ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ಪ್ರಧಾನ ಮಾಡಿದೆ ಇನ್ನು ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಅವರು ಕರ್ನಾಟಕ ರತ್ನ ಪ್ರಶಸ್ತಿಯನ್ನು ಪುನೀತ್ ಅವರ ಪರವಾಗಿ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪಡೆದುಕೊಂಡಿರುವಂತಹ ಪ್ರಶಸ್ತಿಯನ್ನು ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಅರ್ಪಿಸಿದ್ದಾರೆ. ನಮ್ಮ ಅಪ್ಪು ವೀರ ಕನ್ನಡಿಗನಾಗಿ ಅಭಿಮಾನಿಗಳ ಹೃದಯದಲ್ಲಿ ಯಾವಾಗಲೂ ಅಜರಾಮರನಾಗಿ ಉಳಿದುಕೊಂಡಿದ್ದಾರೆ ಪುನೀತ್ ರಾಜ್‌ಕುಮಾರ್ ಗೆ ರಾಜ್ಯದ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದಾದಂತಹ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದ್ದು ನವೆಂಬರ್ 1 ಅಂದರೆ ಕನ್ನಡ ರಾಜ್ಯೋತ್ಸವದ ದಿನದಂದು ಈ ಒಂದು ಪ್ರಶಸ್ತಿಯನ್ನು ನೀಡಲಾಗಿದೆ.
ಕಾರ್ಯಕ್ರಮಕ್ಕೆ ಸೂಪರ್ ಸ್ಟಾರ್ ರಜನಿಕಾಂತ್, ಜೂನಿಯರ್ ಎನ್‌ಟಿಆರ್ ಮುಖ್ಯ ಅತಿಥಿಗಳಾಗಿ ಆಗಮಿಸಿ, ಈ ಒಂದು ಕಾರ್ಯಕ್ರಮವನ್ನು ಯಶಸ್ವಿ ಪೂರ್ಣವಾಗಿ ನಡೆಸಲು ಚಾಲನೆ ನೀಡಿದರು. ಅತ್ಯುತ್ತಮ ಪ್ರಶಸ್ತಿಗಳಲ್ಲಿ ಒಂದಾದಂತಹ ಕರ್ನಾಟಕ ರತ್ನ ಪ್ರಶಸ್ತಿ 9ನೆಯ ಅತ್ಯುನ್ನತ ನಾಗರಿಕ ನಾಗಿ ನಮ್ಮ ಪುನೀತ್ ರಾಜ್‌ಕುಮಾರ್ ಅವರಿಗೆ ವಿಧಾನಸಭೆಯ ಮುಂದೆ ಕಾರ್ಯಕ್ರಮದಲ್ಲಿ ಅಶ್ವಿನಿ ಅವರಿಗೆ ನೀಡಲಾಗಿದೆ. ಪ್ರಶಸ್ತಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾಗೆಯೇ ಸುಧಾ ಮೂರ್ತಿ ಅವರು ಸೇರಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದೊಡ್ಡಮನೆ ಕುಟುಂಬದ ಎಲ್ಲಾ ಸದಸ್ಯರು ಸಹ ಭಾಗಿಯಾಗಿದ್ದರು ಅಷ್ಟೇ ಅಲ್ಲದೆ ಪ್ರಶಸ್ತಿ ಸ್ವೀಕರಿಸಿದ ನಂತರ ಅಪ್ಪು ಅವರ ಫೋಟೋಗೆ ತಂದು ಸಮರ್ಪಣೆ ಮಾಡಲಾಗಿದೆ.
ಈ ಪ್ರಶಸ್ತಿಯು 50 ಗ್ರಾಂ ತೂಕದ ಚಿನ್ನದ ಪದಕ ಹಾಗೂ ಸನ್ಮಾನ ಪತ್ರ, ನೆನಪಿನ ಕಾಣಿಕೆ ಹಾಗೆ ಒಂದು ಶಾಲನ್ನು ಒಳಗೊಂಡಿದ್ದು ಚಿನ್ನದ ಪದಕವನ್ನು ಅಪ್ಪು ಅವರ ಫೋಟೋಗೆ ಹಾಕಲಾಗಿದೆ. ಅಶ್ವಿನಿ ಹಾಗೂ ಅವರ ಪುತ್ರಿ ವಂದಿತ ಅವರು ಕರ್ನಾಟಕ ರತ್ನ ಪ್ರಶಸ್ತಿ ಪದಕವನ್ನು ಹಿಡಿದು ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಹಾಕುವಂತಹ ಫೋಟೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. 50 ಗ್ರಾಂ ಚಿನ್ನದ ಪದಕವನ್ನು ನೀಡಲಾಗಿದ್ದು ಇದರ ಜೊತೆಯಲ್ಲಿ ಪ್ರಶಸ್ತಿಯನ್ನು ಪಡೆದವರಿಗೆ ಮೊತ್ತದ ರೂಪವಾಗಿ 2.5 ಲಕ್ಷದ ನಗದು ಪುರಸ್ಕಾರವನ್ನು ಸಹ ನೀಡಿ ಅವರನ್ನು ಗೌರವಿಸಲಾಗುತ್ತದೆ ಈ ಪ್ರಶಸ್ತಿಯ ಮೊತ್ತ ಚಿನ್ನದ ಪದಕ ಏನೇ ಇದ್ದರೂ ಕೂಡ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪಡೆದುಕೊಳ್ಳುವುದೇ ಒಂದು ಗೌರವದ ವಿಷಯ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂತಹ ಸಾಧಕರಿಗೆ ಈ ಒಂದು ಪ್ರಶಸ್ತಿಯನ್ನು ನೀಡಲಾಗುತ್ತದೆ ಹಾಗಾಗಿ ನಮ್ಮ ಪುನೀತ್ ರಾಜ್‌ಕುಮಾರ್ ಅವರಿಗೆ ಚಿತ್ರರಂಗದ ಹಾಗೂ ಸಮಾಜ ಸೇವೆಯ ಎರಡನ್ನು ಸಹ ಒಟ್ಟುಗೂಡಿಸಿ ತೂಕ ಮಾಡಿ ಆನಂತರದಲ್ಲಿ ಪ್ರಶಸ್ತಿಯನ್ನು ನೀಡಲಾಗಿದೆ. ಹೆಚ್ಚಾಗಿ ಇವರಿಗೆ ಸಮಾಜ ಇವರು ಮಾಡಿರುವಂತಹ ಸಮಾಜ ಸೇವೆಗೆ ಈ ಒಂದು ಪ್ರಶಸ್ತಿ ದೊರಕಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇಲ್ಲಿ ಪುನೀತ್ ರಾಜ್ನಕುಮಾರ್ ಅವರಿಗೆ ನೀಡಿರುವಂತಹ ಪದಕ ಹಾಗೆಯೇ ಹಣದ ಮೊತ್ತ ಇದು ಯಾವುದೂ ಸಹ ಲೆಕ್ಕಕ್ಕೆ ಬರುವುದಿಲ್ಲ ಬದಲಾಗಿ ಅವರ ವ್ಯಕ್ತಿತ್ವಕ್ಕೆ ತಕ್ಕಂತಹ ಒಂದು ದೊಡ್ಡ ಗೌರವದ ಕರ್ನಾಟಕ ರತ್ನ ಪ್ರಶಸ್ತಿ ಎಂದು ಅವರಿಗೆ ಬಿರುದು ನೀಡುವುದು ಇಲ್ಲಿ ಮುಖ್ಯವಾಗುತ್ತದೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.