ಅಪ್ಪು ಕೊನೆ ಬಾರಿ ಅಶ್ವಿನಿ ಜೊತೆ ಮುದುವೆ ಮನೆಯಲ್ಲಿ ಊಟ ಮಾಡುತ್ತಿದ್ದ ಸುಂದರ ಕ್ಷಣ, ಈ ವಿಡಿಯೋ ನೋಡಿ

ಪುನೀತ್ ರಾಜ್‌‌ಕುಮಾರ್ ಅವರು ತಮ್ಮ ಪತ್ನಿಯನ್ನು ಎಷ್ಟು ಪ್ರೀತಿಸುತ್ತಾರೆ ಎಂದು ಮಾತುಗಳಲ್ಲು ಹೇಳಲು ಸಾಧ್ಯವಿಲ್ಲ ನಮ್ಮ ಅಪ್ಪು ಪಕ್ಕ ಫ್ಯಾಮಿಲಿ ಮ್ಯಾನ್ ಆಗಿದ್ದು ಕುಟುಂಬಕ್ಕಾಗಿ ಸಮಯವನ್ನು ಮೀಸಲಿಡುತ್ತಿದ್ದರು. ಇನ್ನು ಅಶ್ವಿನಿ ಅವರು ಹಾಗೂ ಪುನೀತ್ ರಾಜ್‌ಕುಮಾರ್ ಅವರದ್ದು ಪ್ರೇಮ ವಿವಾಹ ಕಾಮನ್ ಫ್ರೆಂಡ್ ಮುಖಾಂತರ ಪರಿಚಯವಾದ ಇಬ್ಬರು ಮೊದಲು ಸ್ನೇಹಿತರಾಗಿ ತದನಂತರ ಪ್ರೇಮಿಗಳಾಗಿ ಮನೆಯವರ ಒಪ್ಪಿಗೆ ಪಡೆದು ಅದ್ದೂರಿಯಾಗಿ ವಿವಾಹವಾಗಿ ಬರೋಬ್ಬರಿ 22 ವರ್ಷಗಳ ಕಾಲ ಸುಖ ಸಂಸಾರವನ್ನು ನಡೆಸಿದ್ದರು. ಇನ್ನು ಅಶ್ವಿನಿ ಅವರಿಗೆ ಪ್ರಪೋಸ್ ಮಾಡಿದ್ದು ಅಪ್ಪು ಅವರೇ, ದೊಡ್ಡ ಮನೆಯಲ್ಲಿ ಇವರ ಪ್ರೀತಿಯ ವಿಷಯವನ್ನು ಒಪ್ಪಿಕೊಂಡಿದ್ದರು ಆದರೆ ಅಶ್ವಿನಿ ಅವರ ಮನೆಯಲ್ಲಿ ಹಿಂದೇಟು ಹಾಕಿದ್ದರು.

WhatsApp Group Join Now
Telegram Group Join Now

ಹೌದು ಕರುನಾಡಲ್ಲಿ ದೊಡ್ಡ ಮನೆ ಕುಟುಂಬ ಪ್ರತಿಷ್ಠಿತ ಕುಟುಂಬವಾಗಿದ್ದು ಇಂತಹ ಮನೆಗೆ ತಮ್ಮ ಮಗಳು ಹೋದರೆ ಹೊಂದಿಕೊಂಡು ಹೋಗುವುದು ಕಷ್ಟ, ಎಲ್ಲವನ್ನು ನಿಭಾಯಿಸುವುದು ಸಾಧ್ಯವಿಲ್ಲ ಎಂದು ಮದುವೆ ಮಾಡಲು ಹಿಂದೇಟು ಹಾಕಿದ್ದರಂತೆ. ತದನಂತರ ಅವರ ಮನೆಯಲ್ಲಿಯೂ ಕೂಡ ಒಪ್ಪಿಕೊಂಡು 1999 ಡಿಸೆಂಬರ್ ಒಂದರಂದು ಅಶ್ವಿನಿ ಹಾಗೂ ಪುನೀತ್ ರಾಜ್‌ಕುಮಾರ್ ವಿವಾಹ ಮಹೋತ್ಸವ ಬೆಂಗಳೂರಿನ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ನೆರವೇರಿತು. ಅಪ್ಪು ಅವರು ಅಶ್ವಿನಿ ಅವರಿಗಾಗಿ ಯಾವಾಗಲೂ ಒಂದು ಹಾಡನ್ನು ಹಾಡಿ ಅಶ್ವಿನಿ ಅವರನ್ನು ಸಮಾಧಾನ ಮಾಡುತ್ತಿದ್ದರಂತೆ. 22 ವರ್ಷಗಳ ಸುದೀರ್ಘ ಪಯಣ ಒಮ್ಮೆಲೇ ನಿಂತು ಹೋಗಿದೆ ಎಂದು ಅರಗಿಸಿಕೊಳ್ಳಲು ಸಾಧ್ಯವಿಲ್ಲ ದಾಂಪತ್ಯ ಜೀವನದಲ್ಲಿ ಕಷ್ಟ ಸುಖಗಳನ್ನು ಸಮನಾಗಿ ಹಂಚಿಕೊಂಡು ಇದ್ದಕ್ಕಿದ್ದ ಹಾಗೆ ಒಂಟಿಯಾಗಿ ಬಿಟ್ಟು ವಿಧಿಯಾಟಕ್ಕೆ ಮರೆಯಾಗಿ ಹೋದಾಗ ಅಶ್ವಿನಿ ಅವರ ಜೀವನದಲ್ಲಿ ನೀರವ ಮೌನ ಮನೆ ಮಾಡಿಕೊಂಡಿದೆ.

ಡಿಸೆಂಬರ್ 2 ರಂದು ಅಶ್ವಿನಿ ಮತ್ತು ಪುನೀತ್ ರಾಜ್‌ಕುಮಾರ್ ಅವರ ವಿವಾಹ ವಾರ್ಷಿಕೋತ್ಸವ ಈ ದಿನ ಅಶ್ವಿನಿ ಅವರು ಅರಗಿಸಿಕೊಳ್ಳಲು ಸಾಧ್ಯವಿಲ್ಲ ಏಕೆಂದರೆ ಜೊತೆಯಲ್ಲಿ ಇದ್ದಾಗ ತಮ್ಮ ವಿವಾಹವಾದ ದಿನವನ್ನು ಅಪ್ಪು ಅವರು ತುಂಬಾ ಚೆನ್ನಾಗಿ ಸೆಲೆಬ್ರೇಟ್ ಮಾಡುತ್ತಿದ್ದರು ಅಶ್ವಿನಿ ಅವರ ಜೊತೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು ಹಾಗೆಯೇ ಅಶ್ವಿನಿ ಅವರನ್ನು ಹೊರದೇಶಗಳಿಗೆ ಕರೆದುಕೊಂಡು ಹೋಗಿ ತಮ್ಮ ವಾರ್ಷಿಕೋತ್ಸವದ ದಿನವನ್ನು ಸದಾ ನೆನಪಿನಲ್ಲಿ ಇಡುವ ಹಾಗೆ ನೋಡಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೆ ಅಶ್ವಿನಿ ಅವರ ಹುಟ್ಟು ಹಬ್ಬದ ದಿನದಂದು ಅಶ್ವಿನಿ ಅವರಿಗೆ ಸರ್ಪ್ರೈಸ್ ಕೊಡುವ ಮೂಲಕ ಸಂತೋಷ ಪಡಿಸುತ್ತಿದ್ದರು. ಅಶ್ವಿನಿ ಅವರಿಗೆ ಹೆಚ್ಚಿನ ಸಮಯವನ್ನು ಕೊಡುತ್ತಿದ್ದರು ಅಶ್ವಿನಿ ಅಪ್ಪು ಅವರಿಂದ ಏನೆನ್ನು ಬಯಸುತ್ತಿದ್ದರು ಎಂದರೆ ಅವರಿಗೆ ಸಾಕಾಗುವಷ್ಟು ಸಮಯವನ್ನು ನೀಡಿದರೆ ಅಶ್ವಿನಿ ಅವರು ಖುಷಿ ಪಡುತ್ತಿದ್ದರು.

ಬದುಕಿನಲ್ಲಿ ಹೇಗೆ ಕನಸು ಕಂಡಿದ್ದರು ಹಾಗೆಯೇ ಬದುಕಿ ತೋರಿಸಿದವರು ಅಶ್ವಿನಿ ಹಾಗೂ ಪುನೀತ್ ರಾಜ್‌ಕುಮಾರ್ ಅವರು. ಪುನೀತ್ ಅವರಿಗೆ ಅಶ್ವಿನಿ ಎಂದರೆ ಎಲ್ಲಿಲ್ಲದ ಪ್ರೀತಿ ಬೇರೆ ಕಡೆ ದಿನಗಳ ಗಟ್ಟಲೆ ಶೂಟಿಂಗ್ ಗೆ ಹೋಗುತ್ತಿದ್ದಂತಹ ಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್ ಅವರು ಕಾಲ್ ಮಾಡಿ ವಿಡಿಯೋ ಕಾಲ್ ಮಾಡಿ ಹೆಂಡತಿ ಮತ್ತು ಮಕ್ಕಳ ಜೊತೆಯಲ್ಲಿ ಮಾತನಾಡುತ್ತಿದ್ದರು. ಪುನೀತ್ ಅವರಿಗೆ ಹೆಂಡತಿ ಮತ್ತು ಮಕ್ಕಳನ್ನು ಬಿಟ್ಟಿರುವುದು ಎಂದರೆ ತುಂಬಾ ಕಷ್ಟವಾಗುತ್ತಿತ್ತು. ಯಾವುದೇ ಮದುವೆ ಸಮಾರಂಭಗಳಿಗೆ ಹೋದರೂ ಅಶ್ವಿನಿ ಅವರನ್ನು ಕರೆದುಕೊಂಡು ಹೋಗುತ್ತಿದ್ದರು. ಯಾವಾಗಲೂ ಜೊತೆಯಲ್ಲೇ ಕೂತು ಊಟ ಮಾಡುತ್ತಿದ್ದರು ಇಷ್ಟೊಂದು ಸಲಿಗೆ ಇವರ ಮಧ್ಯೆ ಇದ್ದು ಹೆಚ್ಚಿನ ಪ್ರೀತಿಯನ್ನು ನೀಡುತ್ತಿದ್ದರು‌. ಅಪ್ಪು ಅವರು ಸಾಧ್ಯವಾದಷ್ಟು ಸಮಯವನ್ನು ತಮ್ಮ ಹೆಂಡತಿ ಅಶ್ವಿನಿಯವರ ಜೊತೆಯಲ್ಲಿ ಕಳೆಯುತ್ತಿದ್ದರು. ನೀವು ಸಹ ಪುನೀತ್ ರಾಜ್‌ಕುಮಾರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದರೆ ತಪ್ಪದೆ ಕಾಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now