುವೆಯಾಗುತ್ತೇನೆ ಎಂದು ಹೇಳುತ್ತಿದ್ದರು ಎಂದು ಸ್ವತಹ ಸುಮಲತಾ ಅವರೇ ತಿಳಿಸಿದ್ದಾರೆ. ಎರಡು ಕುಟುಂಬಗಳ ಮಧ್ಯೆ ಉತ್ತಮವಾದಂತಹ ಬಾಂಧವ್ಯ ಏರ್ಪಟ್ಟಿದ್ದು ಅಷ್ಟೇ ಅಲ್ಲದೆ ಯಾವುದೇ ಕಾರ್ಯಕ್ರಮಗಳು ಸಮಾರಂಭಗಳು ಜರುಗಿದರು ಸಹಿತ ಎರಡು ಕುಟುಂಬಗಳು ಭಾಗಿಯಾಗುತ್ತಿದ್ದರು ಮಂಡ್ಯದ ಗಂಡು ಎಂದೇ ಕರೆಯಲ್ಪಡುವ ಅಂಬರೀಶ್ ಅವರನ್ನು ಪ್ರೀತಿಯಿಂದ ಮಂಡ್ಯದ ಜನತೆ ಕಲಿಯುಗ ಕರ್ಣ ಎಂದು ಕರೆಯುತ್ತಾರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಅಂಬರೀಶ್ ಅವರಿಗೆ ಒಂದು ಉತ್ತಮವಾದ ಗೌರವವನ್ನು ನೀಡುತ್ತಿದ್ದರು. ಅದೇ ರೀತಿಯಲ್ಲಿ ಅವರು ನಮ್ಮೆಲ್ಲರನ್ನು ದೈಹಿಕವಾಗಿ ಅಗಲಿದ ನಂತರವೂ ಸಹ ಅವರಿಗೆ ಅದೇ ಗೌರವವನ್ನು ಕೊಡುತ್ತಿದ್ದಾರೆ.
ನಮ್ಮ ನಿಮ್ಮೆಲ್ಲರ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಬಗ್ಗೆ ಹೇಳುವ ಮಾತೇ ಇಲ್ಲ ಎಲ್ಲಾ ಅಭಿಮಾನಿಗಳು ಸಹ ಪುನೀತ್ ರಾಜಕುಮಾರ್ ಅವರನ್ನು ಇಂದಿಗೂ ಸಹ ದೇವರು ಎಂದು ಪೂಜಿಸುತ್ತಿದ್ದಾರೆ ಎಷ್ಟೋ ಮನೆಗಳಿಗೆ ನಂದಾದೀಪವಾಗಿದಂತಹ ಪುನೀತ್ ರಾಜ್ಕುಮಾರ್ ಅವರು ಇಷ್ಟು ಬೇಗ ನಮ್ಮೆಲ್ಲರನ್ನು ಹಗಲಿರುವುದು ವಿಷಾದನೀಯ. ಜನರ ಕಷ್ಟಕ್ಕೆ ಮಿಡಿಯುತ್ತದಂತಹ ಜೀವ ಎಂದರೆ ಅದು ನಮ್ಮ ಅಪ್ಪು ಸದ್ಯ ಇವರು ನಮ್ಮನ್ನು ದೈಹಿಕವಾಗಿ ಅಗಲಿದ್ದರು ಸಹ ಮಾನಸಿಕವಾಗಿ ಎಲ್ಲರ ಹೃದಯ ಸಾಮ್ರಾಜ್ಯದಲ್ಲಿ ನೆಲೆಸಿದ್ದಾರೆ ಈ ಇಬ್ಬರು ಕನ್ನಡದ ಮೇರು ನಟರ ಪ್ರತಿಮೆಗಳನ್ನು ನಿರ್ಮಿಸಿ ಅರಮನೆಯಂತೆ ದೇವಸ್ಥಾನವನ್ನು ಕಟ್ಟಿರುವಂತಹ ಅಭಿಮಾನಿಗಳಿಗೆ ಈ ಮೂಲಕ ಕೃತಜ್ಞತೆಯನ್ನು ತಿಳಿಸಿದ್ದೇವೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.