ದೊಡ್ಮನೆ ಮಕ್ಕಳು & ಸೊಸೆಯಂದಿರಿಗೆ ದೇವರು ಅಂದ್ರೆ ಎಷ್ಟು ಭಯ ಭಕ್ತಿ ಗೊತ್ತ.? ಈ ವಿಡಿಯೋ ನೋಡಿ‌.

ಕರ್ನಾಟಕದಲ್ಲಿ ದೊಡ್ಡಮನೆ ಕುಟುಂಬಕ್ಕೆ ಅಭಿಮಾನಿಗಳು ಸಾಕಷ್ಟು ಗೌರವ ಪ್ರೀತಿಯನ್ನು ನೀಡುತ್ತಾರೆ ರಾಜ್‌ಕುಮಾರ ಅವರ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಗೌರವವನ್ನು ನೀಡಲಾಗುತ್ತದೆ. ನಮ್ಮ ಕನ್ನಡ ನಾಡು ಕಂಡಂತಹ ಮೇರು ನಟರಾದಂತಹ ಡಾಕ್ಟರ್ ರಾಜ್‌ಕುಮಾರ್ ಅವರ ಮಗನಾದ ಪುನೀತ್ ಅವರು ರಾಜ್‌ಕುಮಾರ್ ಅವರಂತೆಯೇ ಬಾನೆತ್ತರಕ್ಕೆ ಬೆಳೆದಿದ್ದಾರೆ. ಡಾಕ್ಟರ್ ರಾಜ್‌ಕುಮಾರ್ ಅವರ ಕುಟುಂಬದಲ್ಲಿ ಪ್ರತಿಯೊಬ್ಬ ಸದಸ್ಯರು ಸಹ ಅಪ್ಪು ಅವರನ್ನು ತುಂಬಾ ಪ್ರೀತಿಯಿಂದ ಕಾಣುತ್ತಾರೆ ಅಪ್ಪು ಎಂದರೆ ಎಲ್ಲರಲ್ಲಿಯೂ ಏನೋ ಒಂದು ಖುಷಿ ಎನ್ನುವಂತಹದ್ದು ಮನಸ್ಸಿನಲ್ಲಿ ತುಂಬಿಕೊಂಡಿರುತ್ತದೆ. ಪುನೀತ್ ರಾಜ್‌ಕುಮಾರ್ ಅವರು ಕನ್ನಡ ಹಾಗೂ ತಮಿಳು ಎರಡನ್ನು ಸಹ ಲೀಲಾಜಾಲವಾಗಿ ಮಾತನಾಡುವಂತಹ ಕಲೆ ಅವರಲ್ಲಿ ಇತ್ತು.

WhatsApp Group Join Now
Telegram Group Join Now

ಕನ್ನಡವನ್ನು ಎಂದು ಸಹ ಅವರು ಬಿಟ್ಟು ಕೊಟ್ಟಿಲ್ಲ ನಮ್ಮ ಕನ್ನಡದ ಮೇಲೆ ಅವರಿಗೆ ಸಾಕಷ್ಟು ಅಭಿಮಾನ ಮತ್ತು ಪ್ರೀತಿ ಇತ್ತು. ಅಪ್ಪು ಅವರು ತಮ್ಮ ಕುಟುಂಬಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದರು ಅದರಲ್ಲಿಯೂ ತಮ್ಮ ಅಣ್ಣಂದಿರದಂತಹ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅವರನ್ನು ತಮ್ಮ ಎರಡು ಪಿಲ್ಲರ್ ಎಂದೇ ಕರೆಯುತ್ತಿದ್ದರು ಹಾಗೆಯೇ ತಮ್ಮ ಅಕ್ಕಂದಿರಾದಂತಹ ಪೂರ್ಣಿಮಾ ಮತ್ತು ಲಕ್ಷ್ಮಿ ಅವರನ್ನು ಕೀರ್ತಿ ಕಳಶ ಎಂದು ಬಣ್ಣಿಸಿದ್ದಾರೆ‌. ಪ್ರೇಮದ ಕಾಣಿಕೆ ಸಿನಿಮಾದ ಮೂಲಕ ಕೇವಲ ಆರು ತಿಂಗಳು ಇರುವಾಗಲೇ ಚಿತ್ರರಂಗಕ್ಕೆ ಎಂಟ್ರಿ ಯನ್ನು ನೀಡಿದಂತಹ ಅಪ್ಪು ಅವರು ನಂತರದಲ್ಲಿ ತಮ್ಮ ತಂದೆ ರಾಜ್ ಕುಮಾರ್ ಅವರ ಸಿನಿಮಾಗಳಲ್ಲಿ ಮಕ್ಕಳ ಪಾತ್ರ ಬಂದರೆ ಇವರ ನಟನೆ ಸಾಮಾನ್ಯವಾಗಿ ಹೋಯಿತು.

ನಿರ್ದೇಶಕರು ನೀಡುತ್ತಿದ್ದಂತಹ ಎಲ್ಲಾ ಸೂಚನೆಗಳನ್ನು ಚಿಕ್ಕ ವಯಸ್ಸಿನಲ್ಲಿ ಅರ್ಥಮಾಡಿಕೊಳ್ಳುತ್ತಿದ್ದ ಅಪ್ಪು ತಾನು ಹುಟ್ಟು ಕಲಾವಿದ ಅಂತ ತೋರಿಸಿಕೊಟ್ಟವರು. ಪುನೀತ್ ರಾಜ್‌ಕುಮಾರ್ ಅವರ ಅಪ್ಪು ಸಿನಿಮಾದಿಂದ ಹಿಡಿದು ಗಂಧದಗುಡಿ ಸಿನಿಮಾ ವರಗೂ ಸಹ ಅವರ ಜರ್ನಿ ಹಲವು ಏಳು ಬೀಳುಗಳನ್ನು ದಾಟಿ ಮುನ್ನುಗ್ಗಿ ಯಶಸ್ಸನ್ನು ಸಾಧಿಸಿದೆ. ಅಪ್ಪು ಅವರನ್ನು ಕಳೆದುಕೊಂಡಿರುವಂತಹ ನೋವು ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲದೇ ದೊಡ್ಡ ಮನೆ ಕುಟುಂಬಕ್ಕೂ ಸಹ ಅಗಾಧವಾದಂತ ನೋವನ್ನು ನೀಡಿದೆ ಇದನ್ನು ಸಾಕಷ್ಟು ಕಾರ್ಯಕ್ರಮಗಳಲ್ಲಿ ದೊಡ್ಡ ಮನೆ ಕುಟುಂಬ ನೆನೆದು ಭಾವುಕರಾಗಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ನಮಗೆ ತಿಳಿದಿರದ ಕೆಲವೊಂದಷ್ಟು ಮಾಹಿತಿಯನ್ನು ಪುನೀತ್ ಅವರ ಅಕ್ಕ ಪೂರ್ಣಿಮಾ ಅವರು ತೆರೆದಿಟ್ಟಿದ್ದಾರೆ. ಅಪ್ಪು ಹಾಗೂ ಅಶ್ವಿನಿ ಅವರ ದಾಂಪತ್ಯದ ಬಗ್ಗೆ ಎಷ್ಟು ಹೊಗಳಿದರು ಕಡಿಮೆ ಇವರಿಬ್ಬರು ಪ್ರೀತಿಸಿ ಮದುವೆಯಾದವರು ಈ ಜೋಡಿಯನ್ನು ಅಣ್ಣಾವ್ರು ಮತ್ತು ಪಾರ್ವತಮ್ಮ ನವರು ಮೆಚ್ಚಿ ಮದುವೆ ಮಾಡಿಸಿದರು ಇಡೀ ಕರ್ನಾಟಕ ಅಪ್ಪು ಮತ್ತು ಅಶ್ವಿನಿ ಜೋಡಿಯನ್ನು ಮೆಚ್ಚಿಕೊಂಡು 23 ವರ್ಷದ ಸುಂದರ ದಾಂಪತ್ಯ ನಡೆಸಿದ್ದರು.

ಅಪ್ಪು ಹಾಗೂ ಅಶ್ವಿನಿ ಅವರು ಯಾವುದೇ ಕಾರ್ಯಕ್ರಮಗಳಿಗೆ ಹೋದರು ಸಹ ಜೊತೆಯಾಗಿ ಹೋಗುತ್ತಿದ್ದರು, ಸಂಕೋಚ ಸ್ವಭಾವರಾದ ಅಶ್ವಿನಿ ಅವರು ಒಂದು ಸಾರಿ ಕೂಡ ವೇದಿಕೆ ಮೇಲೆ ಮಾತನಾಡಿರಲಿಲ್ಲ ಆದರೆ ಪತಿಗೆ ಸಪೋರ್ಟ್ ಮಾಡಿ ಎಲ್ಲಾ ಕಡೆ ಬರುತ್ತಿದ್ದರು ಅಪ್ಪು ಅವರ ಯಶಸ್ಸಿನ ಬೆನ್ನೆಲುಬಾಗಿ ಅಶ್ವಿನಿ ಅವರು ನಿಂತಿದ್ದರೂ ಎಂದರೆ ತಪ್ಪಾಗುವುದಿಲ್ಲ. ಅಪ್ಪು ಅವರು ಹೋದ ಮೇಲೆ ಅಶ್ವಿನಿ ಅವರು ಎಲ್ಲಾ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಈ ಮೂಲಕ ಅಪ್ಪು ಅವರು ನಡೆಸಬೇಕಿದ್ದ ಜವಾಬ್ದಾರಿಯನ್ನು ಪತ್ನಿ ನಿಭಾಯಿಸುತ್ತಿದ್ದಾರೆ. ಅಶ್ವಿನಿ ಅವರ ಯಾವುದೇ ಯೋಜನೆ ಇದ್ದರೂ ಅದಕ್ಕೆ ಅಪ್ಪು ಪೂರ್ತಿ ಬೆಂಬಲವನ್ನು ನೀಡುತ್ತಿದ್ದರು ಯಾರಿಗೂ ನೋವು ನೀಡಿದವರಲ್ಲ ಅಪ್ಪು ಎಂದು ಭಾವನಾತ್ಮಕವಾಗಿ ನೆನೆದು ಅಶ್ವಿನಿ ಮತ್ತು ಪುನೀತ್ ನಡುವೆ ಸ್ನೇಹಯುತ ಸಂಬಂಧದ ಮೂಲ ತಿಳಿಸಿದ್ದಾರೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now